ಕನ್ನಡ ಸುದ್ದಿ  /  Sports  /  Cricket News We Don T See Anyone Else As Our Competition There Is None Even Close To Ipl Says Chairman Arun Dhumal Prs

Arun Dhumal: ಜಗತ್ತಿನಲ್ಲಿ ಎಷ್ಟೇ ಟಿ20 ಕ್ರಿಕೆಟ್ ಲೀಗ್‌ಗಳಿದ್ದರೂ, ನಮಗೆ ನಾವೇ ಪೈಪೋಟಿ; ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅಭಿಮತ

ಐಪಿಎಲ್-16 ಅದ್ಭುತ ಯಶಸ್ಸು ಕಂಡಿದೆ. ಈ ವರ್ಷದ ಪಂದ್ಯಗಳು ಅತ್ಯಂತ ರೋಚಕ ರೀತಿಯಲ್ಲಿ ಕೊನೆಗೊಂಡಿವೆ. ಹೆಚ್ಚಿನ ಪಂದ್ಯಗಳು ಕೊನೆಯ ಓವರ್ ಥ್ರಿಲ್ಲರ್​​​​ನಲ್ಲಿ ಗೆದ್ದು ಬೀಗಿವೆ. ಅಭಿಮಾನಿಗಳಿಂದ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಐಪಿಎಲ್​ ಅಧ್ಯಕ್ಷ ಅರುಣ್​ ಧುಮಾಲ್​ ಹೇಳಿದ್ದಾರೆ.

ಐಪಿಎಲ್​ ಯಶಸ್ಸಿನ ಕುರಿತು ಅರುಣ್​ ಧುಮಾಲ್​ ಪ್ರತಿಕ್ರಿಯೆ
ಐಪಿಎಲ್​ ಯಶಸ್ಸಿನ ಕುರಿತು ಅರುಣ್​ ಧುಮಾಲ್​ ಪ್ರತಿಕ್ರಿಯೆ

ಎರಡು ತಿಂಗಳ ಕಾಲ ಭಾರತ ಹಾಗೂ ವಿದೇಶದ ಕ್ರಿಕೆಟ್​​ ಅಭಿಮಾನಿಗಳನ್ನು ರಂಜಿಸಿದ 16ನೇ ಆವೃತ್ತಿಯ ಐಪಿಎಲ್​ಗೆ (IPL 2023) ಅದ್ಧೂರಿ ತೆರೆ ಬಿದ್ದಿದೆ. ಮೇ 29, ಮೀಸಲು ದಿನದಂದು ನಡೆದ ಫೈನಲ್ ಪಂದ್ಯದೊಂದಿಗೆ ರಂಗು ರಂಗಿನ ಟೂರ್ನಿ ಮುಕ್ತಾಯವಾಯಿತು. ಸೀಸನ್​ ಆರಂಭದಿಂದ ಹಿಡಿದು ಕೊನೆಯವರೆಗೂ ಅತ್ಯಂತ ರೋಚಕವಾಗಿ ಸಾಗಿದ್ದಲ್ಲದೆ, ಅಭಿಮಾನಿಗಳನ್ನು ರೋಮಾಂಚನಗೊಳಿಸುವಲ್ಲಿ ಯಶಸ್ವಿಯಾಗಿದೆ.

ವಿಶ್ವ ದರ್ಜೆಯ ಆಟಗಾರರಿದ್ದ ಐಪಿಎಲ್​, ಟಿವಿ, ಮೊಬೈಲ್​ಗಳಲ್ಲಿ​​ ದಾಖಲೆಯ ವೀಕ್ಷಣೆ ಪಡೆದಿದೆ. ಐಪಿಎಲ್​ಗೆ ಪೈಪೋಟಿ ನೀಡಲು ಸಾಕಷ್ಟು ಲೀಗ್​​ಗಳು ಈಗಾಗಲೇ ಹುಟ್ಟಿಕೊಂಡಿವೆ. ದಕ್ಷಿಣ ಆಫ್ರಿಕಾದ ಟಿ20, ಬಿಗ್​ಬ್ಯಾಷ್​ ಲೀಗ್​, ಬಿಪಿಎಲ್​​​, ಪಾಕಿಸ್ತಾನ್​ ಸೂಪರ್ ಲೀಗ್​, ಶ್ರೀಲಂಕಾ ಪ್ರೀಮಿಯರ್ ಲೀಗ್​, ಕೆರಿಬಿಯನ್​ ಪ್ರೀಮಿಯರ್ ಲೀಗ್​, ಇಂಗ್ಲೆಂಡ್​ನ ಹಂಡ್ರೆಡ್​ ಲೀಗ್​.. ಹೀಗೆ ಹಲವು ಟಿ20 ಫ್ರಾಂಚೈಸಿಗಳು ಜನ್ಮ ಪಡೆದಿವೆ. ಯಶಸ್ವಿಯಾಗಿಯೂ ಸಾಗುತ್ತಿವೆ. ಈಗ ಅಮೆರಿಕಾದಲ್ಲಿ ಮೇಜರ್ ಲೀಗ್ ಕ್ರಿಕೆಟ್ (MLC) ಜುಲೈನಿಂದ ಅಮೆರಿಕದಲ್ಲಿ ಪ್ರಾರಂಭವಾಗಲಿದೆ.

ಖಡಕ್ ಉತ್ತರ ಕೊಟ್ಟ ಐಪಿಎಲ್​ ಅಧ್ಯಕ್ಷ

ಆದರೆ ಐಪಿಎಲ್​​ ಜೊತೆ ಸ್ಪರ್ಧಿಸುವ ಮಟ್ಟಕ್ಕೆ ಯಾವ ಟಿ20 ಲೀಗ್​ ಕೂಡ ಬೆಳೆದಿಲ್ಲ ಎಂಬುದು ವಿಶೇಷ. ಇದೇ ವಿಚಾರವಾಗಿ ಐಪಿಎಲ್​ ಅಧ್ಯಕ್ಷ ಅರುಣ್ ಸಿಂಗ್​ ಧುಮಾಲ್​ (IPL chairman Arun Singh Dhumal) ಪ್ರತಿಕ್ರಿಯಿಸಿದ್ದಾರೆ. ಈ ಫ್ರಾಂಚೈಸಿ ಲೀಗ್​ಗಳಿಂದ ಐಪಿಎಲ್ ಕ್ರೇಜ್​ಗೆ ಏನಾದರೂ ಅಪಾಯ ಎದುರಾಗಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ತಳ್ಳಿ ಹಾಕಿದ್ದಾರೆ. ನಿಜ ಹೇಳಬೇಕೆಂದರೆ ಐಪಿಎಲ್​​ಗೆ ಪೈಪೋಟಿ ನೀಡುವ ಲೀಗ್​ಗಳೇ ಇಲ್ಲ. ನಮಗೆ ಯಾರೂ ಸ್ಫರ್ಧೆ ಬರುವುದಿಲ್ಲ ಎಂದು ಖಡಕ್​ ಉತ್ತರ ನೀಡಿದ್ದಾರೆ.

