ಕನ್ನಡ ಸುದ್ದಿ  /  Karnataka  /  Iiit Dharwad New Campus Facilities And Infrastructure, Droupadi Murmu Inaugurate Iiitd

IIIT Dharwad New Campus: ದ್ರೌಪದಿ ಮುರ್ಮು ಉದ್ಘಾಟಿಸಲಿರುವ ಧಾರವಾಡದ ಹೊಸ ಐಐಐಟಿ ಕ್ಯಾಂಪಸ್‌ನಲ್ಲಿ ಏನೇನಿದೆ?

IIT Dharwad New Campus: ಮೈಸೂರು ದಸರಾ ಉದ್ಘಾಟನೆ ಮತ್ತು ಕಾರ್ಯಕ್ರಮಗಳನ್ನು ಮುಗಿಸಿಕೊಂಡು ರಾಷ್ಟ್ರಪತಿ ದ್ರೌಪದಿ ಮುರ್ಮು ಈಗ ಐಐಐಟಿ ಧಾರವಾಡದ ಹೊಸ ಕ್ಯಾಂಪಸ್‌ಗೆ ಆಗಮಿಸಿದ್ದಾರೆ. ಇಲ್ಲಿ ಊಟವಾದ ಬಳಿಕ ಮೂರು ಗಂಟೆಗೆ ಐಐಐಟಿ-ಧಾರವಾಡದ ಹೊಸ ಕ್ಯಾಂಪಸ್‌ ಅನ್ನು ಉದ್ಘಾಟಿಸಲಿದ್ದಾರೆ. ಐಐಐಟಿ ಧಾರವಾಡದಲ್ಲಿರುವ ಕೋರ್ಸ್‌ಗಳು, ಹೊಸ ಕ್ಯಾಂಪಸ್‌ನಲ್ಲಿರುವ ಸೌಲಭ್ಯಗಳು, ಕಟ್ಟಡಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ದ್ರೌಪದಿ ಮುರ್ಮು ಉದ್ಘಾಟಿಸಲಿರುವ ಧಾರವಾಡದ ಹೊಸ ಐಐಐಟಿ ಕ್ಯಾಂಪಸ್‌ನಲ್ಲಿ ಏನೇನಿದೆ?
ದ್ರೌಪದಿ ಮುರ್ಮು ಉದ್ಘಾಟಿಸಲಿರುವ ಧಾರವಾಡದ ಹೊಸ ಐಐಐಟಿ ಕ್ಯಾಂಪಸ್‌ನಲ್ಲಿ ಏನೇನಿದೆ?

IIT Dharwad New Campus: ಮೈಸೂರು ದಸರಾ ಉದ್ಘಾಟನೆ ಮತ್ತು ಕಾರ್ಯಕ್ರಮಗಳನ್ನು ಮುಗಿಸಿಕೊಂಡು ರಾಷ್ಟ್ರಪತಿ ದ್ರೌಪದಿ ಮುರ್ಮು ಈಗ ಐಐಐಟಿ ಧಾರವಾಡದ ಹೊಸ ಕ್ಯಾಂಪಸ್‌ಗೆ ಆಗಮಿಸಿದ್ದಾರೆ. ಇಲ್ಲಿ ಊಟವಾದ ಬಳಿಕ ಮೂರು ಗಂಟೆಗೆ ಐಐಐಟಿ-ಧಾರವಾಡದ ಹೊಸ ಕ್ಯಾಂಪಸ್‌ ಅನ್ನು ಉದ್ಘಾಟಿಸಲಿದ್ದಾರೆ. ಐಐಐಟಿ ಧಾರವಾಡದಲ್ಲಿರುವ ಕೋರ್ಸ್‌ಗಳು, ಹೊಸ ಕ್ಯಾಂಪಸ್‌ನಲ್ಲಿರುವ ಸೌಲಭ್ಯಗಳು, ಕಟ್ಟಡಗಳ ಕುರಿತು ಸಂಕ್ಷಿಪ್ತ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಧಾರವಾಡದ ತಡಸಿನಕಪ್ಪ ಲೇಔಟ್‌ನಲ್ಲಿ ಸತ್ತೂರು ಉದಯಗಿರಿಯಲ್ಲಿ ನಿರ್ಮಾಣಗೊಂಡಿರುವ ಈ ನೂತನ ಕ್ಯಾಂಪಸ್‌ ಅನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮವು ನಾಡಿದ್ದು ಅಪರಾಹ್ನ ಮೂರು ಗಂಟೆಗೆ ಆರಂಭಗೊಂಡು ನಾಲ್ಕು ಗಂಟೆಗೆ ಮುಗಿಯಲಿದೆ. ದ್ರೌಪದಿ ಮುರ್ಮು ಅವರು ಮಧ್ಯಾಹ್ನವೇ ಐಐಐಟಿಗೆ ಆಗಮಿಸಿ ಅಲ್ಲೇ ಭೋಜನ ಮಾಡಲಿದ್ದಾರೆ. ಬಳಿಕ ಐಐಐಟಿ-ಧಾರವಾಡವನ್ನು ಉದ್ಘಾಟಿಸಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಪ್ರಮುಖ ಗಣ್ಯರು ವೇದಿಕೆಯಲ್ಲಿ ಇರಲಿದ್ದಾರೆ.

