ಕನ್ನಡ ಸುದ್ದಿ  /  Karnataka  /  Mysore Dasara Today Programme President Draupadi Murmu Inaugurates Yuva Dasara Sports And Cultural Events

Mysore Dasara today programme: ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ, ರಾಷ್ಟ್ರಪತಿಯಿಂದ ಉದ್ಘಾಟನೆ, ಇಂದಿನ ಕಾರ್ಯಕ್ರಮಗಳ ಪಟ್ಟಿ

Mysore Dasara 2022: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನೇನು ಚಾಲನೆ ದೊರಕಲಿದೆ. ಇಂದು ರೈತ ದಸರಾ, ದಸರಾ ಚಲನ ಚಿತ್ರೋತ್ಸವ, ದಸರಾ ಮ್ಯಾರಥಾನ್, ಯುವ ದಸರಾ, ದಸರಾ ಕ್ರೀಡಾಕೂಡ, ದಸರಾ ಕುಸ್ತಿ, ದಸರಾ ಆಹಾರ ಮೇಳ ಇತ್ಯಾದಿ ಹಲವು ಕಾರ್ಯಕ್ರಮಗಳು ನಡೆಯಲಿವೆ.

Mysore Dasara today programme: ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ, ಕಾರ್ಯಕ್ರಮಗಳು
Mysore Dasara today programme: ಇಂದಿನಿಂದ ವಿಶ್ವವಿಖ್ಯಾತ ಮೈಸೂರು ದಸರಾ, ಕಾರ್ಯಕ್ರಮಗಳು

Mysore Dasara 2022: ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಇನ್ನೇನು ಚಾಲನೆ ದೊರಕಲಿದೆ. ರಾಷ್ಟ್ರಪತಿಯಾಗಿ ಅಧಿಕಾರ ಪಡೆದ ಬಳಿಕ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ದ್ರೌಪದಿ ಮುರ್ಮು ಅವರು ಪೂಜೆ ಸಲ್ಲಿಸುವ ಮೂಲಕ ಈ ದಸರಾ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮೈಸೂರಿನ ಶಾಲಾ ಮಕ್ಕಳಿಗೆ ರಜೆಯೂ ಇರುವುದರಿಂದ ಇಂದಿನಿಂದಲೇ ದಸರಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುವವರ ಸಂಖ್ಯೆಯೂ ಹೆಚ್ಚಿರಲಿದೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದಾಗಿ ಸರಳ ದಸರಾಕ್ಕೆ ಸೀಮಿತವಾಗಿದ್ದ ಮೈಸೂರು ದಸರಾ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ.

ರಾಷ್ಟ್ರಪತಿಯವರಿಂದ ದಸರಾ ಮಹೋತ್ಸವಕ್ಕೆ ಚಾಲನೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎರಡು ದಿನಗಳ ಕಾಲ ಕರ್ನಾಟಕದಲ್ಲಿದ್ದಾರೆ. ತಮ್ಮ ಕಾರ್ಯಕ್ರಮ ಪಟ್ಟಿಯಲ್ಲಿ ಮೊದಲ ಕಾರ್ಯಕ್ರಮವಾಗಿ ಮೈಸೂರು ದಸರಾಕ್ಕೆ ಚಾಲನೆ ನೀಡಲಿದ್ದಾರೆ. ಮೊದಲಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶಕ್ತಿದೇವತೆ ದರ್ಶನ ಪಡೆದು ಅಗ್ರಪೂಜೆ ಸಲ್ಲಿಸಲಿದ್ದಾರೆ. ಬಳಿಕ, ಮೈಸೂರು ಚಾಮುಂಡಿ ಬೆಟ್ಟದಲ್ಲಿ ಬೆಳಿಗ್ಗೆ 9 ಗಂಟೆ 45 ನಿಮಿಷದಿಂದ 10 ಗಂಟೆ 5 ನಿಮಿಷದೊಳಗೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಭ್ರಮದ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. . ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಎಂ ಬೊಮ್ಮಾಯಿ, ಎಸ್‌ಟಿ ಸೋಮಶೇಖರ್‌, ಪ್ರತಾಪ್‌ ಸಿಂಹ ಸೇರಿದಂತೆ ಸಕಲರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಯದುವೀರ್ ಖಾಸಗಿ ದರ್ಬಾರ್

