ಕನ್ನಡ ಸುದ್ದಿ  /  Entertainment  /  Rrr Creates History By Winning Oscar 2023

Oscar 2023: ಭಾರತೀಯ ಚಿತ್ರರಂಗಕ್ಕೆ ಮತ್ತೊಂದು ಗರಿಮೆ.. ಇಂಗ್ಲೀಷ್‌ ಹಾಡುಗಳನ್ನು ಹಿಂದಿಕ್ಕಿ ಆಸ್ಕರ್‌ ದೋಚಿದ ನಾಟು ನಾಟು!

ಇಂದು (ಭಾರತೀಯ ಕಾಲಮಾನ) ಅಮೆರಿಕದಲ್ಲಿ ನಡೆದ 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಾಟು ನಾಟು... 'ಬೆಸ್ಟ್​ ಒರಿಜಿನಲ್​ ಸಾಂಗ್'ವಿಭಾಗದಲ್ಲಿ ಆಸ್ಕರ್ ಪಡೆದುಕೊಂಡಿದೆ. ಈ ಹಾಡಿಗೆ ಆಸ್ಕರ್‌ ಒಲಿದು ಬಂದಿದೆ ಎಂದು ಘೋಷಣೆ ಆಗುತ್ತಿದ್ದಂತೆ ಭಾರತೀಯ ಸಿನಿಮಾ ಪ್ರೇಮಿಗಳಿಗೆ ಆದ ಸಂತೋಷ ಅಷ್ಟಿಷ್ಟಲ್ಲ.

ಆಸ್ಕರ್‌ ಗೆದ್ದ ನಾಟು ನಾಟು ಹಾಡು
ಆಸ್ಕರ್‌ ಗೆದ್ದ ನಾಟು ನಾಟು ಹಾಡು (PC: Twitter)

ಅಂತೂ ಭಾರತೀಯ ಚಿತ್ರರಂಗದ ಪಾಲಿಗೆ ಮತ್ತೊಂದು ಸುವರ್ಣ ದಿನ ಎದುರಾಗಿದೆ. ಎಂ. ಕೀರವಾಣಿ ಸಂಗೀತ ನಿರ್ದೇಶನದ 'ಆರ್‌ಆರ್‌ಆರ್‌' ಚಿತ್ರದ ನಾಟು ನಾಟು... ಹಾಡು ಆಸ್ಕರ್‌ ಬಾಚಿಕೊಂಡು ಇತಿಹಾಸ ಸೃಷ್ಟಿಸಿದೆ. ಹಾಲಿವುಡ್‌ ಸಿನಿಮಾ ಹಾಡುಗಳನ್ನೂ ಹಿಂದಿಕ್ಕಿ ಪ್ರಶಸ್ತಿ ಪಡೆದಿರುವುದು ಭಾರತೀಯರಿಗೆ ಖುಷಿ ನೀಡಿದೆ.

ಇಂದು (ಭಾರತೀಯ ಕಾಲಮಾನ) ಅಮೆರಿಕದಲ್ಲಿ ನಡೆದ 95ನೇ ಸಾಲಿನ ಅಕಾಡೆಮಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ನಾಟು ನಾಟು... 'ಬೆಸ್ಟ್​ ಒರಿಜಿನಲ್​ ಸಾಂಗ್'ವಿಭಾಗದಲ್ಲಿ ಆಸ್ಕರ್ ಪಡೆದುಕೊಂಡಿದೆ. ಈ ಹಾಡಿಗೆ ಆಸ್ಕರ್‌ ಒಲಿದು ಬಂದಿದೆ ಎಂದು ಘೋಷಣೆ ಆಗುತ್ತಿದ್ದಂತೆ ಭಾರತೀಯ ಸಿನಿಮಾ ಪ್ರೇಮಿಗಳಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ದಿ ಅಕಾಡೆಮಿ ಟ್ವಿಟ್ಟರ್‌ ಅಕೌಂಟ್‌ನಲ್ಲಿ ನಾಟು ನಾಟು ಹಾಡು ಆಸ್ಕರ್‌ ಪಡೆದಿರುವ ವಿಚಾರವನ್ನು ಅಧಿಕೃತವಾಗಿ ಬರೆದುಕೊಂಡಿದೆ.

