ಕನ್ನಡ ಸುದ್ದಿ  /  Entertainment  /  Vijay Sethupathis 'Viduthalai' To Release In Two Parts

Vijay Sethupathi: 'ಕೆಜಿಎಫ್‌' ಟ್ರೆಂಡ್‌ ಫಾಲೋ ಮಾಡಿದ್ರಾ ವಿಜಯ್‌ ಸೇತುಪತಿ?; 'ವಿಡುದಲೈ' ಚಿತ್ರದಲ್ಲಿ ಹೀಗೊಂದು ಅಚ್ಚರಿಯ ಬದಲಾವಣೆ..

ಇತ್ತೀಚಿನ ದಿನಗಳಲ್ಲಿ ಒಂದೇ ಸಿನಿಮಾ ಎರಡು ಭಾಗಗಳಲ್ಲಿ ಬರುವ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡದಲ್ಲಿ "ಕೆಜಿಎಫ್‌" ಸಿನಿಮಾ ಅಂಥದ್ದೊಂದು ಟ್ರೆಂಡ್‌ ಸೃಷ್ಟಿಸಿತ್ತು. ಅದಕ್ಕೂ ಮೊದಲು "ಬಾಹುಬಲಿ"ಯೂ ಹವಾ ಕ್ರಿಯೆಟ್‌ ಮಾಡಿತ್ತು. ಅಲ್ಲು ಅರ್ಜುನ್‌ ನಟನೆಯ "ಪುಷ್ಪ" ಚಿತ್ರವೂ ಅದೇ ಹಾದಿಯಲ್ಲಿ ನಿರ್ಮಾಣವಾಗುತ್ತಿದೆ. ಇದೀಗ ವಿಜಯ್‌ ಸೇತುಪತಿ ಸರದಿ!

'ಕೆಜಿಎಫ್‌' ಟ್ರೆಂಡ್‌ ಫಾಲೋ ಮಾಡಿದ್ರಾ ವಿಜಯ್‌ ಸೇತುಪತಿ?; 'ವಿಡುದಲೈ' ಚಿತ್ರದಲ್ಲಿ ಹೀಗೊಂದು ಅಚ್ಚರಿಯ ಬದಲಾವಣೆ..
'ಕೆಜಿಎಫ್‌' ಟ್ರೆಂಡ್‌ ಫಾಲೋ ಮಾಡಿದ್ರಾ ವಿಜಯ್‌ ಸೇತುಪತಿ?; 'ವಿಡುದಲೈ' ಚಿತ್ರದಲ್ಲಿ ಹೀಗೊಂದು ಅಚ್ಚರಿಯ ಬದಲಾವಣೆ..

ಇತ್ತೀಚಿನ ದಿನಗಳಲ್ಲಿ ಒಂದೇ ಸಿನಿಮಾ ಎರಡು ಭಾಗಗಳಲ್ಲಿ ಬರುವ ಸಂಖ್ಯೆ ಹೆಚ್ಚಾಗುತ್ತಿದೆ. ಕನ್ನಡದಲ್ಲಿ "ಕೆಜಿಎಫ್‌" ಸಿನಿಮಾ ಅಂಥದ್ದೊಂದು ಟ್ರೆಂಡ್‌ ಸೃಷ್ಟಿಸಿತ್ತು. ಅದಕ್ಕೂ ಮೊದಲು "ಬಾಹುಬಲಿ"ಯೂ ಹವಾ ಕ್ರಿಯೆಟ್‌ ಮಾಡಿತ್ತು. ಅಲ್ಲು ಅರ್ಜುನ್‌ ನಟನೆಯ "ಪುಷ್ಪ" ಚಿತ್ರವೂ ಅದೇ ಹಾದಿಯಲ್ಲಿ ನಿರ್ಮಾಣವಾಗುತ್ತಿದೆ. ಇದೀಗ ವಿಜಯ್‌ ಸೇತುಪತಿ ಸರದಿ!

ಹೌದು, ವಿಜಯ್​ ಸೇತುಪತಿ ಮತ್ತು ಸೂರಿ ನಟಿಸುತ್ತಿರುವ ತಮಿಳು ಚಿತ್ರ 'ವಿಡುದಲೈ' ಇದೀಗ ಎರಡು ಭಾಗಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಚಿತ್ರವನ್ನು ರೆಡ್​ ಜಯಂಟ್​ ಮೂವಿಸ್​ನಡಿ ಉದಯನಿಧಿ ಸ್ಟಾಲಿನ್​ ಅರ್ಪಿಸಿದರೆ, ಆರ್​.ಎಸ್​. ಇನ್ಫೋಟೈನ್​ಮೆಂಟ್​ನಡಿ ಎಲ್ರೆಡ್​ ಕುಮಾರ್​ ನಿರ್ಮಿಸುತ್ತಿದ್ದಾರೆ.

ಕಾಲಿವುಡ್​ನ ಜನಪ್ರಿಯ ನಿರ್ದೇಶಕರಲ್ಲಿ ವೆಟ್ರಿಮಾರನ್​ ಪ್ರಮುಖರು. ಕೆಲವು ತಿಂಗಳುಗಳ ಹಿಂದೆ ಅವರು 'ವಿಡುದಲೈ' ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಘೋಷಿಸಿದಾಗಲೇ, ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಇತ್ತು. ಕ್ರಮೇಣ ಜನಪ್ರಿಯ ಕಲಾವಿದರು ಮತ್ತು ತಂತ್ರಜ್ಞರು ಚಿತ್ರತಂಡಕ್ಕೆ ಸೇರ್ಪಡೆಯಾಗುತ್ತಿದ್ದಂತೆಯೇ, ಈ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಇದೀಗ ಈ ನಿರ್ದೇಶಕರ ಬರ್ತ್‌ಡೇ ಪ್ರಯುಕ್ತ ಚಿತ್ರದ ಹೊಸ ಅಪ್‌ಡೇಟ್‌ ಮಾಹಿತಿ ಲಭ್ಯವಾಗಿದೆ.

