logo
ಕನ್ನಡ ಸುದ್ದಿ  /  Nation And-world  /  Jee Main Session 1 Result Declared Complete Result Details Here

JEE Main Session 1 Result : ಜೆಇಇ ಮೇನ್ ಸೆಷನ್ 1 ರ ಫಲಿತಾಂಶ ಪ್ರಕಟ; ರಿಸಲ್ಟ್ ವೀಕ್ಷಣೆ, ಸೆಷನ್ 2ರ ನೋಂದಣಿ ಪ್ರಕ್ರಿಯೆ ಹೀಗಿದೆ

HT Kannada Desk HT Kannada

Feb 07, 2023 12:52 PM IST

ಜೆಇಇ ಮೇನ್ ಸೆಷನ್ 1ರ ಫಲಿತಾಂಶಗಳು ಪ್ರಕಟವಾಗಿವೆ

    • JEE Main 2023 Result: ಜೆಇಇ ಮೇನ್ ಸೆಷನ್ 1 ಫಲಿತಾಂಶ ಪ್ರಕಟಿಸಲಾಗಿದೆ. ಸೆಷನ್ 2 ರ ನೋಂದಣಿ ಪ್ರಕ್ರಿಯೆಯು ಮಂಗಳವಾರ ಪ್ರಾರಂಭವಾಗಲಿದೆ. ಫಲಿತಾಂಶ ಸೇರಿ ಸಂಪೂರ್ಣ ವಿವರಗಳು ಇಲ್ಲಿವೆ.
ಜೆಇಇ ಮೇನ್ ಸೆಷನ್ 1ರ ಫಲಿತಾಂಶಗಳು  ಪ್ರಕಟವಾಗಿವೆ
ಜೆಇಇ ಮೇನ್ ಸೆಷನ್ 1ರ ಫಲಿತಾಂಶಗಳು ಪ್ರಕಟವಾಗಿವೆ

ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ-ಎನ್ ಟಿಎ ಇಂದು (ಮಂಗಳವಾರ, ಫೆ.7) ಜೆಇಇ ಮೇನ್ 2023ರ ಸೆಷನ್ 1ರ ಫಲಿತಾಂಶವನ್ನು ಪ್ರಕಟಿಸಿದೆ. ಜೊತೆಗೆ ಸೆಷನ್ 2 ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಟ್ರೆಂಡಿಂಗ್​ ಸುದ್ದಿ

ರಣಬಿಸಿಲಿನಿಂದ ರಕ್ಷಣೆಗೆ ಟ್ರಾಫಿಕ್‌ ಸಿಗ್ನಲ್ ಸಮೀಪ ಹಸಿರು ನೆರಳು ಬಲೆ; ಪುದುಚೇರಿ ಪಿಡಬ್ಲ್ಯುಡಿ ಇಲಾಖೆ ಉಪಕ್ರಮಕ್ಕೆ ವ್ಯಾಪಕ ಮೆಚ್ಚುಗೆ

Gold Rate Today: ಇಳಿಕೆಯ ಬೆನ್ನಲ್ಲೇ ಮತ್ತೆ ಏರಿದ ಚಿನ್ನದ ದರ, ತುಸು ಕಡಿಮೆಯಾದ ಬೆಳ್ಳಿ; ಆಭರಣ ಪ್ರಿಯರಿಗಿಲ್ಲ ನೆಮ್ಮದಿ

Lok Sabha Elections: ಲೈಂಗಿಕ ದೌರ್ಜನ್ಯ ಪ್ರಕರಣ ಆರೋಪಿ ಸಂಸದ ಬದಲು ಮಗನಿಗೆ ಟಿಕೆಟ್‌ ನೀಡಿದ ಬಿಜೆಪಿ

Lok Sabha Election 2024: ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಸ್ಪರ್ಧಿಸುತ್ತಿರುವ ಶ್ಯಾಮ್ ರಂಗೀಲ ಯಾರು; 10 ಪ್ರಮುಖ ಅಂಶಗಳಿವು

ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ಅರ್ಹತೆ ಒದಗಿಸುವ ಜೆಇಇ ಮುಖ್ಯ ಪರೀಕ್ಷೆಯ ಸೆಷನ್​ 1 ರ ಫಲಿತಾಂಶ ಪ್ರಕಟಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಟಿಎ) ಜೆಇಇ ಮುಖ್ಯ ಪರೀಕ್ಷೆಯು ಜನವರಿ 24ರಿಂದ ಫೆಬ್ರವರಿ 1ರವರೆಗೆ ನಡೆದಿತ್ತು.

