Fifa World Cup Today Schedule: ಕ್ವಾರ್ಟರ್ ಫೈನಲ್ಗೇರುತ್ತಾ ಇಂಗ್ಲೆಂಡ್? ಇವತ್ತಿನ ಫಿಫಾ ವಿಶ್ವಕಪ್ ವೇಳಾಪಟ್ಟಿ ಇದೇ..
ಫಿಫಾ ವಿಶ್ವಕಪ್ ನ ನಾಕೌಟ್ ಹಂತದಲ್ಲಿ ಪೋಲೆಂಡ್ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಇನ್ನೊಂದು ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಸೆನೆಗಲ್ ನಡುವೆ ಸೆಣಸಾಟ ನಡೆಯಲಿದೆ.
ಕತಾರ್: ಫಿಫಾ ವಿಶ್ವಕಪ್‌ನ ನಾಕೌಟ್ ಹಂತದಲ್ಲಿ ಇಂಗ್ಲೆಂಡ್ ಇಂದು ಸೆನೆಗಲ್ ತಂಡವನ್ನು ಎದುರಿಸಲಿದೆ. ಗ್ರೂಪ್ ಹಂತದಲ್ಲಿ ಇಂಗ್ಲೆಂಡ್ ಒಂದೇ ಒಂದು ಪಂದ್ಯವನ್ನು ಸೋತಿಲ್ಲ. ವಿಶ್ವಾಸದಿಂದಲೇ ಇವತ್ತು ಸೆನೆಗಲ್ ವಿರುದ್ಧ ಕಣಕ್ಕಿಳಿಯಲಿದೆ.
ವೇಲ್ಸ್ ಮತ್ತು ಇರಾನ್ ವಿರುದ್ಧ ಗೆದ್ದ ನಂತರ ಇಂಗ್ಲೆಂಡ್ ಯುಎಸ್ಎ ವಿರುದ್ಧದ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಆ ವೇಗವನ್ನು ಇಂದಿನ ಪಂದ್ಯದಲ್ಲೂ ಮುಂದುವರಿಸುವ ನಿರೀಕ್ಷೆಯಲ್ಲಿ ಇಂಗ್ಲೆಂಡ್ ಇದೆ. ಗುಂಪು ಹಂತದಲ್ಲಿ ಇಂಗ್ಲೆಂಡ್ ಮೂರು ಪಂದ್ಯಗಳಲ್ಲಿ ಒಂಬತ್ತು ಗೋಲುಗಳನ್ನು ಗಳಿಸಿದೆ. ಇರಾನ್ ವಿರುದ್ಧವೇ ಆರು ಗೋಲುಗಳನ್ನು ಗಳಿಸಿದ್ದಾರೆ.
ಮತ್ತೊಂದೆಡೆ, ಸೆನೆಗಲ್ ಕೂಡ ಗುಂಪು ಹಂತದಲ್ಲಿ ಎರಡು ವಿಜಯಗಳನ್ನು ಸಾಧಿಸಿ ನಾಕೌಟ್ ಹಂತವನ್ನು ತಲುಪಿದೆ. ಈಕ್ವೆಡಾರ್ ಮತ್ತು ಕತಾರ್ ವಿರುದ್ಧ ಗೆದ್ದಿದ್ದ ಸೆನೆಗಲ್, ನೆದರ್ಲೆಂಡ್ಸ್ ವಿರುದ್ಧ ಸೋಲು ಕಾಣಬೇಕಾಯಿತು. ಬಲಿಷ್ಠ ಇಂಗ್ಲೆಂಡ್ ವಿರುದ್ಧ ಸೆನೆಗಲ್ ಗೆಲುವು ಸಾಧಿಸುವುದು ಅಷ್ಟು ಸುಲಭವಲ್ಲ.
ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೆನೆಗಲ್ ಪೈಪೋಟಿ ನಡೆಸುತ್ತಿರುವುದು ಇದೇ ಮೊದಲು. ಬಲಾಬಲಗಳನ್ನು ನೋಡಿದರೆ ಇಂಗ್ಲೆಂಡ್ ಕ್ವಾರ್ಟರ್ ಫೈನಲ್ ತಲುಪುವುದು ಬಹುತೇಕ ಖಚಿತ ಎನಿಸುತ್ತಿದೆ. ಸೆನೆಗಲ್ ಕಾಲ್ಜೆಂಡಿನಾಟದಲ್ಲಿ ಏನಾದ್ರೂ ಮಾಜ್ಯಿಕ್ ಮಾಡಿದ್ರೂ ಅಚ್ಚರಿ ಪಡಬೇಕಾಗಿಲ್ಲ. ಪಂದ್ಯ ಮಧ್ಯರಾತ್ರಿ 12.30ಕ್ಕೆ ಆರಂಭವಾಗಲಿದೆ.