ಸದ್ಯ, 'ವಿಡುದಲೈ' ಚಿತ್ರದ ಭಾಗ ಒಂದರ ಚಿತ್ರೀಕರಣ ಸಂಪೂರ್ಣವಾಗಿದ್ದು, ಪೋಸ್ಟ್​ಪ್ರೊಡಕ್ಷನ್​ ಕೆಲಸಗಳು ಪ್ರಗತಿಯಲ್ಲಿವೆ. ಎರಡನೆಯ ಭಾಗದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು ಸಿರುಮಲೈ, ಕೊಡೈಕೆನಾಲ್​ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಈ ಎರಡು ಚಿತ್ರಗಳು ದೊಡ್ಡ ಬಜೆಟ್​ನಲ್ಲಿ ನಿರ್ಮಾಣವಾಗುತ್ತಿದ್ದು, ತಮಿಳಿನ ಕಾಸ್ಟ್ಲಿ ಚಿತ್ರಗಳ ಪೈಕಿ 'ವಿಡುದಲೈ' ಸಹ ಸೇರ್ಪಡೆಯಾಗಲಿದೆ.

ಈ ಚಿತ್ರವನ್ನು ಕೋಟ್ಯಂತರ ವೆಚ್ಚದಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದ್ದು, ಚಿತ್ರಕ್ಕಾಗಿ ವಿಶೇಷವಾಗಿ 10 ಕೋಟಿ ರೂ. ವೆಚ್ಚದ ರೈಲು ಮತ್ತು ರೈಲ್ವೇ ಸೇತುವೆಯ ಸೆಟ್​ ನಿರ್ಮಾಣ ಮಾಡಲಾಗಿದೆ. ನಿಜವಾದ ರೈಲ್ವೆ ಬೋಗಿಗಳು ಮತ್ತು ಸೇತುವೆಯನ್ನು ನಿರ್ಮಿಸುವುದಕ್ಕೆ ಬಳಸಲಾಗುವ ಪರಿಕರಗಳನ್ನೇ ಈ ಸೆಟ್​ ನಿರ್ಮಾಣಕ್ಕೂ ಬಳಸಲಾಗಿರುವುದು ವಿಶೇಷ. ಇದಲ್ಲದೆ, ಸಿರುಮಲೈ ಬಳಿ ಜಾಕಿ ಅವರ ಕಲಾ ನಿರ್ದೇಶನದಲ್ಲಿ ಒಂದು ಹಳ್ಳಿಯನ್ನು ನಿರ್ಮಿಸಲಾಗಿದೆ.

ಸದ್ಯ ಕೊಡೈಕೆನಾಲ್​ನಲ್ಲಿ ಪೀಟರ್​ ಹೇನ್ಸ್​ ನಿರ್ದೇಶನದಲ್ಲಿ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸುವುದಕ್ಕೆ ತಯಾರಿ ನಡೆಸಲಾಗಿದ್ದು, ಇದಕ್ಕಾಗಿ ಬಲ್ಗೇರಿಯಾದಿಂದ ಸಾಹಸ ಕಲಾವಿದರನ್ನು ಕರೆಸಲಾಗಿದೆ. ಈ ಆಕ್ಷನ್​ ದೃಶ್ಯಗಳಲ್ಲಿ ಬಲ್ಗೇರಿಯಾದ ಸಾಹಸ ಕಲಾವಿದರು ಸಹ ಭಾಗವಹಿಸುತ್ತಿರುವುದು ವಿಶೇಷ.

'ವಿಡುದಲೈ' ಚಿತ್ರದಲ್ಲಿ ವಿಜಯ್​ ಸೇತುಪತಿ, ಸೂರಿ, ಭವಾನಿ ಶ್ರೀ, ಪ್ರಕಾಶ್​ ರಾಜ್​, ಗೌತಮ್​ ವಾಸುದೇವ ಮೆನನ್, ರಾಜೀವ್​ ಮೆನನ್​ ಮುಂತಾದವರು ನಟಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ 'ಇಸೈಜ್ನಾನಿ' ಇಳಯರಾಜ ಈ ಚಿತ್ರದ ಸಂಗೀತದ ಜವಾಬ್ದಾರಿ ಹೊತ್ತಿದ್ದು, ವೇಲ್​ರಾಜ್​ ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ರೆಡ್​ ಜೈಂಟ್​ ಮೂವೀಸ್​ ವಹಿಸಿಕೊಂಡಿದ್ದು, ಸದ್ಯದಲ್ಲೇ 'ವಿಡುದಲೈ' ಮೊದಲ ಭಾಗದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

ಪ್ಯಾನ್‌ ಇಂಡಿಯಾ ರಿಲೀಸ್‌..

ಮೂಲ ತಮಿಳಿನಲ್ಲಿ ತಯಾರಾಗುತ್ತಿರುವ ಈ ಸಿನಿಮಾ, ಕೇವಲ ತಮಿಳು ಮಾತ್ರವಲ್ಲದೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಮಾಡುವುದು ತಂಡದ ಪ್ಲಾನ್. ಅದರಂತೆ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

IPL_Entry_Point