Mysore Dasara: ಇಂದಿನಿಂದ ಮೈಸೂರು ಟ್ರಾಫಿಕ್‌ ನಿಯಮಗಳಲ್ಲಿ ಬದಲಾವಣೆ, ಎಲ್ಲಿ ಒನ್‌ವೇ? ಎಲ್ಲೆಲ್ಲಿ ನಿರ್ಬಂಧ? ವಿವರ ತಿಳಿದುಕೊಳ್ಳಿ
ಕನ್ನಡ ಸುದ್ದಿ  /  ಕರ್ನಾಟಕ  /  Mysore Dasara: ಇಂದಿನಿಂದ ಮೈಸೂರು ಟ್ರಾಫಿಕ್‌ ನಿಯಮಗಳಲ್ಲಿ ಬದಲಾವಣೆ, ಎಲ್ಲಿ ಒನ್‌ವೇ? ಎಲ್ಲೆಲ್ಲಿ ನಿರ್ಬಂಧ? ವಿವರ ತಿಳಿದುಕೊಳ್ಳಿ

Mysore Dasara: ಇಂದಿನಿಂದ ಮೈಸೂರು ಟ್ರಾಫಿಕ್‌ ನಿಯಮಗಳಲ್ಲಿ ಬದಲಾವಣೆ, ಎಲ್ಲಿ ಒನ್‌ವೇ? ಎಲ್ಲೆಲ್ಲಿ ನಿರ್ಬಂಧ? ವಿವರ ತಿಳಿದುಕೊಳ್ಳಿ

ಮೈಸೂರು ನಗರದಲ್ಲಿ ಸಂಚಾರಕ್ಕೆ ಹೊಸ ನಿಯಮಗಳನ್ನು ಟ್ರಾಫಿಕ್‌ ಪೊಲೀಸರು ಮಾಡಿದ್ದಾರೆ. ಏಕಮುಖ ಸಂಚಾರ, ಪಾರ್ಕಿಂಗ್‌ ನಿಯಮಗಳನ್ನು ಘೋಷಿಸಲಾಗಿದೆ.

<p>ಇಂದಿನಿಂದ ಮೈಸೂರು ಟ್ರಾಫಿಕ್‌ ನಿಯಮಗಳಲ್ಲಿ ಬದಲಾವಣೆ, ಎಲ್ಲಿ ಒನ್‌ವೇ? ಎಲ್ಲೆಲ್ಲಿ ನಿರ್ಬಂಧ?</p>
ಇಂದಿನಿಂದ ಮೈಸೂರು ಟ್ರಾಫಿಕ್‌ ನಿಯಮಗಳಲ್ಲಿ ಬದಲಾವಣೆ, ಎಲ್ಲಿ ಒನ್‌ವೇ? ಎಲ್ಲೆಲ್ಲಿ ನಿರ್ಬಂಧ?

ಮೈಸೂರು: ರಾಜ್ಯದ ವಿವಿಧೆಡೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಮೈಸೂರಿಗೆ ಇಂದು ಆಗಮಿಸಿ ಮೈಸೂರು ದಸರಾ ಮಹೋತ್ಸವದ ಮೊದಲ ದಿನವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಇಂದಿನಿಂದ ಅನ್ವಯವಾಗುವಂತೆ ಮೈಸೂರು ನಗರದಲ್ಲಿ ಸಂಚಾರಕ್ಕೆ ಹೊಸ ನಿಯಮಗಳನ್ನು ಟ್ರಾಫಿಕ್‌ ಪೊಲೀಸರು ಮಾಡಿದ್ದಾರೆ. ಏಕಮುಖ ಸಂಚಾರ, ಪಾರ್ಕಿಂಗ್‌ ನಿಯಮಗಳನ್ನು ಘೋಷಿಸಲಾಗಿದೆ. ದಸರಾ ಹಬ್ಬಕ್ಕೆ ಮೈಸೂರಿಗೆ ಆಗಮಿಸುವವರು ಈ ಟ್ರಾಫಿಕ್‌ ನಿಯಮಗಳನ್ನು ತಿಳಿದುಕೊಂಡು ಮುಂದುವರೆಯಬೇಕಿದೆ.

