ಕನ್ನಡ ಸುದ್ದಿ  /  Nation And-world  /  International Day Of Peace 21 September History Significance Theme Of The Day End Racism Build Peace

International Day of Peace 2022: ಇಂದು ಅಂತಾರಾಷ್ಟ್ರೀಯ ಶಾಂತಿ ದಿನ, ಈ ದಿನದ ಇತಿಹಾಸ, ಮಹತ್ವ, ಥೀಮ್‌ ಮತ್ತು ಉದ್ದೇಶ ತಿಳಿದುಕೊಳ್ಳೋಣ

International Day of Peace 21 September: ಪ್ರತಿವರ್ಷ ಸೆಪ್ಟೆಂಬರ್‌ 21ರಂದು ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತದೆ. ದಿನದ ಇಪತ್ತಾಲ್ಕು ಗಂಟೆ ಹಿಂಸೆಯಿಲ್ಲದ ಶಾಂತಿಯುತ ಜಗತ್ತಿಗೆ ಉತ್ತೇಜನ ನೀಡುವ ಸಲುವಾಗಿ ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯು ಈ ದಿನವನ್ನು ಆರಂಭಿಸಿದೆ.

ಈ ದಿನದಂದು ನ್ಯೂರ್ಯಾರ್ಕ್‌ ನಗರದ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶ್ವಸಂಸ್ಥೆಯ ಪೀಸ್‌ ಬೆಲ್‌ (ಶಾಂತಿ ಘಂಟೆ) ಬಾರಿಸಲಾಗುತ್ತದೆ.
ಈ ದಿನದಂದು ನ್ಯೂರ್ಯಾರ್ಕ್‌ ನಗರದ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶ್ವಸಂಸ್ಥೆಯ ಪೀಸ್‌ ಬೆಲ್‌ (ಶಾಂತಿ ಘಂಟೆ) ಬಾರಿಸಲಾಗುತ್ತದೆ.

International Day of Peace 21 September: ಪ್ರತಿವರ್ಷ ಸೆಪ್ಟೆಂಬರ್‌ 21ರಂದು ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಆಚರಿಸಲಾಗುತ್ತದೆ. ದಿನದ ಇಪತ್ತಾಲ್ಕು ಗಂಟೆ ಹಿಂಸೆಯಿಲ್ಲದ ಶಾಂತಿಯುತ ಜಗತ್ತಿಗೆ ಉತ್ತೇಜನ ನೀಡುವ ಸಲುವಾಗಿ ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿಯು ಈ ದಿನವನ್ನು ಆರಂಭಿಸಿದೆ. ಈ ದಿನದ ಇತಿಹಾಸ, ಮಹತ್ವ, ಥೀಮ್‌ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ. ಜತೆಗೆ, ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಬಗ್ಗೆಯೂ ಇಲ್ಲಿ ಹೆಚ್ಚಿನ ವಿವರ ನೀಡಲಾಗಿದೆ.

ಈ ವರ್ಷದ ಥೀಮ್‌: 2022 Theme: End racism. Build peace.

ಪ್ರತಿವರ್ಷ ಇದೇ ದಿನ ವಿಶ್ವಂಸ್ಥೆಯ ಮಹಾಅಧಿವೇಶನ ನಡೆಯುತ್ತದೆ. ಅಹಿಂಸೆ ಮತ್ತು ಕದನ ವಿರಾಮಕ್ಕೆ ಉತ್ತೇಜನ ನೀಡುವ ಸಲುವಾಗಿ ಜನರಲ್ಲಿ ಶಾಂತಿ, ಆದರ್ಶಗಳನ್ನು ಉತ್ತೇಜಿಸಲು ಪ್ರಯತ್ನಿಸಲಾಗುತ್ತದೆ. ಈ ವರ್ಷ ವರ್ಣಬೇಧ ನೀತಿ ಕೊನೆಗೊಳಿಸಿ, ಶಾಂತಿ ನಿರ್ಮಿಸಿ (End racism. Build peace) ಎಂಬ ಘೋಷವಾಕ್ಯವನ್ನು ಹಾಕಿಕೊಳ್ಳಲಾಗಿದೆ.

ಏಕೆ ಈ ದಿನ?

