ಕನ್ನಡ ಸುದ್ದಿ  /  Nation And-world  /  Man Arrested For Smoking Inside Assam - Bengaluru Flight: Report

Indigo flight: ಅಸ್ಸಾಂ-ಬೆಂಗಳೂರು ಇಂಡಿಗೋ ವಿಮಾನದೊಳಗೆ ಧೂಮಪಾನ ಮಾಡಿದ ವ್ಯಕ್ತಿಯ ಬಂಧನ

ಬೆಂಗಳೂರು-ಅಸ್ಸಾಂ ವಿಮಾನದೊಳಗೆ ಸಿಗರೇಟು ಸೇದಲು ಯತ್ನಿಸಿ ವ್ಯಕ್ತಿಯೊಬ್ಬ ಬಂಧನಕ್ಕೆ ಒಳಗಾದ ಘಟನೆಯು ಇದೇ ಶುಕ್ರವಾರ ನಡೆದಿದೆ.

Indigo flight: ಅಸ್ಸಾಂ-ಬೆಂಗಳೂರು ಇಂಡಿಗೋ ವಿಮಾನದೊಳಗೆ ಧೂಮಪಾನ ಮಾಡಿದ ವ್ಯಕ್ತಿಯ ಬಂಧನ REUTERS/Regis Duvignau/File Photo
Indigo flight: ಅಸ್ಸಾಂ-ಬೆಂಗಳೂರು ಇಂಡಿಗೋ ವಿಮಾನದೊಳಗೆ ಧೂಮಪಾನ ಮಾಡಿದ ವ್ಯಕ್ತಿಯ ಬಂಧನ REUTERS/Regis Duvignau/File Photo (REUTERS)

ಬೆಂಗಳೂರು: ಧೂಮಪಾನಿಗಳು ಎಲ್ಲೆಂದರಲ್ಲಿ ಹೊಗೆ ಬಿಡಲು ಕಾಯುತ್ತಿರುತ್ತಾರೆ. ಆಫೀಸ್‌ಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಇವರಿಗಾಗಿಯೇ ಸ್ಮೋಕಿಂಗ್‌ ಝೋನ್‌ ಇರುತ್ತದೆ. ಅವಕಾಶ ಸಿಕ್ಕರೆ ಎಲ್ಲಿ ಬೇಕಾದರೂ ಸಿಗರೇಟು ಸೇದಲು ಬಯಸುತ್ತಾರೆ. ಚಟಕ್ಕೆ ಬಿದ್ದ ಇವರು ನಿಯಮಿತವಾಗಿ ಸಿಗರೇಟು ಸೇದದೆ ಇದ್ದರೆ ತಳಮಳಕ್ಕೆ ಒಳಗಾಗುತ್ತಾರೆ.

ಈ ರೀತಿ ಹೊಗೆ ಸೇದುವ ಇವರು ಇತರರ ಪ್ರಾಣಕ್ಕೂ ಸಂಚಕಾರ ತರಬಹುದು. ಪ್ಯಾಸೀವ್‌ ಸ್ಮೋಕಿಂಗ್‌ ಅಪಾಯ ಮಾತ್ರವಲ್ಲದೆ ಹಲವು ಧೂಮಪಾನಿಗಳು ವಿಮಾನದೊಳಗೆ ಸಿಗರೇಟು ಸೇದಲು ಪ್ರಯತ್ನಿಸಿ ಸಿಕ್ಕಿ ಬಿದ್ದ ಘಟನೆಗಳು ವರದಿಯಾಗುತ್ತಿವೆ.

ಇದೀಗ ಬೆಂಗಳೂರು-ಅಸ್ಸಾಂ ನಡುವೆ ಹಾರಲು ಟೇಕಾಫ್‌ ಆಗಲು ಸಿದ್ಧವಾಗುತ್ತಿದ್ದ ವಿಮಾನದೊಳಗೆ ವ್ಯಕ್ತಿಯೊಬ್ಬ ಧೂಮಪಾನ ಮಾಡಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಬಹುತೇಕ ವಿಮಾನಗಳ ಒಳಗೆ ಫೈರ್‌ ಅಲಾರಂ ಇರುತ್ತದೆ.

