ಕನ್ನಡ ಸುದ್ದಿ  /  ವಿಷಯ  /  supreme court of india

Latest supreme court of india Photos

<p>ಹರಿಯಾಣದ ನುಹ್‌ನಲ್ಲಿ ನಡೆದ ಹಿಂಸಾಚಾರ ಖಂಡಿಸಿ ವಿಶ್ವ ಹಿಂದೂ ಪರಿಷತ್ ನಡೆಸುತ್ತಿರುವ ಪ್ರತಿಭಟನಾ ರಾಲಿಗಳನ್ನು ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯ ವಿಚಾರಣೆ ನಡೆಸಿರುವ ಕೋರ್ಟ್, ಹರಿಯಾಣ, ಉತ್ತರ ಪ್ರದೇಶ ಹಾಗೂ ದೆಹಲಿಗೆ ನೋಟಿಸ್ ನೀಡಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ವಿಎನ್‌ ಭಟ್ಟಿ ಅವರಿದ್ದ ದ್ವಿಸದಸ್ಯ ಪೀಠ, ಪ್ರತಿಭಟನೆಯಲ್ಲಿ ದ್ವೇಷದ ಮಾತು, ಹಿಂಸಾಚಾರಕ್ಕೆ ಅವಕಾಶ ನೀಡಬಾರದು. ಅಗತ್ಯ ಬಿದ್ದರೆ ಹೆಚ್ಚಿನ ಭದ್ರತಾ ಪಡೆಗಳನ್ನು ನಿಯೋಜಿಸುವಂತೆ ಸೂಚಿಸಿದೆ.</p>

Haryana Violence: ನುಹ್ ಹಿಂಸಾಚಾರ; ಉತ್ತರ ಪ್ರದೇಶ, ಹರಿಯಾಣ, ದೆಹಲಿಗೆ ಸುಪ್ರೀಂ ಕೋರ್ಟ್ ನೋಟಿಸ್

Wednesday, August 2, 2023

<p>ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, 75 ವರ್ಷಕ್ಕಿಂತ ಮೇಲ್ಪಟ್ಟ ನಿವೃತ್ತ ಸೈನಿಕರಿಗೆ ಮತ್ತು ಹುತಾತ್ಮ ಅಥವಾ ಮೃತ ಸೈನಿಕರ ಪತ್ನಿಯರಿಗೆ ಆದ್ಯತೆ ನೀಡಬಹುದು ಎಂದು ಹೇಳಿದೆ. ‘ಒಂದು ಹುದ್ದೆ, ಒಂದು ಪಿಂಚಣಿ’ಯ ಬಾಕಿಯನ್ನು ಈ ವರ್ಷದ ಮಾರ್ಚ್‌ನೊಳಗೆ ಕೇಂದ್ರವು ಪಾವತಿಸಬೇಕು ಎಂದು ಈ ಹಿಂದೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ನಂತರ ರಕ್ಷಣಾ ಸಚಿವಾಲಯ ಏಕಪಕ್ಷೀಯವಾಗಿ ಅಧಿಸೂಚನೆ ಹೊರಡಿಸಿ ನಾಲ್ಕು ಕಂತುಗಳಲ್ಲಿ ಬಾಕಿ ಪಾವತಿ ಮಾಡುವುದಾಗಿ ಹೇಳಿದೆ. ಈ ಅಧಿಸೂಚನೆಯಿಂದ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.</p>

Supreme Court: ಒಂದು ಹುದ್ದೆ, ಒಂದು ಪಿಂಚಣಿ ಬಾಕಿ ಇತ್ಯರ್ಥ ವಿಚಾರ; ಸುಪ್ರೀಂ ಕೋರ್ಟ್‌ನಿಂದ ಮಹತ್ವದ ನಿರ್ದೇಶನ

Monday, March 13, 2023