ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ, ಮಿತಿ ಮೀರಿದ ಖರ್ಚಿನಿಂದ ಬೇಸರ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

Horoscope Today: ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ, ಮಿತಿ ಮೀರಿದ ಖರ್ಚಿನಿಂದ ಬೇಸರ: ಮೇಷ, ವೃಷಭ, ಮಿಥುನ, ಕಟಕ ರಾಶಿಫಲ

18 ಏಪ್ರಿಲ್‌ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಮೇಷ, ವೃಷಭ, ಮಿಥುನ, ಕಟಕ, ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (18th April 2024 Daily Horoscope).

ಮೇಷ, ವೃಷಭ, ಮಿಥುನ, ಕಟಕ, ರಾಶಿಯವರ ದಿನ ಭವಿಷ್ಯ
ಮೇಷ, ವೃಷಭ, ಮಿಥುನ, ಕಟಕ, ರಾಶಿಯವರ ದಿನ ಭವಿಷ್ಯ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ. (18th April 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಶುಕ್ಲಪಕ್ಷ-ಗುರುವಾರ

ತಿಥಿ : ದಶಮಿ ಸಂಜೆ 06.37 ರವರೆಗೂ ಇದ್ದು ನಂತರ ಏಕಾದಶಿ ಆರಂಭವಾಗುತ್ತದೆ.

ನಕ್ಷತ್ರ : ಆಶ್ಲೇಷ ನಕ್ಷತ್ರವು ಬೆಳಗ್ಗೆ 09.21 ರವರೆಗೂ ಇದ್ದು ನಂತರ ಮಖೆ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 06.06

ಸೂರ್ಯಾಸ್ತ: ಸಂಜೆ 06.31

ರಾಹುಕಾಲ : 01.30 ರಿಂದ ಹ.03.00

ರಾಶಿಫಲ

ಮೇಷ

ವಿಶ್ರಾಂತಿಯು ನಿಮ್ಮ ಪಾಲಿಗೆ ಕನಸಾಗುತ್ತದೆ. ಅನಿವಾರ್ಯವಾಗಿ ಕೆಲಸದ ಒತ್ತಡ ಹೆಚ್ಚಾಗುತ್ತದೆ. ಸಹನೆಯಿಂದ ಇರಬೇಕೆಂದು ಬಯಸಿದರೂ ಪರಿಸ್ಥಿತಿಯ ಒತ್ತಡದಿಂದ ಕೋಪದಿಂದ ವರ್ತಿಸುವಿರಿ. ಅನಾವಶ್ಯಕ ಖರ್ಚು ವೆಚ್ಚಗಳು ಬೇಸರಕ್ಕೆ ಕಾರಣವಾಗುತ್ತದೆ. ನೆಮ್ಮದಿಗಾಗಿ ಸಂಗಾತಿ ಮತ್ತು ಮಕ್ಕಳೊಂದಿಗೆ ಧಾರ್ಮಿಕ ಕೇಂದ್ರಕ್ಕೆ ತೆರಳುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಸಾಧಾರಣ ಮಟ್ಟದ ಆದಾಯ ದೊರೆಯುತ್ತದೆ. ಸ್ಚಂತ ಇಚ್ಚೆಯಿಂದ ಮಕ್ಕಳಿಗೆ ಚಿನ್ನದ ಒಡವೆಯನ್ನು ಖರೀದಿ ಮಾಡುವಿರಿ. ಅಪರೂಪದ ಅತಿಥಿಗಳ ಆಗಮನವಾಗುತ್ತದೆ. ಮನೆಯ ದುರಸ್ತಿಗಾಗಿ ಹಣವನ್ನು ಹೊಂದಿಸಬೇಕಾಗುತ್ತದೆ. ಆರೋಗ್ಯದಲ್ಲಿ ಏರಿಳಿತ ಇರುತ್ತದೆ.

ಪರಿಹಾರ : ಪೂರ್ವಿಕರ ಮನೆಯಲ್ಲಿ ನೀರಿನ ವ್ಯವಸ್ಥೆಯನ್ನು ಮಾಡಿ ದಿನದ ಕೆಲಸ ಆರಂಭಿಸಿ.

ಅದೃಷ್ಟದ ಸಂಖ್ಯೆ : 1

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ: ಹಸಿರು ಬಣ್ಣ

ವೃಷಭ

ದೈಹಿಕವಾಗಿ ಸಧೃಡಗೊಳ್ಳಲು ದೈಹಿಕ ವ್ಯಾಯಾಮವನ್ನು ಆರಂಭಿಸುವಿರಿ. ರಜೆಯ ಸವಿಯನ್ನು ಸವಿಯಲು ಮಕ್ಕಳ ಜೊತೆಯಲ್ಲಿ ವಂಶದ ಹಿರಿಯರಿರುವ ಸ್ಥಳಕ್ಕೆ ತೆರಳುವಿರಿ. ಮನರಂಜನಾ ಮಾಧ್ಯಮದಿಂದ ದೂರ ಉಳಿಯುವಿರಿ. ಸ್ವಂತ ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಬಂಡವಾಳ ಹೂಡಲು ಸಮಯವಲ್ಲ. ಹಣವಿದ್ದರೂ ಸಾಧಾರಣ ವ್ಯಕ್ತಿಯಂತೆ ಜೀವನ ನಡೆಸುವ ಆಸೆಇರುತ್ತದೆ. ಕುಟುಂಬದ ಸದಸ್ಯರ ಸಾಮರಸ್ಯ ಬೆಳೆಸುವಿರಿ. ಅತಿಯಾದ ಆಹಾರ ಸೇವನೆಯಿಂದ ಅಜೀರ್ಣದ ತೊಂದರೆ ಉಂಟಾಗಲಿದೆ. ಸರಿಯಾದ ಯೋಜನೆ ಇಲ್ಲದಿದ್ದರೆ ಖರ್ಚು ವೆಚ್ಚಗಳು ಕೈಮೀರುತ್ತವೆ. ಗೃಹಾಲಂಕಾರಕ್ಕೆ ಬೇಕಾದ ಪದಾರ್ಥಗಳನ್ನು ಕೊಳ್ಳುವಿರಿ. ಸೋದರನ ಜೊತೆ ಹೊಸ ಹಣಕಾಸಿನ ವ್ಯವಹಾರವನ್ನು ಆರಂಭಿಸುವಿರಿ.

