ಟಿಸಿಎಸ್ ವರ್ಲ್ಡ್ 10ಕೆ ರನ್: ಏಪ್ರಿಲ್ 28ಕ್ಕೆ ಮುಂಜಾನೆ 3.35ಕ್ಕೆ ಮೆಟ್ರೋ ಸಂಚಾರ ಆರಂಭ; ಬಿಎಂಆರ್‌ಸಿಎಲ್ ಘೋಷಣೆ -TCS World 10k Run
ಕನ್ನಡ ಸುದ್ದಿ  /  ಕರ್ನಾಟಕ  /  ಟಿಸಿಎಸ್ ವರ್ಲ್ಡ್ 10ಕೆ ರನ್: ಏಪ್ರಿಲ್ 28ಕ್ಕೆ ಮುಂಜಾನೆ 3.35ಕ್ಕೆ ಮೆಟ್ರೋ ಸಂಚಾರ ಆರಂಭ; ಬಿಎಂಆರ್‌ಸಿಎಲ್ ಘೋಷಣೆ -Tcs World 10k Run

ಟಿಸಿಎಸ್ ವರ್ಲ್ಡ್ 10ಕೆ ರನ್: ಏಪ್ರಿಲ್ 28ಕ್ಕೆ ಮುಂಜಾನೆ 3.35ಕ್ಕೆ ಮೆಟ್ರೋ ಸಂಚಾರ ಆರಂಭ; ಬಿಎಂಆರ್‌ಸಿಎಲ್ ಘೋಷಣೆ -TCS World 10k Run

TCS World 10K Run: ‘ಟಿಸಿಎಸ್ ವರ್ಲ್ಡ್ 10ಕೆ ರನ್’ ಮ್ಯಾರಥಾನ್ ದಿನ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಮುಂಜಾನೆ 3.35ಕ್ಕೆ ಆರಂಭವಾಗಲಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಏಪ್ರಿಲ್ 28 ರಂದು ನಡೆಯಲಿರುವ ಟಿಸಿಎಸ್ ವರ್ಲ್ಡ್ 10ಕೆ ರನ್ ಸ್ಪರ್ಧೆಗಳ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸಂಚಾರ ಮುಂಜಾನೆ 3.35ಕ್ಕೆ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.
ಏಪ್ರಿಲ್ 28 ರಂದು ನಡೆಯಲಿರುವ ಟಿಸಿಎಸ್ ವರ್ಲ್ಡ್ 10ಕೆ ರನ್ ಸ್ಪರ್ಧೆಗಳ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸಂಚಾರ ಮುಂಜಾನೆ 3.35ಕ್ಕೆ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru News) ಏಪ್ರಿಲ್ 28 ರಂದು 'ಟಿಸಿಎಸ್ ವರ್ಲ್ಡ್ 10ಕೆ ರನ್' (TCS World 10k Run) ಮ್ಯಾರಥಾನ್ ಓಟದ ಸ್ಪರ್ಧೆ ನಡೆಯಲಿದೆ. ನಗರದ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಿಂದ ಮ್ಯಾರಥಾನ್ ಆರಂಭವಾಗಿದೆ. ಓಟದಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ಅನುಕೂಲಕ್ಕಾಗಿ ಬಿಎಂಆರ್‌ಸಿಎಲ್ (BMRCL) ತನ್ನ ನಾಲ್ಕು ಟರ್ಮಿನಲ್‌ಗಳಿಂದ ಅಂದು ಬೆಳಗ್ಗೆ 7ರ ಬದಲಾಗಿ ಮುಂಜಾನೆ 3.35ಕ್ಕೆ ಮೆಟ್ರೋ ರೈಲು ಸಂಚಾರವನ್ನು (Metro Train Service) ಆರಂಭಿಸುವುದಾಗಿ ತಿಳಿಸಿದೆ.

