ಕನ್ನಡ ಸುದ್ದಿ  /  ಜೀವನಶೈಲಿ  /  ಧನಾತ್ಮಕ ಭಾವನೆಯಿಂದ ಸುಖ, ಶಾಂತಿಯವರೆಗೆ; ತುಳಸಿ ಗಿಡದ ಬಳಿ ಪ್ರತಿದಿನ ದೀಪ ಹಚ್ಚಿಡಲು ಈ 5 ಕಾರಣಗಳು ಸಾಕಲ್ಲವೇ

ಧನಾತ್ಮಕ ಭಾವನೆಯಿಂದ ಸುಖ, ಶಾಂತಿಯವರೆಗೆ; ತುಳಸಿ ಗಿಡದ ಬಳಿ ಪ್ರತಿದಿನ ದೀಪ ಹಚ್ಚಿಡಲು ಈ 5 ಕಾರಣಗಳು ಸಾಕಲ್ಲವೇ

ತುಳಸಿ ಗಿಡವನ್ನು ಮಂಗಳಕರವೆಂದು ಪೂಜಿಸಲಾಗುತ್ತದೆ. ಇದು ಧನಾತ್ಮಕ ಭಾವನೆಯನ್ನು ಹೆಚ್ಚಿಸಿ, ಮನೆಯಲ್ಲಿ ಆರೋಗ್ಯ, ಸುಖ–ಶಾಂತಿ ನೆಲೆಸುವಂತೆ ಮಾಡುತ್ತದೆ ಎಂದು ನಂಬಲಾಗಿದೆ. ಪ್ರತಿನಿತ್ಯ ತುಳಸಿ ಗಿಡದ ಬಳಿ ದೀಪ ಹಚ್ಚಲು ಕಾರಣಗಳೇನು? ಇಲ್ಲಿದೆ ಓದಿ. (ವರದಿ: ಅರ್ಚನಾ)

ತುಳಗಿ ಗಿಡದ ಬಳಿ ದೀಪ ಹಚ್ಚುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ.
ತುಳಗಿ ಗಿಡದ ಬಳಿ ದೀಪ ಹಚ್ಚುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ.

ನೀವು ಹಿಂದೂಗಳ ಯಾವುದೇ ಮನೆಗೆ ಹೋಗಿ, ಅಲ್ಲಿ ತುಳಸಿ ಗಿಡವನ್ನು ಖಂಡಿತವಾಗಿ ನೋಡಿರುತ್ತೀರಿ. ಹಿಂದೂಗಳು ಅಷ್ಟು ಪ್ರಾಮುಖ್ಯತೆಯನ್ನು ತುಳಸಿ ಗಿಡಕ್ಕೆ (Tulsi Plant) ನೀಡುತ್ತಾರೆ. ವೃಂದಾ ಎಂದೂ ಕರೆಯುವ ತುಳಸಿಯನ್ನು ಪೂಜನೀಯ ಎಂದು ನಂಬಲಾಗಿದೆ. ತುಳಸಿ ಗಿಡವು ಲಕ್ಷ್ಮೀ ದೇವಿಯ ಮತ್ತೊಂದು ರೂಪ ಎಂಬ ನಂಬಿಕೆಯಿದೆ. ತುಳಸಿಯನ್ನು ದೇವಲೋಕದ ಸಸ್ಯ ಎಂದು ಕರೆಯಲಾಗುತ್ತದೆ. ತುಳಸಿ ದೇವಿಯು ಸಸ್ಯದ ರೂಪದಲ್ಲಿ ಭೂಮಿಯ ಮೇಲೆ ನೆಲೆಸಿದ್ದಾಳೆ ಎಂಬ ನಂಬಿಕೆಯಿದೆ. ತುಳಸಿಯು ಮಹಾ ವಿಷ್ಣುವಿನ ಪತ್ನಿಯಾಗಿದ್ದಾಳೆ ಮತ್ತು ಲಕ್ಷ್ಮೀ ದೇವಿಯ ಅವತಾರವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಜೊತೆಗೆ ತುಳಸಿಯು ಉತ್ತಮ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ. ಇದರಲ್ಲಿ ಅನೇಕ ರೋಗಗಳನ್ನು ಗುಣಪಡಿಸಬಹುದಾದ ಗುಣಲಕ್ಷಣಗಳಿವೆ.