'ನಾಟು ನಾಟು' ಹಾಡಿಗೆ ಪೈಪೋಟಿ ನೀಡಿದ್ದ 'ಲಿಫ್ಟ್‌ ಮಿ ಅಪ್‌'

ನಾಟು ನಾಟು.. ಹಾಡು ಗೋಲ್ಡನ್‌ ಗ್ಲೋಬ್‌, 4 ಹಾಲಿವುಡ್‌ ಕ್ರಿಟಿಕ್ಸ್‌ ಅವಾರ್ಡ್‌ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಹಾಲಿವುಡ್‌ ಸಿನಿಮಾ ಮಂದಿ ಕೂಡಾ ಈ ಹಾಡು ನೋಡಿ ಮೆಚ್ಚಿದ್ದರು. ಕೊರಿಯನ್‌, ಜರ್ಮನ್‌ ಮಂದಿ ಈ ಹಾಡಿಗೆ ರೀಲ್ಸ್‌ ಮಾಡಿದ್ದರು. ಇಷ್ಟೆಲ್ಲಾ ಜನಪ್ರಿಯತೆ ನಡುವೆ ನಾಟು ನಾಟು ತೆಲುಗು ಹಾಡು ಆಸ್ಕರ್‌ ರೇಸ್‌ಗೆ ಎಂಟ್ರಿ ಕೊಟ್ಟಿತ್ತು. ಇದರೊಂದಿಗೆ ಅನೇಕ ಹಾಲಿವುಡ್‌ ಸಿನಿಮಾ ಹಾಡುಗಳು ಕೂಡಾ ಪೈಪೋಟಿಯಲ್ಲಿದ್ದವು. ಅದರಲ್ಲಿ 'ಲಿಫ್ಟ್‌ ಮಿ ಅಪ್‌' ಸಾಂಗ್‌ ಒಂದು.

ಖ್ಯಾತ ಗಾಯಕಿ ರಿಹಾನ್ನಾ 'ಬ್ಲಾಕ್‌ಫ್ಯಾಂಥರ್: ವಕಾಂಡ ಫರೆವರ್‌' ಚಿತ್ರಕ್ಕಾಗಿ ಹಾಡಿರುವ ಲಿಫ್ಟ್‌ ಮಿ ಅಪ್‌.. ಹಾಡು, ನಾಟು ನಾಟು... ಹಾಡಿಗೆ ಟಫ್‌ ಕಾಂಪಿಟೇಷನ್‌ ನೀಡಿತ್ತು. ಇದು ಕೂಡಾ ಸಂಗೀತ ಪ್ರಿಯರಿಗೆ ಬಹಳ ಇಷ್ಟವಾಗಿತ್ತು. ಹಾಲಿವುಡ್‌ ಮಂದಿ ಕೂಡಾ ಈ ಹಾಡನ್ನು ಬೆಂಬಲಿದ್ದರು. ಮತ್ತೊಂದೆಡೆ ಸ್ವತ: ರಿಹಾನ್ನಾ 'ಆರ್‌ಆರ್‌ಆರ್‌' ಚಿತ್ರಕ್ಕೆ ಶುಭ ಕೋರಿ ಟ್ವೀಟ್‌ ಮಾಡಿದ್ದರು. ಲಿಫ್ಟ್‌ ಮಿ ಅಪ್‌.. ಮುಂದೆ ನಾಟು ನಾಟು...ಗೆಲ್ಲುವುದು ಕಷ್ಟ ಎಂದೇ ಹೇಳಲಾಗಿತ್ತು. ಆದರೆ ಇದೀಗ 'ಆರ್‌ಆರ್‌ಆರ್‌' ಚಿತ್ರದ ನಾಟು ನಾಟು... ಹಾಡು ಹಾಲಿವುಡ್‌ ಹಾಡುಗಳನ್ನು ಕೂಡಾ ಹಿಂದಿಕ್ಕಿ ಈ ಬಾರಿ ಆಸ್ಕರ್‌ ಬಾಚಿಕೊಂಡಿರುವುದು ನಿಜಕ್ಕೂ ಭಾರತೀಯರಿಗೆ ಖುಷಿ ನೀಡಿದೆ.

