ಕನ್ನಡ ಸುದ್ದಿ  /  ಕ್ರಿಕೆಟ್  /  ಚೆನ್ನೈ ಸೂಪರ್ ಕಿಂಗ್ಸ್​​ ತನ್ನನ್ನು ಕೈಬಿಟ್ಟಿದ್ದೇಕೆ? ಮೊದಲ ಬಾರಿಗೆ ಮೌನ ಮುರಿದ ಸುರೇಶ್ ರೈನಾ

ಚೆನ್ನೈ ಸೂಪರ್ ಕಿಂಗ್ಸ್​​ ತನ್ನನ್ನು ಕೈಬಿಟ್ಟಿದ್ದೇಕೆ? ಮೊದಲ ಬಾರಿಗೆ ಮೌನ ಮುರಿದ ಸುರೇಶ್ ರೈನಾ

Suresh Raina - Chennai Super Kings : ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ತನ್ನನ್ನು ಕೈಬಿಟ್ಟಿದ್ದೇಕೆ ಎಂಬುದರ ಕುರಿತು ಇದೇ ಮೊದಲ ಬಾರಿಗೆ ಸುರೇಶ್ ರೈನಾ ಮೌನ ಮುರಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​​ ತನ್ನನ್ನು ಕೈಬಿಟ್ಟಿದ್ದೇಕೆ? ಮೊದಲ ಬಾರಿಗೆ ಮೌನ ಮುರಿದ ಸುರೇಶ್ ರೈನಾ
ಚೆನ್ನೈ ಸೂಪರ್ ಕಿಂಗ್ಸ್​​ ತನ್ನನ್ನು ಕೈಬಿಟ್ಟಿದ್ದೇಕೆ? ಮೊದಲ ಬಾರಿಗೆ ಮೌನ ಮುರಿದ ಸುರೇಶ್ ರೈನಾ

ಸುರೇಶ್ ರೈನಾ (Suresh Raina) ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಪರ ಸುದೀರ್ಘ ಸೇವೆ ಸಲ್ಲಿಸಿದ ಆಟಗಾರರಲ್ಲಿ ಒಬ್ಬರು. 2008ರ ಮೆಗಾ ಹರಾಜಿನಲ್ಲಿ ಸಿಎಸ್​ಕೆ ಸೇರಿಕೊಂಡ ಚಿನ್ನ ತಲಾ, 12 ವರ್ಷಗಳ ಕಾಲ ಫ್ರಾಂಚೈಸಿ ಪರ ಆಡಿದ್ದಾರೆ. ಪ್ರತಿ ಸೀಸನ್​​ನಲ್ಲೂ ಯೆಲ್ಲೋ ಆರ್ಮಿ ಪರ ಅಬ್ಬರಿಸುತ್ತಿದ್ದ ಎಡಗೈ ಆಟಗಾರ, ಚೆನ್ನೈ ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಂಡದ ಯಶಸ್ಸಿನಲ್ಲಿ ಎಂಎಸ್ ಧೋನಿ (MS Dhoni) ಎಷ್ಟು ಕೊಡುಗೆ ಇದೆಯೋ, ರೈನಾ ಕೊಡುಗೆ ಕೂಡ ಅಷ್ಟೇ ಇದೆ ಎಂಬುದನ್ನು ಮರೆಯುವಂತಿಲ್ಲ. ಹೀಗಿದ್ದರೂ 2022ರ ಐಪಿಎಲ್​​ ಮೆಗಾ ಹರಾಜಿಗೂ ಮೊದಲೇ ರೈನಾ ಅವರನ್ನು ಕೈಬಿಟ್ಟರು. ಇದೀಗ ತನ್ನನ್ನು ಯೆಲ್ಲೋ ಆರ್ಮಿ ಕೈಬಿಡಲು ಕಾರಣ ಏನೆಂದು ಸುರೇಶ್ ರೈನಾ ವಿವರಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್​ ಕ್ಯಾಂಪ್​​ನಲ್ಲಿ ಎಂಎಸ್ ಧೋನಿ ನಂತರ 2ನೇ ಅತಿ ದೊಡ್ಡ ಹೆಸರು ಸಂಪಾದಿಸಿದ್ದ ರೈನಾ, 2019ರವರೆಗೆ ಮಾಹಿಗೆ ಉಪನಾಯಕರಾಗಿದ್ದರು. ಧೋನಿ ಅಲಭ್ಯರಾದ ಪಂದ್ಯಗಳಲ್ಲಿ ಸಿಎಸ್​ಕೆ ತಂಡವನ್ನು ಮುನ್ನಡೆಸಿದ್ದರು. ಎಡಗೈ ಬ್ಯಾಟ್ಸ್‌ಮನ್ ಹಳದಿ ಸೈನ್ಯಕ್ಕೆ ಸಂಪೂರ್ಣವಾಗಿ ಬದ್ಧರಾಗಿದ್ದರು. ಅವರು ಐಪಿಎಲ್ 2008 ರಿಂದ 2015 ರವರೆಗೆ ಯಾವುದೇ ಪಂದ್ಯವನ್ನು ತಪ್ಪಿಸಿಕೊಂಡಿರಲಿಲ್ಲ. 2020ರ ಐಪಿಎಲ್ ಪ್ರಾರಂಭಕ್ಕೂ ಮುನ್ನ ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಧೋನಿ ವಿದಾಯ ಹೇಳಿದ ಕೆಲವೇ ನಿಮಿಷಗಳಲ್ಲಿ ರೈನಾ ಕೂಡ ಈ ನಿರ್ಧಾರ ತೆಗೆದುಕೊಂಡಿದ್ದರು.