ಟ್ರೆಂಡಿಂಗ್​ ಸುದ್ದಿ

ತುಳಸಿ ಗಿಡ ಮನೆಯಲ್ಲಿದ್ದರೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಆರೋಗ್ಯ, ಸುಖ–ಶಾಂತಿ ನೆಲೆಸುತ್ತವೆ. ಪ್ರತಿನಿತ್ಯ ತುಳಸಿ ಗಿಡದ ಬಳಿ ದೀಪ ಹಚ್ಚಿಡುವುದನ್ನು ನೀವು ನೋಡಿರಬಹುದು. ಹಾಗೆ ದೀಪವಿಡಲು ಕಾರಣವೇನು? ಅದರಿಂದ ಸಿಗುವ ಲಾಭವೇನು? ಎಂಬುದರ ಬಗ್ಗೆ ಇಲ್ಲಿ ತಿಳಿಯಿರಿ.

ತುಳಸಿ ಗಿಡದ ಬಳಿ ಪ್ರತಿದಿನ ದೀಪ ಇಡುವುದರಿಂದ ಸಿಗುವ ಲಾಭಗಳು

  • ತುಳಸಿ ಮಾತೆಯ ಆಶೀರ್ವಾದ ದೊರೆಯುತ್ತದೆ

ವಿಷ್ಣುವಿನ ಪತ್ನಿಯೂ ಆಗಿರುವ ತುಳಸಿಯು ಲಕ್ಷ್ಮೀ ದೇವಿಯ ಇನ್ನೊಂದು ರೂಪ ಎಂದು ಹೇಳಲಾಗುತ್ತದೆ. ಹಾಗಾಗಿ ಪ್ರತಿದಿನ ತುಳಸಿ ಗಿಡದ ಬಳಿ ದೀಪ ಹಚ್ಚುವುದರಿಂದ ಅವಳ ಆಶೀರ್ವಾದ ಪಡೆದುಕೊಳ್ಳಬಹುದಾಗಿದೆ. ಇದು ಮನೆಯಲ್ಲಿರು ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಧನಾತ್ಮಕ ಶಕ್ತಿ ತುಂಬುವಂತೆ ಮಾಡುತ್ತದೆ. ಇದು ಭಕ್ತಿಯ ಸಂಕೇತವಾದ್ದರಿಂದ ಮನೆಗೆ ಒಳ್ಳೆಯದನ್ನೇ ಮಾಡುತ್ತದೆ ಎಂಬ ನಂಬಿಕೆಯಿದೆ.

  • ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುತ್ತದೆ

ತುಳಸಿ ಗಿಡದ ಬಳಿ ದೀಪ ಹಚ್ಚಿಡುವುದರಿಂದ ಸುತ್ತಲಿನ ಪರಿಸರವು ಸ್ವಚ್ಛವಾಗಿರುತ್ತದೆ. ತುಳಸಿ ಗಿಡವು ವಾತಾವರಣದಲ್ಲಿರುವ ಕಾರ್ಬನ್‌ ಡೈ ಆಕ್ಸೈಡ್‌ನಂತಹ ವಿಷಕಾರಿ ಅನಿಲಗಳನ್ನು ಹೀರಿಕೊಳ್ಳುತ್ತದೆ ಈ ಮೂಲಕ ಅದು ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುತ್ತದೆ.

