ಕನ್ನಡ ಸುದ್ದಿ  /  Photo Gallery  /  80s Famous Actress Anuradha Recalls Olden Days

Dancer Anuradha:ಕೋಮಾದಲ್ಲಿದ್ದ ಪತಿಯನ್ನು ನೋಡಿಕೊಳ್ಳಲು ಚಿತ್ರರಂಗ ಬಿಟ್ಟೆ..ಕಷ್ಟದ ದಿನಗಳನ್ನು ನೆನೆದ 80ರ ಖ್ಯಾತ ನಟಿ, ಡ್ಯಾನ್ಸರ್ ಅನುರಾಧ

  • ಜಯಮಾಲಿನಿ, ಡಿಸ್ಕೋಶಾಂತಿ, ಅನುರಾಧ, ಹೆಲನ್‌, ಜ್ಯೋತಿಲಕ್ಷ್ಮಿ ಇವರೆಲ್ಲಾ 80-90ರ ದಶಕದಲ್ಲಿ ಚಿತ್ರರಂಗದಲ್ಲಿ ಬೇಡಿಕೆಯ ಡ್ಯಾನ್ಸರ್‌ಗಳು. ಆಗಿನ ಚಿತ್ರಗಳಲ್ಲಿ ಇವರದ್ದು ಒಂದಾದರೂ ಹಾಡು, ಡ್ಯಾನ್ಸ್‌ ಇರಲೇಬೇಕಿತ್ತು. ಇವರೆಲ್ಲಾ ತಮಿಳುನಾಡು, ಆಂಧ್ರ ಪ್ರದೇಶಕ್ಕೆ ಸೇರಿದವರಾದರೂ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರಿಗೆ ಬಹಳ ಹತ್ತಿರವಾಗಿದ್ದರು.

ಈ ಡ್ಯಾನ್ಸರ್‌ಗಳಲ್ಲಿ ಕೆಲವರು ಚಿತ್ರರಂಗದಿಂದ ಸಂಪೂರ್ಣ ಮರೆಯಾಗಿದ್ದರೆ, ಕೆಲವರು ಜೀವಂತವಾಗಿಲ್ಲ. ಅನುರಾಧ ಸದ್ಯಕ್ಕೆ ಮಕ್ಕಳೊಂದಿಗೆ ಚೆನ್ನೈನಲ್ಲಿ ನೆಲೆಸಿದ್ದಾರೆ. ತೆರೆ ಮೇಲೆ ನಮ್ಮನ್ನು ರಂಜಿಸಿದ ಈ ಚೆಲುವೆ, ತೆರೆ ಹಿಂದೆ ಸಾಕಷ್ಟು ಕಷ್ಟ ಎದುರಿಸಿದ್ದಾರೆ. ಅನೇಕ ಸಂದರ್ಶನಗಳಲ್ಲಿ ಅನುರಾಧಾ ತಮ್ಮ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ.
icon

(1 / 14)

ಈ ಡ್ಯಾನ್ಸರ್‌ಗಳಲ್ಲಿ ಕೆಲವರು ಚಿತ್ರರಂಗದಿಂದ ಸಂಪೂರ್ಣ ಮರೆಯಾಗಿದ್ದರೆ, ಕೆಲವರು ಜೀವಂತವಾಗಿಲ್ಲ. ಅನುರಾಧ ಸದ್ಯಕ್ಕೆ ಮಕ್ಕಳೊಂದಿಗೆ ಚೆನ್ನೈನಲ್ಲಿ ನೆಲೆಸಿದ್ದಾರೆ. ತೆರೆ ಮೇಲೆ ನಮ್ಮನ್ನು ರಂಜಿಸಿದ ಈ ಚೆಲುವೆ, ತೆರೆ ಹಿಂದೆ ಸಾಕಷ್ಟು ಕಷ್ಟ ಎದುರಿಸಿದ್ದಾರೆ. ಅನೇಕ ಸಂದರ್ಶನಗಳಲ್ಲಿ ಅನುರಾಧಾ ತಮ್ಮ ನೋವಿನ ಕಥೆಯನ್ನು ಹೇಳಿಕೊಂಡಿದ್ದಾರೆ.(PC: abinaya_satishkumar , anusathish1987 , WWW.NANAONLINE.IN)

