ಕನ್ನಡ ಸುದ್ದಿ  /  Nation And-world  /  Wealth Management: What Is Family Office And Types Of Family Office Indian S Having Family Offices And Other Details Explained

Wealth management: ಕುಟುಂಬ ಕಚೇರಿ ಎಂದರೇನು? ಯಾರಿಗೆ ಉಪಯೋಗ ಮತ್ತು ಇತರೆ ವಿವರ

Wealth management: ಸಿಂಗಾಪುರವು ಕುಟುಂಬ ಕಚೇರಿ ಮಾರುಕಟ್ಟೆಯ ದೊಡ್ಡ ಭಾಗವನ್ನು ಹೊಂದುವಲ್ಲಿ ಯಶಸ್ವಿಯಾಗಿದೆ. ಸಿಂಗಾಪುರದಲ್ಲಿ ಇಂತಹ ಕುಟುಂಬ ಕಚೇರಿಗಳ ಸ್ಥಾಪನೆ ಇತ್ತೀಚೆಗೆ ಹೆಚ್ಚಾಗಿದೆ. ಭಾರತದ ಅನೇಕ ಉದ್ಯಮಿಗಳು, ಸೆಲೆಬ್ರಿಟಿಗಳು ಇಂತಹ ಕುಟುಂಬ ಕಚೇರಿಗಳನ್ನು ಸ್ಥಾಪಿಸಿ, ಸಂಪತ್ತು ನಿರ್ವಹಣೆ ಹೊಣೆಗಾರಿಕೆ ಒಪ್ಪಿಸುತ್ತಿರುವುದು ಹೊಸ ಟ್ರೆಂಡ್‌.

ಸಂಪತ್ತು ನಿರ್ವಹಣೆ (ಸಾಂಕೇತಿಕ ಚಿತ್ರ)
ಸಂಪತ್ತು ನಿರ್ವಹಣೆ (ಸಾಂಕೇತಿಕ ಚಿತ್ರ) (unsplash)

ಇತ್ತೀಚೆಗೆ, ಕುಟುಂಬ ಕಚೇರಿ (family office)ಗಳನ್ನು ಸ್ಥಾಪಿಸುವ ಪ್ರವೃತ್ತಿಯು ಬೆಳೆಯುತ್ತಿದೆ ಮತ್ತು ಕೋವಿಡ್‌ ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ವೇಗಗೊಂಡಿದೆ. ಸಿಂಗಾಪುರವು ಈ ಮಾರುಕಟ್ಟೆಯ ದೊಡ್ಡ ಭಾಗವನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಿಂಗಾಪುರದಲ್ಲಿ ಇಂತಹ ಕುಟುಂಬ ಕಚೇರಿಗಳ ಸ್ಥಾಪನೆ ಇತ್ತೀಚೆಗೆ ಹೆಚ್ಚಾಗಿದೆ. ಭಾರತದ ಅನೇಕ ಉದ್ಯಮಿಗಳು, ಸೆಲೆಬ್ರಿಟಿಗಳು ಇಂತಹ ಕುಟುಂಬ ಕಚೇರಿಗಳನ್ನು ಸ್ಥಾಪಿಸಿ, ಸಂಪತ್ತು ನಿರ್ವಹಣೆ ಹೊಣೆಗಾರಿಕೆ ಒಪ್ಪಿಸುತ್ತಿರುವುದು ಹೊಸ ಟ್ರೆಂಡ್‌.

ಕುಟುಂಬ ಕಚೇರಿ ಎಂದರೇನು? (What is Family Office)

ಕುಟುಂಬ ಕಚೇರಿಯು ಖಾಸಗಿ ಸಂಪತ್ತು ನಿರ್ವಹಣಾ ಸಂಸ್ಥೆಯಾಗಿದ್ದು, ಅತಿ ಹೆಚ್ಚು ನಿವ್ವಳ ಮೌಲ್ಯದ ಕುಟುಂಬದಿಂದ ಸ್ಥಾಪಿಸಲ್ಪಡುತ್ತದೆ. ಇದು ಆ ಕುಟುಂಬದ ಹೂಡಿಕೆ ನಿರ್ವಹಣೆ, ಹಣಕಾಸು ಯೋಜನೆ, ಎಸ್ಟೇಟ್ ಮತ್ತು ತೆರಿಗೆ ಯೋಜನೆ, ಪರೋಪಕಾರಿ ಹೂಡಿಕೆ, ಸಹಾಯ ಸೇವೆಗಳು ಸೇರಿ ವೈಯಕ್ತಿಕಗೊಳಿಸಿದ ಸೇವೆಗಳ ಆಯ್ಕೆ ಮತ್ತು ಇನ್ನೂ ಹೆಚ್ಚಿನ ಸಂಪತ್ತು ನಿರ್ವಹಣಾ ಸೇವೆಯನ್ನುಆ ಕುಟುಂಬಕ್ಕೆ ಒದಗಿಸುತ್ತದೆ.

