ಕನ್ನಡ ಸುದ್ದಿ  /  Karnataka  /  Ram Sena's Pramod Muthalik Will Contest The Next Election, But Not From Bjp!

Pramod Muthalik: ಮುಂದಿನ ಚುನಾವಣೆಗೆ ರಾಮ ಸೇನೆಯ ಪ್ರಮೋದ್‌ ಮುತಾಲಿಕ್‌ ಸ್ಪರ್ಧಿಸ್ತಾರಂತೆ, ಆದ್ರೆ ಬಿಜೆಪಿ ಪಕ್ಷದಿಂದಲ್ಲ!

ಸರಕಾರವು ನಮ್ಮ ಕಾರ್ಯಕರ್ತರ ವಿರುದ್ಧ ಗೂಂಡಾ ಕಾಯ್ದೆಯಡಿ ಕೇಸ್‌ ದಾಖಲಿಸುತ್ತಿದೆ. ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಮುಂದಿನ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಪ್ರಮೋದ್‌ ಮುತಾಲಿಕ್‌ (ಸಂಗ್ರಹ ಚಿತ್ರ)
ಪ್ರಮೋದ್‌ ಮುತಾಲಿಕ್‌ (ಸಂಗ್ರಹ ಚಿತ್ರ) (ANI)

ರಾಮನಗರ: ಶ್ರೀ ರಾಮಸೇನೆಯ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಕೇಸ್‌ ದಾಖಲಿಸಲಾಗಿದ್ದು, ಬಿಜೆಪಿ ಸರಕಾರ ಈ ಕೇಸ್‌ಗಳನ್ನು ವಾಪಸ್‌ ಪಡೆದುಕೊಂಡಿಲ್ಲ. ಹಿಂದೂ ಕಾರ್ಯಕರ್ತರ ರಕ್ಷಣೆಗಾಗಿ ಮುಂದಿನ ಚುನಾವಣೆಯಲ್ಲಿ ನಾನು ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇನೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

ಪ್ರಮೋದ್‌ ಮುತಾಲಿಕ್‌ ಹೇಳಿದ್ದೇನು?

- ಹಸುಗಳನ್ನು ರಕ್ಷಣೆ ಮಾಡಿರುವ, ಹಿಂದೂ ಯುವತಿಯರ ರಕ್ಷಣೆ ಮಾಡಿರುವ ನಮ್ಮ ಕಾರ್ಯಕರ್ತರ ವಿರುದ್ಧ ರೌಡಿ ಶೀಟರ್‌ ಪ್ರಕರಣಗಳನ್ನು ತೆರೆಯಲಾಗಿದೆ. ಬಿಜೆಪಿ ಸರಕಾರವು ಈ ಕೇಸ್‌ಗಳನ್ನು ವಾಪಸ್‌ ಪಡೆದುಕೊಂಡಿಲ್ಲ.

- ಸರಕಾರವು ಕೇವಲ ಅಧಿಕಾರ, ಚುನಾವಣೆ ಬಗ್ಗೆ ಮಾತ್ರ ಯೋಚಿಸಿದರೆ ಆಗದು. ಇಸ್ಲಾಮಿಕ್‌, ಭಯೋತ್ಪಾದಕರು ಹೆಚ್ಚಾಗುತ್ತಿದ್ದಾರೆ. ಶಾರೀಕ್‌ನಂತವರು ಜಾಮೀನಿನ ಮೇಲೆ ಹೊರಬರುತ್ತಾರೆ. ವಿರೋಧ ಪಕ್ಷದಲ್ಲಿಯೂ ಭಯೋತ್ಪಾದಕರು ಇದ್ದಾರೆ. ರಾಮನಗರದಲ್ಲಿಯೂ ಜನರು ತೊಂದರೆಗೀಡಾಗಿದ್ದಾರೆ. ನಿಮ್ಮ ಅಧಿಕಾರ ದಾಹಕ್ಕೆ ಭಯೋತ್ಪಾದನೆಗೆ ಬೆಂಬಲ ನೀಡಬೇಡಿ.

- ಸರಕಾರವನ್ನು ನಂಬಿಕೊಂಡರೆ ಆಗದು. ಐದಾರು ಕ್ಷೇತ್ರದಲ್ಲಿ ಸಮೀಕ್ಷೆ ನಡೆಸುತ್ತಿದ್ದೇನೆ. ಡಿಸೆಂಬರ್‌ ಎರಡನೇ ವಾರದಲ್ಲಿ ಯಾವ ಕ್ಷೇತ್ರ ಎಂದು ಅಂತಿಮ ನಿರ್ಧಾರ ಪ್ರಕಟಿಸುವೆ. 25 ಹಿಂದೂ ಕಾರ್ಯಕರ್ತರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.

