ಕನ್ನಡ ಸುದ್ದಿ  /  Sports  /  Cricket News Ipl 2023 Lucknow Super Giants Vs Royal Challengers Bangalore Toss And Playing Eleven Update Jra

RCB vs LSG: ಲಖನೌ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ ಬ್ಯಾಟಿಂಗ್ ಆಯ್ಕೆ; ನಾಯಕತ್ವಕ್ಕೆ ಮರಳಿದ ಫಾಫ್, ಹೇಜಲ್‌ವುಡ್ ಎಂಟ್ರಿ

ಪ್ರಮುಖ ಬೌಲರ್‌ ಜೋಶ್ ಹೇಜಲ್‌ವುಡ್‌ ಆಡುವ ಬಳಗಕ್ಕೆ ಮರಳಿದ್ದಾರೆ. ಮತ್ತೊಂದೆಡೆ ಫಾಫ್‌ ಮತ್ತೆ ನಾಯಕನಾಗಿ ಮರಳಿದ್ದಾರೆ.

ಲಖನೌ - ಆರ್‌ಸಿಬಿ ಮುಖಾಮುಖಿ
ಲಖನೌ - ಆರ್‌ಸಿಬಿ ಮುಖಾಮುಖಿ

ಲಖನೌ ಸೂಪರ್ ಜೈಂಟ್ಸ್ (Lucknow Super Giants) ವಿರುದ್ಧದ ಹೈವೋಲ್ಟೇಜ್‌ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡವು ಟಾಸ್‌ ಗೆದ್ದಿದೆ. ಇಂದಿನ ಪಂದ್ಯದಲ್ಲಿ ಆರ್‌ಸಿಬಿ ನಾಯಕನಾಗಿ ಫಾಫ್‌ ಡುಪ್ಲೆಸಿಸ್‌ ಮರಳಿದ್ದು, ಟಾಸ್‌ ಗೆದ್ದು ಮೊದಲಿಗೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಆರ್‌ಸಿಬಿ ತಂಡದಲ್ಲಿ ಇಂದು ಕೆಲವೊಂದು ಪ್ರಮುಖ ಬದಲಾವಣೆ ಮಾಡಲಾಗಿದೆ. ಪ್ರಮುಖ ಬೌಲರ್‌ ಜೋಶ್ ಹೇಜಲ್‌ವುಡ್‌ ಆಡುವ ಬಳಗಕ್ಕೆ ಮರಳಿದ್ದಾರೆ. ಮತ್ತೊಂದೆಡೆ ಫಾಫ್‌ ಮತ್ತೆ ನಾಯಕನಾಗಿ ಮರಳಿದ್ದಾರೆ. ಈ ಹಿಂದಿನ ಪಂದ್ಯಗಳಲ್ಲಿ ವಿಫಲರಾಗಿದ್ದ ಶಹಬಾಜ್‌ ಅಹ್ಮದ್‌ ತಂಡದಿಂದ ಹೊರಬಿದ್ದಿದ್ದು, ಅವರ ಬದಲಿಗೆ ಅನೂಜ್‌ ರಾವತ್‌ ಆಡುತ್ತಿದ್ದಾರೆ.

ಇದೇ ವೇಳೆ ಲಖನೌ ತಂಡದಿಂದ ಆವೇಶ್‌ ಖಾನ್‌ ಹೊರಬಿದ್ದಿದ್ದು, ಅವರ ಬದಲಿಗೆ ಕೆ ಗೌತಮ್‌ ಆಡುತ್ತಿದ್ದಾರೆ. ವೇಗದ ಬೌಲಿಂಗ್‌ಗಿಂದ ಇಲ್ಲಿ ಸ್ಪಿನ್‌ ಪ್ರಮುಖ ಪಾತ್ರ ವಹಿಸಲಿದ್ದು, ಹೀಗಾಗಿ ಆವೇಶ್‌ರನ್ನು ತಂಡದಿಂದ ಹೊರಗಿಡಲಾಗಿದೆ.

