ಕನ್ನಡ ಸುದ್ದಿ  /  Nation And-world  /  Ignou Pg Diploma: Ignou Launches Pg Diploma In Journalism And Mass Communication In 3 Languages

IGNOU PG diploma: ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಆನ್‌ಲೈನ್‌ ಪಿಜಿ ಡಿಪ್ಲೊಮಾ; ಮೂರು ಭಾಷೆಗಳಲ್ಲಿ ಕೋರ್ಸ್‌ ಘೋಷಿಸಿದ ಇಗ್ನೋ

IGNOU PG diploma: ಇಂದಿರಾಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ (IGNOU)ಯ ಸ್ಕೂಲ್‌ ಆಫ್‌ ಜರ್ನಲಿಸಂ ಆಂಡ್‌ ಮೀಡಿಯಾ ಸ್ಟಡೀಸ್‌ ಈಗ ಮೂರು ಭಾಷೆಗಳಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪಿಜಿ ಡಿಪ್ಲೊಮಾ ಆನ್‌ಲೈನ್‌ ಕೋರ್ಸ್‌ ಆರಂಭಿಸಿದೆ.

ಮೂರು ಭಾಷೆಗಳಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್‌ ಆರಂಭಿಸಿದ ಇಗ್ನೋ
ಮೂರು ಭಾಷೆಗಳಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪಿಜಿ ಡಿಪ್ಲೊಮಾ ಕೋರ್ಸ್‌ ಆರಂಭಿಸಿದ ಇಗ್ನೋ

ಇಂದಿರಾಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿ (IGNOU)ಯ ಸ್ಕೂಲ್‌ ಆಫ್‌ ಜರ್ನಲಿಸಂ ಆಂಡ್‌ ಮೀಡಿಯಾ ಸ್ಟಡೀಸ್‌ ಈಗ ಮೂರು ಭಾಷೆಗಳಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪಿಜಿ ಡಿಪ್ಲೊಮಾ ಕೋರ್ಸ್‌ ಆರಂಭಿಸಿದೆ. ಇದು ಆನ್‌ಲೈನ್‌ ಮಾದರಿಯಲ್ಲಿದ್ದು, ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವವರು ಇಗ್ನೋದ ಅಧಿಕೃತ ವೆಬ್‌ ತಾಣ ignouiop.samarth.edu.in ನಲ್ಲಿ ಲಾಗಿನ್‌ ಆಗಿ ಅರ್ಜಿ ಸಲ್ಲಿಸಬಹುದು.

ಈ ಕುರಿತು ಇಗ್ನೋ (IGNOU) ಹೊರಡಿಸಿದ ಅಧಿಕೃತ ಪತ್ರಿಕಾ ಪ್ರಕಟಣೆಯ ಪ್ರಕಾರ, ಇಗ್ನೋದ ವೈಸ್‌ ಚಾನ್ಸಲರ್‌ ಮತ್ತು ತಮಿಳುನಾಡು ಸೆಂಟ್ರಲ್‌ ಯೂನಿವರ್ಸಿಟಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ ಮುಖ್ಯಸ್ಥ ಪ್ರೊ. ಜಿ. ರವೀಂದ್ರನ್, ಐಐಎಂಸಿಯ ಭಾರತೀಯ ಭಾಷಾ ಪತ್ರಿಕೋದ್ಯಮ ವಿಭಾಗದ ಪ್ರೊ. ಆನಂದ ಪ್ರಧಾನ್‌, ಹರಿಯಾಣ ಹಿಸ್ಸಾರ್‌ನ ಗುರು ಜಂಭೇಶ್ವರ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನ ವಿಭಾಗದ ಡೀನ್‌ ಮತ್ತು ಮಾಜಿ ನಿರ್ದೇಶಕ ಪ್ರೊ. ಉಮೇಶ್ ಆರ್ಯ ಕೂಡ ಈ ಕೋರ್ಸ್‌ನ ಆನ್‌ಲೈನ್‌ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು.

ಯಾವುದೇ ವಿಭಾಗದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕೋರ್ಸ್ ಅವಧಿಯು 1 ವರ್ಷ. ಪ್ರೋಗ್ರಾಂಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಕೆಳಗೆ ನೀಡಲಾದ ಈ ಸರಳ ಹಂತಗಳನ್ನು ಅನುಸರಿಸಬಹುದು.

