ವೇಗದ ಶತಕ ದಾಖಲಿಸಿದ ವಿಲ್ ಜಾಕ್ಸ್; ಐಪಿಎಲ್ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಇಂಗ್ಲೆಂಡ್ ಕ್ರಿಕೆಟಿಗ
- Will Jacks Century : ಗುಜರಾತ್ ಟೈಟಾನ್ಸ್ ವಿರುದ್ಧ 41 ಎಸೆತಗಳಲ್ಲಿ ಸೆಂಚುರಿ ಪೂರೈಸಿದ ಆರ್ಸಿಬಿ ಸ್ಟಾರ್ ವಿಲ್ ಜಾಕ್ಸ್, ಐಪಿಎಲ್ನಲ್ಲಿ ಐದನೇ ವೇಗದ ಶತಕ ದಾಖಲಿಸಿದರು.
- Will Jacks Century : ಗುಜರಾತ್ ಟೈಟಾನ್ಸ್ ವಿರುದ್ಧ 41 ಎಸೆತಗಳಲ್ಲಿ ಸೆಂಚುರಿ ಪೂರೈಸಿದ ಆರ್ಸಿಬಿ ಸ್ಟಾರ್ ವಿಲ್ ಜಾಕ್ಸ್, ಐಪಿಎಲ್ನಲ್ಲಿ ಐದನೇ ವೇಗದ ಶತಕ ದಾಖಲಿಸಿದರು.
(1 / 8)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ವಿಲ್ ಜಾಕ್ಸ್, ಗುಜರಾತ್ ಟೈಟಾನ್ಸ್ ವಿರುದ್ಧ ಆಕ್ರಮಣಕಾರಿ ಸೆಂಚುರಿಯನ್ನು ಸಿಡಿಸಿ ದಾಖಲೆ ಬರೆದಿದ್ದಾರೆ. ಐಪಿಎಲ್ನಲ್ಲಿ ವೇಗದ ಶತಕ ಸಿಡಿಸಿದ 5ನೇ ಆಟಗಾರ ಹಾಗೂ ಆರ್ಸಿಬಿಯ 2ನೇ ಆಟಗಾರ ಎನಿಸಿದ್ದಾರೆ.
(2 / 8)
17ನೇ ಆವೃತ್ತಿಯ ಐಪಿಎಲ್ನ 45ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಭರ್ಜರಿ 9 ವಿಕೆಟ್ಗಳ ಜಯ ಸಾಧಿಸಿತು. ಜಿಟಿ ನೀಡಿದ್ದ 200 ರನ್ ಬೆನ್ನತ್ತಿದ ಬೆಂಗಳೂರು, ಕೇವಲ 16 ಓವರ್ಗಳಲ್ಲೇ ಗುರಿ ಮುಟ್ಟಿತು.(AP)
(3 / 8)
ಆರ್ಸಿಬಿ ಗೆಲುವಿಗೆ ರನ್ ಬೇಕಿದ್ದಾಗ ವಿಲ್ ಜಾಕ್ಸ್ 94 ರನ್ ಸಿಡಿಸಿದ್ದರು. ಆಗ ಗೆಲುವಿನ ಸಿಕ್ಸರ್ ಬಾರಿಸಿದ ಜಾಕ್ಸ್, ಐಪಿಎಲ್ನಲ್ಲಿ ತನ್ನ ಶತಕವನ್ನೂ ಪೂರೈಸಿದರು. ಇದರೊಂದಿಗೆ ದಾಖಲೆ ಬರೆದರು. ಇಂಗ್ಲೆಂಡ್ ಸ್ಟಾರ್ ಬ್ಯಾಟರ್ 41 ಎಸೆತಗಳಲ್ಲೇ ನೂರು ಮುಟ್ಟಿದರು.(AP)
(4 / 8)
41 ಎಸೆತಗಳನ್ನು ಎದುರಿಸಿದ ಜಾಕ್ಸ್, 10 ಸಿಕ್ಸರ್, 5 ಬೌಂಡರಿ ಸಹಿತ ಅಜೇಯ 100 ರನ್ ಬಾರಿಸಿದರು. 29 ಎಸೆತಗಳಲ್ಲಿ 44 ರನ್ ಬಾರಿಸಿದ್ದ ಜಾಕ್ಸ್, ತನ್ನ ಕೊನೆಯ 12 ಎಸೆತಗಳಲ್ಲಿ 56 ರನ್ ಬಾರಿಸಿದರು.(AP)
(5 / 8)
41 ಎಸೆತಗಳಲ್ಲಿ ಮೂರಂಕಿ ದಾಟಿದ ಜಾಕ್ಸ್, ಐಪಿಎಲ್ ಇತಿಹಾಸದಲ್ಲಿ ಐದನೇ ವೇಗದ ಶತಕ ಸಿಡಿಸಿದರು. ಟಾಪ್-5 ವೇಗದ ಸೆಂಚುರಿಗಳಲ್ಲಿ ಆರ್ಸಿಬಿ ಆಟಗಾರರೇ ಇಬ್ಬರಿದ್ದಾರೆ. ಆರ್ಸಿಬಿ ಮಾಜಿ ಕ್ರಿಕೆಟಿಗ ಕ್ರಿಸ್ಗೇಲ್ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.(AP)
(6 / 8)
2013ರಲ್ಲಿ ಪುಣೆ ವಾರಿಯರ್ಸ್ ತಂಡದ ವಿರುದ್ಧ ಆರ್ಸಿಬಿ ಪರ ಕ್ರಿಸ್ಗೇಲ್ 30 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಅತಿವೇಗದ ಶತಕವಾಗಿದೆ. ಆ ಪಂದ್ಯದಲ್ಲಿ ಗೇಲ್ ಅಜೇಯ 175 ರನ್ ಚಚ್ಚಿದ್ದರು.
(7 / 8)
ಇನ್ನು ಪಟ್ಟಿಯಲ್ಲಿ 2ನೇ ವೇಗದ ಶತಕ ಸಿಡಿಸಿರುವ ಯೂಸಫ್ ಪಠಾಣ್ ಮುಂಬೈ ಇಂಡಿಯನ್ಸ್ ವಿರುದ್ಧ 37 ಎಸೆತಗಳಲ್ಲಿ ಸಾಧನೆ ಮಾಡಿದ್ದರು. ಅಂದು ರಾಜಸ್ಥಾನ್ ರಾಯಲ್ಸ್ ಪರ ಆಡಿದ್ದರು. ಪಂಜಾಬ್ ಕಿಂಗ್ಸ್ ಪರ ಡೇವಿಡ್ ಮಿಲ್ಲರ್ 38 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಆರ್ಸಿಬಿ ವಿರುದ್ಧ ಈ ಮೈಲಿಗಲ್ಲು ತಲುಪಿದ್ದರು.
ಇತರ ಗ್ಯಾಲರಿಗಳು