ಜಗತ್ತಿನ 10 ವಿಸ್ಮಯಕಾರಿ ತಾಣಗಳಿವು; ಇಲ್ಲಿನ ಅಚ್ಚರಿಯನ್ನು ಕಣ್ಣಾರೆ ಕಂಡ್ರು ನೀವು ನಂಬೋದು ಕಷ್ಟ
- ನಮ್ಮ ಜಗತ್ತು ಹಾಗೂ ಪ್ರಕೃತಿ ಹಲವು ವಿಸ್ಮಯಗಳ ಆಗರ. ನಮ್ಮ ಕಣ್ಣನ್ನೇ ನಾವು ನಂಬಲಾರದಷ್ಟು ವಿಸ್ಮಯಗಳು ಇಲ್ಲಿವೆ. ಪ್ರಪಂಚದ ಅದೆಷ್ಟೋ ತಾಣಗಳು ನಮಗೆ ಅಸಹಜ ಎನ್ನಿಸುವುದು ಸುಳ್ಳಲ್ಲ. ಅಂತಹ 10 ನಿಗೂಢ, ವಿಸ್ಮಯಕಾರಿ ತಾಣಗಳು ಇಲ್ಲಿವೆ ನೋಡಿ. ಈ ತಾಣಗಳ ಅಚ್ಚರಿಯನ್ನು ನೀವೇ ಕಣ್ಣಾರೆ ನೋಡಿದ್ರೂ ನಂಬೋದು ಕಷ್ಟ.
- ನಮ್ಮ ಜಗತ್ತು ಹಾಗೂ ಪ್ರಕೃತಿ ಹಲವು ವಿಸ್ಮಯಗಳ ಆಗರ. ನಮ್ಮ ಕಣ್ಣನ್ನೇ ನಾವು ನಂಬಲಾರದಷ್ಟು ವಿಸ್ಮಯಗಳು ಇಲ್ಲಿವೆ. ಪ್ರಪಂಚದ ಅದೆಷ್ಟೋ ತಾಣಗಳು ನಮಗೆ ಅಸಹಜ ಎನ್ನಿಸುವುದು ಸುಳ್ಳಲ್ಲ. ಅಂತಹ 10 ನಿಗೂಢ, ವಿಸ್ಮಯಕಾರಿ ತಾಣಗಳು ಇಲ್ಲಿವೆ ನೋಡಿ. ಈ ತಾಣಗಳ ಅಚ್ಚರಿಯನ್ನು ನೀವೇ ಕಣ್ಣಾರೆ ನೋಡಿದ್ರೂ ನಂಬೋದು ಕಷ್ಟ.
(1 / 10)
ದಿ ವೇವ್-ಅರಿಜೋನಾ, ಅಮೆರಿಕ: ಈ ಜಾಗವು ಅದ್ಭುತ ಮರಳುಗಲ್ಲಿನ ಗುಹೆಗಳಿಂದ ಕೂಡಿದೆ. ಕೆಂಪು ಅಲೆಗಳಂತೆ ಕಾಣುವ ಕಡಿದಾದ ಬೆಟ್ಟಗಳನ್ನು ಇಲ್ಲಿ ಕಾಣಬಹುದು. ಪೆರಿಯಾ ಕಣಿವೆಯಲ್ಲಿದೆ ಈ ತಾಣ. ಇದು ಜಗತ್ತಿನ ಅಸಹಜ ಎನ್ನಿಸುವ ತಾಣಗಳಲ್ಲಿ ಒಂದು.