ಸೆಪ್ಟೆಂಬರ್‌ 26ರಿಂದ ಅಕ್ಟೋಬರ್‌ 4ರವರೆಗೆ ಸಂಜೆ 4 ಗಂಟೆಯಿಂದ ರಾತ್ರಿ ಹನ್ನೊಂದು ಗಂಟೆಯವರೆಗೆ ಹೊಸ ಟ್ರಾಫಿಕ್‌ ನಿಯಮ ಇರಲಿದೆ. ಈ ಸಮಯದಲ್ಲಿ ಸಂಚಾರ ಮಾರ್ಗ ಬದಲಾವಣೆ ಮತ್ತು ನಿಲುಗಡೆ ವ್ಯವಸ್ಥೆಗೆ ಹೊಸ ನಿರ್ಬಂಧಗಳನ್ನು ಹಾಕಲಾಗಿದೆ ಎಂದು ಮೈಸೂರು ನಗರ ಪೊಲೀಸ್‌ ಆಯುಕ್ತರಾದ ಡಾ. ಚಂದ್ರಗುಪ್ತ ತಿಳಿಸಿದ್ದಾರೆ.

ಮೈಸೂರು ಅರಮನೆಯ ಸುತ್ತಮುತ್ತಲಿನ ರಸ್ತೆ

ಬಸವೇಶ್ವರ ಸರ್ಕಲ್‌ನಿಂದ ಗನ್‌ ಹೌಸ್‌ ಸರ್ಕಲ್‌ವರೆಗೆಹೊರತುಪಡಿಸಿ ಮೈಸೂರು ಅರಮನೆಯ ಸುತ್ತಮುತ್ತ ಪ್ರದಕ್ಷಿಣಾಕಾರವಾಗಿ(ಕ್ಲಾಕ್‌ವೈಸ್‌) ಸಂಚಾರಕ್ಕೆ ನಿರ್ಬಂಧ. ಗನ್‌ ಹೌಸ್‌ ಸರ್ಕಲ್‌- ವ್ರೆಸ್ಲಿಂಗ್‌ ಅರೆನಾ-ಬಿ-ಎನ್‌ ರಸ್ತೆ, ಹರ್ಡಿಂಗೆ ಸರ್ಕಲ್‌, ಕೆಆರ್‌ ಸರ್ಕಲ್‌, ನ್ಯೂ ಸಾಯಾಜಿ ರಾವ್‌ ರಸ್ತೆ- ಬಸವೇಶ್ವರ ಸರ್ಕಲ್‌, ಚಾಮರಾಜ ಡಬಲ್‌ ರೋಡ್‌ನಿಂದ ಗನ್‌ ಹೌಸ್‌ ಸರ್ಕಲ್‌ವರೆಗೆ ಅಪ್ರದಕ್ಷಿಣಕಾರವಾಗಿ ಸಂಚಾರ ಕೈಗೊಳ್ಳಬಹುದು.

ಸಯ್ಯಾಜಿ ರಾವ್‌ ರಸ್ತೆಯಿಂದ ಕೆಆರ್‌ ಸರ್ಕಲ್‌ವರೆಗೆ

ಕೆಆರ್‌ ಸರ್ಕಲ್‌ನಿಂದ ನ್ಯೂ ಸಯ್ಯಾಜಿ ರಾವ್‌ ರಸ್ತೆಯತ್ತ ಬರುವ ವಾಹನಗಳು ನ್ಯೂಸಯ್ಯಾಜಿ ರಾವ್‌ ರೋಡ್‌- ಬಾಟಾ ಜಂಕ್ಷನ್‌- ಸರಕಾರಿ ಆಯುರ್ವೇದ ಆಸ್ಪತ್ರೆ ಸರ್ಕಲ್‌- ಇರ್ವಿನ್‌ ರಸ್ತೆ, ನೆಹರೂ ರಸ್ತೆ, ಅಶೋಕ ರಸ್ತೆ- ಸಿಲ್ವರ್‌ ಜುಬ್ಲಿ ಕ್ಲಾಕ್‌ ಟವರ್‌ ಮತ್ತು ಕೆಆರ್‌ ಸರ್ಕಲ್‌ ಕಡೆಗೆ ಏಕಮುಖವಾಗಿ (ಕ್ಲಾಕ್‌ವೈಸ್‌) ಸಂಚಾರ ಕೈಗೊಳ್ಳಲು ಅನುಮತಿ ನೀಡಲಾಗಿದೆ. ವಿರುದ್ಧ ದಿಕ್ಕಿನಿಂದ ಬರಲು ವಾಹನಗಳಿಗೆ ಅವಕಾಶವಿಲ್ಲ.

