ಜಿಯೊದಿಂದ 1099 ರೂ, 1499 ರೂಗಳ 2 ಹೊಸ ರಿಚಾರ್ಜ್ ಪ್ರಿಪೇಯ್ಡ್ ಪ್ಲಾನ್‌ಗಳು ಬಿಡುಗಡೆ; ವ್ಯಾಲಿಡಿಟಿ, ಸೌಲಭ್ಯ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಜಿಯೊದಿಂದ 1099 ರೂ, 1499 ರೂಗಳ 2 ಹೊಸ ರಿಚಾರ್ಜ್ ಪ್ರಿಪೇಯ್ಡ್ ಪ್ಲಾನ್‌ಗಳು ಬಿಡುಗಡೆ; ವ್ಯಾಲಿಡಿಟಿ, ಸೌಲಭ್ಯ ವಿವರ ಇಲ್ಲಿದೆ

ಜಿಯೊದಿಂದ 1099 ರೂ, 1499 ರೂಗಳ 2 ಹೊಸ ರಿಚಾರ್ಜ್ ಪ್ರಿಪೇಯ್ಡ್ ಪ್ಲಾನ್‌ಗಳು ಬಿಡುಗಡೆ; ವ್ಯಾಲಿಡಿಟಿ, ಸೌಲಭ್ಯ ವಿವರ ಇಲ್ಲಿದೆ

ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಜಿಯೋ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ತಂದಿದ್ದು, 1099 ರೂಪಾಯಿಯಿಂದ ಆರಂಭವಾಗುತ್ತದೆ. ಇದರಲ್ಲಿರುವ ಸೌಲಭ್ಯಗಳು ಹಾಗೂ ವ್ಯಾಲಿಡಿಟಿಯ ವಿವರ ಇಲ್ಲಿದೆ.

ಜಿಯೊ ಸಂಸ್ಥೆ ಇದೇ ಮೊದಲ ಬಾರಿಗೆ 1099 ರೂ, 1499 ರೂಗಳ 2 ಹೊಸ ರಿಚಾರ್ಜ್ ಪ್ರಿಪೇಯ್ಡ್ ಪ್ಲಾನ್‌ಗಳು ಬಿಡುಗಡೆ ಮಾಡಿದೆ.
ಜಿಯೊ ಸಂಸ್ಥೆ ಇದೇ ಮೊದಲ ಬಾರಿಗೆ 1099 ರೂ, 1499 ರೂಗಳ 2 ಹೊಸ ರಿಚಾರ್ಜ್ ಪ್ರಿಪೇಯ್ಡ್ ಪ್ಲಾನ್‌ಗಳು ಬಿಡುಗಡೆ ಮಾಡಿದೆ.

ಬೆಂಗಳೂರು: ರಿಲಯನ್ಸ್ ಜಿಯೋ (Reliance Jio) ತನ್ನ ಪ್ರಿಪೇಯ್ಡ್ ಬಳಕೆದಾರರಿಗೆ (Prepaid Customers) ಹೊಸ ರಿಚಾರ್ಜ್ ಪ್ಲಾನ್‌ಗಳನ್ನು (Recharge Plans) ಪರಿಚಯಿಸಿದೆ. ಎರಡು ಹೊಸ ಜಿಯೋ ಯೋಜನೆಗಳಲ್ಲಿ ಒಂದು 1099 ರೂಪಾಯಿ ಮತ್ತೊಂದು 1,499 ರೂಪಾಯಿ ಇದೆ. ಇವುಗಳೊಂದಿಗೆ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಉಚಿತವಾಗಿ ಸಿಗಲಿದೆ. ಆಯ್ದ ಜಿಯೋ ಫೋಸ್ಟ್‌ಪೇಯ್ಡ್ ಮತ್ತು ಜಿಯೋ ಫೈಬರ್ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್ ಚಂದಾದರಿಕೆ ಈಗಾಗಲೇ ಲಭ್ಯವಿದೆ. ಆದರೆ ಪ್ರಿಪೇಯ್ಡ್ ಪ್ಲಾನ್‌ಗಳಲ್ಲಿ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಲಭ್ಯವಾಗುತ್ತಿರುವುದು ಇದೇ ಮೊದಲು. ಈ ಎರಡು ಹೊಸ ರಿಚಾರ್ಜ್ ಪ್ರಿಪೇಯ್ಡ್ ಪ್ಲಾನ್‌ಗಳೊಂದಿಗೆ ತನ್ನ ಜಿಯೋ ಕಂಪನಿಯ 40 ಕೋಟಿ ಪ್ರಿಪೇಯ್ಡ್ ಗ್ರಾಹಕರು ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಪಡೆಯುವ ಆಯ್ಕೆಯನ್ನು ಹೊಂದಿದ್ದಾರೆ. ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಜಿಯೊ ಪ್ರಿಪೇಯ್ಡ್ ಯೋಜನೆಯ ವಿವರಗಳು ಇಲ್ಲಿವೆ

