ಕನ್ನಡ ಸುದ್ದಿ  /  Astrology  /  Kundli Graha Dosh Remedies Graha Dosha In Kundli Suffering From Rahu Dosha Here Are Some Remidies

Kundli Graha Dosh Remedies: ಕುಂಡಲಿಯಲ್ಲಿ ಗ್ರಹ ದೋಷವೇ? ರಾಹು ದೋಷದಿಂದ ಬಳಲುತ್ತಿದ್ದೀರಾ?

Kundli Graha Dosh Remedies: ಜನ್ಮ ಕುಂಡಲಿಯಲ್ಲಿ ದೋಷವಿರುವ ಕಾರಣ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೈಹಾಕಿದ ಕೆಲಸಗಳು ಯಶಸ್ವಿಯಾಗುವುದಿಲ್ಲ. ಹೂಡಿಕೆಗಳಲ್ಲಿ ನಷ್ಟ ಹೀಗೆ ಹತ್ತು ಹಲವು ಸಂಕಷ್ಟಗಳನ್ನು ಅನುಭವಿಸುತ್ತಾರೆ. ಬದುಕು ಹತಾಶೆಯಲ್ಲಿ ಮುಳುಗುತ್ತದೆ.

ನಿರ್ದಿಷ್ಟವಾಗಿ ರಾಹುವಿನ ಪ್ರಭಾವವನ್ನು ಕಡಿಮೆ ಮಾಡಲು ನೀವು ಕೆಲವು ಸರಳ ಕೆಲಸಗಳನ್ನು ಮಾಡಬಹುದು. ಇದು ಸಮಸ್ಯೆಯನ್ನು ಮತ್ತು ಅದರ ಪ್ರಭಾವವನ್ನು ಕಡಿಮೆ ಮಾಡುತ್ತದೆ.
ನಿರ್ದಿಷ್ಟವಾಗಿ ರಾಹುವಿನ ಪ್ರಭಾವವನ್ನು ಕಡಿಮೆ ಮಾಡಲು ನೀವು ಕೆಲವು ಸರಳ ಕೆಲಸಗಳನ್ನು ಮಾಡಬಹುದು. ಇದು ಸಮಸ್ಯೆಯನ್ನು ಮತ್ತು ಅದರ ಪ್ರಭಾವವನ್ನು ಕಡಿಮೆ ಮಾಡುತ್ತದೆ. (HT Bangla)

ಜಾತಕದಲ್ಲಿ ಅರ್ಥಾತ್‌ ಜನ್ಮ ಕುಂಡಲಿಯಲ್ಲಿ ದೋಷವಿರುವ ಕಾರಣ ಜನರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೈಹಾಕಿದ ಕೆಲಸಗಳು ಯಶಸ್ವಿಯಾಗುವುದಿಲ್ಲ. ಹೂಡಿಕೆಗಳಲ್ಲಿ ನಷ್ಟ ಹೀಗೆ ಹತ್ತು ಹಲವು ಸಂಕಷ್ಟಗಳನ್ನು ಅನುಭವಿಸುತ್ತಾರೆ. ಬದುಕು ಹತಾಶೆಯಲ್ಲಿ ಮುಳುಗುತ್ತದೆ.

ಈ ಪರಿಸ್ಥಿತಿಯಲ್ಲಿ ಗ್ರಹ ದೋಷವನ್ನು ಕಡಿಮೆ ಮಾಡಲು ಕೆಲವು ಮಾರ್ಗೋಪಾಯಗಳಿವೆ. ನಿರ್ದಿಷ್ಟವಾಗಿ ರಾಹುವಿನ ಪ್ರಭಾವವನ್ನು ಕಡಿಮೆ ಮಾಡಲು ನೀವು ಕೆಲವು ಸರಳ ಕೆಲಸಗಳನ್ನು ಮಾಡಬಹುದು. ಇದು ಸಮಸ್ಯೆಯನ್ನು ಮತ್ತು ಅದರ ಪ್ರಭಾವವನ್ನು ಕಡಿಮೆ ಮಾಡುತ್ತದೆ.

ರಾಹುವಿನ ಪ್ರಭಾವದಿಂದ ಮುಕ್ತಿ ಹೇಗೆ?