ನಾಗಸಂದ್ರ, ಸಿಲ್ಕ್ ಬೋರ್ಡ್, ಚಲ್ಲಘಟ್ಟ ಹಾಗೂ ವೈಟ್‌ಫೀಲ್ಡ್‌ (ಕಾಡುಗೋಡಿ) ಮೆಟ್ರೋ ನಿಲ್ದಾಣಗಳಿಂದ ಮುಂಜಾನೆಯಿಂದಲೇ ನಮ್ಮ ಮೆಟ್ರೋ (Namma Metro) ಸಂಚಾರ ಪ್ರಾರಂಭವಾಗಲಿದೆ. ಮುಂಜಾನೆ 3.35 ರಿಂದ 4.25 ರವರೆಗೆ 10 ನಿಮಿಷಗಳಿಗೊಮ್ಮೆ ಮೆಟ್ರೋ ಸಂಚಾರ ಇರಲಿದೆ. ಬಿಎಂಆರ್‌ಸಿಎಲ್‌ ಹೊರಡಿಸಿರುವ ಪ್ರಕಟಣೆ ಪ್ರಕಾರ, ನಾಡಪ್ರಭು ಕೆಂಪೇಗೌಡ ಸ್ಟೇಷನ್‌ ಮೆಜೆಸ್ಟಿಕ್‌ನಿಂದ ಎಂಜಿ ರಸ್ತೆ ಕಡೆಗೆ ಮೊದಲ ರೈಲು ಬೆಳಗ್ಗೆ 4.10ಕ್ಕೆ ಆರಂಭವಾಗುತ್ತೆ. ಬೆಳಗ್ಗೆ 5 ಗಂಟೆಯವರೆಗೆ 10 ನಿಮಿಷಕ್ಕೆ ಒಂದರಂತೆ ಮೆಟ್ರೋ ಸೇವೆ ಇರಲಿದೆ. ಇದಾದ ಬಳಿಕ ಪ್ರಯಾಣಿಕರ ದಟ್ಟಣೆಯನ್ನು ನೋಡಿಕೊಂಡು ಸಂಚಾರವನ್ನು ಮುಂದುವರಿಸುವ ನಿರ್ಧಾರವನ್ನು ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಟಿಸಿಎಸ್ ವರ್ಲ್ಡ್ 10ಕೆ ರನ್‌ನಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಮೆಟ್ರೋಲ ಸೇವೆಯನ್ನು ಬಳಸಿಕೊಳ್ಳಬೇಕು. ಕ್ಯೂಆರ್ ಆಧಾರಿತ ಟಿಕೆಟ್‌ ಖರೀದಿ ಹಾಗೂ ನಗದು ರಹಿತ ಪಾವತಿಗಳಿಗೂ ಈ ಸಮಯದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದೆ.

ಮತದಾನದ ದಿನ ಮೆಟ್ರೋ ಸಂಚಾರ ಸಮಯ ವಿಸ್ತರಣೆ

ಕರ್ನಾಟಕದಲ್ಲಿ ಇಂದು (ಏಪ್ರಿಲ್ 26, ಶುಕ್ರವಾರ) ನಡೆಯುತ್ತಿರುವ ಮೊದಲ ಹಂತದ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರದ ಸಮಯವನ್ನು ವಿಸ್ತರಿಸಲಾಗಿದೆ. ಶುಕ್ರವಾರ ರಾತ್ರಿ 11.55 ರಿಂದ ಏಪ್ರಿಲ್ 27ರ ಬೆಳಗ್ಗೆ 00.35 ರವರೆಗೆ ವಿಸ್ತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಕರ್ನಾಟಕದಲ್ಲಿ ಏಪ್ರಿಲ್ 26 ಮತ್ತು ಮೇ 7 ರಂದು ಎರಡು ಹಂತಗಳಲ್ಲಿ ತಲಾ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಜೂನ್ 4ಕ್ಕೆ ದೇಶದ 7 ಹಂತಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಇನ್ನೂ 5 ಹಂತಗಳ ಚುನಾವಣೆ ಬಾಕಿ ಇದೆ.

Whats_app_banner