ಎನ್​ಐಟಿ, ಐಐಐಟಿ ಮತ್ತು ಇತರೆ ಸೆಂಟ್ರಲಿ ಫಂಡೆಡ್​ ಟೆಕ್ನಿಕಲ್​ ಇನ್ಸುಟಿಟ್ಯೂಶನ್​ (ಸಿಎಫ್​ಟಿಐ) ಮತ್ತು ರಾಜ್ಯ ಸರ್ಕಾರದ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಅಡಿಗಳಲ್ಲಿ ಬರುವ ಇಂಜಿನಿಯರಿಂಗ್​ ಪದವಿಗಳಿಗೆ ಈ ಜೆಇಇ ಪರೀಕ್ಷೆಯನ್ನು ನಡೆಸಲಾಗುತ್ತದೆ. ಅಭ್ಯರ್ಥಿಗಳು ಫಲಿತಾಂಶವನ್ನು ವೀಕ್ಷಿಸಲು jeemain.nta.nic.in ಅಥವಾ ntaresults.nic.in. ವೆಬ್​ಸೈಟ್​ಗೆ ಭೇಟಿ ನೀಡಬಹುದು.

JEE ಮೇನ್ 2023 ಸೆಷನ್ 2 ನೋಂದಣಿ ಪ್ರಕ್ರಿಯೆಯು ಫೆಬ್ರವರಿ 7 ರಂದು ಪ್ರಾರಂಭವಾಗುತ್ತದೆ. ಇದು ಮಾರ್ಚ್ 7 ರವರೆಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಅಂದರೆ ಅಭ್ಯರ್ಥಿಗಳಿಗೆ ನೋಂದಣಿಗೆ ಒಂದು ತಿಂಗಳ ಕಾಲಾವಕಾಶವಿದೆ. ANTA ಮಾರ್ಚ್ ಕೊನೆಯ ವಾರದಲ್ಲಿ ಪರೀಕ್ಷೆಯ ಪ್ರವೇಶ ಅನ್ನು ಬಿಡುಗಡೆ ಮಾಡುತ್ತದೆ.

ಏಪ್ರಿಲ್ 6, 7, 8, 9, 10, 11, 12 ದಿನಾಂಕಗಳಲ್ಲಿ ಜೆಇಇ ಮೇನ್ 2023 ಸೆಷನ್ 2 ಪರೀಕ್ಷೆ ನಡೆಯುತ್ತದೆ. ಜೆಇಇ ಮೇನ್ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಎರಡು ಬಾರಿ ಎನ್ ಟಿಎ ಅವಕಾಶ ನೀಡುತ್ತೆ.

ಅಭ್ಯರ್ಥಿಗಳು ಸೆಷನ್ 1, ಅಥವಾ ಸೆಷನ್ 2 ರಲ್ಲಿ ಪರೀಕ್ಷೆಗೆ ಹಾಜರಾಗಬಹುದು. ಎರಡರಲ್ಲೂ ಹಾಜರಾಗಲು ಅವಕಾಶ ನೀಡುತ್ತದೆ. ಎರಡು ಸೆಷನ್‌ಗಳಿಗೆ ಸಂಬಂಧಿಸಿದ ಫಲಿತಾಂಶಗಳು ಪ್ರಕಟವಾದ ನಂತರ. ಎರಡರಲ್ಲಿ ಯಾವುದರಲ್ಲಿ ಹೆಚ್ಚು ಅಂಕಗಳು ಬಂದಿರುತ್ತವೆ ಅದನ್ನು ಪರಿಗಣಿಸಲಾಗುತ್ತದೆ.

ಜೆಇಇ ಮೇನ್ ಸೆಷನ್ 1 ಫಲಿತಾಂಶ

ಜೆಇಇ ಮೇನ್ 2023 ಸೆಷನ್ 1 ಫಲಿತಾಂಶಗಳನ್ನು ರಾಷ್ಟ್ರೀಯ ಟೆಸ್ಟ್ ಏಜೆನ್ಸಿ ಪ್ರಕಟಿಸಿದೆ. ಈ ವರ್ಷ ಜನವರಿ 24 ರಿಂದ ಫೆಬ್ರವರಿ 1 ರ ಮಧ್ಯ ಜೆಇಇ ಪ್ರವೇಶ ಪರೀಕ್ಷೆಯ ಸೆಷನ್ 1 ಪರೀಕ್ಷೆಗಳು ನಡೆದಿದ್ದವು.

ಸೆಷನ್‌ನಲ್ಲಿ ಪೇಪರ್-1 (ಬೀಟೆಕ್/ಬಿಐ) ಪರೀಕ್ಷೆಗೆ 8.6 ಲಕ್ಷ ಜನರು, ಪೇಪರ್-2 (ಬಿಆರ್‌ಕ್/ಬಿಪ್ಲಾನಿಂಗ್)ಕು 46 ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದರು. ಶೇ.95.79 ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಇಂಗ್ಲಿಷ್, ಹಿಂದಿ, ಕನ್ನಡ, ಉರ್ದು, ಅಸ್ಸಾಮಿ, ಬೆಂಗಾಳಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಭಾಷೆಗಳಲ್ಲಿ ಈ ಜೆಇಇ ಮೇನ್ ಪರೀಕ್ಷೆ ನಡೆದಿತ್ತು. ಆಲ್ ಇಂಡಿಯಾ ರ್ಯಾಂಕಿಂಗ್ಸ್ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುತ್ತದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು