ಕನ್ನಡ ಸುದ್ದಿ  /  ಕ್ರಿಕೆಟ್  /  2ನೇ ಟೈಮ್​ ಔಟ್​ಗೂ ಮುನ್ನವೇ 10 ವಿಕೆಟ್​ಗಳಿಂದ ಗೆದ್ದ ಹೈದರಾಬಾದ್​; ಲಕ್ನೋ ವಿರುದ್ಧ 9.4 ಓವರ್​​ಗಳಲ್ಲೇ 167 ರನ್ ಚೇಸ್

2ನೇ ಟೈಮ್​ ಔಟ್​ಗೂ ಮುನ್ನವೇ 10 ವಿಕೆಟ್​ಗಳಿಂದ ಗೆದ್ದ ಹೈದರಾಬಾದ್​; ಲಕ್ನೋ ವಿರುದ್ಧ 9.4 ಓವರ್​​ಗಳಲ್ಲೇ 167 ರನ್ ಚೇಸ್

SRH vs LSG Highlights : ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಸುಂಟರಗಾಳಿ ಬ್ಯಾಟಿಂಗ್ ನಡೆಸಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ 10 ವಿಕೆಟ್​​ಗಳ ಗೆಲುವು ತಂದುಕೊಟ್ಟರು.

2ನೇ ಟೈಮ್​ ಔಟ್​ಗೂ ಮುನ್ನವೇ 10 ವಿಕೆಟ್​ಗಳಿಂದ ಗೆದ್ದ ಹೈದರಾಬಾದ್​; ಲಕ್ನೋ ವಿರುದ್ಧ 9.4 ಓವರ್​​ಗಳಲ್ಲೇ 167 ರನ್ ಚೇಸ್
2ನೇ ಟೈಮ್​ ಔಟ್​ಗೂ ಮುನ್ನವೇ 10 ವಿಕೆಟ್​ಗಳಿಂದ ಗೆದ್ದ ಹೈದರಾಬಾದ್​; ಲಕ್ನೋ ವಿರುದ್ಧ 9.4 ಓವರ್​​ಗಳಲ್ಲೇ 167 ರನ್ ಚೇಸ್ (LSG- X)

ಅಬ್ಬಬ್ಬಾ.. ಏನ್​ ಮ್ಯಾಚ್ ಗುರು.. 2ನೇ ಟೈಮ್ ಔಟ್​ ಬರುವುದಕ್ಕೂ ಮುನ್ನವೇ ಪಂದ್ಯ ಮುಕ್ತಾಯಗೊಂಡಿದೆ. ನೆರೆದಿದ್ದ ಪ್ರೇಕ್ಷಕರಿಗಂತೂ ಭರ್ಜರಿ ಮನರಂಜನೆಯ ರಸದೌತಣ ಉಣಬಡಿಸಿತು ಸನ್​ರೈಸರ್ಸ್ ಹೈದರಾಬಾದ್. ​​ ವಿಧ್ವಂಸಕ ಬ್ಯಾಟಿಂಗ್​ ನಡೆಸಿದ ಎಸ್​ಆರ್​​ಹೆಚ್ ಪವರ್​​ಪ್ಲೇನಲ್ಲಿ ಮತ್ತೊಮ್ಮೆ 107 ರನ್ ಪೇರಿಸಿತು. ಕೇವಲ 9.4 ಓವರ್​​ ಅಂದರೆ 58 ಎಸೆತಗಳಲ್ಲಿ 166 ರನ್ ಚೇಸಿಂಗ್ ಮಾಡಿತು. ಇದರೊಂದಿಗೆ ಪ್ಲೇಆಫ್​ ಹಾದಿ ಮತ್ತಷ್ಟು ಸುಗಮವಾಯಿತು. ಆದರೆ ಲಕ್ನೋ ಹಾದಿ ದುರ್ಗಮವಾಯಿತು.

ಟ್ರೆಂಡಿಂಗ್​ ಸುದ್ದಿ

ಬ್ಯಾಟಿಂಗ್ ಸುನಾಮಿ ನಡೆಸಿದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಲಕ್ನೋ ಬೌಲರ್​ಗಳನ್ನು ಚೆಂಡಾಡಿದರು. ಬೌಲರ್​​ಗಳಂತೂ ಚೆಂಡು ಆಕಾಶದಲ್ಲಿ ಎಲ್ಲೋಗ್ತಿದೆ ಎಂದು ನೋಡಿದ್ದೇ ಆಯ್ತು. ಬಿಡುವು ನೀಡದೆ ದಂಡಿಸಿದ ಈ ಜೋಡಿ, 10 ಓವರ್​​ ಅಥವಾ ಅದಕ್ಕಿಂತ ಕಡಿಮೆ ಓವರ್​ಗಳಲ್ಲಿ ಅಧಿಕ ರನ್ (167 ರನ್) ಗಳಿಸಿದ ದಾಖಲೆಗೆ ಪಾತ್ರವಾಯಿತು. ಇನ್ನೂ 62 ಎಸೆತಗಳನ್ನು ಬಾಕಿ ಉಳಿಸಲಾಗಿದೆ. ಈ ಜೋಡಿ 34 ಎಸೆತಗಳಲ್ಲೇ ಶತಕದ ಜೊತೆಯಾಟವಾಗಿತು.