ಸರಳವಾಗಿ ಹೇಳುವುದಾದರೆ, ಕುಟುಂಬ ಕಚೇರಿಗಳು ಎಂದರೆ ಅವು, ಸಂಪತ್ತು ಮತ್ತು ಅತಿ ಶ್ರೀಮಂತರ ಹೂಡಿಕೆಗಳನ್ನು ನಿರ್ವಹಿಸಲು ಸ್ಥಾಪಿಸಲಾಗುವ ಖಾಸಗಿ ಕಂಪನಿಗಳಾಗಿವೆ.

ಈ ಕುಟುಂಬ ಕಚೇರಿಗಳನ್ನು ಸಾಮಾನ್ಯವಾಗಿ ಶ್ರೀಮಂತ ಕುಟುಂಬಗಳು ಅಥವಾ ವ್ಯಕ್ತಿಗಳ ಹಣಕಾಸು ಮತ್ತು ಹೂಡಿಕೆ ಅಗತ್ಯಗಳನ್ನು ನಿರ್ವಹಿಸುವ ಉದ್ದೇಶದಿಂದ ಸ್ಥಾಪಿಸಲಾಗಿದೆ. ಹಣಕಾಸಿನ ಪರಿಹಾರ, ಬಜೆಟ್, ವಿಮೆ, ದತ್ತಿ ನೀಡುವಿಕೆ, ಸಂಪತ್ತು ವರ್ಗಾವಣೆ ಮತ್ತು ಉತ್ತರಾಧಿಕಾರ ಯೋಜನೆ ಮತ್ತು ತೆರಿಗೆ ಸೇವೆಗಳನ್ನು ಒದಗಿಸುವುದು ಇವುಗಳ ಕೆಲಸ.

ಕುಟುಂಬದ ಕಚೇರಿಗಳು ಸಾಂಪ್ರದಾಯಿಕ ಸಂಪತ್ತು ನಿರ್ವಹಣೆಯಿಂದ ಭಿನ್ನವಾಗಿರುತ್ತವೆ. ಅವರು ಶ್ರೀಮಂತ ವ್ಯಕ್ತಿ ಅಥವಾ ಕುಟುಂಬದ ಹಣಕಾಸು ಮತ್ತು ಹೂಡಿಕೆಯ ಅಗತ್ಯಗಳನ್ನು ನಿರ್ವಹಿಸುವುದಕ್ಕೆ ಅಗತ್ಯವಾದ ಸಂಪೂರ್ಣ ಪರಿಹಾರವನ್ನು ಒದಗಿಸುತ್ತವೆ.

ಕುಟುಂಬ ಕಚೇರಿ ಯಾರಿಗೆ ಬೇಕು? (Who Needs a Family Office?)

ಕುಟುಂಬ ಕಚೇರಿಗಳನ್ನು ಸ್ಥಾಪಿಸುವುದು ಮತ್ತು ನಿರ್ವಹಣೆ ತುಂಬಾ ದುಬಾರಿ. ಆದ್ದರಿಂದ, ಸಂಕೀರ್ಣವಾದ ಹಣಕಾಸು, ಹೂಡಿಕೆ ಮತ್ತು ವೈಯಕ್ತಿಕ ಅಗತ್ಯಗಳನ್ನು ಹೊಂದಿರುವ ಅತ್ಯಂತ ಶ್ರೀಮಂತರಿಗೆ ಮಾತ್ರ ಸಾಮಾನ್ಯವಾಗಿ ಕುಟುಂಬ ಕಚೇರಿಯ ಅಗತ್ಯವಿರುತ್ತದೆ. ಒಂದು ಅಂದಾಜಿನ ಪ್ರಕಾರ 250 ಮಿಲಿಯನ್‌ ಅಮೆರಿಕನ್‌ ಡಾಲರ್‌ಗಿಂತಲೂ ಹೆಚ್ಚು ನಿವ್ವಳ ಮೌಲ್ಯ (ಮತ್ತು ನಿಭಾಯಿಸಬಲ್ಲ) ವನ್ನು ಹೊಂದಿರುವ ವ್ಯಕ್ತಿಗಳಿಗೆ ಮಾತ್ರ ಮೀಸಲಾದ ಕುಟುಂಬ ಕಚೇರಿ ಅಗತ್ಯವಿದೆ.

ಕುಟುಂಬ ಕಚೇರಿಗಳಲ್ಲಿ ಎರಡು ವಿಧ (Types of Family offfice)

ಕುಟುಂಬದ ಕಚೇರಿಗಳಲ್ಲಿ ಎರಡು ವಿಧ.

