ವಿವಾದಾತ್ಮಕ ಕ್ಯಾಚ್ಗೆ ಸಂಜು ಸ್ಯಾಮ್ಸನ್ ಔಟ್; ಅಂಪೈರ್ಗಳ ನಿರ್ಧಾರಕ್ಕೆ ಮೈದಾನದಲ್ಲೇ ಸಿಟ್ಟಾದ ಆರ್ಆರ್ ನಾಯಕ, ವಿಡಿಯೋ
Sanju Samson : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ವಿವಾದಾತ್ಮಕ ಔಟ್ಗೆ ಬಲಿಯಾದರು. ಅಂಪೈರ್ಗಳ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು (RR vs DC) 20 ರನ್ಗಳ ಭರ್ಜರಿ ಜಯ ಸಾಧಿಸಿ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿದೆ. ಆದರೆ ಈ ಪಂದ್ಯದಲ್ಲಿ ವಿವಾದವೊಂದು ದಾಖಲಾಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಡೆಲ್ಲಿ ನೀಡಿದ್ದ 22 ರನ್ಗಳ ಗುರಿಯನ್ನು ಬೆನ್ನಟ್ಟುವಾಗ ಆರ್ಆರ್ ನಾಯಕ ಸಂಜು ಸ್ಯಾಮ್ಸನ್ (Sanju Samson), ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದು, ಐಪಿಎಲ್ನ ಅತ್ಯಂತ ಕೆಟ್ಟ ಅಂಪೈರಿಂಗ್ ಎಂದು ಕ್ರಿಕೆಟ್ ಪ್ರಿಯರು ಕಿಡಿಕಾರಿದ್ದಾರೆ.
ಮೊದಲ ಓವರ್ನಲ್ಲೇ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಔಟಾದ ನಂತರ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸತತ ವಿಕೆಟ್ಗಳ ನಡುವೆಯೂ ಏಕಾಂಗಿ ಹೋರಾಟ ನಡೆಸಿದ ಸಂಜು, ತನ್ನ ತಂಡವನ್ನು ಗೆಲುವಿನತ್ತ ಕೊಂಡೊಯ್ಯುತ್ತಿದ್ದರು. ಆದರೆ ಮುಕೇಶ್ ಕುಮಾರ್ ಅವರ ಬೌಲಿಂಗ್ನಲ್ಲಿ 15 ಓವರ್ನ 4ನೇ ಎಸೆತದಲ್ಲಿ ಸ್ಯಾಮ್ಸನ್ ಬಿಗ್ ಹಿಟ್ ಮಾಡಿದ ಸಂಜು, ಲಾಂಗ್ ಆನ್ನಲ್ಲಿ ಶಾಯ್ ಹೋಪ್ಗೆ ಕ್ಯಾಚ್ ನೀಡಿದರು.
ಆದರೆ 46 ಎಸೆತಗಳಲ್ಲಿ 8 ಬೌಂಡರಿ, 6 ಸಿಕ್ಸರ್ ಸಹಿತ 86 ರನ್ ಸಿಡಿಸಿದ್ದ ಸಂಜು ಔಟಾಗಿದ್ದು, ವಿವಾದಾತ್ಮಕ ಕ್ಯಾಚ್ಗೆ. ಹೌದು, ಶಾಯ್ ಹೋಪ್ ಹಿಡಿದ ಕ್ಯಾಚ್, ಐಪಿಎಲ್ನಲ್ಲಿ ಮತ್ತೊಂದು ವಿವಾದಕ್ಕೆ ಕಾರಣವಾಗಿದೆ. ಸ್ಯಾಮ್ಸನ್, ಅಂಪೈರ್ಗಳ ನಿರ್ಧಾರಕ್ಕೆ ಸಿಟ್ಟಾಗಿ ವಾಗ್ವಾದ ನಡೆಸಿದರು. ಸರಿಯಾಗಿ ಪರಿಶೀಲನೆ ನಡೆಸದೆ ಔಟ್ ನೀಡಿವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಕ್ಯಾಚ್ ಹಿಡಿಯುವ ಅವಧಿಯಲ್ಲಿ ಹೋಪ್ ಕಾಲು ಬೌಂಡರಿ ಗೆರೆಗೆ ತಾಗಿರುವುದು ರಿಪ್ಲೇನಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಆದರೂ ಔಟ್ ನೀಡಿರುವುದು ಅಚ್ಚರಿ ಮೂಡಿಸಿದೆ.