(Pinterest )(2 / 10)
ಸಲಾರ್ ಡಿ ಯುಯುನಿ, ಬೊಲಿವಿಯಾ: ಇದು ಜಗತ್ತಿನ ಅತಿ ದೊಡ್ಡ ಉಪ್ಪು ನೀರಿನ ಸರೋವರ. 10000 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿರುವ ಈ ಪ್ರದೇಶವು ಸಮುದ್ರ ಮಟ್ಟದಿಂದ 3,656 ಮೀಟರ್ ಎತ್ತರದಲ್ಲಿದೆ. ಇಲ್ಲಿ 40 ಸಾವಿರ ವರ್ಷಗಳ ಹಿಂದಿನ ಸರೋವರ ಆವಿಯಾಗಿ ಉಪ್ಪು ನೀರಿನ ಮಂಜುಗಡ್ಡೆಯಾಗಿದೆ ಎನ್ನಲಾಗುತ್ತದೆ.
(3 / 10)
ಪಮುಕ್ಕಲೆ, ಟರ್ಕಿ: ಟರ್ಕಿಯಲ್ಲಿರುವ ಈ ತಾಣವು ಮಂಜುಗಡ್ಡೆಯ ಕೋಟೆಯ ನಡುವೆ ಇರುವ ಚಿಕ್ಕ ಚಿಕ್ಕ ಕೊಳಗಳನ್ನು ಹೊಂದಿದ ವಿಶೇಷ ತಾಣವಾಗಿದೆ. ಇದನ್ನು ಟರ್ಕಿ ಭಾಷೆಯಲ್ಲಿ ಹತ್ತಿಕೋಟೆ ಎಂದು ಕರೆಯುತ್ತಾರೆ. ನೈಋತ್ಯ ಟರ್ಕಿಯ ಡೆನಿಜ್ಲಿ ಪ್ರಾಂತ್ಯದಲ್ಲಿದೆ ಪಮುಕ್ಕಲೆ. ಇದು ಯುನೆಸ್ಕೊ ವಿಶ್ವಪಾರಂಪರಿಕ ತಾಣದಲ್ಲೂ ಹೆಸರು ಗಳಿಸಿದೆ.
(trip adivsor)(4 / 10)
ನರಕದ ಬಾಗಿಲು, ತುರ್ಕಮೆನಿಸ್ತಾನ್: ಕರಕುಮ್ ಮರುಭೂಮಿಯಲ್ಲಿರುವ ದರ್ವಾಜಾ ಗ್ಯಾಸ್ ಕ್ರೇಟರ್ ಅನ್ನು 'ನರಕದ ಬಾಗಿಲು' ಎಂದು ಕರೆಯಲಾಗುತ್ತದೆ. ಇಲ್ಲಿ ನಾಲ್ಕು ದಶಕಗಳಿಂದ ನಿರಂತರವಾಗಿ ಉರಿಯುತ್ತಿರುವ ಕುಳಿಗಳು, ಪ್ರಜ್ವಲಿಸುತ್ತಿರುವ ಜ್ವಾಲೆಗಳನ್ನ ಕಾಣಬಹುದಾಗಿದೆ.
(5 / 10)
ವೈಟೊಮೊ ಗುಹೆಗಳು, ನ್ಯೂಜಿಲೆಂಡ್: ಇದು ಕೂಡ ಜಗತ್ತಿನ ವಿಸ್ಮಯಕಾರಿ ತಾಣಗಳಲ್ಲಿ ಒಂದು. ಇಲ್ಲಿನ ಗುಹೆಗಳಲ್ಲಿ ಮಿಂಚುಹುಳುಗಳು ಹರಡಿರುವಂತೆ ಬೆಳಕು ಹರಡಿರುತ್ತದೆ. ಹಗಲಿನಲ್ಲೂ ತೀವ್ರ ಕತ್ತಲೆ ಇರುವ ಈ ಜಾಗದಲ್ಲಿ ಮಿಂಚು ಹುಳದ ರೀತಿಯ ಪುಟ್ಟ ಹುಳಗಳು ವಿಸ್ಮಯ ಲೋಕವನ್ನು ಸೃಷ್ಟಿಸಿವೆ.