ಅನುರಾಧ ಮೊದಲ ಹೆಸರು  ಸುಲೋಚನಾ ದೇವಿ. ತಂದೆ ಕೃಷ್ಣಕುಮಾರ್‌ ಮರಾಠಿ, ಹಿಂದಿ, ತಮಿಳು ಸಿನಿಮಾಗಳಲ್ಲಿ ಕೊರಿಯೋಗ್ರಾಫರ್‌ ಆಗಿ ಕೆಲಸ ಮಾಡುತ್ತಿದ್ದರು. ತಾಯಿ ಸುಲೋಚನಾ, ನಟಿಯರಿಗೆ ಹೇರ್‌ ಸ್ಟೈಲ್‌ ಮಾಡುತ್ತಿದ್ದರು. 
icon

(2 / 14)

ತಂದೆ ತಾಯಿ, ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರಿಂದ ಅನುರಾಧಾಗೆ ಕೂಡಾ ಸಿನಿಮಾರಂಗಕ್ಕೆ ಬರಲು ಬಹಳ ಸುಲಭವಾಯ್ತು. ಸುಲೋಚನಾ 13 ವರ್ಷದವರಿರುವಾಗ ನಿರ್ದೇಶಕ ಕೆ.ಜಿ. ಜಾರ್ಜ್‌, ಆಕೆಯನ್ನು ಚಿತ್ರರಂಗಕ್ಕೆ ಕರೆತಂದು ಆಕೆಯ ಹೆಸರನ್ನು ಅನುರಾಧ ಎಂದು ಬದಲಾಯಿಸಿದರು. 
icon

(3 / 14)

ಆರಂಭಿಕ ದಿನಗಳಲ್ಲಿ ಅನುರಾಧ ನಾಯಕಿಯಾಗಿ ನಟಿಸಿದರು. ನಂತರ ಆಕೆಗೆ ಹೀರೋಯಿನ್‌ಗಿಂತ ಐಟಮ್‌ ಡ್ಯಾನ್ಸರ್‌ ಆಗಿ ಅವಕಾಶಗಳು ಹುಡುಕಿ ಬಂದವು. ಅನುರಾಧಾಗೆ ಕೂಡಾ ಡ್ಯಾನ್ಸ್‌ ಇಷ್ಟವಿದ್ದರಿಂದ ಆಕೆ ಕೂಡಾ ಅವಕಾಶಗಳನ್ನು ನಿರಾಕರಿಸದೆ ಎಲ್ಲವನ್ನೂ ಒಪ್ಪಿಕೊಂಡರು. ಇದುವರೆಗೂ ಐದು ಭಾಷೆಗಳಲ್ಲಿ ಅನುರಾಧ 700 ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(4 / 14)

ಆರಂಭಿಕ ದಿನಗಳಲ್ಲಿ ಅನುರಾಧ ನಾಯಕಿಯಾಗಿ ನಟಿಸಿದರು. ನಂತರ ಆಕೆಗೆ ಹೀರೋಯಿನ್‌ಗಿಂತ ಐಟಮ್‌ ಡ್ಯಾನ್ಸರ್‌ ಆಗಿ ಅವಕಾಶಗಳು ಹುಡುಕಿ ಬಂದವು. ಅನುರಾಧಾಗೆ ಕೂಡಾ ಡ್ಯಾನ್ಸ್‌ ಇಷ್ಟವಿದ್ದರಿಂದ ಆಕೆ ಕೂಡಾ ಅವಕಾಶಗಳನ್ನು ನಿರಾಕರಿಸದೆ ಎಲ್ಲವನ್ನೂ ಒಪ್ಪಿಕೊಂಡರು. ಇದುವರೆಗೂ ಐದು ಭಾಷೆಗಳಲ್ಲಿ ಅನುರಾಧ 700 ಸಿನಿಮಾಗಳಲ್ಲಿ ನಟಿಸಿದ್ದಾರೆ. (PC: WWW.NANAONLINE.IN)

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಒರಿಯಾ ಭಾಷೆಗಳ ಸಿನಿಮಾಗಳಲ್ಲಿ ಅನುರಾಧಾ ಆಕ್ಟಿಂಗ್‌ ಹಾಗೂ ಡ್ಯಾನ್ಸರ್‌ ಆಗಿ ನಟಿಸಿದ್ದಾರೆ. ಆಗ, ಇತರ ಎಲ್ಲಾ ಡ್ಯಾನ್ಸರ್‌ಗಳಿಗಿಂತ ಸಿಲ್ಕ್‌ ಸ್ಮಿತಾ ಹಾಗೂ ಅನುರಾಧ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. 
icon

(5 / 14)

