ಕನ್ನಡ ಸುದ್ದಿ  /  Nation And-world  /  Delhi Mayor Election Explained: Delhi Mayor Election Fails Its Third Attempt What Happened Today

Delhi Mayor election Explained: ಕಗ್ಗಟ್ಟಾಂಗಿದೆ ದೆಹಲಿ ಮೇಯರ್‌ ಆಯ್ಕೆ ಪ್ರಕ್ರಿಯೆ; ಸತತ ಮೂರನೇ ಸಲ ಮುಂದೂಡಿದ ಕಲಾಪ- ಇಂದೇನಾಯಿತು?

Delhi Mayor election Explained: ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗೆ ಡಿ.4 ರಂದು ಮುನ್ಸಿಪಲ್ ಚುನಾವಣೆ ನಡೆದಿತ್ತು. ಅದಾಗಿ ಜ.6, ಜ. 24ರಂದು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಕಲಾಪ ನಡೆದಿವೆ. ಆದರೆ, ಬಿಜೆಪಿ ಮತ್ತು ಎಎಪಿ ಸದಸ್ಯರ ಗದ್ದಲ ಮತ್ತು ತೀವ್ರ ವಾಗ್ವಾದದ ಕಾರಣ ಮೇಯರ್‌ ಆಯ್ಕೆ ಸಾಧ್ಯವಾಗಲಿಲ್ಲ. ಸಭಾಧ್ಯಕ್ಷರು ಕಲಾಪವನ್ನು ಇಂದು ಕೂಡ ಮುಂದೂಡಿದರು.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ ಮೇಯರ್‌ ಆಯ್ಕೆ ಕಲಾಪದಲ್ಲಿ ಗದ್ದಲ
ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ ಮೇಯರ್‌ ಆಯ್ಕೆ ಕಲಾಪದಲ್ಲಿ ಗದ್ದಲ (ANI)

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಮೇಯರ್‌ ಆಯ್ಕೆ ಕಗ್ಗಂಟಾಗಿ ಉಳಿದಿದೆ. ಒಂದು ತಿಂಗಳ ಅವಧಿಯಲ್ಲಿ ಮೂರು ಸಲ ಸಭೆ ಸೇರಿದರೂ, ಮೇಯರ್‌ ಆಯ್ಕೆ ಮಾಡುವುದು ಸಾಧ್ಯವಾಗಿಲ್ಲ. ಸೋಮವಾರ (ಫೆ.6) ಅಂದರೆ ಇಂದು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಸಭೆ ಸೇರಿತಾದರೂ, ಮೇಯರ್‌ ಆಯ್ಕೆ ನಡೆಯಲಿಲ್ಲ. ಕಲಾಪ ಮುಂದೂಡಲ್ಪಟ್ಟಿದೆ.

ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್‌ಗೆ ಡಿಸೆಂಬರ್ 4 ರಂದು ಮುನ್ಸಿಪಲ್ ಚುನಾವಣೆ ನಡೆದಿತ್ತು. ಅದಾಗಿ ಜನವರಿ 6 ಮತ್ತು ಜನವರಿ 24ರಂದು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಕಲಾಪ ನಡೆದಿವೆ. ಆದರೆ, ಬಿಜೆಪಿ ಮತ್ತು ಎಎಪಿ ಸದಸ್ಯರ ನಡುವಿನ ಗದ್ದಲ ಮತ್ತು ತೀವ್ರ ವಾಗ್ವಾದದ ಕಾರಣ ಮೇಯರ್‌ ಆಯ್ಕೆ ಸಾಧ್ಯವಾಗಲಿಲ್ಲ. ಸಭಾಧ್ಯಕ್ಷರು ಕಲಾಪವನ್ನು ಇಂದು ಕೂಡ ಮುಂದೂಡಿದರು.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಕಾಯಿದೆ, 1957 ರ ಪ್ರಕಾರ, ನಾಗರಿಕ ಚುನಾವಣೆಯ ನಂತರ ಸದನದ ಮೊದಲ ಅಧಿವೇಶನದಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಯಾಗಬೇಕು. ಆದರೆ, ಪಾಲಿಕೆ ಚುನಾವಣೆ ನಡೆದು ಎರಡು ತಿಂಗಳು ಕಳೆದರೂ ದೆಹಲಿಯ ಮೇಯರ್ ಸ್ಥಾನ ಭರ್ತಿ ಆಗಿಲ್ಲ. ದೆಹಲಿಯ ಮುನ್ಸಿಪಲ್ ಚುನಾವಣೆ ಡಿಸೆಂಬರ್ 4 ರಂದು ನಡೆದವು ಮತ್ತು ಡಿಸೆಂಬರ್ 7 ರಂದು ಫಲಿತಾಂಶಗಳನ್ನು ಪ್ರಕಟವಾಗಿದೆ. ಇದರಲ್ಲಿ ಆಮ್ ಆದ್ಮಿ ಪಕ್ಷವು 250 ರಲ್ಲಿ ಗರಿಷ್ಠ134 ಸ್ಥಾನಗಳನ್ನು ಗಳಿಸಿತು.

ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಇಂದು ಏನಾಯಿತು?

ಮೇಯರ್, ಉಪಮೇಯರ್ ಮತ್ತು ಸ್ಥಾಯಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ನೀಡಲಾಗುವುದು ಎಂದು ಅಧ್ಯಕ್ಷೆ ಸತ್ಯ ಶರ್ಮಾ ಅವರು ಆಗಮಿಸಿ ಘೋಷಿಸಿದ ನಂತರ ಇಂದು ಬೆಳಗ್ಗೆ ದೆಹಲಿ ಮುನ್ಸಿಪಲ್‌ ಕಾರ್ಪೊರೇಶನ್‌ನಲ್ಲಿ ಸದನದ ಪ್ರಕ್ರಿಯೆಗಳು ಪ್ರಾರಂಭವಾದವು.

ಶರ್ಮಾ ಅವರ ಈ ಘೋಷಣೆಗೆ ಎಎಪಿ ಕೌನ್ಸಿಲರ್‌ಗಳಿಂದ ವಿರೋಧ ವ್ಯಕ್ತವಾಗಿದೆ. ಆಡಳಿತ ಪಕ್ಷದ ನಾಯಕ ಮುಖೇಶ್ ಗೋಯೆಲ್ ಮಾತನಾಡಿ, ಹಿರಿಯರು ಮತ ಹಾಕುವಂತಿಲ್ಲ. ನಾಮನಿರ್ದೇಶಿತ ಸದಸ್ಯರಿಗೆ ಚುನಾವಣೆಯಲ್ಲಿ ಮತ ಚಲಾಯಿಸಲು ಅವಕಾಶ ನೀಡುವ ಕುರಿತು ಕೋಲಾಹಲ ಭುಗಿಲೆದ್ದ ನಂತರ ಸದನವನ್ನು ಮುಂದೂಡುತ್ತಿರುವುದು ಇದು ಸತತ ಮೂರನೇ ಬಾರಿ.

ಸದನದಿಂದ ಹೊರಬಂದ ನಂತರ ಎಎಪಿ ನಾಯಕ ಅತಿಶಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, "ನಾವು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ ಮತ್ತು ಮೇಯರ್ ಚುನಾವಣೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಲು ನಾವು ಇಂದೇ ಹೋಗುತ್ತೇವೆ" ಎಂದು ಹೇಳಿದರು.

ದೆಹಲಿ ಮುನ್ಸಿಪಲ್ ಸದನವನ್ನು ಮುಂದೂಡಿರುವ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಬಿಜೆಪಿಯು ಗೂಂಡಾಗಿರಿಯನ್ನು ಮಾತ್ರ ನಂಬುತ್ತದೆ ಮತ್ತು ಮೇಯರ್ ಚುನಾವಣೆಯನ್ನು ನಡೆಸಲು ಬಿಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಎಂಸಿಡಿಯನ್ನು ಬಲವಂತವಾಗಿ ನಡೆಸಲು ಬಿಜೆಪಿ ಬಯಸಿದೆ ಮತ್ತು ಆದ್ದರಿಂದ ಸದನದಲ್ಲಿ ಗದ್ದಲವನ್ನು ಸೃಷ್ಟಿಸುತ್ತಿದೆ ಎಂದು ಸಿಸೋಡಿಯಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಎಎಪಿ ಕೌನ್ಸಿಲರ್‌ಗಳು ಮೌನವಾಗಿ ಕುಳಿತಿರುವಾಗ ಬಿಜೆಪಿಯವರು ಗದ್ದಲ ಎಬ್ಬಿಸಿದರು. ಬಿಜೆಪಿಯವರು ಸೃಷ್ಟಿಸಿದ ಗಲಾಟೆಯು ಪಕ್ಷಕ್ಕೆ ಸಂವಿಧಾನ, ಕಾನೂನುಗಳಲ್ಲಿ ನಂಬಿಕೆಯಿಲ್ಲ ಮತ್ತು ಅವರು ಗೂಂಡಾಗಿರಿಯನ್ನು ಮಾತ್ರ ನಂಬುತ್ತಾರೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

IPL_Entry_Point