ಹಗ್ಗಕ್ಕೆ ಮುಟ್ಟಿದಂತಿದೆ ಹೋಪ್ ಪಾದ
ಮುಕೇಶ್ ಕುಮಾರ್ ಬೌಲಿಂಗ್ನಲ್ಲಿ ಮತ್ತೊಂದು ಸಿಕ್ಸರ್ಗೆ ಯತ್ನಿಸಿದ ನಾಯಕನ ಕ್ಯಾಚ್ ಅನ್ನು ಬೌಂಡರಿಯಲ್ಲಿ ನಿಂತಿದ್ದ ಶಾಯ್ ಹೋಪ್ರನ್ನು ಔಟ್ ಮಾಡಲು ಅಮೋಘ ಕ್ಯಾಚ್ ಪಡೆದರು. ಹೋಪ್ ತೆಗೆದುಕೊಂಡ ಕ್ಯಾಚ್, ಬೌಂಡರಿ ಹಗ್ಗಕ್ಕೆ ಟಚ್ ಆದಂತೆ ಕಾಣುತ್ತಿದೆ. ಗೊಂದಲಕ್ಕೆ ಒಳಗಾದ ಆನ್ಫೀಲ್ಡ್ ಅಂಪೈರ್ಸ್, 3ನೇ ಅಂಪೈರ್ಗೆ ಮನವಿ ಮಾಡಿದರು. ರಿಪ್ಲೇನಲ್ಲಿ ಕ್ಲೀನ್ ಕ್ಯಾಚ್ ತೆಗೆದುಕೊಳ್ಳುವುದನ್ನು ತೋರಿಸಿದವು. ಆದಾಗ್ಯೂ, ಒಂದು ನಿರ್ದಿಷ್ಟ ಕೋನದಿಂದ ಪಾದವು ಹಗ್ಗಗಳನ್ನು ಮುಟ್ಟಿದಂತಿದೆ.
ಮೈದಾನದಲ್ಲೇ ಸಿಟ್ಟಾದ ಸಂಜು ಸ್ಯಾಮ್ಸನ್
ಥರ್ಡ್ ಅಂಪೈರ್ ಮೈಕೆಲ್ ಗೋಫ್ ಇತರ ಕೋನಗಳಲ್ಲಿ ಪರಿಶೀಲನೆ ನಡೆಸದೆ ಏಕ್ದಮ್ ಔಟ್ ನೀಡಿದರು. ವಿಡಿಯೋ-ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದು ಸಾಕಷ್ಟು ವಿವಾದಕ್ಕೆ ಕಾರಣವಾಯಿತು. ಸಂಜು ಸ್ಯಾಮ್ಸನ್ ಮೈದಾನದಿಂದ ಹೊರಬರದೆ ಮೈದಾನದ ಅಂಪೈರ್‌ಗಳೊಂದಿಗೆ ವಾಗ್ವಾದ ನಡೆಸಿದರು. ಅವರು ಮತ್ತೊಂದು ಡಿಆರ್‌ಎಸ್ ಕರೆಗೆ ಹೋಗಲು ಬಯಸಿದ್ದರು. ಆದರೆ, ಅದಾಗಲೇ ಸಮಯ ಮುಗಿದೇ ಹೋಗಿತ್ತು. ಇಡೀ ರಾಜಸ್ಥಾನ್ ರಾಯಲ್ಸ್ ಡ್ರೆಸ್ಸಿಂಗ್ ರೂಮ್ ಗೊಂದಲಕ್ಕೆ ಒಳಗಾಯಿತು. ಅಭಿಮಾನಿಗಳು ಸಹ ಅಂಪೈರ್ಸ್ ವಿರುದ್ಧ ಕಿಡಿಕಾರಿದ್ದು, ಇದು ಅತ್ಯಂತ ಕೆಟ್ಟ ಅಂಪೈರಿಂಗ್ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಬೃಹತ್ ಮೊತ್ತ ಪೇರಿಸಿತು. ಜೇಕ್ ಫ್ರೇಸರ್ ಮೆಕ್ಗುರ್ಕ್ 50, ಅಭಿಷೇಕ್ ಪೊರೆಲ್ 65 ರನ್ ಸಿಡಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಿದರು. 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು. ರವಿಚಂದ್ರನ್ ಅಶ್ವಿನ್ 3 ವಿಕೆಟ್ ಪಡೆದರು. ಈ ಗುರಿ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್, 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 201 ರನ್ ಗಳಿಸಲಷ್ಟೆ ಶಕ್ತವಾಯಿತು. ಸಂಜು ಸ್ಯಾಮ್ಸನ್ 86 ರನ್ ಗಳಿಸಿದರೂ ಗೆಲುವು ಸಾಧ್ಯವಾಗಲಿಲ್ಲ. ಖಲೀಲ್ ಅಹ್ಮದ್, ಮುಕೇಶ್ ಅಹ್ಮದ್, ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಪಡೆದರು.