ಕನ್ನಡ ಸುದ್ದಿ  /  Nation And-world  /  In Hyderabad, Boy, 5, Mauled To Death By Stray Dogs; Captured On Cctv

Stray Dogs Killed Boy: ಹೃದಯ ವಿದ್ರಾವಕ, ಬೀದಿ ನಾಯಿಗಳ ದಾಳಿಗೆ ಬಲಿಯಾದ 5 ವರ್ಷದ ಮಗು, ಮನ ಕಲಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹಲವು ಬೀದಿನಾಯಿಗಳ ದಾಳಿಗೆ 5 ವರ್ಷದ ಮಗುವೊಂದು ಮೃತಪಟ್ಟ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬಾಲಕನಿಗೆ ನಾಯಿಗಳು ದಾಳಿ ಮಾಡಿದ ಹೃದಯ ವಿದ್ರಾವಕ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Stray Dogs Killed Boy: ಹೃದಯ ವಿದ್ರಾವಕ, ಬೀದಿ ನಾಯಿಗಳ ದಾಳಿಗೆ ಬಲಿಯಾದ 5 ವರ್ಷದ ಮಗು, ಮನ ಕಲಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
Stray Dogs Killed Boy: ಹೃದಯ ವಿದ್ರಾವಕ, ಬೀದಿ ನಾಯಿಗಳ ದಾಳಿಗೆ ಬಲಿಯಾದ 5 ವರ್ಷದ ಮಗು, ಮನ ಕಲಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಹೈದರಾಬಾದ್‌: ಹಲವು ಬೀದಿನಾಯಿಗಳ ದಾಳಿಗೆ 5 ವರ್ಷದ ಮಗುವೊಂದು ಮೃತಪಟ್ಟ ದಾರುಣ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಬಾಲಕನಿಗೆ ನಾಯಿಗಳು ದಾಳಿ ಮಾಡಿದ ಹೃದಯ ವಿದ್ರಾವಕ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗುವಿನ ಮೇಲೆ ನಾಯಿಗಳ ದಾಳಿಯಾದಗ ಜನರು ಏಕೆ ಸಹಾಯ ಮಾಡಲಿಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ.

ಪ್ರದೀಪ್‌ ಹೆಸರಿನ ಬಾಲಕನು ಖಾಲಿ ಬೀದಿಯಲ್ಲಿ ಒಂಟಿಯಾಗಿ ತಿರುಗುತ್ತಿದ್ದಾಗ ನಾಯಿಗಳು ಬೊಗಳಲು ಆರಂಭಿಸಿವೆ. ಬಳಿಕ ಆ ನಾಯಿಗಳು ಮಗುವಿನ ಬಟ್ಟೆಯನ್ನು ಕಚ್ಚಿ ಎಳೆಯಲು ಆರಂಭಿಸಿದ ದೃಶ್ಯ ವಿಡಿಯೋದಲ್ಲಿದೆ.

ಈ ಸಂದರ್ಭದಲ್ಲಿ ಮಗು ಭಯಗೊಂಡಿದ್ದು, ನಾಯಿಗಳ ದಾಳಿಯಿಂದ ಪಾರಾಗಲು ಪ್ರಯತ್ನಿಸುತ್ತಿದ್ದನು. ಆದರೆ, ಆ ಕ್ರೂರ ನಾಯಿಗಳ ಕ್ರೂರ ಕೋರೆ ಹಲ್ಲುಗಳ ದಾಳಿಗೆ ಸಿಲುಕಿದನು. ಮಗು ಕೆಳಗೆ ಬಿದ್ದಾಗ ಹಲವು ನಾಯಿಗಳು ದಾಳಿ ನಡೆಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಮಗುವಿನ ತಂದೆ ಗಂಗಾಧರ್‌ ಸೆಕ್ಯುರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದು, ತಾನು ಕೆಲಸ ಮಾಡುವ ಸ್ಥಳಕ್ಕೆ ಮಗುವನ್ನು ಕರೆದೊಯ್ದಿದ್ದ. ಆ ಸಮಯದಲ್ಲಿ ಮಗು ಅಲ್ಲೇ ಆಚೆ ಈಚೆ ಸುತ್ತಾಡುತ್ತಿತ್ತು. ನಾಯಿಗಳ ದಾಳಿಗೆ ಸಿಲುಕಿದ ಮಗುವನ್ನು ತಕ್ಷಣ ಆಸ್ಪತ್ರೆಗೆ ಕೊಂಡೊಯ್ದರೂ ಕಂದಮ್ಮ ಬದುಕಿ ಉಳಿಯಲಿಲ್ಲ. ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ಘಟನೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