ಸುಮಾರು ಒಂದು ದಶಕದ ಹಿಂದೆ ವಿಶ್ವಶಾಂತಿ ದಿನವನ್ನು ವಿಶ್ವ ಸಂಸ್ಥೆಯ ವಾರ್ಷಿ ಮಹಾ ಅಧಿವೇಶನದ ಉದ್ಘಾಟನೆಯ ಅಧಿವೇಶನದಲ್ಲಿ ಆಚರಿಸಲಾಗುತ್ತಿತ್ತು. ಅಂದರೆ, ಸೆಪ್ಟೆಂಬರ್‌ ತಿಂಗಳ ಮೂರನೇ ಮಂಗಳವಾರ ವಿಶ್ವ ಶಾಂತಿ ದಿನ ಆಚರಿಸಲಾಗುತ್ತಿತ್ತು. 2001ರಲ್ಲಿ ಮೊದಲ ಬಾರಿಗೆ ಸೆಪ್ಟೆಂಬರ್‌ 21 ವಿಶ್ವ ಶಾಂತಿ ದಿನವೆಂದು ಘೋಷಿಸಲಾಯಿತು.

ಪೀಸ್‌ ಬೆಲ್‌ ಟವರ್

ಈ ದಿನದಂದು ನ್ಯೂರ್ಯಾರ್ಕ್‌ ನಗರದ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶ್ವಸಂಸ್ಥೆಯ ಪೀಸ್‌ ಬೆಲ್‌ (ಶಾಂತಿ ಘಂಟೆ) ಬಾರಿಸಲಾಗುತ್ತದೆ. ಯುನೈಟೆಡ್‌ ನೇಷನ್ಸ್‌ ಅಸೋಸಿಯಷೇನ್‌ ಆಫ್‌ ಜಪಾನ್‌ ಈ ಪೀಸ್‌ ಬೆಲ್‌ ದಾನ ಮಾಡಿತ್ತು. ಸದಸ್ಯ ರಾಷ್ಟ್ರಗಳ ಪ್ರತಿನಿದಿಗಳು, 60ಕ್ಕೂ ಹೆಚ್ಚು ದೇಶದ ಮಕ್ಕಳು ನೀಡಿದ ನಾಣ್ಯಗಳು, ಪದಕಗಳಿಂದ ಈ ಘಂಟೆಯನ್ನು ನಿರ್ಮಿಸಲಾಗಿದೆ. ಈ ಬೆಲ್‌ ಟವರ್‌ ಪುಟ್ಟ ದೇಗುಲದಂತೆ ಇದ್ದು, ಶಾಂತಿಯ ಪ್ರತೀಕ ಬುದ್ಧನ ಜನಿಸಿದ ಸ್ಥಳವನ್ನು ಸಂಕೇತಿಸುತ್ತದೆ.

ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯ ಬಗ್ಗೆ ಗೊತ್ತೆ?

1948ರಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಸ್ಥಾಪನೆಯಾಯಿತು. ಸಂಘರ್ಷ ಪೀಡಿತ ಪ್ರದೇಶಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ವಿಶ್ವಸಂಸ್ಥೆಯು ಶಾಂತಿಪಾಲನಾ ಪಡೆಯನ್ನು ನಿಯೋಜಿಸುತ್ತದೆ. ಸಂಘರ್ಷಪೀಡಿತ ಪ್ರದೇಶಗಳಲ್ಲಿ ಎರಡೂ ಕಡೆಯ ಮುಖ್ಯಸ್ಥರು ಶಾಂತಿಪಾಲನಾ ಪಡೆಯ ನಿಯೋಜನೆಗೆ ತಮ್ಮ ಒಪ್ಪಿಗೆ ಇದೆ ಎಂದು ತಿಳಿಸಿದ ನಂತರವಷ್ಟೇ ವಿಶ್ವಸಂಸ್ಥೆಯು ತನ್ನ ಪಡೆಯನ್ನು ನಿಯೋಜಿಸುತ್ತದೆ. ಶಾಂತಿಪಾಲನಾ ಪಡೆಯ ಮೇಲ್ವಿಚಾರಣೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನೋಡಿಕೊಳ್ಳುತ್ತದೆ. ಸಾಮಾನ್ಯವಾಗಿ ಭದ್ರತಾ ಮಂಡಳಿಯ ನಿರ್ಧಾರದ ಮೇರೆಗೆ ಶಾಂತಿಪಾಲನಾ ಪಡೆಯನ್ನು ನಿಯೋಜಿಸಲಾಗುತ್ತದೆ.