ಮೈಸೂರು ಅರಮನೆಯಲ್ಲಿ ಸಂಪ್ರದಾಯದಂತೆ ನಡೆದುಕೊಂಡು ಬಂದ ಹಲವು ಕಾರ್ಯಕ್ರಮಗಳು ನಡೆಯಲಿವೆ. ಇಂದು ರಾಜವಂಶಸ್ಥ ಯದುವೀರ್ ಖಾಸಗಿ ದರ್ಬಾರ್ ಹಾಲ್​ನಲ್ಲಿ ಬೆಳಿಗ್ಗೆ 11 ಗಂಟೆಗೆ ಖಾಸಗಿ ದರ್ಬಾರ್ ನಡೆಸಲಿದ್ದಾರೆ. 6.15ಕ್ಕೆ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಲಾಗುತ್ತದೆ. ಬೆಳಗ್ಗೆ 9.45ಕ್ಕೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ಕಂಕಣಧಾರಣೆ ಮಾಡಲಾಗುತ್ತದೆ. ಬೆಳಗ್ಗೆ 10.45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಕುದುರೆ ಆಗಮಿಸುತ್ತದೆ. 11.15ಕ್ಕೆ ಸಿಂಹಾರೋಹಣ ಪೂಜಾ ಕೈಂಕರ್ಯ. ಕಳಸ ಪೂಜೆ ಜೊತೆಗೆ ವಿವಿಧ ಪೂಜೆಗಳು ನಡೆಯಲಿವೆ.

ಚಾಮುಂಡಿ ಬೆಟ್ಟ ಪ್ರವೇಶ 11.30 ಗಂಟೆ ಬಳಿಕ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಅಲ್ಲಿಯವರೆಗೆ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ. ಹೀಗಾಗಿ, ಇಂದು ಬೆಳಗ್ಗೆ ಚಾಮುಂಡಿ ಬೆಟ್ಟದತ್ತ ಸಾರ್ವಜನಿಕರು ಪ್ರಯಾಣ ಬೆಳೆಸಬೇಡಿ. ರಾಷ್ಟ್ರಪತಿಗಳು ಆಗಮಿಸುವುದರಿಂದ ಬಿಗಿಭದ್ರತೆ ಇರಲಿದೆ.

ಇಂದು ರೈತ ದಸರಾ, ದಸರಾ ಚಲನ ಚಿತ್ರೋತ್ಸವ, ದಸರಾ ಮ್ಯಾರಥಾನ್, ಯುವ ದಸರಾ, ದಸರಾ ಕ್ರೀಡಾಕೂಡ, ದಸರಾ ಕುಸ್ತಿ, ದಸರಾ ಆಹಾರ ಮೇಳ ಇತ್ಯಾದಿ ಹಲವು ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ.

ಇಂದಿನ ಸಾಂಸ್ಕೃತಿಕ ಕಾರ್ಯಕ್ರಮದ ಪಟ್ಟಿ: ನಾದಸ್ವರ- ಯದುನಾಥ್ ಮತ್ತು ಗುರುರಾಜ್ ತಂಡ, ವೀರಭದ್ರ ಕುಣಿತ-ಕಿರಾಳು ಮಹೇಶ್, ನೃತ್ಯರೂಪಕ-ಅಮೃತ ಭಾರತಿಗೆ ಕನ್ನಡದಾರತಿ-ಸಪ್ತಸ್ವರ ಆರ್ಟ್ಸ್ ಅಂಡ್ ಕ್ರಿಯೇಷನ್, ಸುಗಮಸಂಗೀತ-ಎಚ್.ಆರ್.ಲೀಲಾವತಿ, ಮೈಸೂರು.

ವಾಹನ ಸವಾರರಿಗೆ ಸೂಚನೆ

ರಾಜ್ಯದ ವಿವಿಧೆಡೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಮೈಸೂರಿಗೆ ಇಂದು ಆಗಮಿಸಿ ಮೈಸೂರು ದಸರಾ ಮಹೋತ್ಸವದ ಮೊದಲ ದಿನವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಇಂದಿನಿಂದ ಅನ್ವಯವಾಗುವಂತೆ ಮೈಸೂರು ನಗರದಲ್ಲಿ ಸಂಚಾರಕ್ಕೆ ಹೊಸ ನಿಯಮಗಳನ್ನು ಟ್ರಾಫಿಕ್‌ ಪೊಲೀಸರು ಮಾಡಿದ್ದಾರೆ. ಏಕಮುಖ ಸಂಚಾರ, ಪಾರ್ಕಿಂಗ್‌ ನಿಯಮಗಳನ್ನು ಘೋಷಿಸಲಾಗಿದೆ. ದಸರಾ ಹಬ್ಬಕ್ಕೆ ಮೈಸೂರಿಗೆ ಆಗಮಿಸುವವರು ಈ ಟ್ರಾಫಿಕ್‌ ನಿಯಮಗಳನ್ನು ತಿಳಿದುಕೊಂಡು ಮುಂದುವರೆಯಬೇಕಿದೆ. ಈ ಕುರಿತು ವಿಶೇಷ ವರದಿ ಇಲ್ಲಿದೆ ಓದಿ

IPL_Entry_Point