ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗರಿಷ್ಠ ಸಿಕ್ಸರ್, ಅತ್ಯಧಿಕ ರನ್ ಚೇಸ್; ಕೆಕೆಆರ್ Vs ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ 5 ಸಾರ್ವಕಾಲಿಕ ದಾಖಲೆಗಳು ನಿರ್ಮಾಣ

ಗರಿಷ್ಠ ಸಿಕ್ಸರ್, ಅತ್ಯಧಿಕ ರನ್ ಚೇಸ್; ಕೆಕೆಆರ್ vs ಪಂಜಾಬ್ ಕಿಂಗ್ಸ್ ಪಂದ್ಯದಲ್ಲಿ 5 ಸಾರ್ವಕಾಲಿಕ ದಾಖಲೆಗಳು ನಿರ್ಮಾಣ

  • KKR vs PBKS World Records: ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2024 ಪಂದ್ಯದಲ್ಲಿ ಹಲವು ವಿಶ್ವದಾಖಲೆಗಳು ನಿರ್ಮಾಣಗೊಂಡಿವೆ. ಅವುಗಳ ಪಟ್ಟಿ ಇಲ್ಲಿದೆ.

ಈಡನ್ ಗಾರ್ಡನ್​ ಮೈದಾನದಲ್ಲಿ ಏಪ್ರಿಲ್ 26ರಂದು ನಡೆದ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯ ಹೊಸ ಚರಿತ್ರೆ ಸೃಷ್ಟಿಸಿದೆ. ಐಪಿಎಲ್ ಇತಿಹಾಸದಲ್ಲಿ ಮಾತ್ರವಲ್ಲ, ಟಿ20 ಕ್ರಿಕೆಟ್​​​ ಇತಿಹಾಸದಲ್ಲಿಯೂ ಅನೇಕ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ. ಐಪಿಎಲ್ 2024ರ 42 ನೇ ಪಂದ್ಯದ ಗಮನಾರ್ಹ ದಾಖಲೆಗಳ ಪಟ್ಟಿಯನ್ನು ಈ ಮುಂದೆ ನೋಡೋಣ.
icon

(1 / 6)

ಐಪಿಎಲ್ ಇತಿಹಾಸದಲ್ಲಿ ಮಾತ್ರವಲ್ಲ, ಟಿ20 ಕ್ರಿಕೆಟ್ ಇತಿಹಾಸದಲ್ಲಿಯೂ ಅತ್ಯಧಿಕ ರನ್ ಚೇಸ್ ಮಾಡಿದ ವಿಶ್ವದಾಖಲೆ ಪಂಜಾಬ್ ಕಿಂಗ್ಸ್ ಪಾಲಾಗಿದೆ. ಈ ಪಂದ್ಯದಲ್ಲಿ ಕೆಕೆಆರ್ 20 ಓವರ್​​ಗಳಲ್ಲಿ 261 ರನ್ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ಪಿಬಿಕೆಎಸ್ 18.4 ಓವರ್​​ಗಳಲ್ಲೇ 262 ರನ್ ಗಳಿಸಿ ಗೆದ್ದು ದಾಖಲೆ ನಿರ್ಮಿಸಿತು. ದೇಶೀಯ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್​​ ಇತಿಹಾಸದಲ್ಲಿ 20 ಓವರ್​ಗಳ ಪಂದ್ಯದಲ್ಲಿ ಯಾವ ತಂಡವೂ ಇಷ್ಟು ರನ್ ಚೇಸ್​ ಮಾಡಿ ಗೆದ್ದ ಇತಿಹಾಸ ಇಲ್ಲ. ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ 223 ರನ್​ಗಳ ಗುರಿ ಬೆನ್ನಟ್ಟಿದ್ದು ಇದುವರೆಗಿನ ದಾಖಲೆಯಾಗಿತ್ತು.
icon

(2 / 6)

