ಕನ್ನಡ ಸುದ್ದಿ  /  Nation And-world  /  Edu Minister Launches New Bs Course At Iit Madras, Jee Not Needed For Admission

IIT Madras Course: ಐಐಟಿ ಮದ್ರಾಸ್‌ ಕೋರ್ಸ್‌ನಲ್ಲಿ ಹೊಸ ಬಿಎಸ್‌ ಕೋರ್ಸ್‌, ಅಡ್ಮಿಷನ್‌ ಆಗೋರು ಜೆಇಇ ಪರೀಕ್ಷೆ ಬರೆದಿರಬೇಕಾಗಿಲ್ಲ!

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಇಂದು ನಾಲ್ಕು ವರ್ಷದ ಬ್ಯಾಚುಲರ್‌ ಆಫ್‌ ಸೈನ್ಸ್‌ (ಬಿಎಸ್‌) ಕೋರ್ಸ್‌ ಅನ್ನು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮದ್ರಾಸ್‌ನಲ್ಲಿ ಲಾಂಚ್‌ ಮಾಡಿದ್ದಾರೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌  (File Photo)
ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ (File Photo) (HT_PRINT)

ಉನ್ನತ ಶಿಕ್ಷಣ ಪಡೆಯಲು ಬಯಸುವವರು ಜೆಇಇ ಮೇನ್ಸ್‌, ಅಡ್ವಾನ್ಸಡ್‌ ಇತ್ಯಾದಿ ಪ್ರವೇಶ ಪರೀಕ್ಷೆ ಬರೆದು ಪ್ರಮುಖ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಪಡೆಯಲು ಬಯಸುತ್ತಾರೆ. ಆದರೆ, ಇಂತಹ ಪ್ರವೇಶ ಪರೀಕ್ಷೆಗಳ ಹಂಗಿಲ್ಲದೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಸೇರಲು ಬಯಸುವವರಿಗೆ ಇಲ್ಲೊಂದು ಅವಕಾಶವಿದೆ.

ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಇಂದು ನಾಲ್ಕು ವರ್ಷದ ಬ್ಯಾಚುಲರ್‌ ಆಫ್‌ ಸೈನ್ಸ್‌ (ಬಿಎಸ್‌) ಕೋರ್ಸ್‌ ಅನ್ನು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಮದ್ರಾಸ್‌ನಲ್ಲಿ ಲಾಂಚ್‌ ಮಾಡಿದ್ದಾರೆ. ನೂತನ ನಾಲ್ಕು ವರ್ಷದ ಎಲೆಕ್ಟ್ರಾನಿಕ್‌ ಸಿಸ್ಟಮ್ಸ್‌ ಕೋರ್ಸ್‌ ಅನ್ನು ಆನ್‌ಲೈನ್‌ ಮೂಲಕ ನೀಡಲಾಗುತ್ತದೆ.

ಐಐಟಿ ಮದ್ರಾಸ್‌ನ ಇತರೆ ಅಂಡ್‌ಗ್ರಾಜುವೇಟ್‌ ಕೋರ್ಸ್‌ಗಳಿಗೆ ಸೇರಲು ಜಾಯಿಂಟ್‌ ಎಂಟ್ರೆನ್ಸ್‌ ಎಗ್ಸಾಮಿನೇಷನ್‌ (ಜೆಇಇ) ಉತ್ತೀರ್ಣರಾಗಿರುವುದು ಕಡ್ಡಾಯ. ಆದರೆ, ಇಂದು ಲಾಂಚ್‌ ಮಾಡಲಾದ ಕೋರ್ಸ್‌ಗೆ ಸೇರಲು ಜಂಟಿ ಪ್ರವೇಶ ಪರೀಕ್ಷೆಯ ಅಂಕಗಳು ಅಗತ್ಯವಿಲ್ಲ.

ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಎಂಬೆಡೆಡ್ ಉತ್ಪಾದನಾ ವಲಯದಲ್ಲಿ ನುರಿತ ಪದವೀಧರರಿಗೆ ಬೇಡಿಕೆ ಹೆಚ್ಚುತ್ತಿದ್ದು, ಈ ಬೇಡಿಕೆಯನ್ನು ಪೂರೈಸುವ ಉದ್ದೇಶದಿಂದ ಕೋರ್ಸ್ ಅನ್ನು ಪ್ರಾರಂಭಿಸಲಾಗಿದೆ ಎಂದು ಐಐಟಿ ಮದ್ರಾಸ್ ಹೇಳಿದೆ.

