ಕನ್ನಡ ಸುದ್ದಿ  /  Karnataka  /  Cyber Fraud: Fraud Through Fake Gaming Site In Various Places Including Bangalore; Si Has Become A Delivery Boy For The Arrest Of The Accused!

Cyber fraud: ಬೆಂಗಳೂರು ಸೇರಿ ವಿವಿಧೆಡೆ ಫೇಕ್‌ ಗೇಮಿಂಗ್‌ ಸೈಟ್‌ ಮೂಲಕ ವಂಚನೆ; ಆರೋಪಿಗಳ ಬಂಧನಕ್ಕಾಗಿ ಡೆಲಿವರಿ ಬಾಯ್‌ ಆದ್ರು ಎಸ್‌ಐ!

Cyber fraud: ಆರೋಪಿಗಳು ಅಕ್ರಮ ಪ್ರೀ-ಹೋಸ್ಟೆಡ್‌ ಗೇಮಿಂಗ್‌ ವೆಬ್‌ಸೈಟ್‌ ಮೂಲಕ ದೇಶಾದ್ಯಂತ ವಂಚನೆ ಎಸಗುತ್ತಿದ್ದರು. ಆರೋಪಿಗಳನ್ನು ಶ್ರೀಯಾನ್ಶ್‌ ಚಂದ್ರಶೇಖರ್‌, ಆಯುಷ್‌ ದೇವಾಂಗನ್‌, ಯಶ್‌ ಗಣವೀರ್‌ ಎಂದು ಗುರುತಿಸಲಾಗಿದೆ. ಇವರು ರಾಯ್‌ಪುರ ಮತ್ತು ಬೆಂಗಳೂರು ಕೇಂದ್ರಿತವಾಗಿ ಈ ವಂಚನಾ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆನ್‌ಲೈನ್‌ ವಂಚನೆ (ಸಾಂಕೇತಿಕ ಚಿತ್ರ)
ಆನ್‌ಲೈನ್‌ ವಂಚನೆ (ಸಾಂಕೇತಿಕ ಚಿತ್ರ) (HT Print)

ನವದೆಹಲಿ: ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿ ವಿವಿಧೆಡೆ ಆನ್‌ಲೈನ್‌ ಗೇಮ್‌ ವಂಚನೆ ಮಾಡುತ್ತಿದ್ದ ಮೂವರನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಈ ಆರೋಪಿಗಳು ಅಕ್ರಮ ಪ್ರೀ-ಹೋಸ್ಟೆಡ್‌ ಗೇಮಿಂಗ್‌ ವೆಬ್‌ಸೈಟ್‌ ಮೂಲಕ ದೇಶಾದ್ಯಂತ ವಂಚನೆ ಎಸಗುತ್ತಿದ್ದರು. ಆರೋಪಿಗಳನ್ನು ಶ್ರೀಯಾನ್ಶ್‌ ಚಂದ್ರಶೇಖರ್‌, ಆಯುಷ್‌ ದೇವಾಂಗನ್‌, ಯಶ್‌ ಗಣವೀರ್‌ ಎಂದು ಗುರುತಿಸಲಾಗಿದೆ. ಇವರು ರಾಯ್‌ಪುರ ಮತ್ತು ಬೆಂಗಳೂರು ಕೇಂದ್ರಿತವಾಗಿ ಈ ವಂಚನಾ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಬಂಧನಕ್ಕಾಗಿ ಡೆಲಿವರಿ ಬಾಯ್‌ ಆದ್ರು ಎಸ್‌ಐ!