ಅಭಿಷೇಕ್ (8 ಬೌಂಡರಿ, 6 ಸಿಕ್ಸರ್​) ಮತ್ತು ಟ್ರಾವಿಸ್ (8 ಬೌಂಡರಿ, 8 ಸಿಕ್ಸರ್​) ಸೇರಿ 16 ಬೌಂಡರಿ, 14 ಸಿಕ್ಸರ್​ ಸಿಡಿಸಿದ್ದಾರೆ. ಅಂದರೆ ಬೌಂಡರಿ-ಸಿಕ್ಸರ್​​ಗಳಿಂದಲೇ 148 ರನ್ ಹರಿದು ಬಂದಿದೆ. ಅವರಿಬ್ಬರು ಓಡುವ ಮೂಲಕ ರನ್ ಗಳಿಸಿರುವುದು 19 ರನ್ ಮಾತ್ರ. ಅಭಿಷೇಕ್ 28 ಎಸೆತಗಳಲ್ಲಿ 45 ರನ್, ಹೆಡ್ 30 ಎಸೆತಗಳಲ್ಲಿ 89 ರನ್ ಬಾರಿಸಿದರು. ಲಕ್ನೋ ಬೌಲರ್​ಗಳು ಪ್ರತಿ ಓವರ್​​​ನಲ್ಲೂ 15 ಪ್ಲಸ್ ರನ್ ಬಿಟ್ಟುಕೊಟ್ಟಿದ್ದಾರೆ.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಲಕ್ನೂ ಸೂಪರ್​ ಜೈಂಟ್ಸ್​, ನೀರಸ ಬ್ಯಾಟಿಂಗ್ ಪ್ರದರ್ಶನ ನೀಡಿತು. ಕೊನೆಯಲ್ಲಿ ಆಯುಷ್ ಬದೋನಿ 50 ರನ್ ಸಿಡಿಸಿ ಆಸರೆಯಾದರು. ಪರಿಣಾಮ ಎಲ್​ಎಸ್​ಜಿ 20 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಎಸ್​​ಆರ್​​ಹೆಚ್​, ವಿನಾಶಕಾರಿ ಬ್ಯಾಟಂಗ್​ ನಡೆಸಿತು. 9.4 ಓವರ್​ಗಳಲ್ಲೇ 10 ವಿಕೆಟ್​​ಗಳಿಂದ ಗೆದ್ದು ಬೀಗಿತು. ಹೆಡ್ 89, ಅಭಿಷೇಕ್ 75 ರನ್ ಗಳಿಸಿ ಔಟಾಗದೆ ಉಳಿದರು.

ಲಕ್ನೋ ನೀರಸ ಬ್ಯಾಟಿಂಗ್ ಪ್ರದರ್ಶನ

ಟಾಸ್​ ಜಯಿಸಿ ಮೊದಲು ಬ್ಯಾಟಿಂಗ್ ನಡೆಸಿದ ಎಲ್​ಎಸ್​ಜಿ ನೀರಸ ಬ್ಯಾಟಿಂಗ್ ನಡೆಸಿತು. ಹೈದರಾಬಾದ್ ಪವರ್​​ಪ್ಲೇನಲ್ಲಿ 107 ರನ್ ಗಳಿಸಿದರೆ, ಲಕ್ನೋ ಕೇವಲ 29 ರನ್ ಸಿಡಿಸಿತ್ತು. ಆರಂಭಿಕರಾದ ಕೆಎಲ್ ರಾಹುಲ್ ನಿಧಾನಗತಿಯ ಬ್ಯಾಟಿಂಗ್ ನಡೆಸಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು. 33 ಎಸೆತಗಳಲ್ಲಿ 29 ರನ್ ಸಿಡಿಸಿ ಔಟಾದರು. ಕೃಣಾಲ್​ 24 ರನ್​ ಗಳಿಸಿದರು. ಸಂಕಷ್ಟದಲ್ಲಿದ್ದ ತಂಡಕ್ಕೆ ಆಯುಷ್​ ಬದೋನಿ ಮತ್ತು ನಿಕೋಲಸ್​ ಪೂರನ್​ ಆಸರೆಯಾದರು. 5ನೇ ವಿಕೆಟ್​ಗೆ ಮುರಿಯದ 99 ರನ್​ಗಳ ಕಾಣಿಕೆ ನೀಡಿದರು. ಬದೋನಿ 50ರನ್ ಸಿಡಿಸಿದರೆ, ಪೂರನ್ 48 ರನ್ ಸಿಡಿಸಿ ಅಜೇಯರಾದರು.

ಪ್ಲೇಆಫ್​ನಿಂದ ಹೊರಬಿದ್ದ ಮುಂಬೈ

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಸನ್​ರೈಸರ್ಸ್ ಹೈದರಾಬಾದ್ ಜಯದ ನಗೆ ಬೀರುತ್ತಿದ್ದಂತೆ ಮುಂಬೈ ಇಂಡಿಯನ್ಸ್ ಅಧಿಕೃತವಾಗಿ ಪ್ಲೇಆಫ್​ರೇಸ್​ನಿಂದ ಹೊರ ಬಿತ್ತು. ಎಸ್​​ಆರ್​ಹೆಚ್​ ಆಡಿದ 12 ಪಂದ್ಯಗಳಲ್ಲಿ 7ರಲ್ಲಿ ಗೆಲುವು ಸಾಧಿಸಿ 5ರಲ್ಲಿ ಸೋತಿದೆ. 14 ಅಂಕ ಪಡೆದು 3ನೇ ಸ್ಥಾನಕ್ಕೇರಿದೆ. ಮತ್ತೊಂದೆಡೆ ಲಕ್ನೋ 12ರಲ್ಲಿ ಆರು ಗೆಲುವು, 6 ಸೋಲು ಕಂಡಿದ್ದು 12 ಅಂಕ ಸಂಪಾದಿಸಿದೆ. ಇದರೊಂದಿಗೆ 6ನೇ ಸ್ಥಾನದಲ್ಲಿದೆ.

IPL_Entry_Point