ಈ ಕಾರ್ಯಕ್ರಮವು ಬಹು ನಿರ್ಗಮನ ವೈಶಿಷ್ಟ್ಯವನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ಪ್ರಮಾಣಪತ್ರ ಪಡೆದು ಈ ಕೋರ್ಸ್‌ ಬಿಡಬಹುದು. ಡಿಪ್ಲೊಮಾ ಕೋರ್ಸ್‌ ಆಗಿ ಬಳಸಬಹುದು ಅಥವಾ ನಾಲ್ಕು ವರ್ಷದ ಸಂಪೂರ್ಣ ಬಿಎಸ್‌ ಕೋರ್ಸ್‌ ಆಗಿ ಕಲಿಯಬಹುದು ಎಂದು ಐಐಟಿ ಮದ್ರಾಸ್‌ ಮಾಹಿತಿ ನೀಡಿದೆ.

"ಭಾರತದ ಸೆಮಿಕಂಡಕ್ಟರ್‌ ಮಿಷನ್‌ ಜತೆ ಈ ಪ್ರೋಗ್ರಾಂ ಅನ್ನು ಸಂಯೋಜಿಸಲಾಗಿದೆ. ಭಾರತವನ್ನು ಎಲೆಕ್ಟ್ರಾನಿಕ್‌ ತಯಾರಿಕೆ ಮತ್ತು ವಿನ್ಯಾಸ ಕ್ಷೇತ್ರದಲ್ಲಿ ಜಾಗತಿಕ ಹಬ್‌ ಆಗಿಸುವ ಉದ್ದೇಶ ಹೊಂದಿದೆ. ಇದೇ ರೀತಿಯ ಡೇಟಾ ಸೈನ್ಸ್‌ ಆಂಡ್‌ ಅಪ್ಲಿಕೇಷನ್ಸ್‌ ಕೋರ್ಸ್‌ ಐಐಟಿ ಮದ್ರಾಸ್‌ನಲ್ಲಿದೆ. ಇದನ್ನು ಹದಿನೇಳು ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ" ಎಂದು ಐಐಟಿ ಮದ್ರಾಸ್‌ ತಿಳಿಸಿದೆ.

ಐಐಟಿ ಶಿಕ್ಷಣವು ಹೆಚ್ಚಿನ ಜನರಿಗೆ ತಲುಪಬೇಕೆಂಬ ಉದ್ದೇಶದಿಂದ, ಈ ಕೋರ್ಸ್‌ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಎಸ್‌ಸಿ, ಎಸ್‌ಟಿ, ಪಿಡಬ್ಲ್ಯುಡಿ ವಿದ್ಯಾರ್ಥಿಗಳಿಗೆ ಹೆಚ್ಚುವರಿಯಾಗಿ ಸ್ಕಾಲರ್‌ಶಿಪ್‌ ಸಹ ನೀಡಲಾಗುತ್ತದೆ. ವರ್ಷಕ್ಕೆ ಐದು ಲಕ್ಷ ರೂ.ಗಿಂತ ಕಡಿಮೆ ಆದಾಯ ಇರುವ ಅಭ್ಯರ್ಥಿಗಳಿಗೆ ಸ್ಕಾಲರ್‌ಶಿಪ್‌ ನೆರವು ನೀಡಲಾಗುತ್ತದೆ ಎಂದು ಐಐಟಿ ಮದ್ರಾಸ್‌ ತಿಳಿಸಿದೆ.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಆನ್‌ಲೈನ್‌ ಪಿಜಿ ಡಿಪ್ಲೊಮಾ; ಮೂರು ಭಾಷೆಗಳಲ್ಲಿ ಕೋರ್ಸ್‌ ಘೋಷಿಸಿದ ಇಗ್ನೋ

ಇಂದಿರಾಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ (IGNOU)ಯ ಸ್ಕೂಲ್‌ ಆಫ್‌ ಜರ್ನಲಿಸಂ ಆಂಡ್‌ ಮೀಡಿಯಾ ಸ್ಟಡೀಸ್‌ ಈಗ ಮೂರು ಭಾಷೆಗಳಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪಿಜಿ ಡಿಪ್ಲೊಮಾ ಕೋರ್ಸ್‌ ಆರಂಭಿಸಿದೆ. ಇದು ಆನ್‌ಲೈನ್‌ ಮಾದರಿಯಲ್ಲಿದ್ದು, ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಇಗ್ನೋದ ಅಧಿಕೃತ ವೆಬ್‌ ತಾಣ ignouiop.samarth.edu.in ನಲ್ಲಿ ಲಾಗಿನ್‌ ಆಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ವಿವರ ಇಲ್ಲಿದೆ.

IPL_Entry_Point

ವಿಭಾಗ