ಐಐಟಿ ಧಾರವಾಡವನ್ನು ಸಾರ್ವಜನಿಕ ಖಾಸಗಿ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ 2015ರಲ್ಲಿ ನಿರ್ಮಿಸಲಾಗಿತ್ತು. ಇದರ ಆಡಳಿತ ಮಂಡಳಿಗೆ ಇನ್ಫೋಸಿಸ್‌ ಫೌಂಡೇಷನ್‌ನ ಮಾಜಿ ಅಧ್ಯಕ್ಷರಾದ ಸುಧಾ ಮೂರ್ತಿಯವರು ಚೇರ್‌ ವುಮೆನ್‌ ಆಗಿದ್ದಾರೆ.

ಇದೀಗ ಉದ್ಘಾಟನೆಗೊಳ್ಳುತ್ತಿರುವ ನೂತನ ಐಐಐಟಿ-ಧಾರವಾಡ ಕ್ಯಾಂಪಸ್‌ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2019ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಈ ಕ್ಯಾಂಪಸ್‌ ಸುಮಾರು 61 ಎಕರೆ ಪ್ರದೇಶಗಳಲ್ಲಿ ವ್ಯಾಪಿಸಿದೆ. ಸುಮಾರು 128 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ.

ಖಾಸಗಿ-ಸಾರ್ವಜನಿಕ ಪಾಲುದಾರಿಕೆಯಲ್ಲಿ ನಿರ್ಮಾಣಗೊಂಡ ಈ ಕ್ಯಾಂಪಸ್‌ ನಿರ್ಮಾಣ ವೆಚ್ಚದಲ್ಲಿ ಸರಕಾರದ ಪಾಲು ಶೇಕಡ 35 ಆಗಿದೆ. ಐಐಐಟಿ ಧಾರವಾಡ ಖಾಸಗಿ ಸಂಸ್ಥೆಯಾದ ಕಿಯೊನಿಕ್ಸ್‌ ಇದಕ್ಕೆ ಉಳಿದ ಮೊತ್ತವನ್ನು ಭರಿಸಿದೆ. ಈ ಕ್ಯಾಂಪಸ್‌ ಸುಮಾರು 1200 ವಿದ್ಯಾರ್ಥಿಗಳ ಅಧ್ಯಯನಕ್ಕೆ ಪೂರಕವಾಗಿದೆ.

ಸದ್ಯ ಐಐಐಟಿ- ಧಾರವಾಡವು ಕಂಪ್ಯೂಟರ್‌ ಸೈನ್ಸ್‌, ಡೇಟಾ ಸೈನ್ಸ್‌, ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌, ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್‌ನಲ್ಲಿ ಬಿಟೆಕ್‌ ಸರ್ಟಿಫಿಕೇಟ್‌ಗಳನ್ನು ನೀಡುತ್ತಿದೆ. ಪಿಎಚ್‌.ಡಿ ಕಾರ್ಯಕ್ರಮವೂ ಇದೆ.

ಹೊಸ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಹಾಸ್ಟೆಲ್‌ ಇದೆ. ಹಲವು ಅಕಾಡೆಮಿಕ್‌ ಬ್ಲಾಕ್‌ಗಳು ಇವೆ. ಇದರೊಂದಿಗೆ ಫಿಟ್‌ನೆಸ್‌ ಸೆಂಟರ್‌, ಮಲ್ಟಿ ಫಂಕ್ಷನ್‌ ಹಾಲ್‌ ಇದೆ.

