ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Naa Nayaki: 'ನಾ ನಾಯಕಿ' ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದ ಪ್ರಿಯಾಂಕಾ ಗಾಂಧಿಗೆ ಭರ್ಜರಿ ಸ್ವಾಗತ..

Naa Nayaki: 'ನಾ ನಾಯಕಿ' ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದ ಪ್ರಿಯಾಂಕಾ ಗಾಂಧಿಗೆ ಭರ್ಜರಿ ಸ್ವಾಗತ..

  • ಬೆಂಗಳೂರು: ಕೆಪಿಸಿಸಿ ಹಮ್ಮಿಕೊಂಡಿರುವ 'ನಾ ನಾಯಕಿ' ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿಳಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ, ಕೆಪಿಸಿಸಿ ವತಿಯಿಂದ ಭರ್ಜರಿ ಸ್ವಾಗತ ಕೋರಲಾಗಿದೆ. ನಗರದ ಅರಮನೆ ಮೈದಾನದಲ್ಲಿ ನಡೆದ ಈ ಭವ್ಯ ಸಮಾರಂಭದಲ್ಲಿ, ಪ್ರಿಯಾಂಕಾ ಗಾಂಧಿ ಅವರು ಮಹಿಳೆಯರನ್ನುದ್ದೇಶಿಸಿ ಮಾತನಾಡಿದರು. ಈ ಕುರಿತು ಇಲ್ಲಿದೆ ಮಾಹಿತಿ..

'ನಾ ನಾಯಕಿ' ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿಳಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ, ಬೃಹತ್‌ ಹಾರ ಹಾಕಿ ಸ್ವಾಗತ ಕೋರಲಾಯಿತು.
icon

(1 / 5)

'ನಾ ನಾಯಕಿ' ಸಮಾರಂಭದಲ್ಲಿ ಭಾಗವಹಿಸಲು ಬೆಂಗಳೂರಿಗೆ ಬಂದಿಳಿದ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ, ಬೃಹತ್‌ ಹಾರ ಹಾಕಿ ಸ್ವಾಗತ ಕೋರಲಾಯಿತು.(Verified Twitter)

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ, ರಾಜ್ಯದ ಪ್ರಮುಖ ಕಾಂಗ್ರೆಸ್‌ ನಾಯಕರು ಹಾಜರಿದ್ದರು.
icon

(2 / 5)

ಈ ವೇಳೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ, ರಾಜ್ಯದ ಪ್ರಮುಖ ಕಾಂಗ್ರೆಸ್‌ ನಾಯಕರು ಹಾಜರಿದ್ದರು.(Verified Twitter)

ಸಮಾರಂಭದಲ್ಲಿ ಭಾಗವಹಿಸಲು ಅರಮನೆ ಮೈದಾನಕ್ಕೆ ಬಂದ ಪ್ರಿಯಾಂಕಾ ಗಾಂಧಿ ಅವರು, ಮೈದಾನದಲ್ಲಿ ನೆರೆದಿದ್ದ ಸಾವಿರಾರು ಮಹಿಳೆಯರತ್ತ ಕೈಬೀಸಿದರು. ಕೆಲವು ಮಹಿಳೆಯರನ್ನಿ ಹತ್ತಿರದಿಂದ ಮಾತನಾಡಿಸಿದರು.
icon

(3 / 5)

ಸಮಾರಂಭದಲ್ಲಿ ಭಾಗವಹಿಸಲು ಅರಮನೆ ಮೈದಾನಕ್ಕೆ ಬಂದ ಪ್ರಿಯಾಂಕಾ ಗಾಂಧಿ ಅವರು, ಮೈದಾನದಲ್ಲಿ ನೆರೆದಿದ್ದ ಸಾವಿರಾರು ಮಹಿಳೆಯರತ್ತ ಕೈಬೀಸಿದರು. ಕೆಲವು ಮಹಿಳೆಯರನ್ನಿ ಹತ್ತಿರದಿಂದ ಮಾತನಾಡಿಸಿದರು.(Verified Twitter)

'ನಾ ನಾಯಕಿ' ಸಮಾರಂಭದಲ್ಲಿ ಎಐಸಿಸಿ ಮಹಿಳಾ ಅಧ್ಯಕ್ಷೆ ನೆಟ್ಟಾ ಡಿಸೋಜಾ, ಕೆಪಿಎಂಸಿ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ಸೇರಿದಂತೆ ಹಲವು ಪ್ರಮುಖ ಮಹಿಳಾ ಕಾಂಗ್ರೆಸ್‌ ನಾಯಕಿಯರು ಭಾಗವಹಿಸಿದ್ದರು.
icon

(4 / 5)

'ನಾ ನಾಯಕಿ' ಸಮಾರಂಭದಲ್ಲಿ ಎಐಸಿಸಿ ಮಹಿಳಾ ಅಧ್ಯಕ್ಷೆ ನೆಟ್ಟಾ ಡಿಸೋಜಾ, ಕೆಪಿಎಂಸಿ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್‌ ಸೇರಿದಂತೆ ಹಲವು ಪ್ರಮುಖ ಮಹಿಳಾ ಕಾಂಗ್ರೆಸ್‌ ನಾಯಕಿಯರು ಭಾಗವಹಿಸಿದ್ದರು.(Verified Twitter)

ಇನ್ನು ಪ್ರಿಯಾಂಕಾ ಗಾಂಧಿ ಅವರ ರಾಜ್ಯ ಭೇಟಿಯಿಂದ, ಕೆಪಿಸಿಸಿ ಮಹಿಳಾ ಘಟಕದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು, ಮಹಿಳಾ ಘಟಕದ ಚಟುವಟಿಕೆಗಳು ಚುರುಕುಗೊಳ್ಳಲಿವೆ ಎಂದು ನಿರೀಕ್ಷಿಸಲಾಗಿದೆ.
icon

(5 / 5)

ಇನ್ನು ಪ್ರಿಯಾಂಕಾ ಗಾಂಧಿ ಅವರ ರಾಜ್ಯ ಭೇಟಿಯಿಂದ, ಕೆಪಿಸಿಸಿ ಮಹಿಳಾ ಘಟಕದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು, ಮಹಿಳಾ ಘಟಕದ ಚಟುವಟಿಕೆಗಳು ಚುರುಕುಗೊಳ್ಳಲಿವೆ ಎಂದು ನಿರೀಕ್ಷಿಸಲಾಗಿದೆ.(Verified Twitter)


IPL_Entry_Point

ಇತರ ಗ್ಯಾಲರಿಗಳು