ನಮಗೆ ನಾವೇ ಪೈಪೋಟಿ

ರಾಯಿಟರ್ಸ್​ ಸುದ್ದಿ ಸಂಸ್ಥೆ ಮಾತನಾಡಿರುವ ಅರುಣ್ ಧುಮಾಲ್, ನೂತನವಾಗಿ ಕ್ರಿಕೆಟ್​ ಲೋಕಕ್ಕೆ ಪ್ರವೇಶ ಮಾಡುತ್ತಿರುವ ಮತ್ತು ಈಗಾಗಲೇ ಇರುವ ಲೀಗ್​​​ಗಳಿಂದಲೂ ಐಪಿಎಲ್​ಗೆ ಯಾವುದೇ ಸಮಸ್ಯೆ ಇಲ್ಲ. ನಾವು ಅವುಗಳನ್ನು ಸ್ಪರ್ಧಿಗಳಂತೆ ನೋಡುತ್ತಿಲ್ಲ. ನೋಡುವುದೂ ಇಲ್ಲ. ನೂತನವಾಗಿ ಆರಂಭಿಸುವ ಕ್ರಿಕೆಟ್​ ಲೀಗ್​​ಗಳಿಗೆ ಬಿಸಿಸಿಐ ಪರವಾಗಿ ನಾವು ಅಭಿನಂದನೆ ಸಲ್ಲಿಸುತ್ತೇವೆ. ಅವು ಯಾವು ನಮ್ಮ ಹತ್ತಿರಕ್ಕೂ ಬರುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೂತನವಾಗಿ ಆರಂಭವಾಗುವ ಫ್ರಾಂಚೈಸಿ ಲೀಗ್​ಗಳಿಂದ ಐಪಿಎಲ್​ಗೆ ನಷ್ಟವಾಗುವುದಿಲ್ಲ ಎಂದು ಹೇಳಿರುವ ಅರುಣ್​ ಧುಮಾಲ್​, 16ನೇ ಆವೃತ್ತಿಯ ಐಪಿಎಲ್​ ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾಗಿದೆ. ಬಹುತೇಕ ಪಂದ್ಯಗಳು ಕೊನೆಯ ಓವರ್​​, ಕೊನೆಯ ಎಸೆತದಲ್ಲಿ ಥ್ರಿಲ್ಲಿಂಗ್​ ಗೆಲುವು ಸಾಧಿಸಿದ್ದು, ಸಾಕಷ್ಟು ಅಭಿಮಾನಿಗಳನ್ನು ಸೆಳೆಯಲು ಕಾರಣವಾಯಿತು ಎಂದು ಹೇಳಿದ್ದಾರೆ.

ಐಪಿಎಲ್-16 ಅದ್ಭುತ ಯಶಸ್ಸು ಕಂಡಿದೆ. ಈ ವರ್ಷದ ಪಂದ್ಯಗಳು ಅತ್ಯಂತ ರೋಚಕ ರೀತಿಯಲ್ಲಿ ಕೊನೆಗೊಂಡಿವೆ. ಹೆಚ್ಚಿನ ಪಂದ್ಯಗಳು ಕೊನೆಯ ಓವರ್ ಥ್ರಿಲ್ಲರ್​​​​ನಲ್ಲಿ ಗೆದ್ದು ಬೀಗಿವೆ. ಅಭಿಮಾನಿಗಳಿಂದ ನಾವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ಮ ಪ್ರಸಾರಕರಿಗೂ ಅನಿರೀಕ್ಷಿತ ವೀಕ್ಷಕರು ಸಿಕ್ಕಿದ್ದಾರೆ. ಅವರೂ (ಸ್ಟಾರ್, ಜಿಯೋ) ತುಂಬಾ ಖುಷಿಯಾಗಿದ್ದಾರೆ ಎಂದರು.

ಸ್ವೀಡನ್​ ದೇಶವು ಸೆಕ್ಸ್​ ಅನ್ನೂ ಕ್ರೀಡೆಯಾಗಿ ಪರಿಗಣನೆ ಮಾಡಿದ ಮೊದಲ ದೇಶ ಎನಿಸಿದೆ. ಮೊಟ್ಟ ಮೊದಲ ಋತುವಿನ ಟೂರ್ನಿ ಆಯೋಜನೆಗೆ ದಿನಾಂಕವನ್ನೂ ಪ್ರಕಟಿಸಿದೆ. ಜೂನ್​ 8ರಿಂದ ಕೆಲವು ವಾರಗಳ ಕಾಲ ಯೂರೋಪಿಯನ್ ಸೆಕ್ಸ್ ಚಾಂಪಿಯನ್ ಶಿಪ್ ಟೂರ್ನಿ (European Sex Championship in Sweden) ನಡೆಯಲಿದೆ. ಈ ಚಾಂಪಿಯನ್​ಶಿಪ್​ ಗೊಥೆನ್​ಬರ್ಗ್​ನಲ್ಲಿ ಜರುಗಲಿದ್ದು, ಸ್ವೀಡಿಷ್​​ ಸೆಕ್ಸ್​ ಫೆಡರೇಷನ್​ (Swedish Sex Federation) ಈ ಟೂರ್ನಿ ಆಯೋಜಿಸುವ ಜವಾಬ್ದಾರಿ ಹೊತ್ತಕೊಂಡಿದೆ. ಈ ಕುರಿತ ಸಂಪೂರ್ಣ ಸುದ್ದಿಗಾಗಿ ಈ ಲಿಂಕ್ ಮೇಲೆ ಕ್ಲಿಕ್​ ಮಾಡಿ.