ಉಳಿದಂತೆ ಒಳಾಂಗಣ ಕ್ರೀಡಾ ಸಂಕೀರ್ಣ, ಹೊಸ ಅನ್ವೇಷಣೆಗಳಿಗೆ ವಿದ್ಯಾರ್ಥಿಗಳ ಸಂವಹನಕ್ಕೆ ಪೂರಕವಾದ ವಿಭಾಗಗಳು ಇವೆ.

ಈ ಹೊಸ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್‌ ನಿರ್ಮಾಣಕ್ಕಾಗಿ ಇನ್ಫೋಸಿಸ್‌ ಫೌಂಡೇಷನ್‌ 28.8 ಕೋಟಿ ರೂಪಾಯಿ ನೀಡಿದೆ.

ಈ ಕ್ಯಾಂಪಸ್‌ನ ಒಂದು ಪ್ರಮುಖ ಫೀಚರ್‌ ಎಂದರೆ ಮಾಡ್ಯುಲರ್‌ ಸ್ಪೇಸ್‌. ಇದನ್ನು ಕ್ಲಾಸ್‌ ರೂಂ ಆಗಿ ಪರಿವರ್ತಿಸುವ ಅವಕಾಶವೂ ಇದೆ. ಈ ಕ್ಯಾಂಪಸ್‌ನಲ್ಲಿ 120 ಸೀಟಿನ ಮತ್ತು 240 ಸೀಟಿನ ಎರಡು ಕ್ಲಾಸ್‌ರೂಂಗಳು ಇವೆ. ಇವುಗಳನ್ನು ಸೆಮಿನಾರ್‌ ಹಾಲ್‌ ಆಗಿಯೂ ಬಳಸಬಹುದಾಗಿದೆ.

ಕ್ಯಾಂಪಸ್‌ನೊಳಗೆ ಲೈವ್‌ ಸ್ಟ್ರೀಮಿಂಗ್‌, ಸೆಮಿನಾರ್‌ ಹಾಲ್‌, ಪ್ರೊಜೆಕ್ಷನ್‌ಗೂ ಅವಕಾಶವಿದೆ. ಇಬ್ಲಾಕ್‌ನಲ್ಲಿ ಗ್ರಂಥಾಲಯವಿದೆ. ಇದು ದಿನದ 24 ಗಂಟೆಯೂ ತೆರೆದಿರಲಿದೆ.

ಕ್ಯಾಂಪಸ್‌ನೊಳಗೆ ಸಣ್ಣ ಅಂಗಡಿ, ಮೆಡಿಕಲ್‌, ಕೆಫೆಟೇರಿಯಾ, ವೆಲ್‌ನೆಸ್‌ ಸೆಂಟರ್‌ಗಳೂ ಇವೆ. ಇವು ಹೆಲ್ತ್‌ ಆಂಡ್‌ ಫಿಟ್‌ನೆಸ್‌ ಬ್ಲಾಕ್‌ನಲ್ಲಿವೆ. ಮುಖ್ಯ ಬ್ಲಾಕ್‌ನಲ್ಲಿ ಸೆನೆಟ್‌ ಹಾಲ್‌, ಬೋರ್ಡ್‌ ರೂಂ, ಡಿಜಿಟಲ್‌ ರೆಕಾರ್ಡಿಂಗ್‌ ಸ್ಟುಡಿಯೊ ಇದೆ. ಇನ್‌ಕ್ಯುಬೇಷನ್‌ ಕೇಂದ್ರವೂ ಇದೆ.

ಎಲ್‌ಒಟಿ ಅಥವಾ ಇಂಟರ್‌ನೆಟ್‌ ಆಫ್‌ ಥಿಂಗ್ಸ್‌ಗೆ ಪೂರಕವಾದ ಲೈವ್‌ ಲ್ಯಾಬೋರೇಟರಿಯೂ ನೂತನ ಐಐಐಟಿ ಧಾರವಾಡ ಕ್ಯಾಂಪಸ್‌ನಲ್ಲಿದೆ. ಒಟ್ಟಾರೆ ಒಂದು ಸಾವಿರಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳ ಕಲಿಕೆಗೆ ಬೇಕಾದ ಸಕಲ ಸೌಲಭ್ಯವಿರುವ ಕ್ಯಾಂಪಸ್‌ ಇದು ಎಂದರೆ ತಪ್ಪಾಗದು.

ಐಐಐಟಿ ಧಾರವಾಡ ಹೊಸ ಕ್ಯಾಂಪಸ್‌ನ ವಿಡಿಯೋ ಕೆಳಗಿದೆ

IPL_Entry_Point