ಮೊದಲನೆಯದು ಏಕ-ಕುಟುಂಬದ ಕಚೇರಿ. ಇದು ಖಾಸಗಿ ಸಂಪತ್ತು ನಿರ್ವಹಣಾ ಸಲಹಾ ಸಂಸ್ಥೆ. ಅತಿ ಹೆಚ್ಚು-ನಿವ್ವಳ-ಮೌಲ್ಯ ಹೊಂದಿರುವ ವ್ಯಕ್ತಿಗಳಿಂದ ಸ್ಥಾಪಿಸಲ್ಪಟ್ಟಿದೆ. ಇದು ಅವರ ಕುಟುಂಬದ ಹೂಡಿಕೆ ಮತ್ತು ಹಣಕಾಸಿನ ಅಗತ್ಯಗಳನ್ನು ಮಾತ್ರ ಪೂರೈಸುತ್ತದೆ. ಅಂಬಾನಿ ಕುಟುಂಬ ಈ ಪ್ರಕಾರವನ್ನು ಆರಿಸಿಕೊಂಡಿದೆ. ಅವರ ಪ್ರಾಥಮಿಕ ಹೂಡಿಕೆ ಕಾರ್ಯವೆಂದರೆ ಸಂಪತ್ತಿನ ಸಂರಕ್ಷಣೆ ಮತ್ತು ಸೃಷ್ಟಿ.

ಪೂರ್ಣ ಪ್ರಮಾಣದ ಏಕ-ಕುಟುಂಬದ ಅಸ್ತಿತ್ವದ ಅಗತ್ಯವಿಲ್ಲದವರಿಗೆ ಬಹು-ಕುಟುಂಬ ಕಚೇರಿಗಳಿವೆ. ಅವರು ಅಗತ್ಯವಿರುವ ಎಲ್ಲ ಸೇವೆಗಳನ್ನು ಒದಗಿಸುತ್ತಾರೆ, ಆದರೆ ಕುಟುಂಬವು ತನ್ನದೇ ಆದ ಸಂಸ್ಥೆಯನ್ನು ಸ್ಥಾಪಿಸಬೇಕಾಗಿಲ್ಲ.

ಭಾರತೀಯರಿಗೆ ಸಂಬಂಧಿಸಿದ ಎಷ್ಟು ಕುಟುಂಬ ಕಚೇರಿಗಳಿವೆ?

ಭಾರತೀಯರಿಗೆ ಸಂಬಂಧಿಸಿದ ಅಂದಾಜು 300 ಕುಟುಂಬ ಕಚೇರಿಗಳಿವೆ ಎಂದು ವರದಿಯಾಗಿದೆ. ಪ್ರತಿಯೊಂದೂ 100 ಮಿಲಿಯನ್ ಡಾಲರ್‌ಗಳ ನಿರ್ವಹಣೆಯ ಅಡಿಯಲ್ಲಿ ಸರಾಸರಿ ಆಸ್ತಿಯನ್ನು ಹೊಂದಿದೆ. ಕೆಲವರು ಬಹು-ಶತಕೋಟಿ ಕಾರ್ಪಸ್‌ಗಳನ್ನು ಸಹ ಹೊಂದಿದ್ದಾರೆ.

ಮುಕೇಶ್‌ ಅಂಬಾನಿ ಹೊರತಾಗಿ, ಗೌತಮ್ ಅದಾನಿ, ರತನ್ ಟಾಟಾ, ಪವನ್ ಮುಂಜಾಲ್, ಅಜೀಂ ಪ್ರೇಮ್‌ಜಿ, ಎನ್‌ಆರ್ ನಾರಾಯಣ ಮೂರ್ತಿ ಮತ್ತು ಮಾರಿವಾಲಾ ಕುಟುಂಬ, ಎಲ್ಲರೂ ಕುಟುಂಬ ಕಚೇರಿಗಳನ್ನು ಹೊಂದಿದ್ದಾರೆ. ಭಾರತದ ಮಾಧ್ಯಮಗಳು ಮತ್ತು ಕ್ರೀಡಾ ಸೆಲೆಬ್ರಿಟಿಗಳು ಮತ್ತು ಟೆಕ್ ಉದ್ಯಮಿಗಳು ಸಹ ಈ ರೀತಿ ಕುಟುಂಬ ಕಚೇರಿಗಳನ್ನು ಹೊಂದಿರುವವರ ಪಟ್ಟಿಯಲ್ಲಿದ್ದಾರೆ.

ಈ ಪಟ್ಟಿಯಲ್ಲಿ ಯುವರಾಜ್ ಸಿಂಗ್, ಪ್ರಿಯಾಂಕಾ ಚೋಪ್ರಾ ಜೋನಾಸ್, ಅಕ್ಷಯ್ ಕುಮಾರ್, ಮಾಧುರಿ ದೀಕ್ಷಿತ್ ನೆನೆ, ಸಚಿನ್ ತೆಂಡೂಲ್ಕರ್, ರಿತೇಶ್ ಅಗರ್ವಾಲ್, ಕುನಾಲ್ ಬಹ್ಲ್, ವಿಜಯ್ ಎಸ್ ಶರ್ಮಾ, ಸಚಿನ್ ಬನ್ಸಾಲ್ ಮತ್ತು ರಾಜುಲ್ ಗಾರ್ಗ್ ಸೇರಿ ಇತರರು ಇದ್ದಾರೆ ಎಂಬುದರ ಕಡೆಗೆ ಕಳೆದ ವರ್ಷ ಅಕ್ಟೋಬರ್‌ ತಿಂಗಳ ಮಾಧ್ಯಮ ವರದಿಗಳು ಗಮನಸೆಳೆದಿವೆ.

IPL_Entry_Point

ವಿಭಾಗ