ಸಂಜು ಸ್ಯಾಮ್ಸನ್ ಕ್ಯಾಚ್ ವಿವಾದ: ನವಜೋತ್​ ಸಿಂಗ್, ಜಾಫರ್​ ಸೇರಿದಂತೆ ಕ್ರಿಕೆಟ್ ಪಂಡಿತರು ಏನಂದ್ರು ನೋಡಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಸಂಜು ಸ್ಯಾಮ್ಸನ್ ಕ್ಯಾಚ್ ವಿವಾದ: ನವಜೋತ್​ ಸಿಂಗ್, ಜಾಫರ್​ ಸೇರಿದಂತೆ ಕ್ರಿಕೆಟ್ ಪಂಡಿತರು ಏನಂದ್ರು ನೋಡಿ

ಸಂಜು ಸ್ಯಾಮ್ಸನ್ ಕ್ಯಾಚ್ ವಿವಾದ: ನವಜೋತ್​ ಸಿಂಗ್, ಜಾಫರ್​ ಸೇರಿದಂತೆ ಕ್ರಿಕೆಟ್ ಪಂಡಿತರು ಏನಂದ್ರು ನೋಡಿ

Sanju Samson Catch Controversy : ಸಂಜು ಸ್ಯಾಮ್ಸನ್ ಕ್ಯಾಚ್ ವಿವಾದಕ್ಕೆ ಸಂಬಂಧಿಸಿ ಕ್ರಿಕೆಟ್ ಪಂಡಿತರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಯಾರು ಏನೆಲ್ಲಾ ಹೇಳಿದ್ದಾರೆ ಎಂಬುದರ ವಿವರ ಇಲ್ಲಿದೆ.

ಸಂಜು ಸ್ಯಾಮ್ಸನ್ ಕ್ಯಾಚ್ ವಿವಾದ: ನವಜೋತ್​ ಸಿಂಗ್, ಜಾಫರ್​ ಸೇರಿ ಕ್ರಿಕೆಟ್ ಪಂಡಿತರು ಯಾರು ಏನು ಹೇಳಿದ್ದಾರೆ ನೋಡಿ
ಸಂಜು ಸ್ಯಾಮ್ಸನ್ ಕ್ಯಾಚ್ ವಿವಾದ: ನವಜೋತ್​ ಸಿಂಗ್, ಜಾಫರ್​ ಸೇರಿ ಕ್ರಿಕೆಟ್ ಪಂಡಿತರು ಯಾರು ಏನು ಹೇಳಿದ್ದಾರೆ ನೋಡಿ

ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ (Sanju Samson) ಅವರ ವಿವಾದಾತ್ಮಕ ಔಟ್ ಕುರಿತು ಕ್ರಿಕೆಟ್​ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ. ವೇಗಿ ಮುಕೇಶ್ ಕುಮಾರ್​ ಎಸೆದ 16ನೇ ಓವರ್‌ನಲ್ಲಿ ಸಂಜು ಸಿಕ್ಸರ್​ ಬಾರಿಸಲು ಯತ್ನಿಸಿ ಶಾಯ್ ಹೋಪ್​ಗೆ ಕ್ಯಾಚ್​ ಕೊಟ್ಟರು. ಆದರೆ ರಿಪ್ಲೇನಲ್ಲಿ ಕಾಲು ಬೌಂಡರಿ ಗೆರೆಗೆ ತಾಗಿದಂತೆ ಕಾಣುತ್ತದೆ. ಹೀಗಾಗಿ ಗೊಂದಲ ಉಂಟಾಗಿದೆ.

ಅಲ್ಲದೆ, ಸ್ಯಾಮ್ಸನ್ ಸಹ ಅಂಪೈರ್ಸ್​ ಜೊತೆಗೆ ವಾಗ್ದಾದ ನಡೆಸಿದರು. ಮತ್ತೊಂದೆಡೆ ಅಭಿಮಾನಿಗಳು ಇದು ಐಪಿಎಲ್​ನ ಅತ್ಯಂತ ಕೆಟ್ಟ ಅಂಪೈರಿಂಗ್ ಮತ್ತು ಮಹಾ ಮೋಸ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ವಿವಾದಕ್ಕೆ ಸಂಬಂಧಿಸಿ ಕ್ರಿಕೆಟ್​ ಪಂಡಿತರು ಸಹ ವಿಭಿನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ಯಾರು ಏನು ಹೇಳಿದ್ದಾರೆ ಎಂಬುದನ್ನು ಈ ಮುಂದೆ ನೋಡೋಣ.

ತಜ್ಞ ಕ್ರಿಕೆಟಿಗರು ಯಾರು ಏನು ಹೇಳಿದ್ದಾರೆ ನೋಡಿ

ಈ ಕುರಿತು ಮೊದಲಿಗೆ ಪ್ರತಿಕ್ರಿಯಿಸಿದ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಪಾಲ್ ಕಾಲಿಂಗ್‌ವುಡ್ (Paul Collingwood), ಗೌಗಿ (ಮೈಕೆಲ್ ಗಾಫ್) ನನಗೆ ಬಹಳ ಒಳ್ಳೆಯ ಸ್ನೇಹಿತ. ಹಾಗಾಗಿ ನಾನು ಅವರನ್ನು ಡಿಫೆಂಡ್ ಮಾಡುತ್ತೇನೆ (ನಗು). ಆದರೆ ಅವರು ಎರಡು ಬಾರಿ ಚೆಕ್ ಮಾಡಿದ್ದಾರೆ. ಮತ್ತೊಂದು ಕೋನವನ್ನು ಪರಿಶೀಲಿಸಬಹುದಿತ್ತು. ಇನ್ನೂ ಹೆಚ್ಚು ಸಮಯ ನೀಡಿ ಪರಿಶೀಲನೆ ನಡೆಸಬಹುದಿತ್ತು. ಏಕೆಂದರೆ ಅಲ್ಲಿ ಕಾಲು ತುಂಬಾ ಹತ್ತಿರದಲ್ಲಿದ್ದಂತೆ ಕಾಣುತ್ತದೆ ಎಂದು ಹೇಳಿದ್ದಾರೆ.

