ಕನ್ನಡ ಸುದ್ದಿ  /  Sports  /  Fifa World Cup 2022 Schedule Today

FIFA World Cup 2022: ಇಂದು ರೊನಾಲ್ಡೊ ಪಡೆಗೆ ಘಾನಾ ಚಾಲೆಂಜ್‌, ಬಲಿಷ್ಠ ಬ್ರೆಜಿಲ್‌ಗೆ ಸರ್ಬಿಯಾ ಸವಾಲ್

ಇಂದು ಒಟ್ಟು ನಾಲ್ಕು ಪಂದ್ಯಗಳು ನಡೆಯುತ್ತಿವೆ. ಇವುಗಳಲ್ಲಿ ಮೊದಲ ಮೂರು ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಇಂದು, ಅಂದರೆ ನವೆಂಬರ್ 24ರ ಗುರುವಾರ ನಡೆಯಲಿದೆ. ಆದರೆ ಅಂತಿಮ ಪಂದ್ಯ(ಬ್ರೆಜಿಲ್ ಮತ್ತು ಸೆರ್ಬಿಯಾ)ವು ಭಾರತೀಯ ಕಾಲಮಾನದ ಪ್ರಕಾರ ಮಧ್ಯರಾತ್ರಿಯ ಬಳಿಕ ನಡೆಯಲಿದೆ.

ರೊನಾಲ್ಡೊ ಮತ್ತು ನೇಮಾರ್
ರೊನಾಲ್ಡೊ ಮತ್ತು ನೇಮಾರ್ (Reuters)

ಫುಟ್ಬಾಲ್ ವಿಶ್ವಕಪ್ ರಂಗೇರಿದೆ. ದಿನದಿಂದ ದಿನಕ್ಕೆ ಫಿಫಾ ವಿಶ್ವಕಪ್‌ನಲ್ಲಿ ರೋಚಕ-ರೋಮಾಂಚಕ ಪಂದ್ಯಗಳು ನಡೆಯುತ್ತಿದ್ದು, ಅಚ್ಚರಿಯ ಫಲಿತಾಂಶ ಹೊರಬೀಳುತ್ತಿವೆ. ನಿನ್ನೆ ನಡೆದ ಎಫ್ ಗುಂಪಿನ ಪಂದ್ಯದಲ್ಲಿ ಈಡನ್ ಹಜಾರ್ಡ್‌ ನೇತೃತ್ವದ ಬೆಲ್ಜಿಯಂ ತಂಡವು ಕೆನಡಾದ ವಿರುದ್ಧ ರೋಚಕ ಗೆಲುವು ಸಾಧಿಸಿತು. ಆ ಮೂಲಕ ಅಲ್ ಜನೌಬ್ ಕ್ರೀಡಾಂಗಣದಲ್ಲಿ ತನ್ನ ಫಿಫಾ ವಿಶ್ವಕಪ್ 2022ರ ಪಂದ್ಯದಲ್ಲಿ ಗೆಲುವಿನ ಅಭಿಯಾನ ಆರಂಭಿಸಿತು.

ಇಂದಿನ ಪಂದ್ಯದಲ್ಲಿ ಸ್ವಿಟ್ಜರ್ಲೆಂಡ್ ವಿರುದ್ಧ ಕ್ಯಾಮರೂನ್ ಕಣಕ್ಕಿಳಿದರೆ, ಕ್ರಿಸ್ಟಿಯಾನೊ ರೊನಾಲ್ಡೊ ನೇತೃತ್ವದ ಪೋರ್ಚುಗಲ್ ತನ್ನ ಅಭಿಯಾನದ ಆರಂಭಿಕ ಪಂದ್ಯದಲ್ಲಿ ಘಾನಾವನ್ನು ಎದುರಿಸಲಿದೆ. ಮತ್ತೊಂದು ಪಂದ್ಯದಲ್ಲಿ ವಿಶ್ವಕಪ್‌ನ ಯಶಸ್ವಿ ತಂಡ ಬ್ರೆಜಿಲ್‌ ಸರ್ಬಿಯಾ ಸವಾಲನ್ನು ಎದುರಿಸಲಿದೆ.

