ಕನ್ನಡ ಸುದ್ದಿ  /  Nation And-world  /  Employee Of Bengaluru Company Died In Turkey Earthquake, Vijay Kumar Gaud Identified By Om Tattoo

Turkey Earthquake: ಬೆಂಗಳೂರಿನಿಂದ ಟರ್ಕಿಗೆ ಬಿಸ್ನೆಸ್‌ ಟ್ರಿಪ್‌ಗೆ ಹೋದ ವ್ಯಕ್ತಿ ಭೂಕಂಪಕ್ಕೆ ಬಲಿ, ಓಂ ಟ್ಯಾಟೂನಿಂದ ಶವದ ಗುರುತು ಪತ್ತೆ

Turkey Earthquake: ಟರ್ಕಿ ಭೂಕಂಪದಲ್ಲಿ ಬೆಂಗಳೂರು ಉದ್ಯೋಗಿಯೊಬ್ಬರೂ ಮೃತರಾಗಿದ್ದು, ಬಿಸ್ನೆಸ್‌ ಟ್ರಿಪ್‌ಗೆ ಹೋಗಿದ್ದ ವಿಜಯ್‌ ಕುಮಾರ್‌ ಗೌಡ್‌ ಅವರ ಶವವು ಅವಶೇಷಗಳಡಿ ದೊರಕಿದೆ.

Turkey Earthquake: ಬೆಂಗಳೂರಿನಿಂದ ಟರ್ಕಿಗೆ ಬಿಸ್ನೆಸ್‌ ಟ್ರಿಪ್‌ಗೆ ಹೋದ ವ್ಯಕ್ತಿ ಭೂಕಂಪಕ್ಕೆ ಬಲಿ, ಓಂ ಟ್ಯಾಟೂನಿಂದ ಶವದ ಗುರುತು ಪತ್ತೆ
Turkey Earthquake: ಬೆಂಗಳೂರಿನಿಂದ ಟರ್ಕಿಗೆ ಬಿಸ್ನೆಸ್‌ ಟ್ರಿಪ್‌ಗೆ ಹೋದ ವ್ಯಕ್ತಿ ಭೂಕಂಪಕ್ಕೆ ಬಲಿ, ಓಂ ಟ್ಯಾಟೂನಿಂದ ಶವದ ಗುರುತು ಪತ್ತೆ

ಇಸ್ತಾನ್‌ಬುಲ್‌: ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಈಗಾಗಲೇ 28 ಸಾವಿರಾರು ಜನರು ಬಲಿಯಾಗಿದ್ದು, ಹಲವು ಸಾವಿರ ಜನರು ಗಾಯಗೊಂಡಿದ್ದಾರೆ. ಭೂಕಂಪ ಪೀಡಿತ ಪ್ರದೇಶಗಳು ನರಕಸದೃಶವಾಗಿದ್ದು, ಎಲ್ಲೆಡೆ ಹೆಣದ ವಾಸನೆ ಆವರಿಸಿದೆ. ಭಾರತ ಸೇರಿದಂತೆ ವಿವಿಧ ದೇಶಗಳ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಟರ್ಕಿ ಭೂಕಂಪದಲ್ಲಿ ಬೆಂಗಳೂರು ಉದ್ಯೋಗಿಯೊಬ್ಬರೂ ಮೃತರಾಗಿದ್ದು, ಬಿಸ್ನೆಸ್‌ ಟ್ರಿಪ್‌ಗೆ ಹೋಗಿದ್ದ ವಿಜಯ್‌ ಕುಮಾರ್‌ ಗೌಡ್‌ ಅವರ ಶವವು ಅವಶೇಷಗಳಡಿ ದೊರಕಿದೆ.

ಮಲಾತ್ಯ ನಗರದ ಹೋಟೆಲ್‌ವೊಂದರ ಅವಶೇಷಗಳಡಿ ವಿಜಯ್‌ ಕುಮಾರ್‌ ಮೃತದೇಹ ಪತ್ತೆಯಾಗಿತ್ತು. ಅವರ ಕೈಯೊಂದರ ಮೇಲೆ ಓಂ ಚಿನ್ಹೆಯ ಟ್ಯಾಟೂ ಇದ್ದು, ಆ ಟ್ಯಾಟೂ ಆಧಾರದಲ್ಲಿ ಅವರ ಶವವನ್ನು ಗುರುತು ಪತ್ತೆಹಚ್ಚಲಾಗಿದೆ. ಶವದ ಮುಖವು ಸಂಪೂರ್ಣವಾಗಿ ಛಿದ್ರವಾಗಿದೆ ಎನ್ನಲಾಗಿದೆ.

