ಕನ್ನಡ ಸುದ್ದಿ  /  ಕ್ರಿಕೆಟ್  /  ಮಯಾಂಕ್ ಯಾದವ್ ಕಂಬ್ಯಾಕ್; ಮುಂಬೈ ಇಂಡಿಯನ್ಸ್ ವಿರುದ್ಧದ ಸಮರಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ Xi

ಮಯಾಂಕ್ ಯಾದವ್ ಕಂಬ್ಯಾಕ್; ಮುಂಬೈ ಇಂಡಿಯನ್ಸ್ ವಿರುದ್ಧದ ಸಮರಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ XI

LSG vs MI Playing XI : 17ನೇ ಆವೃತ್ತಿಯ ಐಪಿಎಲ್​ನ 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. ಎರಡೂ ತಂಡಗಳ ಪ್ಲೇಯಿಂಗ್ ಇಲೆವೆನ್ ಇಲ್ಲಿದೆ.

ಮಯಾಂಕ್ ಯಾದವ್ ಕಂಬ್ಯಾಕ್; ಮುಂಬೈ ಇಂಡಿಯನ್ಸ್ ವಿರುದ್ಧದ ಸಮರಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ XI
ಮಯಾಂಕ್ ಯಾದವ್ ಕಂಬ್ಯಾಕ್; ಮುಂಬೈ ಇಂಡಿಯನ್ಸ್ ವಿರುದ್ಧದ ಸಮರಕ್ಕೆ ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ XI

2024ರ ಐಪಿಎಲ್​ನ 48ನೇ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ (Lucknow Super Giants vs Mumbai Indians) ತಂಡಗಳು ಸೆಣಸಾಟಕ್ಕೆ ಸಜ್ಜಾಗಿವೆ. ಲಕ್ನೋದ ಏಕನಾ ಕ್ರಿಕೆಟ್ ಮೈದಾನವು ಈ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಒದಗಿಸಲಿದೆ. ಪ್ಲೇಆಫ್ ರೇಸ್​​ನಲ್ಲಿ ಉಳಿಯಲು ಮುಂಬೈ ತಂಡಕ್ಕೆ ಈ ಪಂದ್ಯದ ಗೆಲುವು ಮಹತ್ವದ್ದಾಗಿದೆ. ಇನ್ನು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಲಕ್ನೋ, ಅಗ್ರ-4ಕ್ಕೇರಲು ಭಾರಿ ಕಸರತ್ತು ನಡೆಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಕೊನೆಯ ಎರಡು ಪಂದ್ಯಗಳಲ್ಲಿ 2 ಸೋಲುಗಳ ನಂತರ ಮುಂಬೈ ಪ್ಲೇಆಫ್ ಬಾಗಿಲು ಬಹುತೇಕ ಮುಚ್ಚಿದೆ. ಆದರೂ ಪ್ಲೇಆಫ್​ ಆಸೆ ಇನ್ನೂ ಜೀವಂತವಾಗಿದೆ. ಈ ಪಂದ್ಯ ಸೋತರೆ, ಆರ್​ಸಿಬಿಯಂತೆಯೇ ಮುಳುಗಿದ ಧೋನಿಯಾಗುವುದು ಖಚಿತ. ಬೌಲಿಂಗ್​ ವಿಭಾಗದಲ್ಲಿ ಬುಮ್ರಾರನ್ನೇ ನೆಚ್ಚಿಕೊಂಡಿರುವ ಮುಂಬೈ, ವಿದೇಶಿ ಬೌಲರ್​ಗಳಿಂದ ಅತ್ಯುತ್ತಮ ಪ್ರದರ್ಶನ ಪಡೆಯುವಲ್ಲಿ ವಿಫಲವಾಗಿದೆ. ಲೂಕ್ ವುಡ್ ಬದಲಿಗೆ ಕುಮಾರ್ ಕಾರ್ತಿಕೇಯ ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ.

