ಕನ್ನಡ ಸುದ್ದಿ  /  Sports  /  Bwf World Championships Pv Sindhu Pulls Out Due To Injury

BWF World Championships: ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದ ಪಿ.ವಿ. ಸಿಂಧು, ಕಾಮನ್‌ವೆಲ್ತ್‌ ಚಿನ್ನದ ರಾಣಿಗೆ ಮಾಯದ ಗಾಯ

ಕೆಲವು ದಿನಗಳ ಹಿಂದಷ್ಟೇ ತೆರೆ ಕಂಡ ಕಾಮನ್ವೆಲ್ತ್‌ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು ಪಿವಿ ಸಿಂಧು (PV Sindhu) ಅವರು ಈ ತಿಂಗಳು ಅಂದರೆ ಆಗಸ್ಟ್‌ 22ರಿಂದ ಆರಂಭಗೊಳ್ಳುವ ಬ್ಯಾಂಡ್ಮಿಟನ್‌ ವರ್ಲ್ಡ್‌ ಚಾಂಪಿಯನ್‌ಶಿಪ್‌ನಿಂದ (BWF World Championships) ಹಿಂದೆ ಸರಿದಿದ್ದಾರೆ. ಕಾಮನ್‌ವೆಲ್ತ್‌ನಲ್ಲಿ ಗಾಯಗಳೊಂದಿಗೆ ಆಡಿದ್ದ ಇವರು, ಇದೀಗ ಆ ಗಾಯದ ಸಮಸ್ಯೆಗಳಿಂದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡುವುದಿಲ್ಲ.

ಪಿ.ವಿ. ಸಿಂಧು (AP Photo/Manish Swarup)
ಪಿ.ವಿ. ಸಿಂಧು (AP Photo/Manish Swarup) (AP)

ಕೆಲವು ದಿನಗಳ ಹಿಂದಷ್ಟೇ ತೆರೆ ಕಂಡ ಕಾಮನ್ವೆಲ್ತ್‌ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು ಪಿವಿ ಸಿಂಧು (PV Sindhu) ಅವರು ಈ ತಿಂಗಳು ಅಂದರೆ ಆಗಸ್ಟ್‌ 22ರಿಂದ ಆರಂಭಗೊಳ್ಳುವ ಬ್ಯಾಂಡ್ಮಿಟನ್‌ ವರ್ಲ್ಡ್‌ ಚಾಂಪಿಯನ್‌ಶಿಪ್‌ನಿಂದ (BWF World Championships) ಹಿಂದೆ ಸರಿದಿದ್ದಾರೆ. ಕಾಮನ್‌ವೆಲ್ತ್‌ನಲ್ಲಿ ಗಾಯಗಳೊಂದಿಗೆ ಆಡಿದ್ದ ಇವರು, ಇದೀಗ ಆ ಗಾಯದ ಸಮಸ್ಯೆಗಳಿಂದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡುವುದಿಲ್ಲ.

ಭಾರತದ ಸ್ಟಾರ್‌ ಬ್ಯಾಂಡ್ಮಿಟನ್‌ ಆಟಗಾರ್ತಿ ಪಿ.ವಿ. ಸಿಂದೂ ಅವರು ದೇಶಕ್ಕಾಗಿ ಹಲವು ಪದಕಗಳನ್ನು ತಂದುಕೊಟ್ಟಿದ್ದಾರೆ. ಕಾಮನ್‌ವೆಲ್ತ್‌-೨೦೨೨ರಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದರು.

