ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kannada Serial Trpಯಲ್ಲಿ ಮೊದಲ ಸ್ಥಾನಕ್ಕೆ ಹೆಚ್ಚಾಯ್ತು ಪೈಪೋಟಿ, ಮೂರನೇ ಸ್ಥಾನಕ್ಕೆ ರಾಮಾಚಾರಿ ಎಂಟ್ರಿ, ಬಡ್ತಿ ಪಡೆದ ಶ್ರಾವಣಿ ಸುಬ್ರಮಣ್ಯ

Kannada Serial TRPಯಲ್ಲಿ ಮೊದಲ ಸ್ಥಾನಕ್ಕೆ ಹೆಚ್ಚಾಯ್ತು ಪೈಪೋಟಿ, ಮೂರನೇ ಸ್ಥಾನಕ್ಕೆ ರಾಮಾಚಾರಿ ಎಂಟ್ರಿ, ಬಡ್ತಿ ಪಡೆದ ಶ್ರಾವಣಿ ಸುಬ್ರಮಣ್ಯ

  • Kannada Serial TRP: ವಾರದ ಟಿಆರ್‌ಪಿ ಲಿಸ್ಟ್‌ ಹೊರಬಿದ್ದಿದೆ. ಈ ವಾರ ಅಚ್ಚರಿಯ ಫಲಿತಾಂಶಗಳ ಮೂಲಕ ಹೊಸ ಧಾರಾವಾಹಿಗಳು ಟಾಪ್‌ ಐದರಲ್ಲಿ ಕಾಣಿಸಿಕೊಂಡಿವೆ. ಹಾಗಾದರೆ, ಈ ವಾರದ ಟಾಪ್‌ 8 ಸೀರಿಯಲ್‌ಗಳು ಯಾವವು? ಇಲ್ಲಿದೆ ಮಾಹಿತಿ.

ಈ ವಾರದ ಕನ್ನಡ ಕಿರುತೆರೆ ಸೀರಿಯಲ್‌ಗಳ ಟಿಆರ್‌ಪಿ ಗಮನಿಸುವುದಾದರೆ, ಕಳೆದ ವಾರ ಟಾಪ್‌ ಸ್ಥಾನದಲ್ಲಿದ್ದ ಸೀರಿಯಲ್‌ಗಳಿಗೆ ಇತ್ತೀಚೆಗೆ ಶುರುವಾದ ಸೀರಿಯಲ್‌ ಟಕ್ಕರ್‌ ಕೊಡುತ್ತಿದೆ. ಹಾಗಾದರೆ ಮೊದಲ ಸ್ಥಾನದಿಂದ ಟಾಪ್‌ 8ರಲ್ಲಿ ಯಾವೆಲ್ಲ ಸೀರಿಯಲ್‌ಗಳಿವೆ ನೋಡೋಣ ಬನ್ನಿ. 
icon

(1 / 9)

ಲಕ್ಷ್ಮೀ ನಿವಾಸ: ಲಕ್ಷ್ಮೀ ನಿವಾಸ ಸೀರಿಯಲ್‌ ನೋಡುಗರಿಂದ ಮೆಚ್ಚುಗೆ ಪಡೆದುಕೊಂಡಿದೆ. ಹಲವು ಕೋನಗಳಲ್ಲಿ ಸಾಗುವ ಈ ಸೀರಿಯಲ್‌ ಕಥೆಯಲ್ಲಿ, ಸೈಕೋ ಜಯಂತನ ಅತಿಯಾದ ಪ್ರೀತಿಯೇ ಹೈಲೈಟ್. ಇನ್ನೊಂದು ಭಾವನಾ ಮತ್ತು ಸಿದ್ಧೇಗೌಡ ಜೋಡಿಗೂ ನೋಡುಗರು ಫಿದಾ ಆಗಿದ್ದಾರೆ. ಅದರಂತೆ ಈ ಧಾರಾವಾಹಿ ಈ ವಾರ ಮೊದಲ ಸ್ಥಾನದಲ್ಲಿದೆ. ಪಡೆದ ಟಿಆರ್‌ಪಿ 7,9
icon

(2 / 9)

ಪುಟ್ಟಕ್ಕನ ಮಕ್ಕಳು: ಕಳೆದ ಎರಡು ವರ್ಷಗಳಿಂದ ಮೊದಲ ಸ್ಥಾನಕ್ಕೆ ಅಂಟಿಕೊಂಡಿದ್ದ ಪುಟ್ಟಕ್ಕನ ಮಕ್ಕಳು ಸೀರಿಯಲ್‌, ಇತ್ತೀಚಿನ ಕೆಲ ತಿಂಗಳಿಂದ ಕೊಂಚ ನಲುಗಿತ್ತು. ಲಕ್ಷ್ಮೀ ನಿವಾಸ ಸೀರಿಯಲ್‌ ಜತೆಗೆ ಪ್ರಬಲ ಪೈಪೋಟಿ ನಡೆಸುತ್ತಿದೆ. ‌ಕಳೆದ ವಾರ ಸಮಬಲ ಸಾಧಿಸಿದ್ದ ಈ ಸೀರಿಯಲ್ ಈ ಸಲ ಎರಡನೇ ಸ್ಥಾನದಲ್ಲಿದೆ. ಪಡೆದ ಟಿಆರ್‌ಪಿ 7.4
icon