- ಬಾಂಬ್‌ ಸ್ಫೋಟದಲ್ಲಿ ಪೊಲೀಸರು ಮತ್ತು ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಎನ್‌ಐಎ ಮತ್ತು ನಿಮ್ಮ ನಿರ್ಲಕ್ಷ್ಯದಿಂದಾಗಿ ಇಂತಹ ಘಟನೆಗಳು ನಡೆಯುತ್ತಿವೆ. ನಮ್ಮಲ್ಲಿ ಎನ್‌ಐಎಯ ವಿಶೇಷ ಶಾಖೆ ಇಲ್ಲ.

- ಕಳೆದ ಹಲವು ವರ್ಷಗಳಿಂದ ವಿವಿಧ ಸಂಘ ಸಂಸ್ಥೆಗಳ ವಿರುದ್ಧ ಹೋರಾಟ ಮಾಡಿದ್ದೇವೆ. ಸರಕಾರ ಕಠಿಣ ಕ್ರಮ ಕೈಗೊಳ್ಳದೆ ಇದ್ದರೆ ನಾವು ನಿರಂತರವಾಗಿ ಹೋರಾಟ ಮಾಡುವೆವು. ಎಸ್‌ಡಿಪಿಐ, ಪಿಎಫ್‌ಐ ಬ್ಯಾನ್‌ ಮಾಡಿ ಎಂದು ಹೋರಾಟ ಮಾಡಿದ್ದೇವೆ. ಪಿಎಫ್‌ಐ ನಿಷೇಧ ಮಾಡಿದ್ದಾರೆ. ಎಸ್‌ಡಿಎಫ್‌ಐ ಕೂಡ ಹಲವು ಪ್ರಕಣಗಳ ಹಿಂದೆ ಇದೆ. ಎಸ್‌ಡಿಪಿಐ ಬ್ಯಾನ್‌ ಮಾಡದೆ ಬಿಜೆಪಿಯು ತನ್ನ ಲಾಭಕ್ಕಾಗಿ ಇಟ್ಟುಕೊಂಡಿದೆ. ಎಸ್‌ಡಿಪಿಐ ದೇಶದ್ರೋಹಿ ಸಂಘಟನೆಯಾಗಿದೆ.

- ಲವ್‌ ಜಿಹಾದ್‌ ವಿಷಯದಲ್ಲಿ ಹಿಂದೂ ಯುವತಿಯರು ಎಚ್ಚರಿಕೆಯಿಂದ ಇರಬೇಕು. ದಯವಿಟ್ಟು ಪೀಸ್‌ಪೀಸ್‌ ಆಗಬೇಡಿ. ಪ್ರೀತಿಸುವ ಮೊದಲು ಯಾರನ್ನು ಪ್ರೀತಿಸುತ್ತ ಇದ್ದೀರಿ ಎಂದು ಯೋಚನೆ ಮಾಡಿ. ಪ್ರೀತಿಯ ಹೆಸರಲ್ಲಿ ಮೋಸ ನಡೆಯುತ್ತದೆ. ಶ್ರದ್ಧಾ ಘಟನೆಯಿಂದ ಎಚ್ಚೆತ್ತುಕೊಳ್ಳಬೇಕು. ಯುವತಿಯರ ಹೆತ್ತವರೂ ಎಚ್ಚರಿಕೆ ವಹಿಸಬೇಕು.

- ಬಿಜೆಪಿ ಸರಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ರಾಜ್ಯದಲ್ಲಿ ಲವ್‌ ಜಿಹಾದ್‌ ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಿಸಲು ಪ್ರತ್ಯೇಕ ಕಾಯಿದೆ ರೂಪಿಸುವಂತೆ ನಾನು ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ.

- ಲವ್‌ ಜಿಹಾದ್‌ ವಿರುದ್ಧ ಮೊದಲು ಧ್ವನಿ ಎತ್ತಿದವನು ನಾನು. ಮೂರು ಸಾವಿರ ಹೆಣ್ಣು ಮಕ್ಕಳನ್ನು ಲವ್‌ ಜಿಹಾದ್‌ನಿಂದ ಪಾರು ಮಾಡಿದ್ದೇವೆ. ಪ್ರೀತಿಸುವ ಮೊದಲು ಅಬ್ದುಲ್ಲಾ, ಅಶೋಕ್‌ ವ್ಯತ್ಯಾಸ ಅರಿತು ಪ್ರೀತಿಸಿ. ಇಲ್ಲವಾದರೆ ದೆಹಲಿಯಲ್ಲಿ ಆದಂತೆ ತುಂಡುತುಂಡಾಗಬೇಕಾಗುತ್ತದೆ ಎಂದು ಪ್ರಮೋದ್‌ ಮುತಾಲಿಕ್‌ ಹೇಳಿದ್ದಾರೆ.

IPL_Entry_Point

ವಿಭಾಗ