ಪೋರ್ಚುಗಲ್ ಮತ್ತು ಘಾನಾ ಕೊನೆಯ ಬಾರಿಗೆ 2014ರ ಫಿಫಾ ವಿಶ್ವಕಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಗೋಲ್ ಮೆಷಿನ್ ರೊನಾಲ್ಡೊ ಆ ಸಮಯದಲ್ಲಿ ಘಾನಾ ವಿರುದ್ಧದ 2-1 ಅಂತರದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ, ಕುತೂಹಲಕಾರವೆಂಬಂತೆ 2016ರ UEFA ಯುರೋ ವಿಜೇತರು ಫಿಫಾ ವಿಶ್ವಕಪ್‌ನ ತಮ್ಮ ಕೊನೆಯ 14 ಪಂದ್ಯಗಳಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಗೆದ್ದಿದ್ದಾರೆ.

ಘಾನಾ ಮತ್ತು ಪೋರ್ಚುಗಲ್‌ ನಡುವಣ ಮುಖಾಮುಖಿಯ ಬಳಿಕ, ಬಲಿಷ್ಠ ಬ್ರೆಜಿಲ್ ತಂಡವು ಕತಾರ್ ವಿಶ್ವಕಪ್‌ನಲ್ಲಿ ತನ್ನ ಪ್ರಶಸ್ತಿ ಸುತ್ತನ್ನು ಪ್ರಾರಂಭಿಸಲಿದೆ. ನೇಮಾರ್ ನೇತೃತ್ವದ ಬ್ರೆಜಿಲ್ ತಂಡವು ಇಂದು ಮಧ್ಯರಾತ್ರಿ (ಶುಕ್ರವಾರ) ನಡೆಯುವ ಪಂದ್ಯದಲ್ಲಿ ಸರ್ಬಿಯಾ ವಿರುದ್ಧ ಸೆಣಸಲಿದೆ. ದಕ್ಷಿಣ ಆಫ್ರಿಕಾದ ದೈತ್ಯರು ಫಿಫಾ ವಿಶ್ವಕಪ್‌ನಲ್ಲಿ ತಮ್ಮ ಹಿಂದಿನ 15 ಗುಂಪು ಹಂತದ ಪಂದ್ಯಗಳಲ್ಲಿ ಅಜೇಯರಾಗಿದ್ದಾರೆ.

ಪಂದ್ಯದ ಸಮಯ ಯಾವುದು?

ಇಂದು ಒಟ್ಟು ನಾಲ್ಕು ಪಂದ್ಯಗಳು ನಡೆಯುತ್ತಿವೆ. ಇವುಗಳಲ್ಲಿ ಮೊದಲ ಮೂರು ಪಂದ್ಯಗಳು ಭಾರತೀಯ ಕಾಲಮಾನದ ಪ್ರಕಾರ ಇಂದು, ಅಂದರೆ ನವೆಂಬರ್ 24ರ ಗುರುವಾರ ನಡೆಯಲಿದೆ. ಆದರೆ ಸಂಜೆಯ ಅಂತಿಮ ಪಂದ್ಯ(ಬ್ರೆಜಿಲ್ ಮತ್ತು ಸೆರ್ಬಿಯಾ)ವು ಭಾರತೀಯ ಕಾಲಮಾನದ ಪ್ರಕಾರ ಮಧ್ಯರಾತ್ರಿಯ ಬಳಿಕ ನಡೆಯಲಿದೆ.

