Mango Time: ಮಾರುಕಟ್ಟೆಗೆ ಬಂತು ಬಗೆಬಗೆಯ ಮಾವು, ಇನ್ನು ಮಲಗೋಬ, ಬಾದಾಮಿ, ರಸಪೂರಿ ಕಾಲ photos
- ಮಾವಿನ ಸಮಯ ಮಾರ್ಚ್ ಮುಗಿದು ಏಪ್ರಿಲ್ ಬರುತ್ತಿದ್ದಂತೆ ಕರ್ನಾಟಕದಲ್ಲಿ ಮಾವಿನ ಹಣ್ಣಿನ ಸಮಯ. ಬಗೆಬಗೆಯ ಮಾವಿನ ಹಣ್ಣಿನ ಪರಿಮಳ ಮೂಗಿನೊಂದಿಗೆ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವಿನ ಖುಷಿ. ಮನೆಯಲ್ಲಿ ಮಾವಿನದ್ದೇ ಸವಿ. ಈ ಕುರಿತು ಚಿತ್ರ ನೋಟ ಇಲ್ಲಿದೆ.
- ಮಾವಿನ ಸಮಯ ಮಾರ್ಚ್ ಮುಗಿದು ಏಪ್ರಿಲ್ ಬರುತ್ತಿದ್ದಂತೆ ಕರ್ನಾಟಕದಲ್ಲಿ ಮಾವಿನ ಹಣ್ಣಿನ ಸಮಯ. ಬಗೆಬಗೆಯ ಮಾವಿನ ಹಣ್ಣಿನ ಪರಿಮಳ ಮೂಗಿನೊಂದಿಗೆ ಮನಸ್ಸನ್ನು ಆವರಿಸಿಕೊಳ್ಳುತ್ತದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ಮಾವಿನ ಖುಷಿ. ಮನೆಯಲ್ಲಿ ಮಾವಿನದ್ದೇ ಸವಿ. ಈ ಕುರಿತು ಚಿತ್ರ ನೋಟ ಇಲ್ಲಿದೆ.
(1 / 9)
ಮಾವು ಎಂದರೆ ಎಂತವರ ಬಾಯಲ್ಲಿ ನೀರೂರುತ್ತದೆ. ಅದು ಮಾವಿನ ಕಾಯಿ ಆದರಂತೂ ಕತ್ತರಿಸಿ ಉಪ್ಪು ಕಾರ ಹಾಕಿಕೊಂಡು ತಿಂದರೆ ಅಬ್ಬಾ ಅದರ ಖುಷಿಯೇ ಬೇರೆ. ಈ ಬಾರಿಯ ಮಾವಿನ ಕಾಯಿಯನ್ನು ಸವಿಯುವ ಕ್ಷಣಗಳೂ ಈಗಾಗಲೇ ಶುರುವಾಗಿವೆ.
(2 / 9)
ಧ್ಯಕಾಲೀನ ಭಾರತದಲ್ಲಿ ಹೆಚ್ಚಾಗಿ ಮಹಮ್ಮದೀಯರಿಂದ ಮತ್ತು ನಾಡವರಿಂದಕಸಿಯಾಗಿ ಬಗೆಬಗೆ ರುಚಿಕರ, ಪರಿಮಳ ಭರಿತ, ಸಿಹಿಯಾದ ಮಾವಿನಹಣ್ಣುಗಳು ನಮಗೆ ಬಂದಿತು. ಬಾಶಾ ಪಸಂದ್, ಕಾಲಾ ಪಹಡ್, ಮಲಗೋಬ, ತೋತಾಪುರಿ, ನೀಲಂ, ರಸಪುರಿ, ಬಾದಾಮಿ, ಕೇಸರ್, ಮಲ್ಲಿಕಾ, ಬಂಗನಪಲ್ಲಿ , ಎರ್ರಮೂತಿ, ಸಕ್ಕರಗುತ್ತಿ ಮುಂತಾದ ಹೆಸರಿನ ಮಾವಿನ ಹಣ್ಣುಗಳು ತುಂಬಾ ಆಕರ್ಷಕವಾದುವು.
(3 / 9)
ಕರ್ನಾಟಕವೂ ದೇಶದಲ್ಲಿ ಮಾವಿನ ಹಣ್ಣು ಬೆಳೆಯುವಲ್ಲಿ ಮೂರು ಇಲ್ಲವೇ ನಾಲ್ಕನೇ ಸ್ಥಾನದಲ್ಲಿ ನಿಲ್ಲುತ್ತದೆ. ಉತ್ತರ ಪ್ರದೇಶ. ಆಂಧ್ರಪ್ರದೇಶ, ಬಿಹಾರ ರಾಜ್ಯಗಳು ಕೂಡ ಉತ್ತಮ ಮಾವಿನ ಹಣ್ಣು ಬೆಳೆಯುತ್ತವೆ.
(4 / 9)
ಕರ್ನಾಟಕದಲ್ಲ ಹತ್ತಕ್ಖೂ ಹೆಚ್ಚು ತಳಿಯ ಮಾವಿನ ಹಣ್ಣು ಬೆಳೆಯಲಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ನಾಲ್ಕೈದು ತಳಿಯ ಮಾವಿನ ಹಣ್ಣು ಸಿಗುತ್ತದೆ.
(5 / 9)
ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಜಿಲ್ಲೆಗಳಲ್ಲಿ ಮಾವಿನ ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈಗಾಗಲೇ ಕೋಲಾರ ಭಾಗದ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
(6 / 9)
ಉತ್ತರ ಕರ್ನಾಟಕ ಭಾಗದಲ್ಲಿ ಮಹಾರಾಷ್ಟ್ರ ಭಾಗದಿಂದಲೇ ಹೆಚ್ಚಿನ ಹಣ್ಣು ರವಾನೆಯಾಗುತ್ತದೆ. ಡಜನ್. ಕೆಜಿ ಲೆಕ್ಕದಲ್ಲಿ ಹಣ್ಣನ್ನು ಮಾರಾಟ ಮಾಡಲಾಗುತ್ತದೆ.
(7 / 9)
ಮಾವಿನ ಹಣ್ಣು ಬಂದ ತಕ್ಷಣವೇ ಅದನ್ನು ಕತ್ತರಿಸಿ ಸವಿ ನೋಡುವುದು ಚಂದ. ಮನೆಯವರೆಲ್ಲಾ ಕುಳಿತು ಹಣ್ಣು ಸವಿಯುವುದು ಈಗ ಸಾಮಾನ್ಯ.
(8 / 9)
ಮಾವಿನ ಹಣ್ಣನ್ನು ಮನೆಗಳಲ್ಲಿ ನಾನಾ ರೂಪದಲ್ಲಿ ಬಳಸಲಾಗುತ್ತದೆ. ಕೆಲವರು ಹಣ್ಣು ನೇರವಾಗಿ ತಿಂದರೆ, ಜ್ಯೂಸ್ ಕೂಡ ತಯಾರಿಸುತ್ತಾರೆ.
ಇತರ ಗ್ಯಾಲರಿಗಳು