  • ಆಹ್ಲಾದಕರ ಪರಿಮಳ ಸೂಸುತ್ತೆ

ತುಳಸಿ ಗಿಡದ ಬಳಿ ಹಚ್ಚುವ ತುಪ್ಪದ ದೀಪವು ಸುಗಂಧವನ್ನು ಹೊರಸೂಸುತ್ತದೆ. ಇದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. ತುಪ್ಪದ ದೀಪದಿಂದ ಹೊರ ಹೊಮ್ಮುವ ಪರಿಮಳವು ಸುತ್ತಲಿನ ವಾತಾವರಣದಲ್ಲಿ ಸೇರುತ್ತದೆ. ಇದರಿಂದ ಆ ಪರಿಸರವು ಹೆಚ್ಚು ಪ್ರಶಾಂತವಾಗಿರುತ್ತದೆ. ತುಳಸಿ ಗಿಡದ ಬಳಿ ತುಪ್ಪದ ದೀಪವನ್ನು ಹಚ್ಚುವುದು ಉತ್ತಮ ಸಂಸ್ಕೃತಿಯೂ ಆಗಿದೆ.

  • ಕೀಟಗಳನ್ನು ದೂರ ಮಾಡುತ್ತೆ

ದೀಪ ಅಥವಾ ಜ್ಯೋತಿ ಅನ್ನುವುದು ಹಿಂದೂಗಳಲ್ಲಿ ಜ್ಞಾನದ ಸಂಕೇತವಾಗಿದೆ. ಇದು ಜೀವನದಲ್ಲಿರುವ ಕತ್ತಲೆಯನ್ನು ಹೋಗಲಾಡಿಸಿ, ಪರಿಶುದ್ಧರನ್ನಾಗಿಸುತ್ತದೆ. ಅಷ್ಟೇ ಅಲ್ಲದೇ ತುಪ್ಪದ ದೀಪದಿಂದ ಹೊರಹೊಮ್ಮುವ ಬೆಳಕು ಮತ್ತು ಪರಿಮಳವು ಅನೇಕ ಹುಳ, ಕೀಟಗಳಿಂದ ರಕ್ಷಣೆ ಒದಗಿಸುತ್ತದೆ.

  • ಕತ್ತಲೆಯನ್ನು ಹೋಗಲಾಡಿಸುತ್ತದೆ

ದೀಪವು ಜೀವನದಲ್ಲಿ ತುಂಬಿರುವ ಕತ್ತಲೆ ಮತ್ತು ನಿರಾಶೆಯನ್ನು ಹೋಗಲಾಡಿಸುವ ಸಂಕೇತವಾಗಿದೆ. ಇದು ಜೀವನದಲ್ಲಿ ತುಂಬಿರುವ ಕತ್ತಲೆಯನ್ನು ಹೋಗಲಾಡಿಸಿ, ಯಶಸ್ಸಿನ ಮಾರ್ಗದತ್ತ ಕೊಂಡೊಯ್ಯುವುದರ ಸಂಕೇತವಾಗಿದೆ. ಆಧ್ಯಾತ್ಮದ ಪ್ರಕಾರವೂ ದೀಪವು ಕತ್ತಲೆಯಿಂದ ಬೆಳಕಿನಡೆಗೆ ಕರೆದುಕೊಂಡು ಹೋಗುವ ಸಾಧನವಾಗಿದೆ. ಹಾಗಾಗಿಯೇ ಸಂಜೆಯಾಗುತ್ತಿದ್ದಂತೆ ತುಳಸಿ ಗಿಡದ ಬಳಿ ದೀಪ ಹಚ್ಚಲಾಗುತ್ತದೆ. ತುಳಸಿಯಲ್ಲಿ ನಾನಾ ರೀತಿಯ ಔಷಧೀಯ ಗುಣಗಳು ಇರುವುದರಿಂದ ಮನೆ ಮದ್ದಿಗೆ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. (ವರದಿ: ಅರ್ಚನಾ)