ಭಾರತದ ಮಾಜಿ ಬ್ಯಾಟರ್ ವಾಸಿಂ ಜಾಫರ್ (Wasim Jaffer) ಕೂಡ 3ನೇ ಅಂಪೈರ್ ಸ್ವಲ್ಪ ಹೆಚ್ಚು ಕಾಯಬೇಕಾಗಿತ್ತು. ಆದರೆ ಅವರು ಔಟ್ ಎಂದು ನಂಬಿದ್ದರು. ನಾವು ನೋಡಿದ ರಿಪ್ಲೇಗಳಲ್ಲಿ ಔಟ್ ಆಗಿದ್ದಾರೆಂದು ನನಗೆ ಅನಿಸಿತು. ಕಾಲು ಹಗ್ಗವನ್ನು ಮುಟ್ಟಿರಲಿಲ್ಲ. ಅದಕ್ಕೆ ನಿರ್ಣಾಯಕ ಪುರಾವೆ ಇರಲಿಲ್ಲ. ಆದರೆ ಅಂಪೈರ್​ ಇನ್ನಷ್ಟು ಸಮಯ ತೆಗೆದುಕೊಳ್ಳಬೇಕಿತ್ತು ಎಂದು ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

ಅಂಪೈರ್​ಗಳು ಬೇಗನೆ ನಿರ್ಧಾರ ಕೈಗೊಂಡಿದ್ದು ನನಗೆ ಆಶ್ಚರ್ಯ ತಂದಿತು. ಏಕೆಂದರೆ ಇದು ಪಂದ್ಯದಲ್ಲಿ ಅತ್ಯಂತ ಮಹತ್ವದ ಕ್ಷಣವಾಗಿತ್ತು. ಆರ್​ಆರ್​ನ ಗೆಲುವು ಅದರ ಮೇಲೆ ಅವಲಂಬಿತವಾಗಿತ್ತು. 2-3 ಕೋನಗಳು ಅಥವಾ ಸೂಪರ್ ಸ್ಲೋ-ಮೋ ಜೊತೆಗೆ ನೋಡಬಹುದಿತ್ತು. ಆದರೆ ಅವಸರದಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಜಾಫರ್ ಹೇಳಿದ್ದಾರೆ.

ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್​ ಪೊಮ್ಮಿ ಎಂಬಾಂಗ್ವಾ (Pommie Mbangwa), ಮೊದಲನೆಯ ವಿಷಯವೆಂದರೆ ಬೌಂಡರಿ ಗೆರೆ ಸ್ಪರ್ಶಿಸುವುದನ್ನು ನೀವು ನೋಡಬಹುದು. ಹಾಗಂತ ಅದು ನಿಜವಾಗಿ ಸಂಭವಿಸಿದೆ ಎಂದರ್ಥವಲ್ಲ. ಅಲ್ಲಿ ನೆರಳು ಕಾಣುತ್ತಿದೆ. ಆದರೆ, ಪಾದದಿಂದ ನೆರಳು ಎಂದು ನಾನು ಭಾವಿಸುವುದಿಲ್ಲ. ಫೀಲ್ಡರ್​​ ತನ್ನ ಸಮತೋಲನ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿರುವಾಗ ಅದು ಕೈಗಳಿಂದ ಬಂದ ನೆರಳು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಕಾಲು ಟಚ್​ ಆದಂತಿದೆ ಎಂದ ನವಜೋತ್​ ಸಿಂಗ್​ ಸಿಧು

ಭಾರತದ ಮಾಜಿ ಕ್ರಿಕೆಟಿಗ ನವಜೋತ್​ ಸಿಂಗ್ ಸಿಧು (Navjot Singh Sidhu) ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸ್ಯಾಮ್ಸನ್ ಅವತ ಕ್ಯಾಚ್ ತೆಗೆದುಕೊಳ್ಳುವಾಗ ಹೋಪ್ ಹಗ್ಗವನ್ನು ಮುಟ್ಟಿದ್ದಾರೆ ಎಂದು ಹೇಳಿದ್ದಾರೆ. ಸಂಜು ಔಟಾದ ನಂತರ ಆಟವು ಬದಲಾಯಿತು. ನಾವು ಸೈಡ್-ಆನ್ ಫುಟ್‌ನಿಂದ ರಿಪ್ಲೇ ಅನ್ನು ನೋಡಿದರೆ ಎರಡು ಬಾರಿ ಬೌಂಡರಿ ಮುಟ್ಟುತ್ತದೆ. ಅದು ತುಂಬಾ ಸ್ಪಷ್ಟವಾಗಿ ಕಾಣುತ್ತದೆ. ಒಂದೋ ನೀವು ತಂತ್ರಜ್ಞಾನವನ್ನು ಸರಿಯಾಗಿ ಬಳಸುತ್ತಿಲ್ಲ. ಬಳಸಿದ್ದರೆ ಹೀಗಾಗುತ್ತಿರಲಿಲ್ಲ. ಹಾಗಂತ ಉದ್ದೇಶಪೂರ್ವಕವಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Whats_app_banner