ಬೆಂಗಳೂರು-ಅಸ್ಸಾಂ ವಿಮಾನದೊಳಗೆ ಸಿಗರೇಟು ಸೇದಲು ಯತ್ನಿಸಿ ವ್ಯಕ್ತಿಯೊಬ್ಬ ಬಂಧನಕ್ಕೆ ಒಳಗಾದ ಘಟನೆಯು ಇದೇ ಶುಕ್ರವಾರ ನಡೆದಿದೆ. ಶುಕ್ರವಾರ ರಾತ್ರಿ ಸುಮಾರು 1.30 ಗಂಟೆಗೆ ಈ ಘಟನೆ ಜರುಗಿದೆ ಎಂದು ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ, ಆರೋಪಿಯನ್ನು ಶಿಹರಿ ಚೌಧರಿ ಎಂದು ಗುರುತಿಸಲಾಗಿದೆ. ಆತ Indigo 6E 716 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಈತನು ಲ್ಯಾವೆಟರಿಯೊಳಗೆ ಧೂಮಪಾನ ಮಾಡಲು ಪ್ರಯತ್ನಿಸುತ್ತಿದ್ದಾಗ ಕ್ಯಾಬಿನ್‌ ಸಿಬ್ಬಂದಿಗೆ ಸಿಕ್ಕಿ ಬಿದ್ದಿದ್ದಾನೆ. ಈ ಮೂಲಕ ಈತ ತನ್ನ ಸಹಪ್ರಯಾಣಿಕರ ಜೀವಕ್ಕೆ ಅಪಾಯ ತಂದೊಡ್ಡಿದ್ದ. ವಿಮಾನದೊಳಗೆ ಧೂಮಪಾನ ಮಾಡುವುದು ಅತ್ಯಂತ ಅಪಾಯಕಾರಿಯಾಗಿದೆ.

ವಿಮಾನ ಲ್ಯಾಂಡಿಂಗ್‌ ಆದ ಬಳಿಕ ಆತನನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿರುವ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ಕಳೆದ ವಾರ, ಮುಂಬೈನ ಸಹಾರ ಪೊಲೀಸರು ಲಂಡನ್-ಮುಂಬೈ ಏರ್ ಇಂಡಿಯಾ ವಿಮಾನದ ಬಾತ್‌ರೂಂನಲ್ಲಿ ಧೂಮಪಾನ ಮಾಡಿರುವುದಕ್ಕೆ ಮತ್ತು ಸಹ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ 37 ವರ್ಷದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿದ್ದರು. ಜಾಮೀನಿಗಾಗಿ 25,000 ರೂ. ಪಾವತಿಸಲು ಆತ ನಿರಾಕರಿಸಿದ. ಆನ್‌ಲೈನ್‌ ಹುಡುಕಾಟದಲ್ಲಿ ಈ ತಪ್ಪಿಗೆ 250 ರೂ. ದಂಡವೆಂದು ಆತ ಮೊಂಡುವಾದ ಮಂಡಿಸಿದ್ದ. ಬಳಿಕ ಆತನನ್ನು ಕೋರ್ಟ್‌ ಜೈಲಿಗೆ ಕಳುಹಿಸಿದೆ.

ಮಾರ್ಚ್ 11 ರಂದು ವಿಮಾನದ ಮಧ್ಯದಲ್ಲಿ ಅನಾನುಕೂಲತೆ ಉಂಟುಮಾಡಿದ 37 ವರ್ಷದ ರಮಾಕಾಂತ್ ವಿರುದ್ಧ ಸಹರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಲಾಗಿತ್ತು. ಈತನ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 336 (ಮಾನವನ ಜೀವಕ್ಕೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಯಾವುದೇ ಕೃತ್ಯವನ್ನು ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾಡಿದವರು) ಮತ್ತು ಏರ್‌ಕ್ರಾಫ್ಟ್ ಆಕ್ಟ್ 1937ರ 22 ಅಡಿಯಲ್ಲಿ(ಪೈಲೆಟ್‌ ಇನ್‌ ಕಮಾಂಡ್‌ ಸೂಚನೆ ಪಾಲಿಸದೆ ಇರುವುದು) ಪ್ರಕರಣವನ್ನು ದಾಖಲಿಸಲಾಗಿತ್ತು.

"ವಿಮಾನದಲ್ಲಿ ಧೂಮಪಾನ ಮಾಡಲು ಅನುಮತಿ ನೀಡಲಾಗುವುದಿಲ್ಲ. ಆದರೆ, ಆತ ಬಾತ್‌ ರೂಂಗೆ ಹೋದಾಗ ಹೊಗೆ ಸೂಚಕದಿಂದ ಅಲಾರಂ ಕೇಳಿಸಿದೆ. ನಾವು ತಕ್ಷಣ ಹೋಗಿ ಆತನ ಕೈಯಿಂದ ಸಿಗರೇಟು ತೆಗೆದು ಎಸೆದೆವು. ನಂತರ ಆತ ಅನುಚಿತವಾಗಿ ವರ್ತಿಸಲು ಆರಂಭಿಸಿದ. ಆತನ ವರ್ತನೆಯಿಂದ ಪ್ರಯಾಣಿಕರು ಭಯಗೊಂಡರು. ವಿಮಾನದಲ್ಲಿ ಕೂಗಾಡುತ್ತಿದ್ದರು. ಅವರ ಕೈಕಾಲುಗಳನ್ನು ಕಟ್ಟಿ ಸೀಟಿನ ಮೇಲೆ ಕೂರಿಸಿದೆವು" ಎಂದು ಏರ್‌ ಇಂಡಿಯಾದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

IPL_Entry_Point

ವಿಭಾಗ