ಕನ್ನಡ ಸುದ್ದಿ  /  Lifestyle  /  Summer And Sharbat: Drinking Sherbet To Quench Your Summer Thirst? This Has Both Advantages And Disadvantages!

summer and sharbat: ಬೇಸಿಗೆಯ ದಾಹ ನೀಗಿಸಲು ಶರಬತ್ತು ಕುಡಿಯುತ್ತೀರಾ? ಇದರಿಂದ ಅನುಕೂಲ, ಅನಾನುಕೂಲ ಎರಡೂ ಇದೆ!

summer and sharbat: ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿದ ಶರಬತ್ತು ದೇಹದ ತಾಪವನ್ನು ನಿವಾರಿಸುತ್ತದೆ. ಇದು ನೈಸರ್ಗಿಕವಾಗಿ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹಕ್ಕೆ ಅನಾನುಕೂಲವೂ ಇದೆ.

ಶರಬತ್ತು
ಶರಬತ್ತು

ಶರಬತ್ತು ಕುಡಿಯುವುದು ಯಾರಿಗೆ ಇಷ್ಟವಿಲ್ಲ ಹೇಳಿ, ಅದರಲ್ಲೂ ಬೇಸಿಗೆ ಬಂತೆಂದರೆ ಶರಬತ್ತಿನಂತಹ ಪಾನೀಯಕ್ಕಾಗಿ ನಾಲಿಗೆ, ದೇಹ ಎರಡೂ ಹಾತೊರೆಯುತ್ತದೆ.

ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿದ ಶರಬತ್ತು ದೇಹದ ತಾಪವನ್ನು ನಿವಾರಿಸುತ್ತದೆ. ಇದು ನೈಸರ್ಗಿಕವಾಗಿ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಇನ್ನು ಶರಬತ್ತಿನ ವಿಷಯಕ್ಕೆ ಬರುವುದಾದರೆ ಆಮ್‌ ಪನ್ನಾ, ಕೋಕಂ, ಬಾದಾಮ್‌, ಪಾಲ್ಸಾ ಶರಬತ್‌ನಂತಹ ಪಾನೀಯವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ತಜ್ಞರ ಪ್ರಕಾರ ಬೇಸಿಗೆಯಲ್ಲಿ ಶರಬತ್ತು ಕುಡಿಯುವುದರಿಂದ ದೇಹದ ತಾಪ ಕಡಿಮೆಯಾಗುವುದು ಮಾತ್ರವಲ್ಲ; ಆರೋಗ್ಯಕ್ಕೂ ಹಲವು ರೀತಿಯ ಪ್ರಯೋಜನಗಳಿವೆ. ಇದರೊಂದಿಗೆ ಕೆಲವೊಂದು ಅನಾನುಕೂಲವೂ ಇದೆ. ಹಾಗಾದರೆ ಶರಬತ್ತು ಕುಡಿಯುವುದರಿಂದಾಗುವ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ತಿಳಿಯೋಣ.

ʼಪರಿಮಳ ಹಾಗೂ ಅಸಾಧಾರಣ ಆರೋಗ್ಯ ಪ್ರಯೋಜನಗಳಿಂದಾಗಿ ಇಂದಿಗೂ ಬೇಸಿಗೆಯಲ್ಲಿ ಕುಡಿಯುವುದು ಶರಬತ್ತು ಉತ್ತಮ ಎನ್ನಿಸಿದೆ. ಇದು ನಿರ್ಜಲೀಕರಣ ಮತ್ತು ಶಾಖವನ್ನು ಎದುರಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಪೌಷ್ಟಿಕ ತಜ್ಞರು.

ಶರಬತ್ತಿನ ಆರೋಗ್ಯ ಪ್ರಯೋಜನಗಳೇನು?