ಪಂದ್ಯಾವಳಿ ಪ್ರಾರಂಭವಾಗುವ ಮೊದಲೇ ಜೇಸನ್ ಬೆಹ್ರೆನ್‌ಡಾರ್ಫ್ ಮತ್ತು ದಿಲ್ಶನ್ ಮಧುಶಂಕ ಗಾಯಗಳಿಂದ ಹೊರಗುಳಿದರು. ಅವರ ಬದಲಿ ಆಟಗಾರರಾದ ಲ್ಯೂಕ್ ವುಡ್ ಮತ್ತು ಕ್ವೆನಾ ಮಫಕಾ - ನಿರೀಕ್ಷೆಗಳನ್ನು ಪೂರೈಸಲು ವಿಫಲರಾದರು. ನುವಾನ್ ತುಷಾರ ಅವರು ಆಡಿದ 2 ಪಂದ್ಯಗಳಲ್ಲಿ ವಿಕೆಟ್ ಇಲ್ಲದೆ 12ರ ಎಕಾನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. 12 ವಿಕೆಟ್ ಪಡೆದಿರುವ ಜೆರಾಲ್ಡ್ ಕೊಯೆಟ್ಜಿ, ಹೊಟ್ಟೆ ನೋವಿನಿಂದ ಬಳಲುತ್ತಿದ್ದಾರೆ. ಅವರು ಸಹ 10.10ರ ಎಕಾನಮಿನಲ್ಲಿ ರನ್ ನೀಡಿದ್ದಾರೆ.

ಮಯಾಂಕ್ ಯಾದವ್ ಕಂಬ್ಯಾಕ್

ಕಳೆದ ಪಂದ್ಯದಲ್ಲಿ ಸೋಲಿನ ಆಘಾತಕ್ಕೆ ಒಳಗಾದ ಲಕ್ನೋ ತವರಿನ ಮೈದಾನದಲ್ಲಿ ಲಯಕ್ಕೆ ಮರಳಲು ಸಜ್ಜಾಗಿದೆ. ಗುಡ್​ ನ್ಯೂಸ್ ಏನೆಂದರೆ ಮಯಾಂಕ್ ಯಾದವ್ ಫಿಟ್ ಆಗಿದ್ದು, ಈ ಪಂದ್ಯಕ್ಕೆ ಲಭ್ಯರಾಗುತ್ತಾರೆ ಎಂದು ಹೇಳಲಾಗಿದೆ. ಇದು ತಂಡದ ಬೌಲಿಂಗ್ ಬಲ ಹೆಚ್ಚಿಸಲಿದೆ. ಉಳಿದಂತೆ ತಂಡದಲ್ಲಿ ಬದಲಾವಣೆ ತೀರಾ ಕಡಿಮೆ. ಮಯಾಂಕ್ ಆಗಮನದ ಕಾರಣ ಮ್ಯಾಟ್ ಹೆನ್ರಿ ಬೆಂಚ್​ಗೆ ಕೂರಬಹುದು. ದೇವದತ್ ಪಡಿಕ್ಕಲ್ ಬದಲಿಗೆ ಆಷ್ಟನ್ ಟರ್ನರ್​ಗೆ ಅವಕಾಶ ನೀಡಲು ಚಿಂತಿಸಿದೆ.

ಮುಂಬೈ ಇಂಡಿಯನ್ಸ್ ಸಂಭಾವ್ಯ XI

ಇಶಾನ್ ಕಿಶನ್ (ವಿಕೆಟ್ ಕೀಪರ್​), ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ನೇಹಾಲ್ ವಧೇರಾ, ಟಿಮ್ ಡೇವಿಡ್, ಮೊಹಮ್ಮದ್ ನಬಿ, ಪಿಯೂಷ್ ಚಾವ್ಲಾ, ಕುಮಾರ್ ಕಾರ್ತಿಕೇಯ , ಜಸ್ಪ್ರೀತ್ ಬುಮ್ರಾ.

ಲಕ್ನೋ ಸೂಪರ್ ಜೈಂಟ್ಸ್ ಸಂಭಾವ್ಯ XI

ಕ್ವಿಂಟನ್ ಡಿ ಕಾಕ್, ಕೆಎಲ್ ರಾಹುಲ್ (ನಾಯಕ, ವಿಕೆಟ್ ಕೀಪರ್), ಮಾರ್ಕಸ್ ಸ್ಟೋಯ್ನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಷ್ಟನ್ ಟರ್ನರ್, ಆಯುಷ್ ಬಡೋನಿ , ಕೃನಾಲ್ ಪಾಂಡ್ಯ, ಮಯಾಂಕ್ ಯಾದವ್, 10 ರವಿ ಬಿಷ್ಣೋಯ್, ಮೊಹ್ಸಿನ್ ಖಾನ್.