ಸ್ನೂಕರ್‌, ಕ್ಯಾಸಿನೋ, ಕ್ರಿಕೆಟ್‌, ಪೋಕರ್‌ ಮತ್ತು ಟೀನ್‌ ಪಟ್ಟಿ ಮುಂತಾದ ಆನ್‌ಲೈನ್‌ ಗೇಮ್‌ಗಳ ಫೇಕ್‌ ಗೇಮಿಂಗ್‌ ವೆಬ್‌ಸೈಟ್‌ ಮಾಡಿ, ಅದರಲ್ಲಿ ಬಾಜಿ ಕಟ್ಟಿಸಿಕೊಂಡು ಹಣ ದೋಚುತ್ತಿದ್ದರು ಈ ವಂಚಕರು. ಆಟಗಾರರ ನಂಬಿಕೆ, ವಿಶ್ವಾಸ ಗಳಿಸುವುದಕ್ಕಾಗಿ ಆರಂಭದಲ್ಲಿ ಸಣ್ಣ ಮೊತ್ತವನ್ನು ಆಟಗಾರರಿಗೆ ನೀಡುತ್ತಿದ್ದರು. ವಿ‍ಶ್ವಾಸ ಹುಟ್ಟಿದ ಬಳಿಕ ದೊಡ್ಡ ಮೊತ್ತದ ವಂಚನೆ ಎಸಗುತ್ತಿದ್ದರು.

ಈ ಆರೋಪಿಗಳನ್ನು ಬಂಧಿಸುವುದಕ್ಕಾಗಿ ಸೈಬರ್‌ ಪೊಲೀಸ್‌ ಸ್ಟೇಶನ್‌ನ ಸಬ್‌ ಇನ್‌ಸ್ಪೆಕ್ಟರ್‌ ಸ್ವತಃ ಸ್ವಿಗ್ಗಿ ಡೆಲಿವರಿ ಬಾಯ್‌ ಆಗಿ ಕಾರ್ಯಾಚರಣೆ ನಡೆಸಿದ್ದರು. ಈ ಆರೋಪಿಗಳು ಇದ್ದ ಜಾಗಕ್ಕೆ ಹೋಗಿ, ಅವರು ಸಾಕ್ಷ್ಯಗಳನ್ನು ನಾಶ ಮಾಡದಂತೆ ತಡೆಯಲಾಗಿದೆ. ಬಳಿಕ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ಶುರುವಾಗಿದ್ದು ಹೀಗೆ….

ಪ್ರತಿಷ್ಠಿತ ಐಟಿ ಕಂಪನಿಯ ಉದ್ಯೋಗಿಯೊಬ್ಬರು, ತಾನು ಗೇಮಿಂಗ್‌ ಸೈಟ್‌ನಲ್ಲಿ 1.49 ಲಕ್ಷ ರೂಪಾಯಿ ಕಳೆದುಕೊಂಡಿರುವುದಾಗಿ ದೂರು ನೀಡಿದ್ದರು. ಈ ದೂರಿನ ತನಿಖೆ ಆರಂಭಿಸಿದ ಪೊಲೀಸರಿಗೆ ಈ ಗ್ಯಾಂಗ್‌ನ ಮಾಹಿತಿ ಸಿಕ್ಕಿತು. ಈ ಗ್ಯಾಂಗ್‌ ಸದಸ್ಯರು ನಕಲಿ ದಾಖಲೆ ಸಲ್ಲಿಸಿ ಸಿಮ್‌ ಕಾರ್ಡ್‌, ಮೊಬೈಲ್‌ ಫೋನ್‌ ಖರೀದಿಸಿದ್ದಾರೆ. ನಕಲಿ ವೆಬ್‌ಸೈಟ್‌ಗಳ ಕಸ್ಟಮರ್‌ ಕೇರ್‌ ಎಕ್ಸಿಕ್ಯೂಟಿವ್‌ಗಳಾಗಿಯೂ ವಂಚನೆ ಎಸಗಿರುವುದು ಬೆಳಕಿಗೆ ಬಂತು.