ಪಿಚ್‌ ಹೇಗಿದೆ?

ಲಖನೌ ಮೈದಾನವು ನಿಧಾನಗತಿಯ ಬ್ಯಾಟಿಂಗ್‌ ಪಿಚ್‌ ಹೊಂದಿದ್ದು, ಇಲ್ಲಿ ರನ್‌ ಮಳೆ ನಿರೀಕ್ಷೆ ಅಸಾಧ್ಯ. ಮೊದಲು ಬ್ಯಾಟಿಂಗ್‌ ಮಾಡುವ ತಂಡಗಳು 140 ಪ್ಲಸ್‌ ರನ್‌ ಗಳಿಸಿದರೆ, ಅದುವೇ ಸ್ಪರ್ಧಾತ್ಮಕ ಎನಿಸಲಿದೆ. 150ಕ್ಕೂ ಹೆಚ್ಚು ರನ್‌ ಹರಿದು ಬಂದರೆ, ರಕ್ಷಣಾತ್ಮಕ ಆಟ ಆಡಬಹುದು. ಈ ಮೈದಾನದಲ್ಲಿ ದಾಖಲಾದ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 152. ಇದು ಈ ಆವೃತ್ತಿಯ ಐಪಿಎಲ್‌ನಲ್ಲಿ ಮೈದಾನವೊಂದರಲ್ಲಿ ದಾಖಲಾದ ಕಡಿಮೆ ಸಂಖ್ಯೆಯಾಗಿದೆ.

ಆರ್‌ಸಿಬಿ ತಂಡವು ಐಪಿಎಲ್‌ನ ಪ್ರಸಕ್ತ ಆವೃತ್ತಿಯ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಅನುಭವಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಡು ಪ್ಲೆಸಿಸ್ ಅವರ ನಾಯಕತ್ವದಲ್ಲಿ, ತಂಡವು ನಾಲ್ಕು ಗೆಲುವು ಮತ್ತು ನಾಲ್ಕು ಸೋಲುಗಳನ್ನು ದಾಖಲಿಸಿದೆ. ಆರ್‌ಸಿಬಿ ಹಾಗೂ ಲಖನೌ ತಂಡಗಳು ಕೊನೆಯ ಪಂದ್ಯದಲ್ಲಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಿದ್ದವು. ಪಂದ್ಯದ ಅಂತಿಮ ಎಸೆತದಲ್ಲಿ ಚೇಸಿಂಗ್‌ ಮಾಡಿದ ರಾಹುಲ್ ಪಡೆಯು ರೋಚಕವಾಗಿ ಪಂದ್ಯ ಗೆದ್ದಿತು. ಇದೀಗ ತನ್ನ ತವರಿನ ಪಂದ್ಯದಲ್ಲಿ ಜಯವನ್ನು ವಿಸ್ತರಿಸುವ ನಿರೀಕ್ಷೆಯಲ್ಲಿ ತಂಡವಿದೆ. ಅಲ್ಲದೆ ಕೊನೆಯ ಪಂದ್ಯದಲ್ಲಿ ರನ್‌ ಮಳೆಯನ್ನೇ ಹರಿಸಿರುವ ರಾಹುಲ್‌ ಪಡೆಯು, ಮತ್ತೊಮ್ಮೆ ಭರ್ಜರಿ ಜಯ ಸಾಧಿಸುವ ಕನಸು ಕಾಣುತ್ತಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ‌

ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರರ್, ದಿನೇಶ್ ಕಾರ್ತಿಕ್ (ವಿಕೆಟ್‌ ಕೀಪರ್), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್.

ಲಖನೌ ಸೂಪರ್ ಜೈಂಟ್ಸ್ ಆಡುವ ಬಳಗ

ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯ್ನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್ (ವಿಕೆಟ್‌ ಕೀಪರ್), ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ಯಶ್ ಠಾಕೂರ್.