ಕನ್ನಡ ಸುದ್ದಿ  /  Nation And-world  /  Biggest Threat To Mainstream Media Is Media Channels

ಸುದ್ದಿ ಚಾನೆಲ್‌ಗಳಿಂದ ನಿಜವಾದ ಪತ್ರಿಕೋದ್ಯಮಕ್ಕೆ ಗಂಡಾಂತರವೆಂದ ಅನುರಾಗ್‌ ಠಾಕೂರ್‌

ನಿಜವಾದ ಪತ್ರಿಕೋದ್ಯಮವೆಂದರೆ ಸತ್ಯವನ್ನು ಎದುರಿಸುವುದು, ನಿಜವನ್ನು ಮುಂದಿಡುವುದು, ಎಲ್ಲಾ ಕಡೆಯ ಅಭಿಪ್ರಾಯಗಳನ್ನು ಪ್ರಕಟಿಸಲು ಅವಕಾಶಗಳನ್ನು ನೀಡುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಚಿವರಾದ ಅನುರಾಗ್‌ ಠಾಕೂರ್‌ ಹೇಳಿದ್ದಾರೆ ಎಂದು ಎಕ್ಸ್‌ಚೇಂಜ್‌4ಮೀಡಿಯಾ ವರದಿ ತಿಳಿಸಿದೆ.

ಚಾನೆಲ್‌ಗಳಿಂದ ನಿಜವಾದ ಪತ್ರಿಕೋದ್ಯಮಕ್ಕೆ ಗಂಡಾಂತರವೆಂದ ಅನುರಾಗ್‌ ಠಾಕೂರ್‌ (ANI Photo)
ಚಾನೆಲ್‌ಗಳಿಂದ ನಿಜವಾದ ಪತ್ರಿಕೋದ್ಯಮಕ್ಕೆ ಗಂಡಾಂತರವೆಂದ ಅನುರಾಗ್‌ ಠಾಕೂರ್‌ (ANI Photo) (Sunny Sehgal)

ನಿಜವಾದ ಪತ್ರಿಕೋದ್ಯಮವೆಂದರೆ ಸತ್ಯವನ್ನು ಎದುರಿಸುವುದು, ನಿಜವನ್ನು ಮುಂದಿಡುವುದು, ಎಲ್ಲಾ ಕಡೆಯ ಅಭಿಪ್ರಾಯಗಳನ್ನು ಪ್ರಕಟಿಸಲು ಅವಕಾಶಗಳನ್ನು ನೀಡುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಚಿವರಾದ ಅನುರಾಗ್‌ ಠಾಕೂರ್‌ ಹೇಳಿದ್ದಾರೆ ಎಂದು ಎಕ್ಸ್‌ಚೇಂಜ್‌4ಮೀಡಿಯಾ ವರದಿ ತಿಳಿಸಿದೆ.

ನವದೆಹಲಿಯಲ್ಲಿ ಇತ್ತೀಚೆಗೆ ನಡೆದ ಏಷ್ಯಾ ಪೆಸಿಫಿಕ್‌ ಇನ್‌ಸ್ಟಿಟ್ಯೂಟ್‌ ಆಫ್‌ ಬ್ರಾಡ್‌ಕಾಸ್ಟಿಂಗ್‌ ಡೆವಲಪ್‌ಮೆಂಟ್‌ (ಎಐಬಿಡಿ) ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

"ನನ್ನ ವೈಯಕ್ತಿಕ ಅಭಿಪ್ರಾಯ ಏನೆಂದರೆ, ಮುಖ್ಯವಾಹಿನಿ ಮಾಧ್ಯಮಗಳಿಗೆ ಈಗ ಗಂಡಾಂತರ ಎದುರಾಗಿರುವುದು ಈ ಕಾಲದ ಡಿಜಿಟಲ್‌ ವೇದಿಕೆಗಳಿಂದ ಅಲ್ಲ. ಮುಖ್ಯವಾಹಿನಿ ನ್ಯೂಸ್‌ ಚಾನೆಲ್‌ಗಳಿಂದ ಮುಖ್ಯವಾಹಿನಿ ಮಾಧ್ಯಮಗಳಿಗೆ ಗಂಡಾಂತರ ಉಂಟಾಗಿದೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

"ಚಾನೆಲ್‌ಗಳಲ್ಲಿ ಚರ್ಚೆಗೆ ಯಾರನ್ನು ಆಹ್ವಾನಿಸಬೇಕು ಎಂದು ಚಾನೆಲ್‌ಗಳು ನಿರ್ಧರಿಸುತ್ತವೆ. ಯಾರು ಸಮಾಜವನ್ನು ಧ್ರುವೀಕರಣ ಮಾಡುತ್ತಾರೋ, ಯಾರು ಸುಳ್ಳು ಮಾತುಗಳನ್ನಾಡುತ್ತಾರೋ, ಯಾರು ಧ್ವನಿ ಏರಿಸಿ ಬೊಬ್ಬೆ ಹೊಡೆಯುತ್ತಾರೋ ಅವರನ್ನು ಕರೆಸಿ ಸುದ್ದಿಗಳನ್ನು ತಮಗೆ ಬೇಕಾದಂತೆ ಪ್ರಸಾರ ಮಾಡುತ್ತವೆ. ಇದರಿಂದ ಇಂತಹ ಚಾನೆಲ್‌ಗಳು ವಿಶ್ವಾಸರ್ಹತೆ ಕಳೆದುಕೊಳ್ಳುತ್ತವೆʼʼ ಎಂದು ಅವರು ಹೇಳಿದ್ದಾರೆ.

"ನೀವು ಎಲ್ಲರ ಗಮನ ಸೆಳೆಯುವಂತಹ ದೃಶ್ಯಗಳನ್ನು ಪ್ರಸಾರ ಮಾಡುವಿರಿ. ದೃಶ್ಯದ ಕೆಲವೊಂದು ಭಾಗಗಳನ್ನು ಮಾತ್ರ ಮತ್ತೆಮತ್ತೆ ಪ್ರಸಾರ ಮಾಡುವಿರಿ. ಆದರೆ, ನೋಡುಗರಿಗೆ ಒಂದು ಘಟನೆಯ ಪೂರ್ಣ ಚಿತ್ರಣ ನೀಡಲು ಹೋಗುವುದಿಲ್ಲʼʼ ಎಂದು ಅವರು ಹೇಳಿದ್ದಾರೆ.

"ಮಾಧ್ಯಮ ರಂಗದ ನೈತಿಕತೆ ಮತ್ತು ಮೌಲ್ಯಗಳನ್ನು ಸಂರಕ್ಷಿಸುವ ದೊಡ್ಡ ಸವಾಲು ಮುಖ್ಯವಾಹಿನಿ ಮಾಧ್ಯಮ ಸಂಸ್ಥೆಗಳಿಗಿವೆʼʼ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

IPL_Entry_Point

ವಿಭಾಗ