ಖ್ಯಾತಿಯ ಉತ್ತುಂಗದಲ್ಲಿರುವಾಗಲೇ ಅನುರಾಧಾ ಡ್ಯಾನ್ಸ್‌ ಮಾಸ್ಟರ್‌ ಸತೀಶ್‌ ಕುಮಾರ್‌ ಅವರನ್ನು ಮದುವೆಯಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಅಭಿನಯಶ್ರೀ, ಮಗ ಕಾಳಿಚರಣ್‌. ಎಲ್ಲಾ ಸುಸೂತ್ರವಾಗಿ ಸಾಗುತ್ತಿದ್ದ ಸಮಯದಲ್ಲಿ ಸತೀಶ್‌ 1996ರಲ್ಲಿ ಬೈಕ್‌ ಅಪಘಾತಕ್ಕೊಳಗಾಗಿ ಕೋಮಾಗೆ ಜಾರಿದರು. 
icon

(6 / 14)

ಕೆಲವು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸಾದರೂ, ಸತೀಶ್‌ ಎಲ್ಲವನ್ನೂ ಮರೆತಿದ್ದರು. ಅವರು ಎದ್ದು ಓಡಾಡಲೂ ಆಗದಂತ ಪರಿಸ್ಥಿತಿಯಲ್ಲಿದ್ದರು. ಪತಿ ಹಾಗೂ ಮಕ್ಕಳನ್ನು ನೋಡಿಕೊಳ್ಳಲು ಅನುರಾಧ ಚಿತ್ರರಂಗದಿಂದ ದೂರ ಉಳಿದರು. ಎರಡು ಮಕ್ಕಳ ಜೊತೆಗೆ ಪತಿಯನ್ನು ಮೂರನೇ ಮಗುವಿನಂತೆ ಆರೈಕೆ ಮಾಡಿದರು. ಪತಿಗಾಗಿ ಸಿನಿಮಾರಂಗ ಬಿಟ್ಟರು.  
icon

(7 / 14)

11 ವರ್ಷಗಳ ಕಾಲ ಅನುರಾಧಾ ಮಕ್ಕಳು ಹಾಗೂ ಪತಿಯ ಆರೈಕೆಯಲ್ಲಿ ಕಳೆದರು. ಪತಿ ಸತೀಶ್‌ ಕುಮಾರ್‌ ಚೇತರಿಸಿಕೊಳ್ಳುತ್ತಿದ್ದಾರೆ ಎಂದುಕೊಳ್ಳುವಷ್ಟರಲ್ಲೇ 2007ರಲ್ಲಿ ಹೃದಯಾಘಾತದಿಂದ ಮೃತಪಟ್ಟರು. ಪತಿಯೂ ಇಲ್ಲ, ಅನುರಾಧಾಗೆ ಬೆಂಬಲವಾಗಿ ನಿಂತಿದ್ದ ತಾಯಿಯೂ ನಿಧನರಾದರು, ಮತ್ತೊಂದೆಡೆ ಚಿತ್ರರಂಗವೂ ಇಲ್ಲ. ಇನ್ಮುಂದೆ ಜೀವನ ಹೇಗೆ ನಡೆಸುವುದು ಎಂಬ ಚಿಂತೆ ಅನುರಾಧಾಗೆ ಕಾಡಿತ್ತು. 
icon

(8 / 14)

ಅಷ್ಟರಲ್ಲಿ ಚಿತ್ರರಂಗದಲ್ಲಿ ಸಾಕಷ್ಟು ಬದಲಾವಣೆಯಾಗಿತ್ತು. ಆಗಿನ ಡ್ಯಾನ್ಸರ್‌ಗಳಿಗೆ ಅವಕಾಶಗಳು ಕಡಿಮೆ ಆಗಿತ್ತು. ಆಗೆಲ್ಲಾ ಐಟಮ್‌ ಡ್ಯಾನ್ಸ್‌ ಎಂದರೆ ಅದಕ್ಕೆಂದೇ ನಿರ್ದಿಷ್ಟ ನಟಿಯರಿದ್ದರು. ಯಾವುದೇ ಸಿನಿಮಾ ಆಗಲೀ ನಮನ್ನು ಕರೆದು ಅವಕಾಶ ಕೊಡುತ್ತಿದ್ದರು. ಆದರೆ ಈಗ ಹೀರೋಯಿನ್‌ಗಳೇ ಬೇರೆ ಸಿನಿಮಾಗಳಲ್ಲಿ ಐಟಮ್‌ ಹಾಡಿಗೆ ಡ್ಯಾನ್ಸ್‌ ಮಾಡುವ ಟ್ರೆಂಡ್‌ ಶುರುವಾಗಿದೆ. ಇದರಿಂದ ನಮ್ಮಂತವರಿಗೆ ಅವಕಾಶವೇ ಇಲ್ಲ ಎಂದು ಅನುರಾಧ ಬೇಸರ ವ್ಯಕ್ತಪಡಿಸಿದ್ದರು.  
icon