ಅಂಕಿ-ಅಂಶಗಳು

  • ರೋಹಿತ್ ಶರ್ಮಾ 92 ಎಸೆತಗಳಲ್ಲಿ ಕೇವಲ 87 ರನ್ ಗಳಿಸುವ ಮೂಲಕ ಟಿ20ಯಲ್ಲಿ ಎಂಟು ಬಾರಿ ಅಮಿತ್ ಮಿಶ್ರಾಗೆ ಔಟ್ ಆಗಿದ್ದಾರೆ. ಅಮಿತ್ ಮಿಶ್ರಾ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯಬಹುದು.
  • ಜಸ್ಪ್ರೀತ್ ಬುಮ್ರಾ 44 ಎಸೆತಗಳಲ್ಲಿ ಕೇವಲ 42 ರನ್ ನೀಡಿ ಮಾರ್ಕಸ್ ಸ್ಟೋಯ್ನಿಸ್ ಅವರನ್ನು 4 ಬಾರಿ ಔಟ್ ಮಾಡಿದ್ದಾರೆ .
  • ರವಿ ಬಿಷ್ಣೋಯ್ ಅವರು ಇಶಾನ್ ಕಿಶನ್ ( 21 ಎಸೆತಗಳಲ್ಲಿ 21 ರನ್, ಮೂರು ಔಟಾದರು ) ಮತ್ತು ಟಿಮ್ ಡೇವಿಡ್ ( 23 ಎಸೆತಗಳಲ್ಲಿ 17, ಎರಡು ಔಟಾದರು ) ಅವರಿಗೆ ತೊಂದರೆ ನೀಡಿದ್ದಾರೆ.
  • ಆದರೆ, ಅದೇ ರವಿ ಬಿಷ್ಣೋಯ್ ವಿರುದ್ಧ ಹಾರ್ದಿಕ್ ಪಾಂಡ್ಯ 25 ಎಸೆತಗಳಲ್ಲಿ 55 ರನ್ ಮತ್ತು ತಿಲಕ್ ವರ್ಮಾ 20 ರಲ್ಲಿ 38 ರನ್ ಗಳಿಸಿದ್ದಾರೆ. ಒಂದು ಬಾರಿಯೂ ಔಟ್ ಆಗಿಲ್ಲ.
  • ಹಾರ್ದಿಕ್ ತನ್ನ ಸಹೋದರ ಕೃನಾಲ್ ವಿರುದ್ಧ 23 ಎಸೆತಗಳಲ್ಲಿ 14 ರನ್ ಗಳಿಸಿ ಒಂದು ಬಾರಿ ವಿಕೆಟ್ ಒಪ್ಪಿಸಿದ್ದಾರೆ.

ಪಿಚ್ ರಿಪೋರ್ಟ್

ಲಕ್ನೋದಲ್ಲಿ ಇದುವರೆಗೆ ನಡೆದ ಐದು ಪಂದ್ಯಗಳಲ್ಲಿ ಯಾವುದೇ ತಂಡವು 200 ರನ್ ಮೀರಲು ಸಾಧ್ಯವಾಗಿಲ್ಲ. ಏಕನಾ ಕ್ರಿಕೆಟ್ ಮೈದಾನವು ಸ್ಪಿನ್ನರ್​ಗಳಿಗೆ ತುಂಬಾ ನೆರವಾಗಲಿದೆ. ಮುಂಬೈಗಿಂತ ಎಲ್‌ಎಸ್‌ಜಿ ಉತ್ತಮ ಸ್ಪಿನ್ ದಾಳಿಯನ್ನು ಹೊಂದಿರುವ ಕಾರಣ, ಮೇಲುಗೈ ಸಾಧಿಸುವ ನಿರೀಕ್ಷೆ ಇದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

IPL_Entry_Point