ಸ್ವಿಟ್ಜರ್ಲೆಂಡ್ ಮತ್ತು ಕ್ಯಾಮರೂನ್ ನಡುವಿನ ಪಂದ್ಯವಯ ಭಾರತದಲ್ಲಿ ಮಧ್ಯಾಹ್ನ 3.30ಕ್ಕೆ ಪ್ರಾರಂಭವಾಗುತ್ತದೆ. ಉರುಗ್ವೆ ಮತ್ತು ದಕ್ಷಿಣ ಕೊರಿಯಾ ನಡುವಿನ ಪಂದ್ಯ ಸಂಜೆ 6.30ಕ್ಕೆ ಆರಂಭವಾಗಲಿದೆ. ಪೋರ್ಚುಗಲ್ ಮತ್ತು ಘಾನಾ ನಡುವಿನ ಪಂದ್ಯವು ರಾತ್ರಿ 9.30ಕ್ಕೆ ಮೊದಲ್ಗೊಂಡರೆ, ಬ್ರೆಜಿಲ್ ಮತ್ತು ಸರ್ಬಿಯಾ ನಡುವಿನ ಪಂದ್ಯವು ಮಧ್ಯರಾತ್ರಿ 12:30ಕ್ಕೆ(ಶುಕ್ರವಾರ) ನಡೆಯಲಿದೆ.

ಪಂದ್ಯಗಳು ಎಲ್ಲಿ ನಡೆಯಲಿವೆ?

ಸ್ವಿಟ್ಜರ್ಲೆಂಡ್ ಮತ್ತು ಕ್ಯಾಮರೂನ್ ಪಂದ್ಯವು ಅಲ್ ಖೋರ್‌ನ ಅಲ್ ಜನೌಬ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಉರುಗ್ವೆ ಮತ್ತು ದಕ್ಷಿಣ ಕೊರಿಯಾ ಪಂದ್ಯವು ಎಜುಕೇಶನ್ ಸಿಟಿ ಸ್ಟೇಡಿಯಂನಲ್ಲಿ ನಡೆಯಲಿದೆ. ಪೋರ್ಚುಗಲ್ ಮತ್ತು ಘಾನಾ ಪಂದ್ಯ 974 ಸ್ಟೇಡಿಯಂನಲ್ಲಿ ನಡೆದರೆ, ಬ್ರೆಜಿಲ್ ಮತ್ತು ಸರ್ಬಿಯಾ ಪಂದ್ಯವು ಲುಸೇಲ್ ಸ್ಟೇಡಿಯಂನಲ್ಲಿ ನಡೆಯಲಿದೆ.

ಇಂದಿನ ಪಂದ್ಯಗಳ ಲೈವ್-ಸ್ಟ್ರೀಮಿಂಗ್ ವಿವರ

ಇಂದಿನ ಎಲ್ಲಾ ನಾಲ್ಕು ಪಂದ್ಯಗಳು Sports18 ಮತ್ತು Sports18 HD ಚಾನೆಲ್‌ಗಳಲ್ಲಿ ಪ್ರಸಾರ ಮಾಡಲಾಗುತ್ತದೆ. ಇದರೊಂದಿಗೆ ಈ ಪಂದ್ಯಗಳನ್ನು ಜಿಯೋ ಸಿನಿಮಾ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಮಾಡಲಾಗುತ್ತದೆ.

ನಿನ್ನೆ ನಡೆದ ಪಂದ್ಯದಲ್ಲಿ ಹಾಲಿ ರನ್ನರ್‌ ಅಪ್‌ ಕ್ರೊಯೇಷಿಯಾ ವಿರುದ್ಧ ಮೊರಾಕೊ ಡ್ರಾ ಸಾಧಿಸಿತ್ತು. ಆ ಬಳಿಕ ನಡೆದ ಪಂದ್ಯಗಳಲ್ಲಿ ಜರ್ಮನಿ ವಿರುದ್ಧ ಜಪಾನ್‌ ಗೆದ್ದರೆ, ಕೋಸ್ಟರಿಕಾ ವಿರುದ್ಧ ಸ್ಪೇನ್‌ ಭರ್ಜರಿಯಾಗಿ ಗೆದ್ದು ಬೀಗಿತು. ಮತ್ತೊಂದೆಡೆ ಕೆನಡಾ ವಿರುದ್ಧ ಬೆಲ್ಜಿಯಂ ಜಯ ಸಾಧಿಸಿತು.

ವಿಭಾಗ