ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂಪೈರ್​​ ತೀರ್ಪು ಪ್ರಶ್ನಿಸಿದ್ದಕ್ಕೆ ಸಂಜು ಸ್ಯಾಮ್ಸನ್​ಗೆ ಬಿತ್ತು ಭಾರಿ ದಂಡ; ಅಭಿಮಾನಿಗಳು ಮತ್ತೆ ಗರಂ

ಅಂಪೈರ್​​ ತೀರ್ಪು ಪ್ರಶ್ನಿಸಿದ್ದಕ್ಕೆ ಸಂಜು ಸ್ಯಾಮ್ಸನ್​ಗೆ ಬಿತ್ತು ಭಾರಿ ದಂಡ; ಅಭಿಮಾನಿಗಳು ಮತ್ತೆ ಗರಂ

  • Sanju Samson : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ವಿವಾದಾತ್ಮಕ ತೀರ್ಪಿನ ಕುರಿತು ಅಂಪೈರ್​ಗಳ ಜೊತೆ ಪ್ರಶ್ನೆ ಮಾಡಿದ್ದಕ್ಕೆ ಸಂಜು ಸ್ಯಾಮ್ಸನ್​ಗೆ ದಂಡ ವಿಧಿಸಲಾಗಿದೆ.

ಮೇ 8ರಂದು ನಡೆದ ಐಪಿಎಲ್​-2024ರ 56ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 20 ರನ್​​ಗಳಿಂದ ಶರಣಾಯಿತು. ಈ ಜಯದೊಂದಿಗೆ ಡೆಲ್ಲಿ ಪ್ಲೇಆಫ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ.
icon

(1 / 7)

ಮೇ 8ರಂದು ನಡೆದ ಐಪಿಎಲ್​-2024ರ 56ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 20 ರನ್​​ಗಳಿಂದ ಶರಣಾಯಿತು. ಈ ಜಯದೊಂದಿಗೆ ಡೆಲ್ಲಿ ಪ್ಲೇಆಫ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ.(AFP)

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಮೊದಲು ಬ್ಯಾಟಿಂಗ್​ ನಡೆಸಿತು. ಜೇಕ್​ ಫ್ರೇಸರ್ ಮೆಕ್​​ಗುರ್ಕ್ (50) ಮತ್ತು ಅಭಿಷೇಕ್ ಪೊರೆಲ್ (65) ತಲಾ ಅರ್ಧಶತಕ ಸಿಡಿಸಿದರು. ಪರಿಣಾಮ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು.
icon

(2 / 7)

ದೆಹಲಿಯ ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಮೊದಲು ಬ್ಯಾಟಿಂಗ್​ ನಡೆಸಿತು. ಜೇಕ್​ ಫ್ರೇಸರ್ ಮೆಕ್​​ಗುರ್ಕ್ (50) ಮತ್ತು ಅಭಿಷೇಕ್ ಪೊರೆಲ್ (65) ತಲಾ ಅರ್ಧಶತಕ ಸಿಡಿಸಿದರು. ಪರಿಣಾಮ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 221 ರನ್ ಗಳಿಸಿತು.(AFP)

222 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ್ 20 ಓವರ್​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್ ಗಳಿಸಲಷ್ಟೇ ಶಕ್ತವಾಯಿತು. ಸಂಜು ಸ್ಯಾಮ್ಸನ್ 86 ರನ್ ಗಳಿಸಿ ಹೋರಾಟ ನಡೆಸಿದರೂ ಪಂದ್ಯವನ್ನು ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ.
icon

(3 / 7)

222 ರನ್ ಗುರಿ ಬೆನ್ನಟ್ಟಿದ ರಾಜಸ್ಥಾನ್ 20 ಓವರ್​​ಗಳಲ್ಲಿ 8 ವಿಕೆಟ್ ಕಳೆದುಕೊಂಡು 201 ರನ್ ಗಳಿಸಲಷ್ಟೇ ಶಕ್ತವಾಯಿತು. ಸಂಜು ಸ್ಯಾಮ್ಸನ್ 86 ರನ್ ಗಳಿಸಿ ಹೋರಾಟ ನಡೆಸಿದರೂ ಪಂದ್ಯವನ್ನು ಗೆಲುವು ತಂದುಕೊಡಲು ಸಾಧ್ಯವಾಗಿಲ್ಲ.(AFP)

ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್​ಗೆ ಬಿಸಿಸಿಐ ದಂಡ ವಿಧಿಸಿದೆ. ಐಪಿಎಲ್ ನಿಯಮ ಉಲ್ಲಂಘಿಸಿ ವಿವಾದಾತ್ಮಕ​ ತೀರ್ಪು ಪ್ರಶ್ನಿಸಿದ್ದಕ್ಕೆ ಪಂದ್ಯದ ಸಂಭಾವನೆಯ ಶೇ 30ರಷ್ಟು ದಂಡದ ಬಿಸಿ ಮುಟ್ಟಿಸಿದೆ.
icon

(4 / 7)

ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್​ಗೆ ಬಿಸಿಸಿಐ ದಂಡ ವಿಧಿಸಿದೆ. ಐಪಿಎಲ್ ನಿಯಮ ಉಲ್ಲಂಘಿಸಿ ವಿವಾದಾತ್ಮಕ​ ತೀರ್ಪು ಪ್ರಶ್ನಿಸಿದ್ದಕ್ಕೆ ಪಂದ್ಯದ ಸಂಭಾವನೆಯ ಶೇ 30ರಷ್ಟು ದಂಡದ ಬಿಸಿ ಮುಟ್ಟಿಸಿದೆ.(AFP)

ಸ್ಯಾಮ್ಸನ್‌ ಔಟಾದ ಬಗ್ಗೆ ಈಗ ವಿವಾದವನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಔಟ್ ಇಲ್ಲದಿದ್ದರೂ ಔಟ್ ಕೊಟ್ಟಿದ್ದಾರೆ. ಮಹಾಮೋಸ ಎಂದು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
icon

(5 / 7)

ಸ್ಯಾಮ್ಸನ್‌ ಔಟಾದ ಬಗ್ಗೆ ಈಗ ವಿವಾದವನ್ನು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಯುತ್ತಿದೆ. ಔಟ್ ಇಲ್ಲದಿದ್ದರೂ ಔಟ್ ಕೊಟ್ಟಿದ್ದಾರೆ. ಮಹಾಮೋಸ ಎಂದು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.(AFP)

15.4ನೇ ಓವರ್​ ಎಸೆದ ಮುಕೇಶ್‌ ಕುಮಾರ್‌ ಬೌಲಿಂಗ್​​ನಲ್ಲಿ ಸಂಜು ಲಾಂಗ್‌ ಆನ್​​​ ಕಡೆಗೆ ಸಿಕ್ಸರ್‌ ಸಿಡಿಸಲು ಯತ್ನಿಸಿದರು. ಆದರೆ, ಬೌಂಡರಿ ಗೆರೆ ಬಳಿಯಿಂದ ಶಾಯ್​ ಹೋಪ್​, ಅದ್ಭುತವಾದ ಕ್ಯಾಚ್ ಪಡೆದರು. ಈ ವೇಳೆ ರಿಪ್ಲೇನಲ್ಲಿ ಹೋಪ್​ ಕಾಲು ಬೌಂಡರಿ ಗೆರೆಗೆ ತಾಗುವಂತೆ ಕಾಣುತ್ತಿತ್ತು.
icon

(6 / 7)

15.4ನೇ ಓವರ್​ ಎಸೆದ ಮುಕೇಶ್‌ ಕುಮಾರ್‌ ಬೌಲಿಂಗ್​​ನಲ್ಲಿ ಸಂಜು ಲಾಂಗ್‌ ಆನ್​​​ ಕಡೆಗೆ ಸಿಕ್ಸರ್‌ ಸಿಡಿಸಲು ಯತ್ನಿಸಿದರು. ಆದರೆ, ಬೌಂಡರಿ ಗೆರೆ ಬಳಿಯಿಂದ ಶಾಯ್​ ಹೋಪ್​, ಅದ್ಭುತವಾದ ಕ್ಯಾಚ್ ಪಡೆದರು. ಈ ವೇಳೆ ರಿಪ್ಲೇನಲ್ಲಿ ಹೋಪ್​ ಕಾಲು ಬೌಂಡರಿ ಗೆರೆಗೆ ತಾಗುವಂತೆ ಕಾಣುತ್ತಿತ್ತು.(AFP)

ಆದರೂ 3ನೇ ಅಂಪೈರ್‌ ಔಟೆಂದು ತೀರ್ಪು ಕೊಟ್ಟರು. ಅದಕ್ಕಾಗಿ ಸಂಜು ಪ್ರಶ್ನಿಸಿದ್ದರು. ಬೌಂಡರಿ ಗೆರೆಗೆ ಕಾಲು ತಾಗಿದೆ ಎಂದು ಅಂಪೈರ್​ ಜೊತೆ ವಾದ ಮಾಡಿದ್ದಾರೆ. ಅದಕ್ಕಾಗಿ ದಂಡದ ಬಿಸಿ ಮುಟ್ಟಿಸಲಾಗಿದೆ.
icon

(7 / 7)

ಆದರೂ 3ನೇ ಅಂಪೈರ್‌ ಔಟೆಂದು ತೀರ್ಪು ಕೊಟ್ಟರು. ಅದಕ್ಕಾಗಿ ಸಂಜು ಪ್ರಶ್ನಿಸಿದ್ದರು. ಬೌಂಡರಿ ಗೆರೆಗೆ ಕಾಲು ತಾಗಿದೆ ಎಂದು ಅಂಪೈರ್​ ಜೊತೆ ವಾದ ಮಾಡಿದ್ದಾರೆ. ಅದಕ್ಕಾಗಿ ದಂಡದ ಬಿಸಿ ಮುಟ್ಟಿಸಲಾಗಿದೆ.


IPL_Entry_Point

ಇತರ ಗ್ಯಾಲರಿಗಳು