ಇಗ್ನೋ ಪಿಜಿ ಡಿಪ್ಲೊಮಾಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

  • ಇಗ್ನೋ ಸಮರ್ಥ್‌ ಎಂಬ ಅಧಿಕೃತ ವೆಬ್‌ಸೈಟ್‌ ignouiop.samarth.edu.in ಗೆ ಭೇಟಿ ನೀಡುವುದು
  • ಅಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಪಿಜಿಡಿಪ್ಲೊಮಾದ ಲಿಂಕ್‌ ಕ್ಲಿಕ್‌ ಮಾಡುವುದು.
  • ಆಗ ಹೊಸ ಪೇಜ್‌ ಓಪನ್‌ ಆಗುತ್ತೆ. ಅಲ್ಲಿ ಅಭ್ಯರ್ಥಿಗಳು ಸೈನ್‌ ಇನ್‌ ಲಿಂಕ್‌ ಕ್ಲಿಕ್‌ ಮಾಡಬೇಕು.
  • ರಿಜಿಸ್ಟ್ರೇಶನ್‌ ವಿವರ ಭರ್ತಿ ಮಾಡಿ ಬಳಿಕ ಸಬ್‌ಮಿಟ್‌ ಕ್ಲಿಕ್‌ ಮಾಡುವುದು
  • ಒಮ್ಮೆ ರಿಜಿಸ್ಟ್ರೇಶನ್‌ ಪೂರ್ತಿಯಾದ ಬಳಿಕ, ಅರ್ಜಿ ಭರ್ತಿ ಮಾಡಬೇಕು ಮತ್ತು ಅರ್ಜಿ ಶುಲ್ಕ ಪಾವತಿಸಬೇಕು.
  • ಇಷ್ಟಾದ ಬಳಿಕ ಸಬ್‌ಮಿಟ್‌ ಕ್ಲಿಕ್‌ ಮಾಡಿ, ಬಳಿಕ ಪೇಜ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು.
  • ಭವಿಷ್ಯದ ಅಗತ್ಯಕ್ಕಾಗಿ ಹಾರ್ಡ್‌ ಕಾಪಿ ಇಟ್ಟುಕೊಳ್ಳಿ

ಕೋರ್ಸ್‌ನ ಶುಲ್ಕ 12,500 ರೂಪಾಯಿ. ಹೆಚ್ಚಿನ ಮಾಹಿತಿಗೆ ಇಗ್ನೋದ ಅಧಿಕೃತ ವೆಬ್‌ಸೈಟ್‌ ಗಮನಿಸಬಹುದು.

ಗಮನಿಸಬಹುದಾದ ಸುದ್ದಿ

ಸಂಸತ್ತಿನಲ್ಲಿ ಇಂದು 2023-24ನೇ ಸಾಲಿನ ಆರ್ಥಿಕ ಸಮೀಕ್ಷೆ ಮಂಡನೆಯಾಯಿತು. ಕೇಂದ್ರ ಬಜೆಟ್‌ ಮಂಡನೆಗೆ ಒಂದು ದಿನ ಮುಂಚಿತವಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಆರ್ಥಿಕ ಸಮೀಕ್ಷೆಯನ್ನು ಇಂದು ಸಂಸತ್‌ನಲ್ಲಿ ಮಂಡಿಸಿದರು. ಆರ್ಥಿಕ ಸಮೀಕ್ಷೆಯು ಆರ್ಥಿಕತೆಯ ವಾರ್ಷಿಕ ರಿಪೋರ್ಟ್‌ ಕಾರ್ಡ್ ಆಗಿದೆ. ಇದನ್ನು ಬಜೆಟ್‌ಗೆ ಒಂದು ದಿನ ಮೊದಲು ಪ್ರಸ್ತುತಪಡಿಸಲಾಗುತ್ತದೆ. ಪ್ರತಿಯೊಂದು ಕ್ಷೇತ್ರದ ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತದೆ ಮತ್ತು ನಂತರ ಭವಿಷ್ಯದ ಚಲನೆಗಳನ್ನು ಸೂಚಿಸುವ ಕೆಲಸವನ್ನು ಈ ಆರ್ಥಿಕ ಸಮೀಕ್ಷೆ ಮಾಡುತ್ತದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

ಕನ್ನಡ ಪುಸ್ತಕ ಲೋಕವು ಆಧುನಿಕ ಮಾಧ್ಯಮಗಳ ನೂತನ ಅವಿಷ್ಕಾರಗಳ ಫಲವಾಗಿ ವಿಸ್ತಾರಗೊಳ್ಳುತ್ತಿದೆ. ಹೀಗಾಗಿ ಪುಸ್ತಕೋದ್ಯಮದ ಎಲ್ಲ ಸಾಧ್ಯತೆ ಮತ್ತು ಸವಾಲುಗಳನ್ನು ಹೊಸ ದೃಷ್ಠಿಕೋನದಿಂದ ನೋಡುವ ಅಗತ್ಯ ಇದೆ. ಆದ್ದರಿಂದ ಕನ್ನಡ ಪುಸ್ತಕ ನೀತಿಯನ್ನು ಪುನರ್ ರಚಿಸಲು ನಿರ್ಧರಿಸಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಹೇಳಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

IPL_Entry_Point