ಕಾಲ ಭೈರವ-ರಾಹುಲ್ ಸಿಪ್ಲಿಗಂಜ್ ದನಿಯಲ್ಲಿ ಮೂಡಿ ಬಂದ ನಾಟು ನಾಟು..

ನಾಟು ನಾಟು... ಹಾಡಿಗೆ ಎಂ. ಎಂ ಕೀರವಾಣಿ ಸಂಗೀತ ಸಂಯೋಜಿಸಿದ್ದರೆ ಕಾಲ ಭೈರವ ಹಾಗೂ ರಾಹುಲ್ ಸಿಪ್ಲಿಗಂಜ್ ಈ ಹಾಡಿಗೆ ದನಿಯಾಗಿದ್ದಾರೆ. ಚಂದ್ರಬೋಸ್, ಸಾಹಿತ್ಯ ಬರೆದಿರುವ ಹಾಡಿಗೆ ಪ್ರೇಮ್ ರಕ್ಷಿತ್ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದರು. ಇವರೆಲ್ಲರ ಪ್ರಯತ್ನಕ್ಕೆ ರಾಮ್‌ ಚರಣ್‌ ಹಾಗೂ ಜ್ಯೂನಿಯರ್‌ ಎನ್‌ಟಿಆರ್‌ ಆಕರ್ಷಕ ಸ್ಟೆಪ್ಸ್‌ ಹಾಕಿ ನೋಡುಗರನ್ನು ಸೆಳೆದಿದ್ದರು.

'ಆರ್‌ಆರ್‌ಆರ್'‌ ಆಸ್ಕರ್‌ ಗೆಲ್ಲಲಿ ಎಂದು ಹಾರೈಸಿದ್ದ ಎ.ಆರ್‌. ರೆಹಮಾನ್‌

ನಾಟು ನಾಟು.. ಹಾಡಿಗೆ ಆಸ್ಕರ್ ಪ್ರಶಸ್ತಿ ಬರಬೇಕು. ಏಕೆಂದರೆ ಯಾವುದೇ ಪ್ರಶಸ್ತಿ ಬಂದರೂ ಅದು ಭಾರತದ ಕೀರ್ತಿ ಮತ್ತು ಸಂಸ್ಕೃತಿಯ ಪತಾಕೆಯನ್ನು ಎತ್ತಿ ಹಿಡಿಯುತ್ತದೆ. ಭಾರತದ ಸಿನಿಮಾವೊಂದು ಆಸ್ಕರ್‌ಗೆ ನಾಮ ನಿರ್ದೇಶನಗೊಂಡು ಸುಮಾರು 12 ವರ್ಷಗಳಾದವು. ಅಲ್ಲಿಂದ ಬೇರಾವ ಭಾರತೀಯ ಸಿನಿಮಾಗಳು ನಾಮಿನೇಟ್‌ ಆಗಿರಲಿಲ್ಲ. ಆದರೆ ಇನ್ಮುಂದೆ ಪ್ರತಿ ವರ್ಷ ಒಂದೊಂದು ಸಿನಿಮಾ ನಾಮಿನೇಟ್‌ ಆಗಬೇಕು. ನಾವು 130 ಕೋಟಿ ಜನಸಂಖ್ಯೆ ಹೊಂದಿದ್ದೇವೆ. ನಮ್ಮಲ್ಲಿಯೂ ಅದ್ಭುತ ಪ್ರತಿಭೆಗಳಿದ್ದಾರೆ. ಇದೀಗ ಇಡೀ ದೇಶವನ್ನು 'ಆರ್‌ಆರ್‌ಆರ್'‌ ತಂಡದವರು ಪ್ರತಿನಿಧಿಸುತ್ತಿದ್ದಾರೆ. ತಂಡಕ್ಕೆ ಶುಭವಾಗಲಿ" ಎಂದು ಎಂದು ಖ್ಯಾತ ಸಂಗೀತ ನಿರ್ದೇಶಕ ಎ. ಆರ್ ರೆಹಮಾನ್ ಶುಭ ಹಾರೈಸಿದ್ದರು.

IPL_Entry_Point