ಚಾಮರಾಜ ಡಬಲ್‌ ರಸ್ತೆಯಿಂದ ಬಾನುಮಯ್ಯ ಚೌಕದವರೆಗೆ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ವಾಹನಗಳು ಉತ್ತರ ದಿಕ್ಕಿನತ್ತ ಸಂಚರಿಸಬೇಕು. ದಕ್ಷಿಣ ಮತ್ತು ಉತ್ತರದ ಕಡೆಯಿಂದ ಆಗಮಿಸಲು ಅವಕಾಶವಿಲ್ಲ.

ಅಗ್ರಹಾರ ಸರ್ಕಲ್‌ನಿಂದ ಚಾಮರಾಜ ಡಬಲ್‌ ರಸ್ತೆಗೆ ಏಕಮುಖ ಸಂಚಾರ ರೂಪಿಸಲಾಗಿದೆ.

ಈ ಹಿಂದೆಯೇ ಬಿಎನ್‌ ರಸ್ತೆ ಜಂಕ್ಷನ್‌ನಿಂದ ಅಶೋಕ ರಸ್ತೆ ಜಂಕ್ಷನ್‌ ರಸ್ತೆಯವರೆಗೆ ಚಂದ್ರಗುಪ್ತ ರಸ್ತೆಯಲ್ಲಿ ಒನ್‌ ವೇ/ಏಕಮುಖ ಸಂಚಾರ ರೂಪಿಸಲಾಗಿತ್ತು. ಇದನ್ನು ತಾತ್ಕಾಲಿಕವಾಗಿ ರದ್ದು ಪಡಿಸಿ ಅಶೋಕ ರಸ್ತೆ ಜಂಕ್ಷನ್‌ನಿಂದ ಬಿಎನ್‌ ರಸ್ತೆ ಜಂಕ್ಷನ್‌ವರೆಗೆ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಮೈಸೂರು ಅರಮನೆಯ ಸುತ್ತಮುತ್ತಲಿನ ರಸ್ತೆಯಲ್ಲಿ ಎಲ್ಲಾ ವಾಹನಗಳಿಗೂ ಪಾರ್ಕಿಂಗ್‌ ನಿಷೇಧಿಸಲಾಗಿದೆ. ಅಂದರೆ, ಬಿಎನ್‌ ರಸ್ತೆ, ಆಲ್ಬರ್ಟ್‌ ವಿಕ್ಟರ್‌ ರಸ್ತೆ, ಸಯ್ಯಾಜಿ ರಾವವ್‌ ರಸ್ತೆ, ಪುರಂದರ ರಸ್ತೆಯ ಇಕ್ಕೆಲಗಳಲ್ಲಿ ವಾಹನ ಪಾರ್ಕಿಂಗ್‌ ಮಾಡುವಂತೆ ಇಲ್ಲ. ಮುಡಾ ಜಂಕ್ಷನ್‌ನಿಂದ ಬಾನುಮಯ್ಯ ಕಾಲೇಜಿನವರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಹೊರತುಪಡಿಸಿ ಇತರೆ ವಾಹನಗಳಿಗೆ ಪಾರ್ಕಿಂಗ್‌ಗೆ ಅವಕಾಶವಿಲ್ಲ. ಬಸವೇಶ್ವರ ರಸ್‌ತೆಯಿಂದ ಅಗ್ರಹಾರ ಸರ್ಕಲ್‌ವರೆಗೆ ನೋ ಪಾರ್ಕಿಂಗ್‌, ಅಗ್ರಹಾರ ಸರ್ಕಲ್‌ನಿಂದ ಸಿದ್ದಪ್ಪ ಸ್ಕ್ವಾರ್‌ವರೆಗೆ ಎಡಗಡೆ ಪಾರ್ಕಿಂಗ್‌ ಅವಕಾಶವಿಲ್ಲ.

ಹೀಗೆ, ಮೈಸೂರು ಮತ್ತು ಸುತ್ತಮುತ್ತ ಒಂದಿಷ್ಟು ಸಂಚಾರ ನಿಯಮ ಮತ್ತು ಪಾರ್ಕಿಂಗ್‌ ನಿಯಮಗಳನ್ನು ಮಾಡಲಾಗಿದ್ದು, ಮೈಸೂರು ದಸರಾಕ್ಕೆ ಆಗಮಿಸುವವರು ಗಮನದಲ್ಲಿಟ್ಟುಕೊಳ್ಳಿ.

Whats_app_banner