ಕನ್ನಡ ಸುದ್ದಿ  /  ಕ್ರೀಡೆ  /  Sex Championship: ಸೆಕ್ಸ್ ಅನ್ನು​ ಕ್ರೀಡೆಯಾಗಿ ಗುರುತಿಸಿದ ಸ್ವೀಡನ್; ಜೂ 8ಕ್ಕೆ ಮೊದಲ ಚಾಂಪಿಯನ್‌ಷಿಪ್‌; ವಿಜೇತರ ಘೋಷಣೆ ಹೇಗೆ, ನಿಮಯಗಳೇನು

Sex Championship: ಸೆಕ್ಸ್ ಅನ್ನು​ ಕ್ರೀಡೆಯಾಗಿ ಗುರುತಿಸಿದ ಸ್ವೀಡನ್; ಜೂ 8ಕ್ಕೆ ಮೊದಲ ಚಾಂಪಿಯನ್‌ಷಿಪ್‌; ವಿಜೇತರ ಘೋಷಣೆ ಹೇಗೆ, ನಿಮಯಗಳೇನು

ಜೂನ್​ 8ರಿಂದ ಕೆಲವು ವಾರಗಳ ಕಾಲ ಸ್ವೀಡನ್​​ನಲ್ಲಿ ಯೂರೋಪಿಯನ್ ಸೆಕ್ಸ್ ಚಾಂಪಿಯನ್ ಶಿಪ್ ಟೂರ್ನಿ (European Sex Championship in Sweden) ನಡೆಯಲಿದೆ. ಈ ಚಾಂಪಿಯನ್​ಶಿಪ್​ ಗೊಥೆನ್​ಬರ್ಗ್​ನಲ್ಲಿ ಜರುಗಲಿದೆ.

 ಸ್ವೀಡನ್​​ನಲ್ಲಿ ಯೂರೋಪಿಯನ್ ಸೆಕ್ಸ್ ಚಾಂಪಿಯನ್ ಶಿಪ್ ಟೂರ್ನಿ ಆಯೋಜನೆ
ಸ್ವೀಡನ್​​ನಲ್ಲಿ ಯೂರೋಪಿಯನ್ ಸೆಕ್ಸ್ ಚಾಂಪಿಯನ್ ಶಿಪ್ ಟೂರ್ನಿ ಆಯೋಜನೆ

ಸ್ವೀಡನ್​ ದೇಶವು ಸೆಕ್ಸ್​ ಅನ್ನೂ ಕ್ರೀಡೆಯಾಗಿ ಪರಿಗಣನೆ ಮಾಡಿದ ಮೊದಲ ದೇಶ ಎನಿಸಿದೆ. ಮೊಟ್ಟ ಮೊದಲ ಋತುವಿನ ಟೂರ್ನಿ ಆಯೋಜನೆಗೆ ದಿನಾಂಕವನ್ನೂ ಪ್ರಕಟಿಸಿದೆ. ಜೂನ್​ 8ರಿಂದ ಕೆಲವು ವಾರಗಳ ಕಾಲ ಯೂರೋಪಿಯನ್ ಸೆಕ್ಸ್ ಚಾಂಪಿಯನ್ ಶಿಪ್ ಟೂರ್ನಿ (European Sex Championship in Sweden) ನಡೆಯಲಿದೆ. ಈ ಚಾಂಪಿಯನ್​ಶಿಪ್​ ಗೊಥೆನ್​ಬರ್ಗ್​ನಲ್ಲಿ ಜರುಗಲಿದ್ದು, ಸ್ವೀಡಿಷ್​​ ಸೆಕ್ಸ್​ ಫೆಡರೇಷನ್​ (Swedish Sex Federation) ಈ ಟೂರ್ನಿ ಆಯೋಜಿಸುವ ಜವಾಬ್ದಾರಿ ಹೊತ್ತಕೊಂಡಿದೆ.

