ಡೆಲ್ಲಿ ಮಾಲೀಕ ಪಾರ್ಥ ಜಿಂದಾಲ್ ಅಪ್ರಬುದ್ಧ ನಡೆಗೆ ಫ್ಯಾನ್ಸ್​ ಛೀಮಾರಿ; ಡಿಸಿ ಫ್ಲೇಆಫ್ ಬರದಿರಲಿ ಎಂದ ನೆಟ್ಟಿಗರು
ಕನ್ನಡ ಸುದ್ದಿ  /  ಕ್ರಿಕೆಟ್  /  ಡೆಲ್ಲಿ ಮಾಲೀಕ ಪಾರ್ಥ ಜಿಂದಾಲ್ ಅಪ್ರಬುದ್ಧ ನಡೆಗೆ ಫ್ಯಾನ್ಸ್​ ಛೀಮಾರಿ; ಡಿಸಿ ಫ್ಲೇಆಫ್ ಬರದಿರಲಿ ಎಂದ ನೆಟ್ಟಿಗರು

ಡೆಲ್ಲಿ ಮಾಲೀಕ ಪಾರ್ಥ ಜಿಂದಾಲ್ ಅಪ್ರಬುದ್ಧ ನಡೆಗೆ ಫ್ಯಾನ್ಸ್​ ಛೀಮಾರಿ; ಡಿಸಿ ಫ್ಲೇಆಫ್ ಬರದಿರಲಿ ಎಂದ ನೆಟ್ಟಿಗರು

Parth Jindal: ವಿವಾದಾತ್ಮಕ ತೀರ್ಪಿನ ಕುರಿತು ಅಂಪೈರ್ಸ್ ಜೊತೆಗೆ ಸಂಜು ಸ್ಯಾಮ್ಸನ್ ವಾಗ್ವಾದ ನಡೆಸುತ್ತಿರುವಾಗ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ ಜಿಂದಾಲ್ ಜೋರಾಗಿ ಕೂಗುತ್ತಾ ಅಪ್ರಬುದ್ಧರಂತೆ ವರ್ತಿಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.

ಡೆಲ್ಲಿ ಮಾಲೀಕ ಪಾರ್ಥ ಜಿಂದಾಲ್ ಅಪ್ರಬುದ್ಧತೆ ನಡೆಗೆ ಫ್ಯಾನ್ಸ್​ ಛೀಮಾರಿ; ಡಿಸಿ ಫ್ಲೇಆಫ್ ಬರದಿರಲಿ ಎಂದ ನೆಟ್ಟಿಗರು
ಡೆಲ್ಲಿ ಮಾಲೀಕ ಪಾರ್ಥ ಜಿಂದಾಲ್ ಅಪ್ರಬುದ್ಧತೆ ನಡೆಗೆ ಫ್ಯಾನ್ಸ್​ ಛೀಮಾರಿ; ಡಿಸಿ ಫ್ಲೇಆಫ್ ಬರದಿರಲಿ ಎಂದ ನೆಟ್ಟಿಗರು

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (DC vs RR) ನಡುವಿನ ಪಂದ್ಯವು ವಿವಾದವೊಂದಕ್ಕೆ ಸಾಕ್ಷಿಯಾಗಿದೆ. ಆರ್​​ಆರ್​ ನಾಯಕ ಸಂಜು ಸ್ಯಾಮ್ಸನ್ (Sanju Samson)​ ಅವರ ವಿವಾದಾತ್ಮಕ ಕ್ಯಾಚ್​ ಭಾರಿ ಚರ್ಚೆಗೆ ಕಾರಣವಾಗಿದೆ. ಫೀಲ್ಡರ್​ ಹಿಡಿದ ಕ್ಯಾಚ್ ಬೌಂಡರಿ ಗೆರೆಗೆ ತಾಕಿದಂತೆ ಕಾಣುತ್ತಿದೆ. ಆದರೆ ಮೂರನೇ ಅಂಪೈರ್​​ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸದೆ ಔಟೆಂದು ತೀರ್ಪುಕೊಟ್ಟರು.

