ಏರ್‌ಟೆಲ್‌ 118, 289 ರೂ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಸ್ಥಗಿತ; ಇಷ್ಟೇ ಸೌಲಭ್ಯಕ್ಕೆ ಇನ್ಮುಂದೆ ಹೆಚ್ಚು ಹಣ ಪಾವತಿಸಬೇಕು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಏರ್‌ಟೆಲ್‌ 118, 289 ರೂ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಸ್ಥಗಿತ; ಇಷ್ಟೇ ಸೌಲಭ್ಯಕ್ಕೆ ಇನ್ಮುಂದೆ ಹೆಚ್ಚು ಹಣ ಪಾವತಿಸಬೇಕು

ಏರ್‌ಟೆಲ್‌ 118, 289 ರೂ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಸ್ಥಗಿತ; ಇಷ್ಟೇ ಸೌಲಭ್ಯಕ್ಕೆ ಇನ್ಮುಂದೆ ಹೆಚ್ಚು ಹಣ ಪಾವತಿಸಬೇಕು

Airtel Recharge Plans: ಭಾರ್ತಿ ಏರ್‌ಟೆಲ್ 2 ರಿಚಾರ್ಜ್ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಸದ್ದಿಲ್ಲದೆ ಹೆಚ್ಚಿಸಿದೆ. 118 ರೂಪಾಯಿಗಳ ಪ್ಲಾನ್‌ ಅನ್ನು 129 ರೂಪಾಯಿಗೆ, 289 ರೂಪಾಯಿಗಳ ಪ್ಲಾನ್‌ ಅನ್ನು 329 ರೂಗಳಿಗೆ ಹೆಚ್ಚಳ ಮಾಡಿದೆ.

ಭಾರ್ತಿ ಏರ್‌ಟೆಲ್ ಎರಡು ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಅದರ ವಿವರ ಇಲ್ಲಿದೆ
ಭಾರ್ತಿ ಏರ್‌ಟೆಲ್ ಎರಡು ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಿಸಿದೆ. ಅದರ ವಿವರ ಇಲ್ಲಿದೆ (REUTERS)

ಬೆಂಗಳೂರು: ಏರ್‌ಟೆಲ್ (Airtel) 118 ರೂಪಾಯಿ, 289 ರೂಪಾಯಿಗಳ ಎರಡು ರಿಚಾರ್ಜ್ ಪ್ರಿಪೇಯ್ಡ್ (Recharge Prepaid Plans) ಮೊಬೈಲ್ ಪ್ಲಾನ್‌ಗಳನ್ನು ಸ್ಥಗಿತಗೊಳಿಸಿದೆ. ಜೊತೆಗೆ ಈ ಎರಡು ಪ್ಲಾನ್‌ಗಳನ್ನು ಸದ್ದಿಲ್ಲದೆ ಹೆಚ್ಚಿಸಿದೆ. ಈ ಯೋಜನೆಗಳಲ್ಲಿ ಪ್ರಯೋಜನಗಳು ಸೇಮ್ ಇದ್ದು, 118 ರೂಪಾಯಿಗಳ ಪ್ಲಾನ್ ಅನ್ನು 129 ರೂಪಾಯಿಗೆ, 289 ರೂಪಾಯಿಗಳ ಪ್ಲಾನ್‌ ಅನ್ನು 329 ರೂಪಾಯಿಗಳಿಗೆ ಹೆಚ್ಚಿಸಿದೆ. ಇವುಗಳ ವ್ಯಾಲಿಡಿಟಿ 35 ದಿನಗಳ ಇರಲಿದೆ.

ಈ ಎರಡೂ ರಿಚಾರ್ಜ್ ಪ್ರಿಪೇಯ್ಡ್ ಮೊಬೈಲ್ ಪ್ಲಾನ್‌ಗಳನ್ನು ಸಂಪೂರ್ಣ ವಿವರಗಳನ್ನು ನೋಡವುದಾದರೆ 2 ಯೋಜನೆಗಳ ಬೆಲೆಯನ್ನು ಅಡ್ಜೆಸ್ಟ್ ಮಾಡಿದೆ. 118 ರೂಪಾಯಿಂದ 129ಕ್ಕೆ ಹೆಚ್ಚಿಸುವ ಹೊಸ ಪ್ಲಾನ್‌ನಲ್ಲಿ 12 ಜಿಬಿ ಡೇಟಾ ಬರಲಿದೆ. ಇದನ್ನು ಯಾವಾಗ ಬೇಕಾದರೂ ಬಳಸಬಹುದು. ಇದಕ್ಕೆ ಯಾವುದೇ ರೀತಿಯ ಹೆಚ್ಚುವರಿ ಸೌಲಭ್ಯಗಳನ್ನು ಸೇರಿಸಲಾಗಿಲ್ಲ. ಪ್ರತಿ 1 ಜಿಬಿ ಡೇಟಾಗೆ 9.83 ರೂಪಾಯಿಂದ 10.75 ರೂಪಾಯಿಗೆ ಏರಿಕೆ ಮಾಡಲಾಗಿದೆ.

