ಕನ್ನಡ ಸುದ್ದಿ  /  Nation And-world  /  Gold Silver Price Increased In India June 3 Gold And Silver Price Bengaluru Karnataka Price Per Gram Pcp

Gold Price Today: ಕರ್ನಾಟಕದಲ್ಲಿ ಚಿನ್ನ ಬೆಳ್ಳಿ ದರ ಏರಿಕೆ, ಚಿನಿವಾರ ಪೇಟೆಗೆ ಹೋಗುವ ಮುನ್ನ ದರ ತಿಳಿದುಕೊಳ್ಳಿ

Gold Price Today: ನಿನ್ನೆ ಇಳಿಕೆ ಕಂಡಿದ್ದ ಚಿನ್ನದ ದರ ಇಂದು ಏರಿಕೆ ದಾಖಲಿಸಿದೆ. ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,605 ರೂ. ಇದೆ. ನಿನ್ನೆಯ 5,575 ರೂ. ಗೆ ಹೋಲಿಸಿದರೆ 30 ರೂಪಾಯಿ ಏರಿಕೆಯಾಗಿದೆ.

Gold Price Today: ಕರ್ನಾಟಕದಲ್ಲಿ ಚಿನ್ನ ಬೆಳ್ಳಿ ದರ ಏರಿಕೆ, ಚಿನಿವಾರ ಪೇಟೆಗೆ ಹೋಗುವ ಮುನ್ನ ದರ ತಿಳಿದುಕೊಳ್ಳಿ
Gold Price Today: ಕರ್ನಾಟಕದಲ್ಲಿ ಚಿನ್ನ ಬೆಳ್ಳಿ ದರ ಏರಿಕೆ, ಚಿನಿವಾರ ಪೇಟೆಗೆ ಹೋಗುವ ಮುನ್ನ ದರ ತಿಳಿದುಕೊಳ್ಳಿ

ಬೆಂಗಳೂರು: ವಾರಾಂತ್ಯದಲ್ಲಿ ಆಭರಣ ಖರೀದಿಸಲೆಂದು ಚಿನಿವಾರ ಪೇಟೆಗೆ ಹೋಗುವವರು ಇಂದು ಚಿನ್ನ ಮತ್ತು ಬೆಳ್ಳಿಗೆ ನಿನ್ನೆಗಿಂತ ತುಸು ಹೆಚ್ಚು ಹಣ ನೀಡಬೇಕು. ಏಕೆಂದರೆ, ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ದರ ಹೆಚ್ಚಾಗಿದೆ. ಇಂದು ಮಂಗಳೂರು, ಮೈಸೂರು ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯದ ಪ್ರಮುಖ ನಗರಗಳಲ್ಲಿಇಂದಿನ ಚಿನ್ನ ಮತ್ತು ಬೆಳ್ಳಿ ದರ ಎಷ್ಟಿದೆ ಎಂದು ತಿಳಿದುಕೊಳ್ಳೋಣ.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

22 ಕ್ಯಾರೆಟ್‌ ಚಿನ್ನದ ದರ (22 carat gold rate)

ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,605 ರೂ. ಇದೆ. ನಿನ್ನೆಯ 5,575 ರೂ. ಗೆ ಹೋಲಿಸಿದರೆ 30 ರೂಪಾಯಿ ಏರಿಕೆಯಾಗಿದೆ. ಎಲ್ಲಾದರೂ ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 44,840 ರೂಪಾಯಿ ನೀಡಬೇಕು. ನಿನ್ನೆಯ 44,600 ರೂ.ಗೆ ಹೋಲಿಸಿದರೆ ದರ 240 ರೂ.ನಷ್ಟು ಏರಿಕೆಯಾಗಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 56,050 ರೂ. ಇದೆ. ನಿನ್ನೆಯ 55,750 ರೂ.ಗೆ ಹೋಲಿಸಿದರೆ ಇಂದು 100 ರೂ. ಏರಿಕೆ ಕಂಡಿದೆ. ನೂರು ಗ್ರಾಂ ಚಿನ್ನದ ದರ ಇಂದು 5,60,500 ರೂ.ಗೆ ತಲುಪಿದ್ದು, ನಿನ್ನೆಯ 5,57,500 ರೂ.ಗೆ ಹೋಲಿಸಿದರೆ ಇಂದು 3,000 ರೂ. ಏರಿಕೆ ಕಂಡಿದೆ.