ಇದು ಸಂಜು ಆಕ್ರೋಶಕ್ಕೆ ಕಾರಣವಾಯಿತು. ವಿವಾದಾತ್ಮಕ ತೀರ್ಪಿನ ಕುರಿತು ಅಂಪೈರ್​​ಗಳೊಂದಿಗೆ ಕೆಲವೊತ್ತು ವಾಗ್ವಾದ ನಡೆಸಿದರು. ಬೌಂಡರಿ ಗೆರೆ ಕಾಲು ತಾಗಿದ್ದರೂ ಔಟ್ ನೀಡಿದ್ದಕ್ಕೆ ಸ್ಯಾಮ್ಸನ್ ಸಿಟ್ಟಾದರು. ಆದರೆ ಈ ವೇಳೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ ಜಿಂದಾಲ್ (Parth Jindal), ಅಪ್ರಬುದ್ಧತಯಿಂದ ವರ್ತಿಸಿದರು. ಇದಕ್ಕೆ ಕ್ರಿಕೆಟ್ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.

ಅಂಪೈರ್ಸ್ ಜೊತೆಗೆ ಸಂಜು ವಾಗ್ವಾದ

15.4ನೇ ಓವರ್​​ನಲ್ಲಿ ಮುಕೇಶ್​ ಕುಮಾರ್ (Mukesh Kumar)​ ಬೌಲಿಂಗ್​ನಲ್ಲಿ ಸಂಜು ಲಾಂಗ್​ ಆನ್ ಕಡೆಗೆ ಸಿಕ್ಸರ್​ ಬಾರಿಸಿಲು ಯತ್ನಿಸಿದರು. ಆದರೆ, ಬೌಂಡರಿ ಗೆರೆಯ ಬಳಿಯೇ ಇದ್ದ ಶಾಯ್​ ಹೋಪ್​ ಅಮೋಘವಾದ ಕ್ಯಾಚ್​ ಪಡೆದು ಸಂಭ್ರಮಿಸಿದರು. ಆದರೆ, ರಿಪ್ಲೇನಲ್ಲಿ ಶಾಯ್​ ಹೋಪ್ ಅವರ ಕಾಲು ಬೌಂಡರಿ ಗೆರೆಗೆ ತಾಗಿದಂತೆ ಕಾಣುತ್ತಿತ್ತು. ಹೀಗಾಗಿ ಸಂಜು ತನ್ನ ಮೌನವನ್ನು ಬದಿಗಿಟ್ಟು ಅಂಪೈರ್​​ ಜೊತೆಗೆ ವಾಗ್ವಾದ ನಡೆಸಿದರು.

ಕ್ಯಾಚ್​ ಬೆನ್ನಲ್ಲೇ ಸ್ಯಾಮ್ಸನ್ ಡಗೌಟ್‌ಗೆ ಹಿಂತಿರುಗಿದ್ದರು. ಮುಂದಿನ ಬ್ಯಾಟರ್ ಅದಾಗಲೇ ಮೈದಾನದಲ್ಲಿದ್ದಾಗಲೂ ಅವರು ಮತ್ತೆ ಮೈದಾನಗೊಳಗೆ ಹಿಂತಿರುಗಿದರು. ಅಂಪೈರ್​ ನಿರ್ಧಾರವನ್ನು ಕಂಡು ಆರ್‌ಆರ್‌ ಶಿಬಿರವೂ ದಿಗ್ಭ್ರಮೆಗೊಂಡಿತು. ಸ್ಯಾಮ್ಸನ್‌ ತಮ್ಮ ಭಾವನೆಗಳನ್ನು ಮರೆಮಾಚದೆ ಅಂಪೈರ್‌ ಜೊತೆ ಸುದೀರ್ಘ ವಾಗ್ವಾದಕ್ಕಿಳಿದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಪಾರ್ಥ ಜಿಂದಾಲ್ ಅಪ್ರಬುದ್ಧ ನಡೆ

ಘಟನೆಯ ಅತ್ಯಂತ ಗಮನಾರ್ಹ ಭಾಗವೆಂದರೆ ಕ್ಯಾಪಿಟಲ್ಸ್ ಮಾಲೀಕ ಪಾರ್ಥ ಜಿಂದಾಲ್ ಅವರ ಪ್ರತಿಕ್ರಿಯೆ. ಅವರು ಘಟನೆಯಲ್ಲಿ ಯಾವುದೇ ರಾಜತಾಂತ್ರಿಕತೆ ತೋರಿಸಲಿಲ್ಲ. ಆದರೆ ಸ್ಯಾಮ್ಸನ್‌ ಅಂಪರ್​​ ಜೊತೆಗೆ ಮಾತುಕತೆ ತೋರುತ್ತಿದ್ದಾಗ 'ಔಟ್ ಹೈ, ಔಟ್ ಹೈ' ಎಂದು ಜೋರಾಗಿ ಕೂಗುತ್ತಾ, ಅಪ್ರಬುದ್ಧರಾಗಿ ವರ್ತಿಸಿರುವುದು ಕಂಡುಬಂತು. ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಫ್ಯಾನ್ಸ್ ಆಕ್ರೋಶ

ಪಾರ್ಥ ಜಿಂದಾಲ್ ನಡೆಗೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಛೀಮಾರಿ ಹಾಕಿದ್ದಾರೆ. ಆರ್​ಆರ್ ತಂಡದ ಅಭಿಮಾನಿಗಳಂತೂ ಡೆಲ್ಲಿ ಪ್ಲೇಆಫ್​ಗೆ ಬರದಿರಲಿ ಎಂದು ಬಯಸುತ್ತಿದ್ದಾರೆ. ಸಂಜು ತನಗಾದ ಅನ್ಯಾಯಕ್ಕೆ ಅಂಪೈರ್​​ಗಳ ಜೊತೆ ವಾದ ಮಾಡುವ ಮೂಲಕ ನ್ಯಾಯ ಕೇಳುತ್ತಿದ್ದಾರೆ. ಆದರೆ ಒಬ್ಬ ಫ್ರಾಂಚೈಸಿ ಮಾಲೀಕರಾಗಿ ಹೀಗೆ ಒರಟಾಗಿ ವರ್ತಿಸಿರುವುದು ಸರಿಯಲ್ಲ ಎಂದು ಫ್ಯಾನ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.

ಸಂಜು ಸ್ಯಾಮ್ಸನ್​ಗೆ 30 ಲಕ್ಷ ದಂಡ

ವಿವಾದಾತ್ಮಕ ತೀರ್ಪಿನ ಬಗ್ಗೆ ಅಂಪೈರ್​​ಗಳ ಜೊತೆ ವಾದ ನಡೆಸಿದ್ದಕ್ಕೆ ಸಂಜುಗೆ ಬಿಸಿಸಿಐ ದಂಡ ವಿಧಿಸಿದೆ. ಐಪಿಎಲ್ ನಿಯಮ ಉಲ್ಲಂಘಿಸಿ ಅಂಪೈರ್​​ಗಳ ವಾಗ್ವಾದ ನಡೆಸಿದ್ದಕ್ಕೆ ಪಂದ್ಯದ ಸಂಭಾವನೆಯ ಶೇ.30ರಷ್ಟು ದಂಡ ಹಾಕಲಾಗಿದೆ.

ಪಂದ್ಯದ ಬಳಿಕ ಸಂಜು ಭೇಟಿಯಾದ ಪಾರ್ಥ ಜಿಂದಾಲ್

ಸಂಜು ಔಟಾದಾಗ ತುಂಬಾ ಒರಟಾಗಿ ವರ್ತಿಸಿದ್ದ ಡಿಸಿ ಮಾಲೀಕ ಪಾರ್ಥ ಜಿಂದಾಲ್, ಪಂದ್ಯದ ನಂತರ ಆತನನ್ನು ಭೇಟಿಯಾಗಿದ್ದಾರೆ. ಅಲ್ಲದೆ, ಆತ್ಮೀಯವಾಗಿ ಮಾತನಾಡಿ ಗಮನ ಸೆಳೆದಿದ್ದಾರೆ. ಕೆಲಹೊತ್ತು ಅವರೊಂದು ಮಾತುಕತೆ ನಡೆಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

Whats_app_banner