289 ರೂಪಾಯಿಗಳ ರಿಚಾರ್ಜ್ ಪ್ಲಾನ್ ಈಗ 329 ರೂಪಾಯಿ

ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ಈ ಪ್ಲಾನ್‌ನಲ್ಲಿ 4ಜಿಬಿ ಡೇಟಾ ಸಿಗುತ್ತದೆ. ಜೊತೆಗೆ ಅನಿಯಮಿತ ವಾಯ್ಸ್ ಕಾಲ್, 300 ಎಸ್‌ಎಂಎಸ್‌ ಜೊತೆಗೆ 35 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಹೆಚ್ಚುವರಿಯಾಗಿ ಗ್ರಾಹಕರು ಪೂರಕವಾದ ಏರ್‌ಟೆಲ್ ಥ್ಯಾಂಕ್ಸ್ ಪ್ರಯೋಜನಗಳನ್ನು ಪಡೆಯಬಹುದು. ಅಪೊಲೊ 24/7 ಸರ್ಕಲ್‌ಗೆ ಚಂದಾದಾರಿಕೆ, ಉಚಿತ ಹಲೋಟ್ಯೂನ್ಸ್, ಹೆಚ್ಚುವರಿ ಶುಲ್ಕವಿಲ್ಲದೆ ವಿಂಕ್ ಮ್ಯೂಸಿಕ್ ಪಡೆಯಬಹುದು. ಈ ಪ್ಲಾನ್‌ನಲ್ಲಿ ದೈನಂದಿನ ಬಳಕೆಯ ವೆಚ್ಚದಲ್ಲಿ 8.25 ರೂಗಳಿಂದ 9.4 ರೂಪಾಯಿಗಳ ಸ್ವಲ್ಪ ಏರಿಕೆ ಆಗಿದೆ ಅನ್ನೋದು ಕಂಪನಿಯ ಮಾತು.

ಏರ್‌ಟೆಲ್ ತನ್ನ ರಿಚಾರ್ಜ್ ಪ್ಲಾನ್‌ಗಳನ್ನು ಹೆಚ್ಚಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷ ಹಲವಾರು ರಾಜ್ಯಗಳಲ್ಲಿ 99 ರೂಪಾಯಿಗಳ ತನ್ನ ಮೂಲ ಪ್ಲಾನ್‌ಅನ್ನು ಸ್ಥಗಿತಗೊಳಿಸಿದ ನಂತರ ಶೇಕಡಾ 57 ರಷ್ಟು ಹೆಚ್ಚಳದೊಂದಿಗೆ ಹೊಸ ಪ್ಲಾನ್ ಬಿಡುಗಡೆ ಮಾಡಿತು. 2022 ರ ನವೆಂಬರ್‌ನಲ್ಲಿ ಈ 99 ರೂಪಾಯಿಗಳ ಪ್ಲಾನ್ ಬಿಡುಗಡೆ ಮಾಡಿತ್ತು. ಆದರೆ ಆದರೆ ಭಾರಿ ಪ್ರಮಾಣದಲ್ಲಿ ಇದರ ಬೆಲೆಯನ್ನು ಹೆಚ್ಚಿಸಿದೆ. ಆರಂಭದಲ್ಲಿ ಈ ಯೋಜನೆಯನ್ನ ಒಡಿಶಾ ಮತ್ತು ಹರಿಯಾಣದಲ್ಲಿ ಪರಿಚಯಿಸಿತ್ತು. ನಂತರದ ದಿನಗಳಲ್ಲಿ ಅಂದರೆ 2023ರ ಹೊತ್ತಿಗೆ ಆಂಧ್ರ ಪ್ರದೇಶ, ಬಿಹಾರ, ಹಿಮಾಚಲ ಪ್ರದೇಶ, ರಾಜಸ್ಥಾನ, ಈಶಾನ್ಯ ರಾಜ್ಯಗಳು, ಕರ್ನಾಟಕ, ಉತ್ತರ ಪ್ರದೇಶಕ್ಕೆ ವಿಸ್ತರಿಸಿತ್ತು. ಬಳಕೆದಾರರು ತಮ್ಮ ಸಿಮ್ ಕಾರ್ಡ್‌ಗಳನ್ನು ಸಕ್ರಿಯವಾಗಿಡಲು ಕನಿಷ್ಠ 155 ರೂಪಾಯಿಗಳ ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ಳಬೇಕು.

ಪ್ರಮುಖ ಟೆಲಿಕಾಂ ಕಂಪನಿಗಳ ಪೈಕಿ ರಿಚಾರ್ಜ್ ಪ್ಲಾನ್‌ಗಳಲ್ಲಿ ಏರ್‌ಟೆಲ್ ಮತ್ತು ಜಿಯೊ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದೆ. ಜಿಯೊ ಹತ್ತಾರು ಹೊಸ ಆಫರ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುುತ್ತಿದೆ. ಏರ್‌ಟೆಲ್ ಕೆಲ ರಿಯಾಯ್ತಿಗಳೊಂದಿಗೆ ಬಳಕೆದಾರರನ್ನು ಸೆಳೆಯುವಂತಹ ಪ್ರಯತ್ನಗಳನ್ನು ಮುಂದುವರಿಸಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.