ಕನ್ನಡ ಸುದ್ದಿ  /  Karnataka  /  Union Minister Amit Shah S Visit Creates Excitement In Kittur Karnataka Says Cm Bommai

CM Bommai on Amit shah visit: ಕೇಂದ್ರ ಸಚಿವ ಅಮಿತ್ ಶಾ ಭೇಟಿಯಿಂದ ಕಿತ್ತೂರು ಕರ್ನಾಟಕದಲ್ಲಿ ಸಂಚಲನ: ಸಿಎಂ ಬೊಮ್ಮಾಯಿ

ಕಿತ್ತೂರು ಕರ್ನಾಟಕ ಭಾರತೀಯ ಜನತಾ ಪಕ್ಷದ ಭದ್ರಕೋಟೆ. ಅಮಿತ್ ಶಾ ಅವರು ಸಮಗ್ರ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

63ನೇ ವಸಂತಕ್ಕೆ ಕಾಲಿಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಯಲ್ಲಿ ಹುಟ್ಟುಹಬ್ಬದ ಶುಭ ಕೋರಿದರು.
63ನೇ ವಸಂತಕ್ಕೆ ಕಾಲಿಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಯಲ್ಲಿ ಹುಟ್ಟುಹಬ್ಬದ ಶುಭ ಕೋರಿದರು.

ಹುಬ್ಬಳ್ಳಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದು, ಕಿತ್ತೂರು ಕರ್ನಾಟಕದಲ್ಲಿ ಒಂದು ರೀತಿಯ ಸಂಚಲನವಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಫ್ ಎಸ್ ಎಲ್ ಲ್ಯಾಬ್ ಅಡಿಗಲ್ಲು ಕೆ.ಎಲ್.ಇ ಸೊಸೈಟಿ ಬಿವಿಬಿಯ 75ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದು, ಧಾರವಾಡ ಜಿಲ್ಲೆಯ ಬೂತ್ ಮಟ್ಟದ ವಿಜಯ ಸಂಕಲ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಎಂ.ಕೆ ಹೋಬಳಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ನಡೆಯಲಿದೆ. ಮಂಡಲದ ಮೇಲೆ ಇರುವ ಪದಾಧಿಕಾರಿಗಳ ಜೊತೆ ಚರ್ಚೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಕರ್ನಾಟಕದಲ್ಲಿ ರಾಷ್ಟ್ರೀಯ ನಾಯಕರ ಪ್ರಭಾವ

ಕಿತ್ತೂರು ಕರ್ನಾಟಕ ಭಾರತೀಯ ಜನತಾ ಪಕ್ಷದ ಭದ್ರಕೋಟೆ. ಅಮಿತ್ ಶಾ ಅವರು ಸಮಗ್ರ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಂಡ್ಯಕ್ಕೆ ಬಂದು ಹೋಗಿದ್ದರು, ಈಗ ಕಿತ್ತೂರು ಕರ್ನಾಟಕ , ಮುಂದಿನ ತಿಂಗಳು ಹೈದರಾಬಾದ್ ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ. ನಮ್ಮ ಪಕ್ಷ, ಪಕ್ಷದ ಸಂಘಟನೆ ನಿರಂತರವಾಗಿ ನಡೆಯಲಿದೆ. ಕೇಂದ್ರ ಹಾಗೂ ರಾಜ್ಯದ ಯೋಜನೆಗಳ ಪ್ರಗತಿ ಉದ್ಘಾಟನೆ, ಶಿಲಾನ್ಯಾಸ ಕಾರ್ಯಕ್ರಮಗಳು ನಡೆಯುತ್ತಿವೆ. ರಾಷ್ಟ್ರೀಯ ನಾಯಕರ ಪ್ರಭಾವ ಕರ್ನಾಟಕದ ರಾಜಕಾರಣದಲ್ಲಿ ಆಗುತ್ತಿದೆ. ಪಕ್ಷ ಅದರ ಬಳಕೆ ಮಾಡುತ್ತಿದೆ ಎಂದರೂ