2020ರ ಐಪಿಎಲ್​​ಗೆ ಯುಎಇಗೆ ಪ್ರಯಾಣಿಸಿದ ರೈನಾ, ವೈಯಕ್ತಿಕ ಕಾರಣಗಳಿಂದ ಟೂರ್ನಿಯಿಂದ ಹೊರನಡೆದು ಮನೆಗೆ ಮರಳಿದರು. 2021ರ ಐಪಿಎಲ್​​ನಲ್ಲೂ ಸಿಎಸ್​ಕೆ ತಂಡದಲ್ಲೇ ಉಳಿದಿದ್ದ ಮಿಸ್ಟರ್ ಐಪಿಎಲ್ ಎಂದು ಕರೆಸಿಕೊಳ್ಳುವ ರೈನಾ, ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಆಡುವ 11ರ ಬಳಗದಿಂದ ಸ್ಥಾನ ಪಡೆಯಲು ವಿಫಲರಾದರು. ಫೈನಲ್‌ನಲ್ಲೂ ಬೆಂಚ್‌ ಕಾದಿದ್ದರು. ಆದರೆ 2022ರ ಐಪಿಎಲ್ ಹರಾಜಿ​​ಗೂ ಮುನ್ನ ಅವರನ್ನು ಚೆನ್ನೈ ಬಿಡುಗಡೆ ಮಾಡಿತು. ಹರಾಜಿನಲ್ಲಿ ಮಾರಾಟವಾಗದೆ ಉಳಿದರು. ಹಲವು ವರ್ಷಗಳ ಕಾಲ ಚೆನ್ನೈಗೆ ಸೇವೆ ಸಲ್ಲಿಸಿದ ರೈನಾಗೆ ಸರಿಯಾದ ವಿದಾಯ ಸಿಗಲಿಲ್ಲ.

ಸುರೇಶ್ ರೈನಾ ಹೇಳಿದ್ದೇನು?