ಬಿಸ್ನೆಸ್‌ ಪ್ರವಾಸಕ್ಕಾಗಿ ಅರ್ಕಿಗೆ ತೆರಳಿದ್ದ ವಿಜಯ್‌ ಕುಮಾರ್‌ ಗೌಡ್‌ ಅವರು ಉತ್ತರಾಖಂಡದ ಪೌಂಡಿ ಜಿಲ್ಲೆಯ ನಿವಾಸಿ. ಇವರು ಬೆಂಗಳೂರು ಮೂಲದ ಆಕ್ಸಿಪ್ಲಾಂಟ್‌ ಇಂಡಿಯಾ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಟರ್ಕಿಯಲ್ಲಿ ಕಂಪನಿಯ ಘಟಕವೊಂದನ್ನು ಸ್ಥಾಪಿಸುವ ನಿಟ್ಟಿನಲ್ಲಿ ಅವರು ಅಲ್ಲಿಗೆ ಪ್ರಯಾಣ ಬೆಳೆಸಿದ್ದರು. ಮಲಾತ್ಯ ನಗರದ ಹೋಟೆಲ್‌ನಲ್ಲಿ ತಂಗಿದ್ದ ವೇಳೆಯಲ್ಲಿ ಭೂಕಂಪ ಸಂಭವಿಸಿದ್ದಾರೆ.

ವಿಜಯ್‌ ಕುಮಾರ್‌ ಮರಳಿ ಬರಬಹುದು ಎಂದು ಅವರ ಪತ್ನಿ, ಮಕ್ಕಳು ಮತ್ತು ಕುಟುಂಬದ ಇತರರು ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ, ಅವರ ಪ್ರಾರ್ಥನೆ ಫಲಿಸಲಿಲ್ಲ.

ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪ ಸಂಭವಿಸಿದ ದಿನದಿಂದ ಇವರು ನಾಪತ್ತೆಯಾಗಿದ್ದರು. ಇವರ ಕುಟುಂಬ ಇವರನ್ನು ಸಂಪರ್ಕಿಸಲು ಯತ್ನಿಸಿದರೂ ಯಾವುದೇ ಸಂಪರ್ಕ ದೊರಕಿರಲಿಲ್ಲ. ಈ ಕುರಿತು ಅವರ ಕುಟುಂಬವು ಟರ್ಕಿಯಲ್ಲಿರುವ ಭಾರತೀಯ ದೂತವಾಸಕ್ಕೆ ಮಾಹಿತಿ ನೀಡಿದ್ದರು. ಇದೀಗ ಇವರ ಶವಪತ್ತೆಯಾಗಿದೆ. ಇಸ್ತಾನ್‌ಬುಲ್‌ನಿಂದ ದಿಲ್ಲಿಗೆ ವಿಜಯ್‌ ಶವವನ್ನು ದಿಲ್ಲಿಗೆ ವಿಶೇಷ ವಿಮಾನದಲ್ಲಿ ತರಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಟರ್ಕಿಯಲ್ಲಿ ಪ್ರಬಲ ಭೂಕಂಪದ ಬಳಿಕ ಭಾರತ ಸಹಾಯ ಹಸ್ತವನ್ನು ಚಾಚಿದೆ. ಭಾರತ 'ಆಪರೇಷನ್ ದೋಸ್ತ್' ಅಡಿಯಲ್ಲಿ ಸಿರಿಯಾಕ್ಕೆ ವಸ್ತು, ವೈದ್ಯಕೀಯ ಸರಬರಾಜು ಮತ್ತು ಉಪಕರಣಗಳನ್ನು ಒದಗಿಸುತ್ತಿದೆ.

ಟರ್ಕಿಯಲ್ಲಿ 3,000 ಭಾರತೀಯರಿದ್ದಾರೆ. ಆದರೆ ಭೂಕಂಪನದಿಂದಾಗಿ ಹತ್ತು ಭಾರತೀಯರು ಟರ್ಕಿಯ ಹಲವು ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದರು. ಆದರೆ ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಒಬ್ಬರು ಮಾತ್ರ ಕಾಣೆಯಾಗಿದ್ದಾರೆ ಎಂದು ವಿದೇಶಾಂಗ ಸಚಿವಾಲಯವು ಇತ್ತೀಚೆಗೆ ತಿಳಿಸಿತ್ತು.

ಇತ್ತೀಚಿನ ವರದಿಯ ಪ್ರಕಾರ ಟರ್ಕಿ, ಸಿರಿಯಾದ ಭೂಕಂಪದಲ್ಲಿ 28 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಟರ್ಕಿಯಲ್ಲಿ 72, 879 ಮಂದಿ ಗಾಯಗೊಂಡಿದ್ದರೆ, ಸಿರಿಯಾದಲ್ಲಿ 5,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಆದರೆ ಅನೇಕ ಆಸ್ಪತ್ರೆಗಳು ಕುಸಿದು ಬಿದ್ದಿದ್ದು, ಚಿಕಿತ್ಸೆ ಕೊಡಿಸಲೂ ಪರದಾಡುವಂತಾಗಿದೆ.

2011ರಲ್ಲಿ ಜಪಾನ್​ನ ಫುಕುಶಿಮಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 18,000ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. ಇದಕ್ಕಿಂತ ಭೀಕರ ಪರಿಸ್ಥಿತಿ ಟರ್ಕಿಗೆ ಬಂದೊದಗಿದೆ.

IPL_Entry_Point