(viator)(6 / 10)
ದಿ ಗ್ರೇಟ್ ಬ್ಲೂ ಹೋಲ್, ಬೆಲೀಜ್: ಇದು ಬೆಲೀಜ್ ಕರಾವಳಿಯಲ್ಲಿರುವ ವಿಸ್ಮಯಕಾರಿ ತಾಣವಾಗಿದೆ. ಸಮುದ್ರ ಮಧ್ಯೆ ನೀಲಿ ನೀರಿನ ಹೊಂಡಗಳಿರುವುದನ್ನು ಇಲ್ಲಿ ಕಾಣಬಹುದಾಗಿದೆ. 15000 ವರ್ಷಗಳ ಹಿಂದೆ ಈ ಕುಳಿಗಳು ಉಂಟಾಗಿದೆ ಎಂದು ಹೇಳಲಾಗುತ್ತದೆ. ಇದು ಕೂಡ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹೆಸರು ಗಳಿಸಿದೆ.
(Wikipedia)(7 / 10)
ಮೌಂಟ್ ರೋರೈಮಾ, ವೆನೆಜುವೆಲಾ: ಇದು ವಿಲಕ್ಷಣ ಬೆಟ್ಟಗಳನ್ನು ಹೊಂದಿರುವ ಪ್ರದೇಶವಾಗಿದ್ದು, ಬೆಟ್ಟಗಳ ಬುಡದಲ್ಲಿ ಹಿಮ ಹರಡಿರುತ್ತದೆ. ಇಲ್ಲಿನ ಪ್ರಕೃತಿ ವಿಸ್ಮಯವು ನಿಮ್ಮನ್ನು ಬೆರಗುಗೊಳಿಸುವುದರಲ್ಲಿ ಅನುಮಾನವಿಲ್ಲ.
(Mybestplace)(8 / 10)
ನ್ಯಾಟ್ರಾನ್ ಸರೋವರ, ತಾಂಜಾನಿಯಾ: ಇದು ಬಣ್ಣಗಳ ಸಮುದ್ರ ಎಂದರೂ ತಪ್ಪಲ್ಲ. ಇಲ್ಲಿನ ಸಮುದ್ರದ ನೀರು ಕೆಂಪು, ಹಸಿರು, ನೀಲಿ ಹೀಗೆ ವಿವಿಧ ಬಣ್ಣಗಳನ್ನು ಹೊಂದಿದೆ. ಆಫ್ರಿಕಾದ ಫೆಮ್ಲಿಂಗೊಗಳು ಈ ಜಾಗವನ್ನು ತಮ್ಮ ಸಂತಾನೋತ್ಪತಿಗಾಗಿ ಆರಿಸಿಕೊಳ್ಳುತ್ತವೆ. ಹಾಗಾಗಿ ಇಲ್ಲಿ ಸಾವಿರಾರು ಅಪರೂಪದ ಫೆಮ್ಲಿಂಗೊಗಳನ್ನು ಕಾಣಬಹುದು.
(Hubpages)(9 / 10)
ಟಿಯಾಂಜಿ ಪರ್ವತ: ಚೀನಾದ ಹುನಾನ್ ಪ್ರಾಂತ್ಯದಲ್ಲಿರುವ ಟಿಯಾಂಜಿ ಪರ್ವತ ಎತ್ತರದ ಶಿಖರಗಳು, ಮಧ್ಯೆದಲ್ಲಿ ಹರಿದಾಡುವ ಮೋಡಗಳಂತೆ ಕಾಣುವ ಹಿಮ, ಹಸಿರ ಪ್ರಕೃತಿಯ ನಡುವೆ ಈ ಪ್ರದೇಶ ನಿಮ್ಮನ್ನು ವಿಸ್ಮಯ ಲೋಕಕ್ಕೆ ಕರೆದುಕೊಂಡು ಹೋಗುವುದು ಸುಳ್ಳಲ್ಲ,.
ಇತರ ಗ್ಯಾಲರಿಗಳು