ರಕ್ತ ಸಂಚಾರದ ವೃದ್ಧಿ

ಶರಬತ್ತು ಕಬ್ಬಿಣಾಂಶ, ಮ್ಯಾಂಗನೀಸ್‌ ಹಾಗೂ ಬಿ6 ಜೀವಸತ್ವಗಳಿಂದ ಸಮೃದ್ಧವಾಗಿದೆ. ಇದರಲ್ಲಿರುವ ಕಬ್ಬಿಣಾಂಶ ದೇಹದಲ್ಲಿ ರಕ್ತ ಸಂಚಾರ ವೃದ್ಧಿಯಾಗಲು ಸಹಾಯ ಮಾಡುತ್ತದೆ. ಮ್ಯಾಂಗನೀಸ್‌ ಅಂಶ ರಕ್ತದೊತ್ತಡದ ಮಟ್ಟವನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಣ್ಣು ಕೆಂಪಾಗುವುದನ್ನು ತಡೆಯುತ್ತದೆ

ಶರಬತ್ತು ಮೂತ್ರವರ್ಧಕವಾಗಿದ್ದು, ಇದು ದೇಹದ ಅಂಗಾಂಶಗಳನ್ನು ತಂಪಾಗಿಸುತ್ತದೆ. ಇದಲ್ಲದೆ, ವಿದ್ಯುದ್ವಿಚ್ಛೇದ್ಯ ಅಂಶ ಸಮೃದ್ಧವಾಗಿದ್ದು, ಇದು ವಿವಿಧ ರೀತಿಯ ಕಣ್ಣಿನ ಸಮಸ್ಯೆಗಳ ನಿವಾರಣೆಗೆ ಸಹಾಯ ಮಾಡುತ್ತದೆ.

ಅತಿಯಾದ ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ

ಮೈ ಸುಡುವ ಬಿಸಿಲಿನಲ್ಲಿ ಒಂದು ಗ್ಲಾಸ್‌ ತಣ್ಣನೆಯ ಶರಬತ್ತು ಕುಡಿಯುವುದರಿಂದ ದೇಹ, ಮನಸ್ಸು ಎರಡೂ ಉಲ್ಲಾಸಗೊಳ್ಳುತ್ತದೆ. ಶರಬತ್ತು ಕುಡಿಯುವುದರಿಂದ ಬೇಸಿಗೆಯ ಅತಿ ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಶಬರತ್ತಿಗೆ ಪೌಷ್ಟಿಕಾಂಶದ ಮೌಲ್ಯವನ್ನು ಸೇರಿಸಲು ಬಯಸಿದರೆ ಅದಕ್ಕೆ ನಿಂಬೆರಸವನ್ನು ಸೇರಿಸಬಹುದು.

ಉತ್ಕರ್ಷಣ ನಿರೋಧಕ

ಶಬರತ್ತಿನ ಉತ್ಕರ್ಷಣ ನಿರೋಧಕ ಅಂಶ ಅಧಿಕವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ಅಂಗಾಂಶಗಳಿಗೆ ಫ್ರಿ ರಾಡಿಕಲ್ಸ್‌ಗಳಿಂದ ಉಂಟಾಗುವ ಹಾನಿಯಿಂದ ರಕ್ಷಿಸುತ್ತದೆ.

ನಿರ್ಜಲೀಕರಣವನ್ನು ತಪ್ಪಿಸುತ್ತದೆ

ಬೇಸಿಗೆಯಲ್ಲಿ ದೇಹದಲ್ಲಿ ಸಾಕಷ್ಟು ನೀರಿನಂಶ ಇರುವಂತೆ ನೋಡಿಕೊಳ್ಳಬೇಕು. ದೇಹದಲ್ಲಿ ನೀರಿನಂಶ ಕಡಿಮೆಯಾಗುವುದರಿಂದಲೂ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಹಾಗಾಗಿ ಬೇಸಿಗೆಯಲ್ಲಿ ವೆರೈಟಿ ಶರಬತ್ತುಗಳನ್ನು ಕುಡಿಯಿರಿ. ಇದರಿಂದ ದೇಹಕ್ಕೆ ನಿರ್ಜಲೀಕರಣ ಉಂಟಾಗುವುದನ್ನು ತಪ್ಪಿಸಬಹುದು.