ಜ್ಯೋತಿಷ್ಯ ಶಾಸ್ತ್ರವು ಹೇಳುವ ಕೆಲವು ಸರಳ ಪರಿಹಾರ ನಿಯಮಗಳು ಬಹಳ ಪ್ರಯೋಜನಕಾರಿ. ಅವು ಏನೆಂದು ತಿಳಿದುಕೊಳ್ಳಬೇಕು. ಗ್ರಹಚಾರ ಅಥವಾ ಗ್ರಹದೋಷಗಳ ಪರಿಹಾರಕ್ಕೆ ಏನು ಮಾಡಿದರೆ ಒಳಿತು? ಫಲದಾಯಿ ಎಂಬುದನ್ನು ಅರಿಯೋಣ.

ಪಕ್ಷಿಗಳಿಗೆ ಆಹಾರ ನೀಡಿ

ಜಾತಕದಲ್ಲಿ ರಾಹು ದೋಷವಿದ್ದು, ರಾಹುವಿನ ಪ್ರಭಾವವನ್ನು ಕಡಿಮೆ ಮಾಡಲು ಮೊದಲು ಪಕ್ಷಿಗಳಿಗೆ ಆಹಾರವನ್ನು ನೀಡಿ. ಪಾರಿವಾಳಗಳಿಗೆ ಧಾನ್ಯಗಳನ್ನು ನೀಡಬಹುದು. ಈ ರೀತಿ ರಾಹು ದೋಷ ಇರುವಂಥವರು ಕಾಗೆಗಳಿಗೆ ಆಹಾರ ನೀಡಿದರೆ ಉತ್ತಮ. ಕಾಗೆಗಳಿಗೆ ಅನ್ನ ಕೊಡಿ. ಇದರಿಂದ ರಾಹುವಿನ ಪ್ರಭಾವ ಕಡಿಮೆಯಾಗುತ್ತದೆ.

ನಾಯಿಗಳಿಗೂ ಆಹಾರ ಕೊಡಿ

ನಿತ್ಯವೂ ನಾಯಿಗಳಿಗೆ ಆಹಾರ ಕೊಡುವುದನ್ನು ರೂಢಿಸಿಕೊಳ್ಳಿ. ಜಾತಕ ಅಥವಾ ಜನ್ಮಕುಂಡಲಿಯಲ್ಲಿನ ಗ್ರಹ ದೋಷಗಳ ವಿಶೇಷವಾಗಿ ರಾಹುವಿನ ದೋಷ ನಿವಾರಣೆಗೆ ಈ ನಡೆಯು ಸಹಕಾರಿ. ನಾಯಿಗೆ ಬ್ರೆಡ್‌, ಬಿಸ್ಕಟ್‌ ಅಥವಾ ತಿಂಡಿ ಮುಂತಾದ ಆಹಾರ ನೀಡಬಹುದು. ಈ ರೀತಿ ಮಾಡುವುದರಿಂದ ರಾಹು ದೋಷ ಇರುವಂತಹ ಜಾತಕದಲ್ಲಿ ರಾಹುವಿನ ಅಶುಭ ಫಲ ಕಡಿಮೆಯಾಗುವುದಲ್ಲದೆ, ಅದರ ದುಷ್ಪರಿಣಾಮ ಕೂಡ ಇಲ್ಲವಾಗುತ್ತದೆ. ಇದು ಜೀವನಕ್ಕೆ ಸಂತೋಷವನ್ನು ತರಬಹುದು.

ರಾಹುವಿನ ಪ್ರಭಾವ, ದುಷ್ಪರಿಣಾಮ ತೊಡೆದುಹಾಕುವ ಶಕ್ತಿ ಇರುವಂಥದ್ದು ಆಂಜನೇಯನಿಗೆ. ಹನುಮಂತನ ಆರಾಧನೆ ಮಾಡಿದರೆ ರಾಹುವಿನಿಂದ ಉಂಟಾಗುವ, ಉಂಟಾದ ದೋಷಗಳ ನಿವಾರಣೆ ಸಾಧ್ಯ. ಆದ್ದರಿಂದ ರಾಹುವಿನ ಪ್ರಭಾವವನ್ನು ತೊಡೆದುಹಾಕಲು ಬಜರಂಗಬಲಿ ದೇವಸ್ಥಾನದಲ್ಲಿ ಪೂಜೆಯನ್ನು ಮಾಡಿ. ಹನುಮಂತನಿಗೆ ಎಳ್ಳು ಮತ್ತು ಬಾರ್ಲಿಯನ್ನು ಅರ್ಪಿಸಬೇಕು. ಈ ರೀತಿ ಮಾಡುವುದರಿಂದ ಜಾತಕದಲ್ಲಿ ರಾಹುವಿನ ಪ್ರಭಾವ ಕಡಿಮೆಯಾಗುತ್ತದೆ. ಬದುಕು ಕೂಡ ಸಂಕಷ್ಟಮುಕ್ತವಾಗುತ್ತದೆ.