ಐಪಿಎಲ್ ಇತಿಹಾಸದಲ್ಲಿ ಮಾತ್ರವಲ್ಲ, ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕೆಕೆಆರ್ ಮತ್ತು ಪಂಜಾಬ್ ನಡುವಿನ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್​ಗಳು ದಾಖಲಾಗಿವೆ. ಕೆಕೆಆರ್ ಬ್ಯಾಟ್ಸ್​​ಮನ್​​ಗಳು 18 ಸಿಕ್ಸರ್​, ಪಂಜಾಬ್ ಬ್ಯಾಟರ್ಸ್ 24 ಸಿಕ್ಸರ್​​ ಬಾರಿಸಿದ್ದಾರೆ. ಈ ಪಂದ್ಯದ ಎರಡು ಇನ್ನಿಂಗ್ಸ್​ಗಳಲ್ಲಿ ಒಟ್ಟು 42 ಸಿಕ್ಸರ್​​ಗಳು ದಾಖಲಾಗಿವೆ. ಪ್ರಸಕ್ತ ಐಪಿಎಲ್​ನಲ್ಲಿ ಎಸ್​ಆರ್​ಹೆಚ್ vs ಮುಂಬೈ ಮತ್ತು ಎಸ್​ಆರ್​ಹೆಚ್ vs ಆರ್​ಸಿಬಿ ಪಂದ್ಯಗಳಲ್ಲಿ 38 ಸಿಕ್ಸರ್​​ಗಳು ದಾಖಲಾಗಿದ್ದು, ಇದುವರೆಗಿನ ರೆಕಾರ್ಡ್ ಆಗಿತ್ತು. ಟಿ20 ಕ್ರಿಕೆಟ್ ಇತಿಹಾಸದಲ್ಲೂ ಪಂದ್ಯವೊಂದರಲ್ಲಿ ಇಷ್ಟು ಸಿಕ್ಸರ್​​ಗಳು ದಾಖಲಾಗಿಲ್ಲ.
icon

(3 / 6)

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎರಡೂ ತಂಡಗಳ ನಾಲ್ವರು ಆರಂಭಿಕರು ಒಂದೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಕೆಕೆಆರ್ ಪರ ಸುನಿಲ್ ನರೈನ್ 71 ರನ್, ಫಿಲ್ ಸಾಲ್ಟ್ 75 ರನ್ ಗಳಿಸಿದರೆ, ಪಂಜಾಬ್ ಪರ ಜಾನಿ ಬೈರ್​​ಸ್ಟೋ ಅಜೇಯ 108 ರನ್, ಪ್ರಭುಸಿಮ್ರಾನ್ ಸಿಂಗ್ 54 ರನ್ ಗಳಿಸಿದರು. ಇದಕ್ಕೂ ಮುನ್ನ 2018ರಲ್ಲಿ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದಲ್ಲಿ ಎರಡೂ ತಂಡಗಳ ಎಲ್ಲಾ ನಾಲ್ವರು ಆರಂಭಿಕರು ಅರ್ಧಶತಕಗಳನ್ನು ಗಳಿಸಿದ್ದರು.
icon

(4 / 6)

ಐಪಿಎಲ್ ಇತಿಹಾಸದಲ್ಲಿ ಇನ್ನಿಂಗ್ಸ್​ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ದಾಖಲೆ ಪಂಜಾಬ್ ಕಿಂಗ್ಸ್ ಹೆಸರಿನಲ್ಲಿದೆ. ಕೆಕೆಆರ್ ವಿರುದ್ಧ ಪಂಜಾಬ್ ಬ್ಯಾಟರ್​ಗಳು ಒಟ್ಟು 24 ಸಿಕ್ಸರ್​​ ಬಾರಿಸಿದ್ದಾರೆ. ಪಂಜಾಬ್ ಕಿಂಗ್ಸ್ ಪರ ಜಾನಿ ಬೈರ್​​ಸ್ಟೋ 9, ಶಶಾಂಕ್ ಸಿಂಗ್ 8, ಪ್ರಭುಸಿಮ್ರಾನ್ ಸಿಂಗ್ 5 ಮತ್ತು ರಿಲೀ ರೊಸ್ಸೌ ಎರಡು ಸಿಕ್ಸರ್ ಬಾರಿಸಿದ್ದಾರೆ.
icon

(5 / 6)

ಐಪಿಎಲ್ ಇತಿಹಾಸದಲ್ಲಿ ಮಾತ್ರವಲ್ಲ, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಪಂಜಾಬ್ ಕಿಂಗ್ಸ್ ರನ್ ಚೇಸಿಂಗ್​​ನಲ್ಲಿ ಗರಿಷ್ಠ ಮೊತ್ತ ದಾಖಲಿಸಿದ ಎರಡನೇ ತಂಡವಾಗಿದೆ. ಆರ್​ಸಿಬಿ ಜೊತೆಗೆ ಜಂಟಿ ದಾಖಲೆ ನಿರ್ಮಿಸಿದೆ. ಪಂಜಾಬ್ 2 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತ್ತು. ಇದಕ್ಕೂ ಮುನ್ನ ಸನ್​ರೈಸರ್ಸ್ ಹೈದರಾಬಾದ್ 3 ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟುವಾಗ, ಆರ್​ಸಿಬಿ 7 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತ್ತು.
icon

(6 / 6)

IPL_Entry_Point

ಇತರ ಗ್ಯಾಲರಿಗಳು