24 ಕ್ಯಾರೆಟ್‌ ಚಿನ್ನದ ದರ (24 carat gold rate)

ಇಂದು ಒಂದು ಗ್ರಾಂ 24 ಕ್ಯಾರೆಟ್‌ ಚಿನ್ನದ ದರ 6,115 ರೂ. ಇದೆ. ನಿನ್ನೆಯ 6,081 ರೂ.ಗೆ ಹೋಲಿಸಿದರೆ ಇಂದು 34 ರೂ. ಏರಿಕೆ ಕಂಡಿದೆ. ಎಲ್ಲಾದರೂ ನೀವು 8 ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 48,920 ರೂ. ನೀಡಬೇಕು. ನಿನ್ನೆಯ 48,648 ರೂ.ಗೆ ಹೋಲಿಸಿದರೆ ಇಂದು 272 ರೂ. ಏರಿಕೆ ಕಂಡಿದೆ. ಹತ್ತು ಗ್ರಾಂ ಚಿನ್ನದ ದರ ಇಂದು 61,150 ರೂ. ಇದೆ. ನಿನ್ನೆಯ 60,810 ರೂ.ಗೆ ಹೋಲಿಸಿದರೆ ಇಂದು 340 ರೂ. ಏರಿಕೆ ಕಂಡಿದೆ. ನೂರು ಗ್ರಾಂ ಚಿನ್ನ ಖರೀದಿಸುವುದಾದರೆ ಇಂದು 6,11,500 ರೂ. ನೀಡಬೇಕು. ನಿನ್ನೆಯ 6,08,100 ರೂ.ಗೆ ಹೋಲಿಸಿದರೆ ಇಂದು 3,400 ರೂ. ಏರಿಕೆಯಾಗಿದೆ.

ಕರ್ನಾಟಕದಲ್ಲಿ ಇಂದಿನ ಚಿನ್ನದ ದರ

10 ಗ್ರಾಂ 22 ಕ್ಯಾರೆಟ್‌ ಚಿನ್ನದ ದರ ಇಂದು ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ 56050 ರೂ. ಇದೆ. ಇಂದು ಬೆಂಗಳೂರು, ಮೈಸೂರು, ಮಂಗಳೂರು, ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ 10 ಗ್ರಾಂ 24 ಕ್ಯಾರೆಟ್‌ ಚಿನ್ನದ ದರ ಇಂದು 61150 ರೂ. ಇದೆ.

ಬೆಳ್ಳಿ ದರವೆಷ್ಟು?

ದೇಶದಲ್ಲಿ ಬೆಳ್ಳಿ ಬೆಲೆ ಇಂದು ತುಸು ಏರಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ದರ 74.50 ರೂ.ಗೆ ತಲುಪಿದೆ. ನಿನ್ನೆ 73 ರೂಪಾಯಿ ಇತ್ತು. 1.50 ರೂ. ಏರಿಕೆ ಕಂಡಿದೆ. ಇದೇ ರೀತಿ, 8 ಗ್ರಾಂ ಬೆಳ್ಳಿ ದರ 596 ರೂ.ಗೆ ತಲುಪಿದೆ. ನಿನ್ನೆ 584ರೂಪಾಯಿ ಇತ್ತು. ನಿನ್ನೆಗಿಂತ ಇಂದು 12 ರೂ. ಏರಿಕೆ ಕಂಡಿದೆ. ಇದೇ ರೀತಿ, 10 ಗ್ರಾಂ ಬೆಳ್ಳಿ ದರ 745 ರೂ.ಗೆ ತಲುಪಿದೆ. ನಿನ್ನೆ730 ರೂಪಾಯಿ ಇತ್ತು. ಇಂದು ನಿನ್ನೆಗಿಂತ 15 ರೂಪಾಯಿ ಏರಿಕೆ ಕಂಡಿದೆ. 100 ಗ್ರಾಂ ಬೆಳ್ಳಿ ದರ 7,450 ರೂ.ಗೆ ತಲುಪಿದೆ. ನಿನ್ನೆ 7,300 ರೂ. ಇತ್ತು. ನಿನ್ನೆಗಿಂತ ಇಂದು 150 ರೂ. ಏರಿಕೆ ಕಂಡಿದೆ. 1 ಕೆಜಿ ಬೆಳ್ಳಿ ದರ ಇಂದು 74,500 ರೂಪಾಯಿ ಇದೆ. ನಿನ್ನೆ 73,000 ರೂಪಾಯಿ ಇತ್ತು. ನಿನ್ನೆಗಿಂತ ಇಂದು 1,500 ರೂ. ಏರಿಕೆ ಕಂಡಿದೆ.

IPL_Entry_Point