ನಿಯಮಗಳ ಅಳವಡಿಕೆ

ಪ್ರತಿಯೊಂದು ಕ್ರೀಡೆಗೂ ಇದ್ದಂತೆ ಈ ಟೂರ್ನಿಗೂ ಪ್ರಮುಖ ನಿಯಮಗಳಿವೆ. ಮತ್ತೊಂದು ವಿಚಾರ ಎಂದರೆ ಈ ಟೂರ್ನಿ ಎಷ್ಟು ವಾರಗಳ ಕಾಲ ನಡೆಯುತ್ತದೆ ಎಂಬ ಮಾಹಿತಿ ಇನ್ನೂ ಅಪೂರ್ಣ. ಈ ಚಾಂಪಿಯನ್​ಶಿಪ್​​ನಲ್ಲಿ ಒಂದು ದಿನಕ್ಕೆ 6 ಗಂಟೆಗಳ ಕಾಲ ಪಾಲ್ಗೊಳ್ಳುವುದು ಕಡ್ಡಾಯ. ಈ ಅವಧಿಯಲ್ಲಿ ಸ್ಪರ್ಧಾಳುಗಳು ಲೈಂಗಿಕ ಕ್ರಿಯೆಗೆ ಅಥವಾ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಲು ಸುಮಾರು 45 ನಿಮಿಷಗಳಿಂದ ಒಂದು ಗಂಟೆಯವರೆಗೆ ಕಾಲಾವಕಾಶ ಇರಲಿದೆ ಎಂದು ವರದಿಯಾಗಿದೆ.

ಎಷ್ಟು ದೇಶಗಳು ಭಾಗಿ?

ಈ ಚಾಂಪಿಯನ್​ಶಿಪ್​ನಲ್ಲಿ ಪ್ರಮುಖ ದೇಶಗಳೇ ಪಾಲ್ಗೊಳ್ಳಲು ಹೆಸರು ನೋಂದಣಿ ಮಾಡಿಕೊಂಡಿವೆ. ವರದಿಗಳ ಪ್ರಕಾರ, ಸೆಕ್ಸ್ ಚಾಂಪಿಯನ್​ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಲು 20ಕ್ಕೂ ಅಧಿಕ ಯುರೋಪಿಯನ್ ದೇಶಗಳ ಸ್ಪರ್ಧಿಗಳು ನೋಂದಣಿ ಮಾಡಿಕೊಂಡಿದ್ದಾರೆ.

ಎಷ್ಟು ವಿಭಾಗಗಳು?

ಇನ್ನು ಸೆಡಕ್ಷನ್, ಓರಲ್‌ ಸೆಕ್ಸ್‌, ಸಂಭೋಗ, ಸ್ಪರ್ಧಿಗಳ ವಸ್ತ್ರ ವಿನ್ಯಾಸ ಸೇರಿ 16 ವಿಭಾಗಗಳಲ್ಲಿ ಸೆಕ್ಸ್ ಚಾಂಪಿಯನ್​ಶಿಪ್ ಟೂರ್ನಿ ನಡೆಯಲಿದೆ ಎಂದು ಜೀ ನ್ಯೂಸ್​ ವರದಿ ಮಾಡಿದೆ.

ವಿಜೇತರನ್ನು ಘೋಷಿಸುವುದು ಹೇಗೆ?

ಸೆಕ್ಸ್ ಚಾಂಪಿಯನ್‌ಶಿಪ್‌ನ ಸ್ಪರ್ಧೆಯ ವಿಜೇತರನ್ನು ಪ್ರೇಕ್ಷಕರ ರೇಟಿಂಗ್​ ಮೂಲಕ ನಿರ್ಧರಿಸಲಾಗುತ್ತದೆ. ಜೊತೆಗೆ ಇದಕ್ಕೆ ಮೂವರು ಜಡ್ಜ್​ಗಳು ಇರಲಿದ್ದಾರೆ. ತೀರ್ಪುಗಾರರು ಮತ್ತು ಪ್ರೇಕ್ಷಕರ ರೇಟಿಂಗ್‌ಗಳನ್ನು ಸಂಯೋಜಿಸಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಅಂತಿಮವಾಗಿ ಪ್ರೇಕ್ಷಕರಿಂದ ಶೇ 70ರಷ್ಟು ಮತಗಳು, ಉಳಿದ ಶೇ 30ರಷ್ಟು ಮತಗಳನ್ನು ತೀರ್ಪುಗಾರರು ನೀಡುತ್ತಾರೆ ಎಂದು ವರದಿಯಾಗಿದೆ.