ಜಪಾನ್‌ ರಾಜಧಾನಿ ಟೋಕಿಯೊದಲ್ಲಿ ಆಗಸ್ಟ್‌ 22ರಿಂದ ಆಗಸ್ಟ್‌ 28ರವರೆಗೆ ನಡೆಯಲಿರುವ BWF World Championshipsನಲ್ಲಿ ಆಡಲು ಸಿಂಧುವಿಗೆ ಗಾಯದ ಸಮಸ್ಯೆ ಕಾಡುತ್ತಿದೆ. ಅವರು ಕಾಮನ್‌ವೆಲ್ತ್‌ನಲ್ಲಿ ಗಾಯದಲ್ಲಿಯೇ ಆಡಿದ್ದರು. ಈ ಗಾಯವು ಒಂದಿಷ್ಟು ಗಂಭೀರವಾಗಿದ್ದು, ಸಾಕಷ್ಟು ವಿಶ್ರಾಂತಿಯ ಅಗತ್ಯವೂ ಅವರಿಗಿದೆ. ಇದೇ ತಿಂಗಳು ನಡೆಯುವ ಬಿಎಂಡಬ್ಲ್ಯು ವಿಶ್ವ ಚಾಂಪಿಯನ್‌ಶಿಪ್‌ನ ಸಂದರ್ಭದಲ್ಲಿ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ. ಅವರು ಅಕ್ಟೋಬರ್‌ ವೇಳೆಗೆ ಮತ್ತೆ ಮೈದಾನಕ್ಕಿಳಿಯುವ ನಿರೀಕ್ಷೆಯಿದೆ ಎಂದು ಅವರ ತಂದೆ ಮಾಹಿತಿ ನೀಡಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸಿಂಧು ಪಾಲ್ಗೊಳ್ಳದೆ ಇರುವುದರಿಂದ ಅವರ ಬದಲು ಸೈನಾ ನೆಹ್ವಾಲ್‌ ಮೇಲೆ ಎಲ್ಲರ ನಿರೀಕ್ಷೆಯಿದೆ. ಇವರೊಂದಿಗೆ ಯುವ ಆಟಗಾರ್ಟಿ ಮಾಳವಿಕಾ ಬನ್ಸೋಡ್‌ ಮೇಲೂ ನಿರೀಕ್ಷೆಯಿದೆ.

ಪಿ.ವಿ. ಸಿಂಧೂ ಅವರು ವಿಶ್ವ ಚಾಂಪಿಯನ್‌ಶಿಪ್‌ನ ಇತಿಹಾಸದಲ್ಲಿ ಹಲವು ಪದಕ ಗೆದ್ದು ಭಾರತದ ಹಿರಿಮೆ ಹೆಚ್ಚಿಸಿದ್ದಾರೆ. 2019ರಲ್ಲಿ ಮಹಿಳಾ ಸಿಂಗಲ್ಸ್‌ ಪ್ರಶಸ್ತಿ ಗೆದ್ದಿದ್ದರು. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇಲ್ಲಿಯವರೆಗೆ ಸಿಂಧು ಅವರು ಎರಡು ಬಾರಿ ಬೆಳ್ಳಿ ಮತ್ತು ಎರಡು ಬಾರಿ ಕಂಚಿನ ಪದಕವನ್ನು ಗೆದ್ದಿದ್ದಾರೆ.

ಕಾಮನ್‌ವೆಲ್ತ್‌ನಲ್ಲಿ ಹೇಗಿತ್ತು ಸಿಂಧು ಜೋಶ್‌?

ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದಿರುವ ಸಿಂಧು ಈ ಬಾರಿಯ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ತಮ್ಮ ಕನಸನ್ನು ನನಸು ಮಾಡಿಕೊಂಡಿದ್ದರು. ಮಿಶ್ರ ತಂಡ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಿಂಗಲ್ಸ್‌ನಲ್ಲಿ ಚಿನ್ನ ಗೆಲ್ಲುವುದು ಖಚಿತ ಎಂದು ಹೇಳಿದ್ದರು. ಮೊದಲಿನಿಂದಲೂ ಎದುರಾಳಿಗಳನ್ನು ಮಣಿಸಿ ಫೈನಲ್ ನಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದು ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು.