ಪಕ್ಷದಲ್ಲಿ ಯಾವ ಭಿನ್ನಮತವಿಲ್ಲ

ಪಕ್ಷದಲ್ಲಿ ಯಾವ ಭಿನ್ನಮತವೂ ಇಲ್ಲ. ಅಂಥದ್ದು ಎಲ್ಲಿಯೂ ಅಭಿವ್ಯಕ್ತವಾಗಿಲ್ಲ. ಪಕ್ಷದ ಬೆಳವಣಿಗೆ ಮುಖ್ಯ. ಎಲ್ಲರೂ ಅದಕ್ಕೇ ಶ್ರಮಿಸಬೇಕು. ಬೆಳಗಾವಿ, ಧಾರವಾಡ, ಕಿತ್ತೂರು ಕರ್ನಾಟಕ, ಹೈದರಾಬಾದ್ ಕರ್ನಾಟಕ, ದಕ್ಷಿಣ ಕರ್ನಾಟಕಕ್ಕೆ ಒಂದು ಗುರಿಯಿದೆ. ಗುರಿ ಸಾಧನೆಗಾಗಿ ಈ ಸಂಘಟನೆ ಮಾಡುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.

ಡಿಕೆಶಿಗೆ ಬಿಜೆಪಿ ಸಿಂಹಸ್ವಪ್ನ

ಡಿ.ಕೆ.ಶಿವಕುಮಾರ್ ಅವರಿಗೆ ಬಿಜೆಪಿ ಸಿಂಹಸ್ವಪ್ನವಾಗಿದೆ. ಹೀಗಾಗಿ ಕನಸಿನಲ್ಲೂ ಬಿಜೆಪಿ ಕಾಣುತ್ತಾರೆ ಎಂದರು.

ಧಾರವಾಡ ಕಾರ್ಯಕ್ರಮದ ಸ್ಥಳ ದಿಢೀರ್ ಬದಲಾವಣೆ

ಧಾರವಾಡ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆಯಾಗಿದೆ. ಕ್ಯಾಂಪಸ್ ಭೂಮಿ ಪೂಜೆ ಬಳಿಕ ವೇದಿಕೆ‌‌ ಕಾರ್ಯಕ್ರಮವನ್ನು ರೈತ ಜ್ಞಾನಾಭಿವೃದ್ಧಿ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಇದಕ್ಕೂ ಮೊದಲು ವೇದಿಕೆ ಕಾರ್ಯಕ್ರಮ ಕೃಷಿ ವಿವಿ ಮೈದಾನದಲ್ಲಿ ಆಯೋಜಿಸಲಾಗಿತ್ತು. ಈಗ ಏಕಾಏಕಿ ರೈತ ಜ್ಞಾನಾಭಿವೃದ್ಧಿ ಕೇಂದ್ರಕ್ಕೆ ಶಿಫ್ಟ್ ಮಾಡಿದ್ದು, ಅಲ್ಲಿ 1,350 ಜನರಿಗೆ ಮಾತ್ರ ಅವಕಾಶ ಸಿಗಲಿದೆ. ಸಿಆರ್​​ಪಿಎಫ್ ತಂಡ ಸ್ಥಳಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲನೆ ನಡೆಸಿದೆ.

ಎಂದಿನಂತೆ ಕೆಲಸ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು 63ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬವನ್ನು ಸಿಎಂ ವಿಶೇಷವಾಗಿ ಆಚರಿಸಿಕೊಳ್ಳುತ್ತಿಲ್ಲ. ಎಂದಿನಂತೆ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದಾರೆ. ಪ್ರತಿನಿತ್ಯ ಮಾಡುವಂತೆಯೇ ಕೆಲಸ ಮಾಡುತ್ತಿರುವುದಾಗಿ ಮುಖ್ಯ ಮಂತ್ರಿಗಳು ತಿಳಿಸಿದ್ದಾರೆ.

IPL_Entry_Point