ಫ್ರಾನ್ಸ್ ವಿರುದ್ಧ ಪೋಲೆಂಡ್
ನಾಕೌಟ್ ಸುತ್ತಿನಲ್ಲಿ ಫ್ರಾನ್ಸ್ ಮತ್ತು ಪೋಲೆಂಡ್ ನಡುವೆ ಪಂದ್ಯ ನಡೆಯಲಿದೆ. ಗ್ರೂಪ್ ಹಂತದಲ್ಲಿ ಆಸ್ಟ್ರೇಲಿಯಾ ಮತ್ತು ಡೆನ್ಮಾರ್ಕ್ ವಿರುದ್ಧ ಹಾಲಿ ಚಾಂಪಿಯನ್ ಫ್ರಾನ್ಸ್ ಗೆಲುವು ಸಾಧಿಸಿದೆ. ಕಳೆದ ಪಂದ್ಯದಲ್ಲಿ ಟುನೀಶಿಯಾ ವಿರುದ್ಧ ಸೋಲು ಕಂಡಿತ್ತು.
ಸ್ಟಾರ್ ಆಟಗಾರ ಒಲಿವಿಯರ್ ಗೆರಾಡ್ ಮೇಲೆ ಫ್ರಾನ್ಸ್ ಹೆಚ್ಚಿನ ಭರವಸೆ ಹೊಂದಿದೆ. ಮಪ್ಪೆ ಫಾರ್ಮ್‌ನಲ್ಲಿರುವುದು ಫ್ರಾನ್ಸ್‌ಗೆ ಒಗ್ಗೂಡುವ ಅವಕಾಶವಾಗಿದೆ. ಮತ್ತೊಂದೆಡೆ ಪೋಲೆಂಡ್ ನಾಕೌಟ್ ಹಂತ ತಲುಪಿದೆ.
ಗ್ರೂಪ್ ಹಂತದಲ್ಲಿ ಸೌದಿ ಅರೇಬಿಯಾ ವಿರುದ್ಧದ ಏಕೈಕ ಗೆಲುವು. ಗೋಲ್‌ಕೀಪರ್ ಸ್ಜೆಸಿನ್ ಪೋಲೆಂಡ್‌ಗೆ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ, ಆದರೆ ರಕ್ಷಣಾತ್ಮಕ ತಂಡವು ಸಮಸ್ಯೆಗಳನ್ನು ಉಂಟುಮಾಡುವಷ್ಟು ಪ್ರಬಲವಾಗಿಲ್ಲ. ಈ ಪಂದ್ಯ ರಾತ್ರಿ 8.30ಕ್ಕೆ ನಡೆಯಲಿದೆ.
ನಿನ್ನೆ ರಾತ್ರಿ ನಡೆದಿದ್ದ ಪಂದ್ಯದಲ್ಲಿ ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ರೌಂಡ್ 16 ಹಂತದ ರೋಚಕ ಹಣಾಹಣಿಯಲ್ಲಿ ಅರ್ಜೆಂಟೀನಾ ಆಸ್ಟ್ರೇಲಿಯಾವನ್ನು 2-1 ಗೋಲುಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದೆ.
ಮಧ್ಯರಾತ್ರಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿ ಗೋಲು ಗಳಿಸುವ ಮೂಲಕ ತಮ್ಮ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ.
ಸೌದಿ ಅರೇಬಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಸೋಲು ಕಂಡು ಆಘಾತಕ್ಕೀಡಾಗಿದ ಚೇತರಿಸಿಕೊಂಡಿದ್ದ ಮೆಸ್ಸಿ ರಾತ್ರಿ ನಡೆದ ಪಂದ್ಯದ 34 ನೇ ನಿಮಿಷದಲ್ಲಿ ಅದ್ಭುತ ಗೋಲು ಬಾರಿಸಿದರು. ಇದು ಮೈದಾನದಲ್ಲಿದ್ದ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿತು.