ಕನ್ನಡ ಸುದ್ದಿ  /  ಕರ್ನಾಟಕ  /  Mango Yield: ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ತಾಪಮಾನ ಹೆಚ್ಚಳ; ಮಾವಿನ ಇಳುವರಿಗೆ ಬಾರಿ ಹೊಡೆತ

Mango Yield: ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ತಾಪಮಾನ ಹೆಚ್ಚಳ; ಮಾವಿನ ಇಳುವರಿಗೆ ಬಾರಿ ಹೊಡೆತ

ಕರ್ನಾಟಕದಲ್ಲಿ ಮಳೆ ಕೊರತೆ ಹಾಗೂ ತೀವ್ರ ತಾಪಮಾನ ಹೆಚ್ಚಳ ಈ ಬಾರಿ ಕರ್ನಾಟಕದಲ್ಲಿ ಮಾವಿನ ಇಳುವರಿಗೆ ಹೊಡೆತ ನೀಡಿದೆ. ಇದು ಬೆಲೆ ಹೆಚ್ಚಳಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ತಾಪಮಾನ ಹೆಚ್ಚಳ ಕರ್ನಾಟಕದಲ್ಲಿ ಮಾವಿನ ಇಳುವರಿ ಮೇಲೆ ಪರಿಣಾಮ ಬೀರಿದೆ.
ತಾಪಮಾನ ಹೆಚ್ಚಳ ಕರ್ನಾಟಕದಲ್ಲಿ ಮಾವಿನ ಇಳುವರಿ ಮೇಲೆ ಪರಿಣಾಮ ಬೀರಿದೆ.

ಬೆಂಗಳೂರು: ಸಾಮಾನ್ಯವಾಗಿ ಮಾವು ಬೆಳೆಯಲು (Mango Crop) ಮಳೆಯ ಜೊತೆಗೆ ಬಿಸಿಲು (Rain and Heat) ಬೇಕಾಗುತ್ತದೆ. ಬಿಸಿಯ ವಾತಾವರಣ ಮಾವು ಬೇಗ ಹಣ್ಣಾಗಲು ಸೂಕ್ತ ಸಮಯವಾಗಿದೆ. ಆದರೆ ಈ ವರ್ಷ ಹವಾಮಾನ ಬದಲಾವಣೆಯಿಂದ ಮಾವು ಬೆಳೆಯ ಮೇಲೆ ಭಾರಿ ಪರಿಣಾಮ ಬೀರಿದೆ. ತಾಪಮಾನ ಹೆಚ್ಚಾಗಿರುವುದರಿಂದ ಮಾವಿನ ಇಳುವರಿಗೆ (Mango Yield) ದೊಡ್ಡ ಹೊಡೆತ ನೀಡಿದೆ. ಈ ವರ್ಷ ವಾಡಿಕೆಗಿಂತ ಶೇಕಡಾ 30 ರಷ್ಟು ಮಾತ್ರ ಇಳುವರಿ ಬಂದಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಅಂದರೆ ಬರೋಬ್ಬರಿ ಶೇಕಡಾ 70 ರಷ್ಟು ಇಳುವರಿ ಕುಂಠಿತವಾಗಿದೆ. ಇದು ಮಾವಿನ ಹಣ್ಣಿನ ಬೆಲೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಟ್ರೆಂಡಿಂಗ್​ ಸುದ್ದಿ

ಮಾವಿನ ಇಳುವರಿ ವಾಡಿಕೆಗಿಂತ ಕಡಿಮೆಯಾಗಿರುವ ಬಗ್ಗೆ ಮಾತನಾಡಿರುವ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ (ಕೆಎಸ್‌ಎಂಡಿಎಂಸಿಎಲ್) ಅಧಿಕಾರಿಗಳು, ರಾಜ್ಯದಲ್ಲಿ 1.49 ಲಕ್ಷ ಹೆಕ್ಟೇರ್ ಮಾವು ಬೆಳೆಯುವ ಪ್ರದೇಶದಲ್ಲಿ ಇಳುವರಿ 12 ರಿಂದ 15 ಲಕ್ಷ ಮೆಟ್ರಿಕ್ ಟನ್‌ ಆಗಿದೆ. ಆದರೆ ಈ ವರ್ಷ ಎಲ್ಲಾ ಬೆಳೆಗಳಲ್ಲಿ ಕೇವಲ 5 ಲಕ್ಷ ಮೆಟ್ರಿಕ್ ಟನ್ ಮಾವು ಉತ್ಪಾದನೆಯಾಗಿದೆ ಎಂದು ಹೇಳಿದ್ದಾರೆ. ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಇದೇ ಪರಿಸ್ಥಿತಿ ಇದೆ ಎಂದಿದ್ದಾರೆ.

ಈ ವರ್ಷ ಮಾವಿನ ಹೂ ಚೆನ್ನನಾಗಿತ್ತು. ಹೀಗಾಗಿ ನಾವು ಆನ್-ಇಯರ್ (ಬೆಳೆ ಇಳುವರಿ ಬಂದಿರುವ ಉತ್ತಮ ವರ್ಷ) ಎಂದು ಭಾವಿಸಿದ್ದೇವು. ಆದರೆ ಕರ್ನಾಟಕದಲ್ಲಿ ಈ ಬಾರಿ ಎಲ್ಲಾ ತಳಿಗಳಿಂದ ಶೇಕಡಾ 30 ರಷ್ಟು ಮಾತ್ರ ಮಾವಿನ ಇಳುವರಿ ಬಂದಿದೆ ಎಂದು ಕೆಎಸ್‌ಎಂಡಿಎಂಸಿಎಲ್ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ ನಾಗರಾಜು ತಿಳಿಸಿದ್ದಾರೆ. ಇಳುವರಿ ಕುಸಿತಕ್ಕೆ ಕಾರಣವನ್ನು ತಿಳಿಯಲು ಹೊರಟಾಗ ಹವಾಮಾನ ಪರಿಸ್ಥಿತಿಗಳು ಇದಕ್ಕೆ ಪ್ರಮುಖ ಕಾರಣ ಎಂಬುದನ್ನು ಗೊತ್ತಾಗಿದೆ. ಈ ಭಾರಿ ಶಾಖಾಘಾತದಿಂದ ಈ ಬದಲಾವಣೆಗಳನ್ನು ಗುರುತಿಸಲಾಗಿದೆ. ಬಿಸಿ ಫ್ರುಟಿಂಗ್ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.

ಮಾವಿನ ಹಣ್ಣು ಮಾರುಕಟ್ಟೆಗೆ ಬಂದರೂ ಖರೀದಿಗೆ ಮನಸು ಮಾಡದ ಗ್ರಾಹಕ

ವಿವಿಧ ಬಗೆಯ ಮಾವು ಈಗಾಗಲೇ ಮಾರುಕಟ್ಟೆಗೆ ಪ್ರವೇಶಿಸಿದೆ. ಅಲ್ಫಾನ್ಸೊ, ಸಿಂಧೂರ, ರಸಪುರಿ, ಕೇಸರಿ ಸೇರಿದಂತೆ ಹಲವು ಹಣ್ಣುಗಳು ಮಾರ್ಕೆಟ್‌ಗೆ ಬಂದಿದ್ದರೂ ಖರೀದಿಸುವವರ ಸಂಖ್ಯೆ ಮಾತ್ರ ಕಡಿಮೆ ಇದೆ. ನೀರು ಹಾಗೂ ಬಿಸಿಯ ಹೊಡೆತದಿಂದಾಗಿ ಹಣ್ಣುಗಳು ಕಡಿಮೆ ಪೌಷ್ಠಿಕಾಂಶ ಪೂರೈಕೆಯ ಪರಿಣಾಮ ಬೀರಲಿದೆ. ಎಲ್ಲಾ ಬೆಳವಣಿಗೆಗಳನ್ನು ನೋಡಿದಾಗ ಮಾರಾಟದ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದು ಸದ್ಯದ ಮಟ್ಟಿಗೆ ಇರುವ ಕುತೂಹಲ. ತ್ವರಿತ ಪರಿಹಾರ ಎಂಬಂತೆ ರೈತರ ಮಾವಿನ ಬೆಳೆಗೆ ನೀರು ಪೂರೈಸುವ ಮೂಲಕ ಬೆಳೆ ಸುಧಾರಣೆಗೆ ಪ್ರಯತ್ನಿಸಬಹುದು. ಇದು ಅಲ್ಪ ಮಟ್ಟಿಗೆ ಯಶಸ್ಸು ನೀಡುವ ಬಹಳಷ್ಟು ಸಾಧ್ಯತೆ ಇರುತ್ತದೆ ಎಂದು ತಜ್ಞರು ಹೇಳುತ್ತಾರೆ.

ರಾಮನಗರ, ಉತ್ತರ ಕರ್ನಾಟಕ ಭಾಗದ ಕೆಲವು ಕಡೆಗಳಿಂದ ಈಗಾಗಲೇ ಮಾರುಕಟ್ಟೆಗೆ ಮಾವು ಬಂದಿದೆ. ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು ಸೇರಿದಂತೆ ಇತರೆ ಭಾಗದದಿಂದ ಮುಂದಿನ ವಾರದೊಳಗೆ ಮಾವು ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ಅವಧಿಯಲ್ಲಿ ಮಾನವಿ ಕೊಯ್ಲು ಆರಂಭವಾಗುತ್ತದೆ. ನೈಸರ್ಗಿಕವಾಗಿ ಮಾಗಿದ ಮಾವಿನ ಹಣ್ಣು ಸೇವಿಸುವುದರಿಂದ ಹಲವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

IPL_Entry_Point