ಅಡ್ಡ ಪರಿಣಾಮಗಳು

ಶರಬತ್ತು ಕುಡಿಯುವುದರಿಂದ ಎಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬುದು ನಿಜ, ಆದರೆ ಇದರಿಂದ ಆರೋಗ್ಯಕ್ಕೆ ಅನಾನುಕೂಲವೂ ಇದೆ. ಅತಿಯಾಗಿ ಸಕ್ಕರೆ ಹಾಗೂ ಕೃತಕ ಬಣ್ಣಗಳನ್ನು ಸೇರಿಸಿ ತಯಾರಿಸುವ ಶರಬತ್ತು ದೇಹಕ್ಕೆ ಹಾನಿ ಉಂಟು ಮಾಡಬಹುದು.

ಕೃತಕ ಸಿಹಿಕಾರಕಗಳು ಮತ್ತು ಪ್ರಿಸರ್ವೇಟಿವ್‌ಗಳಿಂದ ತಯಾರಿಸಿದ ಶರಬತ್ತಿನ ಅಡ್ಡಪರಿಣಾಮಗಳನ್ನು ಪೌಷ್ಟಿಕತಜ್ಞರಿಂದ ತಿಳಿಯಿರಿ.

* ಕೃತಕ ಬಣ್ಣಗಳು, ಪ್ರಿಸರ್ವೇಟಿವ್‌ಗಳು, ಸಿಹಿಕಾರಕಗಳು ಮತ್ತು ಪರಿಮಳ ಇವು ಅನಾರೋಗ್ಯಕ್ಕೆ ಕಾರಣವಾಗಬಹುದು. ಸಕ್ಕರೆಯ ಸೇವನೆಯ ಪ್ರಮಾಣ ಹೆಚ್ಚಾದರೆ ದೇಹತೂಕವೂ ಹೆಚ್ಚುತ್ತದೆ. ಕೃತಕ ಬಣ್ಣಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ.

* ಬೇಸಿಗೆಯಲ್ಲಿ ಸಿಹಿಯಾದ, ತಂಪಾದ ಪಾನೀಯಗಳನ್ನೇ ಕುಡಿದುಕೊಂಡಿರಲು ದೇಹ ಪ್ರಚೋದಿಸಬಹುದು. ಆದರೆ ಇದರಿಂದ ಹಸಿವಿನ ಕೊರತೆ, ಅಜೀರ್ಣ ಹೊಟ್ಟೆ ಸೆಳೆತ ಇತ್ಯಾದಿ ಸಮಸ್ಯೆಗಳು ಉಂಟಾಗಬಹುದು.

* ಶರಬತ್ತು ಸಿಹಿ, ರುಚಿ ಇರುತ್ತದೆ ಎನ್ನುವ ಕಾರಣಕ್ಕೆ ಅತಿಯಾಗಿ ಕುಡಿಯಬಾರದು, ಇದರಿಂದ ಕ್ಯಾಲೊರಿ ಪ್ರಮಾಣ ಹೆಚ್ಚುತ್ತದೆ, ಅಲ್ಲದೆ ಇದರಲ್ಲಿ ಯಾವುದೇ ರೀತಿಯ ಪೌಷ್ಟಿಕಾಂಶಗಳೂ ಇರುವುದಿಲ್ಲ.

* ಕೃತಕ ಸುವಾಸನೆಯು ಫಾಸ್ಪರಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಮೂಳೆಗಳಿಂದ ಕ್ಯಾಲ್ಸಿಯಂ ಸೋರಿಕೆಗೆ ಕಾರಣವಾಗುತ್ತದೆ. ಕ್ಯಾಲ್ಸಿಯಂ ಕೊರತೆಯು ಮೂಳೆಗಳನ್ನು ದುರ್ಬಲಗೊಳಿಸುತ್ತದೆ.

* ಗರ್ಭಿಣಿಯರು ಅತಿಯಾಗಿ ಶರಬತ್ತು ಕುಡಿಯುವುದರಿಂದ ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.

ವಿಭಾಗ