ಪರಿಹಾರ : ಧಾರ್ಮಿಕ ಕೇಂದ್ರಕ್ಕೆ ದೀಪದ ಎಣ್ಣೆಯನ್ನು ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ: 4

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ : ನೀಲಿ ಬಣ್ಣ

ಮಿಥುನ

ಕಷ್ಟಕರವೆನಿಸುವ ಕೆಲಸ ಕಾರ್ಯಗಳಿಂದ ದೂರ ಉಳಿಯುವಿರಿ. ಕುಟುಂಬದ ಹಿರಿಯ ಮಾರ್ಗದರ್ಶನ ದೊರೆಯುತ್ತದೆ ಸ್ನೇಹಿತರೊಂದಿಗೆ ಕಿರು ಪ್ರವಾಸ ಕೈಗೊಳ್ಳುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಆದಾಯ ಹೆಚ್ಚಲಿದೆ. ಬಂಧು-ಬಳಗದವರ ಆಗಮದಿಂದ ಖುಷಿಯಾಗುವಿರಿ. ದಿನಾಂತ್ಯಕ್ಕೆ ಮುಖ್ಯ ಕೆಲಸವನ್ನು ಮಾಡಲೇಬೇಕಾಗಿ ಬರುತ್ತದೆ. ದೇಹಾಲಸ್ಯವು ನಿಮ್ಮನ್ನು ಬಾಧಿಸುತ್ತದೆ. ಎಲ್ಲರ ಜೊತೆ ಸಂತಸದಿಂದ ಬಾಳುವಿರಿ. ಹೊಸ ಒಡವೆ ವಸ್ತುಗಳಿಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಶಕ್ತರಿಗೆ ಹೊಸ ಬಟ್ಟೆ ಮತ್ತು ಆಹಾರದ ವ್ಯವಸ್ಥೆ ಮಾಡುವಿರಿ. ಒಮ್ಮೆ ತೆಗೆದುಕೊಂಡ ತೀರ್ಮಾನವನ್ನು ಬದಲಿಸದಿರಿ. ತಲೆಗೆ ಪೆಟ್ಟಾಗಬಹುದು ಎಚ್ಚರಿಕೆ ಇರಲಿ.

ಪರಿಹಾರ : ತಾಯಿಯವರ ಆಶೀರ್ವಾದ ಪಡೆದು ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಟದ ಬಣ್ಣ: ನೇರಳೆ ಬಣ್ಣ

ಕಟಕ

ಉದ್ಯೋಗದಲ್ಲಿನ ಮಾನಸಿಕ ಒತ್ತಡವು ಕಡಿಮೆಯಾಗಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಕ್ರಮ ಬದಲಿಸಿಕೊಳ್ಳಲಿದ್ದೀರಿ. ಅನಿರೀಕ್ಷಿತ ಖರ್ಚು ವೆಚ್ಚಗಳಿಂದ ಬೇಸರಕ್ಕೆ ಒಳಗಾಗುವಿರಿ. ಆಕಸ್ಮಿಕವಾಗಿ ಬರುವ ಸೋದರಿ ಅಥವ ಅವರ ಮಕ್ಕಳು ಸಂತಸವನ್ನು ಉಂಟು ಮಾಡುತ್ತಾರೆ. ದಿನಾಂತ್ಯಕ್ಕೆ ಕುಟುಂಬದ ಸದಸ್ಯರ ಜೊತೆಯಲ್ಲಿ ಮನರಂಜನಾ ಸ್ಥಳಕ್ಕೆ ಭೇಟಿ ನೀಡುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಯಾವುದೇ ಹಿನ್ನಡೆ ಲಭಿಸದು. ಸ್ವಂತ ಶಾಲಾ ಕಾಲೇಜುಗಳನ್ನು ನಡೆಸುವವರಿಗೆ ಹೆಚ್ಚಿನ ಕೆಲಸ ಕಾರ್ಯಗಳಿರುತ್ತವೆ. ಸದಾ ಕಾಲ ನೆನಪಿನಲ್ಲಿ ಉಳಿಯುವ ಕೆಲಸವನ್ನು ಮಾಡುವಿರಿ. ಸ್ವಂತ ಬಳಕೆಗಾಗಿ ಹೊಸ ವಾಹನವನ್ನು ಕೊಳ್ಳುವಿರಿ.

ಪರಿಹಾರ : ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಗುಲಾಬಿ ಬಣ್ಣ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).