ಇದಾದ 2 ವರ್ಷಗಳ ನಂತರ ರೈನಾ ಈ ಬಗ್ಗೆ ಮೌನ ಮುರಿದಿದ್ದಾರೆ. ಲಾಲಂಟಾಪ್ ಅವರೊಂದಿಗೆ ಮಾತನಾಡುತ್ತಾ ಎಡಗೈ ಆಟಗಾರ ಹೇಳಿದ್ದಾರೆ. ಎಂಎಸ್ ಧೋನಿ ಚೆನ್ನಾಗಿ ಆಡುತ್ತಿದ್ದ ಕಾರಣ ಅವರು ತಂಡದಲ್ಲಿ ಆಡಬೇಕು. ಬಿಡುಗಡೆಯಾಗಿದ್ದಕ್ಕೆ ನಾನೇಕೆ ದುಃಖಿಸಬೇಕು ಎಂದು ಸಿಎಸ್‌ಕೆಯಿಂದ ಬಿಡುಗಡೆ ಕುರಿತು ತಿಳಿಸಿದ್ದಾರೆ. ಕೈಬಿಟ್ಟರೆಂದು ನಾನೇಕೆ ಬೇಸರಗೊಳ್ಳಬೇಕು ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಆದರೆ ನಿಖರವಾದ ಉತ್ತರ ನೀಡಲಿಲ್ಲ. ಸಂದರ್ಶನದಲ್ಲಿ ಇಲ್ಲಿಗೆ ಮಾತು ಮುಗಿಸಿದ್ದಾರೆ. 2022ರ ಮೆಗಾ ಹರಾಜಿನಲ್ಲಿ ಅನ್​ಸೋಲ್ಡ್ ಆದ ಬಳಿಕ ರೈನಾ ಕಾಮೆಂಟರಿ ಸೇವೆಯತ್ತ ವಾಲಿದರು. 2022ರಲ್ಲಿ ಭಾರತೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಕಳೆದ ಎರಡು ವರ್ಷಗಳಲ್ಲಿ ಫ್ರಾಂಚೈಸ್ ಕ್ರಿಕೆಟ್ ಆಡಿದ್ದಾರೆ. ರೈನಾ ತಮ್ಮ ಐಪಿಎಲ್ ವೃತ್ತಿಜೀವನವನ್ನು 205 ಪಂದ್ಯಗಳಲ್ಲಿ 5528 ರನ್‌ಗಳೊಂದಿಗೆ ಪೂರ್ಣಗೊಳಿಸಿದ್ದಾರೆ.

ಸಂದರ್ಶನದ ವಿಡಿಯೋ ಇಲ್ಲಿದೆ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ.

ಯೆಲ್ಲೋ ಆರ್ಮಿ ಪರ 176 ಪಂದ್ಯಗಳಲ್ಲಿ ಆಡಿರುವ ರೈನಾ, 4687 ರನ್ ಗಳಿಸಿದ್ದಾರೆ. ಟಿ20 ಲೀಗ್‌ನಲ್ಲಿ ಸಿಎಸ್‌ಕೆ ಪರ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ರೈನಾ ನಂತರ ಧೋನಿ 227 ಪಂದ್ಯಗಳಲ್ಲಿ 4595 ರನ್ ಗಳಿಸಿದ್ದಾರೆ. ಬೇರೆ ಯಾವುದೇ ಬ್ಯಾಟ್ಸ್‌ಮನ್ ಫ್ರಾಂಚೈಸ್ ಪರ 3000 ರನ್ ಗಡಿ ದಾಟಿಲ್ಲ. ಸಿಎಸ್‌ಕೆ ಹೊರತಾಗಿ ರೈನಾ ಗುಜರಾತ್ ಲಯನ್ಸ್ ಪರ ಆಡಿದ್ದರು. ಐಪಿಎಲ್ 2016 ಮತ್ತು 2017 ರಲ್ಲಿ ಗುಜರಾತ್ ಲಯನ್ಸ್ ನಾಯಕತ್ವ ವಹಿಸಿದ್ದರು. ರೈನಾ ನಾಯಕತ್ವದಲ್ಲಿ ಗುಜರಾತ್ ತಂಡವು ಮೊದಲ ಆವೃತ್ತಿಯಲ್ಲೇ ಪ್ಲೇಆಫ್‌ಗೆ ಪ್ರವೇಶಿಸಿತ್ತು. ಆದರೆ 2017ರಲ್ಲಿ 7ನೇ ಸ್ಥಾನ ಪಡೆದಿತ್ತು.

IPL_Entry_Point