ಫೈನಲ್‌ನಲ್ಲಿ ಆರಂಭದಿಂದಲೂ ಎದುರಾಳಿ ಮಿಚೆಲಿ ಮೇಲೆ ಪ್ರಾಬಲ್ಯ ಮೆರೆದಿದ್ದರು. ಯಾವುದೇ ಸಂದರ್ಭದಲ್ಲೂ ಆಕೆ ಮುನ್ನಡೆಯನ್ನು ಬಿಟ್ಟುಕೊಟ್ಟಿರಲಿಲ್ಲ. ಸಿಂಧು 21-15 ಅಂತರರಿಂದ ಮೊದಲ ಗೇಮ್ ಗೆದ್ದುಕೊಂಡರು. ಎರಡನೇ ಗೇಮ್ ನಲ್ಲೂ ಸಿಂಧು ಆರಂಭದಿಂದಲೇ ಮುನ್ನಡೆ ಮುಂದುವರಿಸಿದ್ದರು. ಪಂದ್ಯ ಮಧ್ಯಂತರದಲ್ಲಿ 11-6ರಲ್ಲಿ ಮುನ್ನಡೆಯಿತು.

ವಿರಾಮದ ನಂತರ ಎದುರಾಳಿ ಲೀ ಆಕ್ರಮಣಕಾರಿ ಆಟವಾಡಿದರು. ಇಬ್ಬರೂ ಅಂಕಕ್ಕಾಗಿ ಶ್ರಮಿಸಿದರು. ಒಂದೇ ರ್ಯಾಲಿಯಲ್ಲಿ 57 ಶಾಟ್‌ಗಳನ್ನು ಏಕಕಾಲದಲ್ಲಿ ಆಡಲಾಯಿತು. ಆ ಬಳಿಕ ಪಾಯಿಂಟ್ ಸಿಂಧು ಪಾಲಾಯಿತು.

ಈ ಗೆಲುವಿನೊಂದಿಗೆ ಸಿಂಧು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಹ್ಯಾಟ್ರಿಕ್ ಪದಕಗಳನ್ನು ಪೂರ್ಣಗೊಳಿಸಿದರು. 2014ರಲ್ಲಿ ಕಂಚಿನ ಪದಕ, 2018ರಲ್ಲಿ ಬೆಳ್ಳಿ ಹಾಗೂ ಈಗ 2022ರಲ್ಲಿ ಚಿನ್ನದ ಪದಕ ಗೆದ್ದಿರುವುದು ವಿಶೇಷ. ಈಗಾಗಲೇ ಒಲಿಂಪಿಕ್ಸ್ ನಲ್ಲಿ ಕಂಚು ಹಾಗೂ ಬೆಳ್ಳಿ ಪದಕ ಗೆದ್ದಿರುವ ಸಿಂಧು ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕದೊಂದಿಗೆ ಮತ್ತೊಂದು ಹಂತಕ್ಕೆ ಹೋಗಿದ್ದರು.

ಪಿ.ವಿ. ಸಿಂಧುವಿಗೆ ಗಾಯದ ಸಮಸ್ಯೆ ಇಲ್ಲದೆ ಇದ್ದಿದ್ದರೆ ಈ ಬಾರಿಯ ವಿಶ್ಚ ಬ್ಯಾಂಡ್ಮಿಟನ್‌ ಚಾಂಪಿಯನ್‌ಶಿಪ್‌ನಲ್ಲಿಯೂ ಚಿನ್ನದ ಪದಕ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಆದರೆ, ಗಾಯದಿಂದ ಚೇತರಿಸಿಕೊಳ್ಳುವವರೆಗೆ ಅವರಿಗೆ ಪ್ರಮುಖ ಪಂದ್ಯಗಳಲ್ಲಿ ಭಾಗವಹಿಸುವುವುದು ಕಷ್ಟವಾಗಿದೆ. ಹೀಗಾಗಿ, ಸೈನಾ ನೆಹ್ವಾಲ್‌ ಮತ್ತು ಮಾಳವಿಕ ಮೇಲೆ ಈ ಬಾರಿ ನಿರೀಕ್ಷೆಯ ಒತ್ತಡ ಹೆಚ್ಚಿದೆ.

ವಿಭಾಗ