"ಈ ಹಗಲಿನಲ್ಲಿ ಹೊತ್ತಿನಲ್ಲಿ ಹಲವು ನಿಮಿಷಗಳ ಕಾಲ ನಾಯಿಗಳು ದಾಳಿ ನಡೆಸಿದರೂ ಯಾರು ಬಡಪಾಯಿ ಕಂದಮ್ಮನ ರಕ್ಷಣೆಗೆ ಬಂದಿಲ್ಲ. ಇದು ಕೇವಲ ಕಾಂಕ್ರಿಟ್‌ ಕಾಡುʼʼ ಎಂದು ಒಬ್ಬರು ಟ್ವಿಟ್ಟರ್‌ ಬಳಕೆದಾರರು ವಿಡಿಯೋಗೆ ಪ್ರತಿಕ್ರಿಯೆ ನೀಡಿದ್ದಾರೆ.

"ಇದು ಭಯಾನಕ ಮತ್ತು ಹೃದಯ ವಿದ್ರಾವಕ. ಬೀದಿನಾಯಿಗಳ ಕಾಟ ಮಿತಿಮೀರಿದೆ. ಯಾರು ಇದರಲ್ಲಿ ತಪ್ಪಿತಸ್ಥರು? ಸರಕಾರವೇ? ಪರಸಭೆಯೇ? ಆಡಳಿತವೇ? ಪ್ರಾಣಿ ಪ್ರೇಮಿಗಳೇ? ಅಥವಾ ನ್ಯಾಯಾಲಯವೇ?" ಎಂದು ಇನ್ನೊಬ್ಬರು ಕಾಮೆಂಟ್‌ ಹಾಕಿದ್ದಾರೆ.

ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ಘಟನೆಯ ಕುರಿತು ವಿಶಾದ ವ್ಯಕ್ತಪಡಿಸಿದ್ದು, ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. "ಬೀದಿನಾಯಿಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದೇವೆ. ಪ್ರಾಣಿಗಳ ಜನನ ನಿಯಂತ್ರಣಕ್ಕೆ ಕೇಂದ್ರಗಳನ್ನು ರಚಿಸಿದ್ದೇವೆ. ಬಲಿಯಾದ ಮಗುವಿನ ಕುಟುಂಬಕ್ಕೆ ಸಂತಾಪ. ಇಂತಹ ಘಟನೆ ಪುನಾರವರ್ತನೆಯಾಗದಂತೆ ನೋಡಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆʼʼ ಎಂದು ಅವರು ಹೇಳಿದ್ದಾರೆ.

"ಬಲಿಯಾದ ಮಗುವನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಕುಟುಂಬದ ನೋವು, ದುಃಖದ ಅರಿವಿದೆ. ಇಂತಹ ಘಟನೆ ನಡೆಯದಂತೆ, ಮರುಕಳಿಸದಂತೆ ನನ್ನ ಸಾಮರ್ಥ್ಯಕ್ಕೆ ಅನುಸಾರವಾಗಿ ಎಲ್ಲವನ್ನೂ ಮಾಡುವೆʼʼ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಬೀದರ್ ಜಿಲ್ಲೆಯ ಬಸವಕಲ್ಯಾಣದ ವಿವಿಧೆಡೆ ಬೀದಿ ನಾಯಿಗಳ ಕಾಟ ವಿಪರೀತವಾಗಿದೆ. ಬಸವಕಲ್ಯಾಣ ನಗರದ ಗಾಡವಾನ್‌ ಗಲ್ಲಿಯಲ್ಲಿ ಎರಡು ವರ್ಷದ ಬಾಲಕಿಯ ಮೇಲೆ ಬೀದಿ ನಾಯಿಗಳು ಇತ್ತೀಚೆಗೆ ದಾಳಿ ನಡೆಸಿವೆ. ದಾಳಿಗೆ ಒಳಗಾದ ಬಾಲಕಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿತ್ತು.

ಬೀದಿ ನಾಯಿಗಳ ದಾಳಿಗೆ ಒಳಗಾದ ಬಾಲಕಿಯನ್ನು ಅಸ್ಮಾ ಸಮೀರ್‌ ಶೇಕ್‌ ಎಂದು ಗುರುತಿಸಲಾಗಿದೆ. ಬಸವಕಲ್ಯಾಣದ ಗಾಡವಾನ್‌ ಗಲ್ಲಿಯಲ್ಲಿ ನಿನ್ನೆ ಈ ಘಟನೆ ನಡೆದಿದ್ದು, ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆಯನ್ನು ಪಾಲಕರು ಕೊಡಿಸಿದ್ದಾರೆ. ಈ ವರದಿಗೆ ಲಿಂಕ್‌ ಇಲ್ಲಿದೆ.

IPL_Entry_Point