ಪಡೆಯ ಗಾತ್ರ, ಸ್ವರೂಪ

ವಿಶ್ವಸಂಸ್ಥೆಯು ಇದುವರೆಗೆ ಸುಮಾರು 98,200 ಶಾಂತಿಪಾಲನಾ ಪಡೆಯನ್ನು ಹೊಂದಿದೆ. ಇದು ಪೊಲೀಸರು, ಮಿಲಿಟರಿ ತಜ್ಞರು ಹಾಗೂ ಸೇನಾಪಡೆಯನ್ನು ಒಳಗೊಂಡಿದೆ. ಐರೋಪ್ಯ ದೇಶಗಳು ಸುಮಾರು 6 ಸಾವಿರ ಘಟಕವನ್ನು ಶಾಂತಿಪಾಲನಾ ಪಡೆಗೆ ಕೊಡುಗೆಯಾಗಿ ನೀಡಿದೆ. ಅದೇ ರೀತಿ ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕೂಡ ಭಾರಿ ಪ್ರಮಾಣದಲ್ಲಿ ಕೊಡುಗೆಯನ್ನು ನೀಡುತ್ತಿದ್ದು, ಈ ಮೂರು ದೇಶಗಳು ತಲಾ 8 ಸಾವಿರ ಸೇನಾ ಘಟಕವನ್ನು ನೀಡಿವೆ.

ಚೀನಾದ ಕೊಡುಗೆ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐವರು ಕಾಯಂ ಸದಸ್ಯರ ಪೈಕಿ ಚೀನಾವು ಶಾಂತಿಪಾಲನಾಕಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆಯಾಗಿ ನೀಡುತ್ತದೆ. ಪ್ರಸ್ತುತ ಚೀನಾದ 2 ಸಾವಿರಕ್ಕೂ ಹೆಚ್ಚು ಮಂದಿ ಶಾಂತಿಪಾಲನಾಕಾರರನ್ನು ಜಗತ್ತಿನ ನಾನಾ ಭಾಗಗಳಲ್ಲಿ ನಿಯೋಜಿಸಲಾಗಿದೆ. ಆದರೆ ಅವರಲ್ಲಿ ಬಹುತೇಕ ಮಂದಿ ಎಂಜಿನಿಯರ್ಸ್‌, ವೈದ್ಯಕೀಯ ಮತ್ತು ಸಾರಿಗೆ ಕಾರ್ಮಿಕರು, ಸೆಕ್ಯೂರಿಟಿ ಗಾರ್ಡ್ಸ್‌ಗಳಾಗಿದ್ದಾರೆ.

ಭಾರತ ಮತ್ತು ಶಾಂತಿಪಾಲನಾ ಪಡೆ

ಪ್ರಸ್ತುತ ಭಾರತದ 8,887 ಸಶಸ್ತ್ರ ಪಡೆ ಸಿಬ್ಬಂದಿ ವಿಶ್ವಸಂಸ್ಥೆಯ 6 ಶಾಂತಿ ಪಾಲನಾ ಪಡೆಯ ಮಿಷನಗಳಲ್ಲಿ ನಿಯೋಜನೆಗೊಂಡಿದ್ದಾರೆ. ಆ ಮಿಷನ್‌ಗಳು ಯಾವುವೆಂದರೆ ಕಾಂಗೊ, ಲೆಬನಾನ್‌, ಎಥಿಯೋಪಿಯಾ-ಎರಿಟ್ರಿಯಾ, ಸೂಡಾನ್‌, ಗೋಲನ್‌ ಹೈಟ್ಸ್‌ ಮತ್ತು ಐವರಿ ಕೋಸ್ಟ್‌. 2011ರಲ್ಲಿ ಸೂಡಾನ್‌ನಿಂದ ವಿಭಜನೆಗೊಂಡು ಸ್ವತಂತ್ರ ರಾಷ್ಟ್ರವಾಗಿ ರೂಪುಗೊಂಡಿರುವ ದಕ್ಷಿಣ ಸೂಡಾನ್‌ಗೆ ವಿಶ್ವಸಂಸ್ಥೆಯು 11 ಸಾವಿರಕ್ಕೂ ಹೆಚ್ಚು ಶಾಂತಿಪಾಲನಾಕಾರರನ್ನು ಕಳುಹಿಸಿದೆ.

IPL_Entry_Point