(9 / 14)

ಅನುರಾಧ ಪುತ್ರಿ ಅಭಿನಯಶ್ರೀ ನಿಮಗೆ ನೆನಪಿರಬಹುದು. 2003ರಲ್ಲಿ ತೆರೆ ಕಂಡ 'ಕರಿಯ' ಚಿತ್ರದಲ್ಲಿ ದರ್ಶನ್‌ ಜೊತೆ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರಕ್ಕೂ ಮುನ್ನ, ಈ ಸಿನಿಮಾ ನಂತರ ಅಭಿನಯಶ್ರೀ ತಮಿಳು, ಮಲಯಾಳಂ, ತೆಲುಗಿನ ಅನೇಕ ಸಿನಿಮಾಗಳಲ್ಲಿ ನಟಿಸಿದರು. ಆದರೆ ಆಕೆ ನಾಯಕಿಯಾಗಿ ನಟಿಸಿದ್ದು ಬೆರಳೆಣಿಕೆ ಸಿನಿಮಾಗಳು ಮಾತ್ರ. 
icon

(10 / 14)

ತೆಲುಗಿನಲ್ಲಿ ಅಲ್ಲು ಅರ್ಜುನ್‌ ಅಭಿನಯದ 'ಆರ್ಯ' ಚಿತ್ರದಲ್ಲಿ ಆ..ಅಂಟೆ ಅಮಲಾ ಪುರಂ.... ಹಾಡಿಗೆ ಅಭಿನಯಶ್ರೀ ಡ್ಯಾನ್ಸ್‌ ಮಾಡಿದ್ದಾರೆ. ಈ ಹಾಡು ಇಂದಿಗೂ ಫೇಮಸ್.‌ ಸದ್ಯಕ್ಕೆ ಅಭಿನಯಶ್ರೀ ತೆಲುಗಿನ ಸ್ಟಾರ್‌ ಮಾವಾಹಿನಿಯಲ್ಲಿ ಪ್ರಸಾರವಾಗುತ್ತಿರುವ BB Jodi ಕಾರ್ಯಕ್ರಮದ ಸ್ಪರ್ಧಿಯಾಗಿ ಭಾಗವಹಿಸುತ್ತಿದ್ದಾರೆ. 
icon

(11 / 14)

ಡ್ಯಾನ್ಸ್‌ ಕೊರಿಯೋಗ್ರಾಪರ್‌ ಕೂಡಾ ಆಗಿರುವ ಅಭಿನಯಶ್ರೀ ಕನ್ನಡ ಸೇರಿ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ.  ತೆಲುಗು ಬಿಗ್‌ ಬಾಸ್‌ ಸೀಸನ್‌ 6ರಲ್ಲಿ ಸ್ಪರ್ಧಿಯಾಗಿಯೂ ಭಾಗವಹಿಸಿದ್ದರು. 
icon

(12 / 14)

ಪತಿ ಸತೀಶ್‌ ನಿಧನದ ನಂತರ ಅನುರಾಧ ಕಿರುತೆರೆ ಮೂಲಕ ಮತ್ತೆ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಿದರು. ಸದ್ಯಕ್ಕೆ ಕಲರ್ಸ್‌ ತಮಿಳು ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಯೊಂದರಲ್ಲಿ ಅನುರಾಧಾ ನಟಿಸುತ್ತಿದ್ದಾರೆ.  
icon

(13 / 14)

ಅನುರಾಧ ಪುತ್ರ ಕಾಳಿಚರಣ್‌ ಸಿನಿಮಾ ಕ್ಷೇತ್ರದಿಂದ ದೂರ ಉಳಿದು ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ರೀಡೆಯಲ್ಲಿ ಕೂಡಾ ಚರಣ್‌ ಗುರುತಿಸಿಕೊಂಡಿದ್ದಾರೆ. 
icon

(14 / 14)

IPL_Entry_Point

ಇತರ ಗ್ಯಾಲರಿಗಳು