ಎಷ್ಟೆಷ್ಟು ಅಂಕ?

ಟೂರ್ನಿಯಲ್ಲಿ ನಡೆಯಲಿರುವ ಪ್ರತಿ ವಿಭಾಗದಲ್ಲಿ ಪಾಲ್ಗೊಳ್ಳುವವರಿಗೆ 5 ರಿಂದ 10 ಅಂಕ ಗಳಿಸಲಿದ್ದಾರೆ. ಪ್ರೇಕ್ಷಕರು ಮತ್ತು ಮೂವರು ತೀರ್ಪುಗಾರರಿಂದ ಅಂಕ ಸಿಗಲಿದೆ. ಸದ್ಯ ಟೂರ್ನಿಯನ್ನು ಮೂರು ಹಂತಗಳಲ್ಲಿ ನಡೆಯಲಿದ್ದು, ಕಡಿಮೆ ಅಂಕ ಪಡೆದವರು ಆಯಾ ಹಂತದಿಂದಲೇ ಟೂರ್ನಿಯಿಂದ ಎಲಿಮಿನೇಟ್​ ಆಗುತ್ತಾರೆ.

ಅಧ್ಯಕ್ಷನ ಪ್ರತಿಕ್ರಿಯೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ವೀಡಿಷ್ ಫೆಡರೇಶನ್ ಆಫ್ ಸೆಕ್ಸ್‌ನ ಅಧ್ಯಕ್ಷ ಡ್ರ್ಯಾಗನ್ ಬ್ರಾಟಿಚ್ ಅವರು ಸೆಕ್ಸ್​ ಅನ್ನು ಕ್ರೀಡೆಯಾಗಿ ಪರಿಗಣಿಸುವುದು ಅನಿವಾರ್ಯ. ಇದು ಪುರುಷರು ಮತ್ತು ಮಹಿಳೆಯರ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತೇಜಿಸಲು ನೆರವಾಗುತ್ತದೆ. ಈ ನಿಟ್ಟಿನಲ್ಲಿ ಸ್ಪರ್ಧಿಗಳಿಗೆ ತರಬೇತಿಯೂ ಅಗತ್ಯ ಎಂದು ಹೇಳಿದ್ದಾರೆ.

ವಿಶ್ವದಲ್ಲಿರುವ ಏಕೈಕ ಕ್ರೀಡೆ ಇದಾಗಿದೆ. ಎದುರಾಳಿ ಪಡೆಯುವ ಸಂತಸದ ಪ್ರಮಾಣದಲ್ಲಿ ಅಂಕ ಸಿಗಲಿದೆ. ಎದುರಾಳಿ ನಿರಾಸೆಯಾದರೆ ಅಂಕ ಕಳೆದುಕೊಳ್ಳಲಿದ್ದಾರೆ. ಇದೊಂದು ಅತ್ಯಂತ ಕ್ರಾಂತಿಕಾರಿ ಕ್ರೀಡೆ, ನಮ್ಮ ಜಗತ್ತಿಗೆ ಬಹಳ ವಿಶಿಷ್ಟ ಎನಿಸಲಿದೆ ಎಂದು ಅಧ್ಯಕ್ಷ ಬ್ರಾಟಿಚ್‌ ಮಾಹಿತಿ ನೀಡಿದ್ದಾರೆ.