(3 / 9)

ರಾಮಾಚಾರಿ: ಅದೇ ರೀತಿ ಕಲರ್ಸ್‌ ಕನ್ನಡದಲ್ಲಿನ ರಾಮಾಚಾರಿ ಸೀರಿಯಲ್‌ ನೋಡುಗರ ಮನಗೆದ್ದಿದೆ. ಟ್ವಿಸ್ಟ್‌ ಮತ್ತು ಟರ್ನ್‌ಗಳ ಮೂಲಕ ವೀಕ್ಷಕರನ್ನು ಸೆಳೆದ ಈ ಸೀರಿಯಲ್‌ ಇದೀಗ ಟಾಪ್‌ ಐದರಲ್ಲಿ ಸ್ಥಾನ ಪಡೆದುಕೊಂಡಿದೆ. ಈ ವಾರ 3ನೇ ಸ್ಥಾನದಲ್ಲಿದೆ ಈ ಸಿನಿಮಾ. ಪಡೆದ ಟಿಆರ್‌ಪಿ 6.2
icon

(4 / 9)

ಸೀತಾ ರಾಮ: ಸೀತಾ ರಾಮ ಸೀರಿಯಲ್‌ನಲ್ಲಿ ಅಶೋಕ ಮತ್ತು ಪ್ರಿಯಾ ಜೋಡಿಯ ಕಲ್ಯಾಣ ಮುಗಿದಿದೆ. ಸೀತಾ ರಾಮರ ವಿಚಾರವೂ ಭಾರ್ಗವಿಯಿಂದ ಸೂರ್ಯ ಪ್ರಕಾಶ್‌ ದೇಸಾಯಿಯ ಗಮನಕ್ಕೂ ಬಂದಿದೆ. ಆದರೆ, ತೆರೆಹಿಂದೆ ಆಸ್ತಿಗಾಗಿ ಹೊಡೆಯಲು ಸಂಚು ರೂಪಿಸುತ್ತಿದ್ದಾಳೆ ಭಾರ್ಗವಿ. ಹೀಗೆ ಕುತೂಹಲ ಮೂಡಿಸಿರುವ ಈ ಸೀರಿಯಲ್‌ ನಾಲ್ಕನೇ ಸ್ಥಾನದಲ್ಲಿದೆ. ಪಡೆದ ಟಿಆರ್‌ಪಿ 6.1
icon

(5 / 9)

ಶ್ರಾವಣಿ ಸುಬ್ರಮಣ್ಯ; ಇತ್ತೀಚೆಗಷ್ಟೇ ಜೀ ಕನ್ನಡದಲ್ಲಿ ಶುರುವಾಗಿರುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್‌ ಟಾಪ್‌ ಸೀರಿಯಲ್‌ಗಳನ್ನೇ ಹಿಂದಕ್ಕೆ ದೂಡಿ, ಮುಂದಡಿ ಇರಿಸಿದೆ. ಈ ವಾರ ಈ ಸೀರಿಯಲ್‌ ಐದನೇ ಸ್ಥಾನದಲ್ಲಿದೆ. ಪಡೆದ ಟಿಆರ್‌ಪಿ 5.8
icon

(6 / 9)

ಅಮೃತಧಾರೆ: ಭೂಮಿಕಾ ಮತ್ತು ಗೌತಮ್‌ ದಿವಾನ್‌ ಜೋಡಿಯ ಅಮೃತಧಾರೆ ಸೀರಿಯಲ್‌ನಲ್ಲಿ ಅತ್ತೆಯ ಸುಳ್ಳಿನ ಗುಟ್ಟನ್ನು ರಟ್ಟು ಮಾಡಿದ್ದಾಳೆ ಭೂಮಿಕಾ. ಈ ಸೀರಿಯಲ್‌ ಈ ವಾರ ಆರನೇ ಸ್ಥಾನದಲ್ಲಿದೆ. ಪಡೆದ ಟಿಆರ್‌ಪಿ 5.5
icon

(7 / 9)

ಲಕ್ಷ್ಮೀ ಬಾರಮ್ಮ: ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಲಕ್ಷ್ಮೀ ಬಾರಮ್ಮ ಸೀರಿಯಲ್‌ ಈ ವಾರ ಏಳನೇ ಸ್ಥಾನದಲ್ಲಿದೆ. ಪಡೆದ ಟಿಆರ್‌ಪಿ 5.2
icon

(8 / 9)

ಭಾಗ್ಯಲಕ್ಷ್ಮೀ: ಕಲರ್ಸ್‌ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ ಈ ವಾರ ಎಂಟನೇ ಸ್ಥಾನದಲ್ಲಿದೆ. ಪಡೆದ ಟಿಆರ್‌ಪಿ 4.9
icon

(9 / 9)

IPL_Entry_Point

ಇತರ ಗ್ಯಾಲರಿಗಳು