ಈ ಆರೋಪಿಗಳು ಬಂಧನದ ಭೀತಿಯಿಂದ ತಮ್ಮ ಕಾರ್ಯಸ್ಥಳವನ್ನು ಬೆಂಗಳೂರಿನಿಂದ ಛತ್ತೀಸ್‌ಗಢದ ರಾಯ್ಪುರಕ್ಕೆ ಸ್ಥಳಾಂತರಿಸಿದ್ದರು. ಬಳಿಕ ಅಲ್ಲಿಂದ ದೆಹಲಿಗೂ ಸ್ಥಳಾಂತರವಾಗಿದ್ದರು.

ಈ ಆರೋಪಿಗಳ ಪೈಕಿ ಶ್ರೀಯಾನ್ಶ್‌ ಚಂದ್ರಶೇಖರ್‌ ಬೆಂಗಳೂರಿನಲ್ಲಿ ಹೋಟೆಲ್‌ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮಾಡಿದ್ದ. ಅಲ್ಲಿ ಆತನಿಗೆ ರಾಜ್‌ ಪರಿಚಯವಾಗಿದ್ದ. ಆತನ ಜತೆಗೆ ಯಶ್‌ ಮತ್ತು ಆಯುಷ್‌ ಸೇರಿಕೊಂಡು ಈ ಫೇಕ್‌ ಗೇಮಿಂಗ್‌ ಸೈಟ್ಸ್‌ ಶುರುಮಾಡಿದ್ದರು.

ಬಂಧಿತರಿಂದ ಏಳು ಫೋನ್‌, ಎಂಟು ಡೆಬಿಟ್‌ ಕಾರ್ಡ್‌, ಎರಡು ಲಾಪ್‌ಟಾಪ್‌, ಎಂಟು ನಕಲಿ ಸಿಮ್‌ಕಾರ್ಡ್‌ ಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗಮನಿಸಬಹುದಾದ ಸುದ್ದಿ

ಹದಿಹರೆಯದಲ್ಲಿ ಹೊಂಗನಸುಗಳು ಸಹಜ. ಮನಸ್ಸಿನ ಭಾವನೆಗಳು ಬಹಳ ಸೂಕ್ಷ್ಮವಾಗಿರುತ್ತವೆ. ಅದರಲ್ಲೂ ಹದಿಹರೆಯದಲ್ಲಿ ಹುಡುಗರಿಗೆ ಹುಡುಗಿಯರನ್ನು ಕಂಡಾಗ, ಹುಡುಗಿಯರಿಗೆ ಹುಡುಗರನ್ನು ಕಂಡಾಗ ಉಂಟಾಗುವ ಭಾವನಾ ವ್ಯತ್ಯಾಸಗಳು ಸೂಕ್ಷ್ಮವಾದವು. ಅಂತಹ ಸನ್ನಿವೇಶದಲ್ಲಿ ಒಂದು ಪರೀಕ್ಷಾ ಕೊಠಡಿಯಲ್ಲಿ 50 ವಿದ್ಯಾರ್ಥಿನಿಯರು, ಅವರ ನಡುವೆ ಒಬ್ಬನೇ ಒಬ್ಬ ವಿದ್ಯಾರ್ಥಿ! ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಖರೀದಿ ಒಪ್ಪಂದದ ಪ್ರಸ್ತಾವನೆಯಲ್ಲಿ ಉಲ್ಲೇಖವಾಗಿರುವ 30 MQ-9B ಪ್ರಿಡೇಟರ್‌ ಸಶಸ್ತ್ರ ಡ್ರೋನ್‌ಗಳು (ಭೂ, ನೌಕಾ ಮತ್ತು ವಾಯು ಪಡೆಗಳಿಗೆ ತಲಾ 10 ಡ್ರೋನ್‌ಗಳು) ಭಾರತದ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಅಗತ್ಯಗಳ ಪ್ರಮುಖ ಭಾಗವಾಗಿರಲಿದೆ. ವಿವರ ವರದಿ ಇಲ್ಲಿದೆ ಕ್ಲಿಕ್‌ ಮಾಡಿ

IPL_Entry_Point