ರಾಹು ಶಾಂತಿಗೆ ಇದೊಂದು ಮಂತ್ರ

ಅಂತಿಮವಾಗಿ ರಾಹುವಿನ ಪ್ರಭಾವವನ್ನು ತೊಡೆದುಹಾಕುವುದಕ್ಕೆ ಇರುವ ಒಂದು ಮಂತ್ರವಿದೆ. ಅದು ರಾಹುವನ್ನು ಪ್ರಸನ್ನವಾಗಿಸುವುದಲ್ಲದೆ, ರಾಹು ಗ್ರಹದೋಷ ಪೀಡಿತರ ಬದುಕಿಗೆ ಸಾಂತ್ವನ ಒದಗಿಸುತ್ತದೆ. 'ಓಂ ಭ್ರಾನ್ ಭರಣ ಭರಣ ರಹ್ವೇ ನಮಃ' ಎಂಬುದೇ ಆ ಮಂತ್ರ. ಇದನ್ನು ಪಠಿಸಿದರೆ ಸಾಕು. ರಾಹು ಶಾಂತವಾಗಿರುತ್ತಾನೆ. ನಿಮ್ಮ ಗ್ರಹ ದೋಷ ಕಡಿಮೆಯಾಗಿ ಜೀವನ ಆನಂದಮಯವಾಗಲಿದೆ.

ಗಮನಿಸಬಹುದಾದ ವಿಚಾರ

ಇಂದು ಯುಗಾದಿ ಅಮಾವಾಸ್ಯೆ; ಜಾತಕದಲ್ಲಿ ಕಾಳಸರ್ಪ ದೋಷ, ಪಿತೃ ದೋಷ ಇರುವಂಥವರಿಗೆ ವಿಶೇಷ ದಿನ ಇದು

ಈ ದಿನ ಅಮಾವಾಸ್ಯೆ. ಇದನ್ನು ಚೈತ್ರ ಅಮಾವಾಸ್ಯೆ/ ಯುಗಾದಿ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಹಿಂದು ಧರ್ಮದಲ್ಲಿ ಚೈತ್ರ ಅಮಾವಾಸ್ಯೆಗೆ ಬಹಳ ಮಹತ್ವ ಇದೆ. ಪಿತೃ ಮತ್ತು ಕಾಳಸರ್ಪ ದೋಷ ಇರುವಂಥವರು ಈ ದಿನ ಕೆಲವು ದೋಷ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಜ್ಯೋತಿಷ್ಯ ಶಾಸ್ತ್ರ, ಧಾರ್ಮಿಕ ಪರಿಣತರು ಸಲಹೆ ನೀಡುತ್ತಾರೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಮಂಗಳವಾರ ಬಂದಿದೆ ಅಮಾವಾಸ್ಯೆ; ತುಲಾ, ವೃಶ್ಚಿಕ, ಮಕರ, ಕುಂಭ, ಮೀನ ರಾಶಿಗಳ ಮಹಾ ಸಂಯೋಗದಲ್ಲಿ ಶನಿಯ ಅಶುಭ ಪರಿಣಾಮ

Phaluguna Amavasya 2023: ಯುಗಾದಿ ಅಮಾವಾಸ್ಯೆ ಈ ಸಲ ಮಂಗಳವಾರ ಬಂದಿದೆ. ತುಲಾ, ವೃಶ್ಚಿಕ, ಮಕರ, ಕುಂಭ, ಮೀನ ರಾಶಿಗಳ ಮಹಾ ಸಂಯೋಗದಲ್ಲಿ ಶನಿಯ ಅಶುಭ ಪರಿಣಾಮಗಳು ಗೋಚರಿಸಬಹುದು. ಹನುಮಂತನ ಪೂಜೆಗೆ ವಿಶೇಷ ಮಹತ್ವ ಇದೆಯಂತೆ. ಪೂರ್ಣ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

ವಿಭಾಗ