ಜಿಯೊ 1,099 ರೂಪಾಯಿ ಪ್ರಿಪೇಯ್ಡ್ ಪ್ಲಾನ್

1,099 ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್‌ನಲ್ಲಿ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಇದು ಜಿಯೊ ವೆಲ್‌ಕಮ್ ಆಫರ್‌ನೊಂದಿಗೆ ಅನಿಯಮಿತ 5ಜಿ ಡೇಟಾ, ಅನಿಯಮಿತ ವಾಯ್ಸ್ ಕಾಲ್, ದಿನಕ್ಕೆ 2 ಜಿಬಿ ಡೇಟಾದೊಂದಿಗೆ ಬರುತ್ತಿದೆ. ಈ ಪ್ಲಾನ್ 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಜಿಯೊ 1,499 ರೂಪಾಯಿಗಳ ಪ್ರಿಪೇಯ್ಡ್ ಪ್ಲಾನ್

ರಿಲಯನ್ಸ್ ಜಿಯೊ 1,499 ರೂಪಾಯಿಗಳ ನೆಟ್‌ಫ್ಲಿಕ್ಸ್ (ಬೇಸಿಕ್) ಎಂಬ ದೊಡ್ಡ ಪ್ರಿಪೇಯ್ಡ್ ರಿಚಾರ್ಜ್ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್‌ನಲ್ಲಿ ಜಿಯೊ ವೆಲ್‌ಕಮ್ ಆಫರ್‌ನೊಂದಿಗೆ ಅನಿಯಮಿತ 5ಜಿ ಡೇಟಾವನ್ನು ನೀಡುತ್ತಿದೆ. ದಿನಕ್ಕೆ 3 ಜಿಬಿ ಡೇಟಾ ಜೊತೆಗೆ 84 ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ. ಇದರಲ್ಲೂ ಅನಿಯಮಿತ ವಾಯ್ಸ್ ಕಾಲ್ಸ್ ಇರಲಿದೆ.

ಜಿಯೊ ಫ್ಲಾಟ್‌ಫಾರ್ಮ್ಸ್ ಲಿಮಿಟೆಡ್‌ನ ಸಿಇಒ ಕಿರಣ್ ಥಾಮಸ್ ಮಾತನಾಡಿ, ನಮ್ಮ ಬಳಕೆದಾರರಿಗೆ ವಿಶ್ವ ದರ್ಜೆಯ ಸೇವೆಗಳನ್ನು ತರಲು ನಾವು ಬದ್ಧರಾಗಿದ್ದೇವೆ. ನಮ್ಮ ಪ್ರಿಪೇಯ್ಡ್ ಯೋಜನೆಯೊಂದಿಗೆ ನೆಟ್‌ಫ್ಲಿಕ್ಸ್ ಬಂಡಲ್‌ಗಳ ಬಿಡುಗಡೆಯೂ ನಮ್ಮ ಸಂಕಲ್ಪವನ್ನು ಪ್ರದರ್ಶಿಸುವ ಮತ್ತೊಂದು ಹಂತವಾಗಿದೆ ಎಂದು ಹೇಳಿದ್ದಾರೆ. ನೆಟ್‌ಫ್ಲಿಕ್ಸ್‌ನಂತಹ ಜಾಗತಿಕ ಪಾಲುದಾರ ಸಂಸ್ಥೆಗಳೊಂದಿಗಿನ ಸಹಭಾಗಿತ್ವವು ಬಲವಾಗಿ ಬೆಳೆದಿದೆ. ನಾವು ಪ್ರಪಂಚದ ಇತರೆ ಭಾಗಗಳಲ್ಲೂ ನಮ್ಮ ಬಳಕೆಯ ಅವಕಾಶಗಳನ್ನು ರಚಿಸುತ್ತಿದ್ದೇವೆ ಎಂದಿದ್ದಾರೆ.

ಜಿಯೊ ಜೊತೆಗಿನ ನಮ್ಮ ಸಬಂಧವನ್ನು ವಿಸ್ತರಿಸಲು ನಾವು ತುಂಬಾ ರೋಮಾಂಚನಗೊಂಡಿದ್ದೇವೆ. ವರ್ಷಗಳಲ್ಲಿ, ನಾವು ವಿವಿಧ ಯಶಸ್ವಿ ಸ್ತಳೀಯ ಪ್ರದರ್ಶನಗಳು, ಡಾಕ್ಯುಮೆಂಟರಿಗಳು ಹಾಗೂ ಸಿನಿಮಾಗಳು ಹಾಗೂ ಭಾರತದಾದ್ಯಂತ ಇರುವ ಪ್ರೇಕ್ಷಕರನ್ನು ಇಷ್ಟಪಡುತ್ತೇವೆ. ನಮ್ಮಲ್ಲಿ ನೋಡಲೇಬೇಕಾದ ಸ್ಟೋರಿಗಳ ಸಂಗ್ರಹ ಬೆಳೆಯುತ್ತಲೇ ಇದೆ. ಜಿಯೊ ಜೊತೆಗಿನ ನಮ್ಮ ಹೊಸ ಪ್ರಿಪೇಯ್ಡ್ ಪ್ಲಾನ್‌ ಪಾಲುದಾರಿಕೆಯು ಭಾರತದ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಸಹಕಾರಿಯಾಗಲಿದೆ. ಇದೊಂದು ರೋಮಾಂಚಕಾರಿ ಲೈನ್‌-ಅಪ್ ಎಂದು ನೆಟ್‌ಫ್ಲಿಕ್ಸ್‌ನ ಎಪಿಎಸಿ ಪಾಲುದಾರಿಕೆಗಳ ಉಪಾಧ್ಯಕ್ಷ ಟೋನಿ ಝಮೆಕೋವ್ಸ್ಕಿ ಹೇಳಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.