ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶ್ರೀ ಗರ್ಭರಕ್ಷಾಂಬಿಗೈ ಅಮ್ಮನ ದೇವಸ್ಥಾನ: ಬಂಜೆತನ ನಿವಾರಿಸಿ ಆರೋಗ್ಯಕರ ಮಗುವನ್ನು ಕರುಣಿಸುವ ಈ ದೇವಾಲಯದ ಬಗ್ಗೆ ಇಲ್ಲಿದೆ ಮಾಹಿತಿ

ಶ್ರೀ ಗರ್ಭರಕ್ಷಾಂಬಿಗೈ ಅಮ್ಮನ ದೇವಸ್ಥಾನ: ಬಂಜೆತನ ನಿವಾರಿಸಿ ಆರೋಗ್ಯಕರ ಮಗುವನ್ನು ಕರುಣಿಸುವ ಈ ದೇವಾಲಯದ ಬಗ್ಗೆ ಇಲ್ಲಿದೆ ಮಾಹಿತಿ

Meghana B HT Kannada

Mar 15, 2024 12:02 PM IST

ಶ್ರೀ ಗರ್ಭರಾಕ್ಷಾಂಬಿಗೈ ದೇವಾಲಯ (twitter/@AnuSatheesh5)

    • Garbarakshambigai Amman temple: ಹೆಣ್ಣೋ ಗಂಡೋ ಆರೋಗ್ಯಕರ ಮಗುವೊಂದಿರಲಿ ಸಾಕು ಎಂದು ಮಗುವಿಗಾಗಿ ಹಂಬಲಿಸುವ ದಂಪತಿಗಳು ಗರ್ಭರಾಕ್ಷಾಂಬಿಗೈ ಅಮ್ಮನ ದೇವಸ್ಥಾನಕ್ಕೆ ಭೇಟಿ ಕೊಡಬೇಕು. ಫಲವತ್ತತೆಯ ದೇವತೆ ಎಂದೇ ಕರೆಯಲ್ಪಡುವ ಗರ್ಭರಾಕ್ಷಾಂಬಿಗೈಯು ಬಂಜೆತನ ನಿವಾರಣೆಗೆ, ಆರೋಗ್ಯಕರ ಗರ್ಭಧಾರಣೆಗೆ ಮಾತ್ರವಲ್ಲದೆ ಸುಸೂತ್ರವಾಗಿ ಹೆರಿಗೆಯಾಗುವಲ್ಲಿಯೂ ನೆರವಾಗುತ್ತಾಳೆ.
ಶ್ರೀ ಗರ್ಭರಾಕ್ಷಾಂಬಿಗೈ ದೇವಾಲಯ (twitter/@AnuSatheesh5)
ಶ್ರೀ ಗರ್ಭರಾಕ್ಷಾಂಬಿಗೈ ದೇವಾಲಯ (twitter/@AnuSatheesh5)

ಮದುವೆಯಾಗಿ ಅನೇಕ ವರ್ಷಗಳೇ ಆದರೂ ಮಕ್ಕಳಾಗದೆ ಕೊರಗುತ್ತಿರುವ ಅದೆಷ್ಟೋ ದಂಪತಿಗಳು ನಮ್ಮ ನಡುವೆಯೇ ಇದ್ದಾರೆ. ಮಡಿಲು ತುಂಬುವುದಕ್ಕಾಗಿ, ಪುಟ್ಟ ಕಾಲುಗಳನ್ನು ಕಾಣುವ ಹಂಬಲದೊಂದಿಗೆ ಲೆಕ್ಕವಿಲ್ಲದಷ್ಟು ಆಸ್ಪತ್ರೆಗಳನ್ನು ಸುತ್ತಿರಬಹುದು. ನೆಂಟರಿಷ್ಟರು, ಸ್ನೇಹಿತರು ಹೇಳಿರುವ ದೇವಾಲಯಗಳಿಗೆ ಭೇಟಿ ಕೊಟ್ಟು ಹರಕೆ ಹೊತ್ತರೂ ಪ್ರಯೋಜನ ಸಿಗದಿರಬಹುದು. ಅಂತಹ ದಂಪತಿಗಳು ತಪ್ಪದೇ ಒಮ್ಮೆಯಾದರೂ ಭೇಟಿಕೊಡಬೇಕಿರುವ ದೇವಾಲಯವೊಂದಿದೆ. ಅದುವೇ ಶ್ರೀ ಗರ್ಭರಕ್ಷಾಂಬಿಗೈ ಅಮ್ಮನ್‌ ದೇವಸ್ಥಾನ.

ತಾಜಾ ಫೋಟೊಗಳು

Sun Transit: ಶೀಘ್ರದಲ್ಲೇ ಸೂರ್ಯ ಸಂಚಾರ; ಈ 3 ರಾಶಿಯವರಿಗೆ ಮೊದಲಿಗಿಂತಲೂ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ

May 11, 2024 03:03 PM

Jupiter Venus Conjunction: ಗುರು, ಶುಕ್ರ ಸಂಕ್ರಮಣ; ಈ 4 ರಾಶಿಯವರಿಗೆ ಅನಗತ್ಯ ಖರ್ಚುಗಳಿಂದ ಚಿಂತೆ, ಆರ್ಥಿಕ ಸಮಸ್ಯೆ ಸಾಧ್ಯತೆ

May 11, 2024 02:08 PM

ಮಾತಾ ನಾಸ್ತಿ, ಪಿತಾ ನಾಸ್ತಿ, ನಾಸ್ತಿ ಬಂಧುಃ: ಮೇ 12 ಶಂಕರ ಜಯಂತಿ ಶುಭಾಶಯ ಕೋರಲು ಇಲ್ಲಿವೆ ಕೆಲವು ಸಂದೇಶಗಳು

May 10, 2024 07:00 AM

ಶನಿ ಸಂಕ್ರಮಣದಿಂದ ರೂಪುಗೊಳ್ಳಲಿದೆ ಶಶ ರಾಜಯೋಗ; 2025ವರೆಗೆ ಈ ಮೂರೂ ರಾಶಿಯವರಿಗೆ ಹೋದಲೆಲ್ಲಾ ಹಿಂಬಾಲಿಸಲಿದೆ ಅದೃಷ್ಟ

May 09, 2024 08:25 AM

Trigrahi Yoga: ಮೇ ತಿಂಗಳಲ್ಲಿ ತ್ರಿಗ್ರಹಿ ಯೋಗ; ಈ 3 ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನ

May 09, 2024 06:00 AM

ಇಂದು ವೈಶಾಖ ಅಮಾವಾಸ್ಯೆ; ಧಾರ್ಮಿಕ ಕಾರ್ಯಗಳಿಗೆ ಮೀಸಲಾದ ಈ ದಿನ ಇಂಥ ಕೆಲಸಗಳನ್ನು ಮಾಡಿ ಆರ್ಥಿಕ ಸಂಕಷ್ಟ ತಂದುಕೊಳ್ಳದಿರಿ

May 08, 2024 08:40 AM

ಭಾರತದ ತಮಿಳುನಾಡಿನ ತಾಂಜವೂರು ಜಿಲ್ಲೆಯ ಪಾಪನಾಸಂ ತಾಲೂಕಿನ ತಿರುಕರುಕಾವೂರ್‌ ಎಂಬಲ್ಲಿದೆ ಶ್ರೀ ಗರ್ಭರಾಕ್ಷಾಂಬಿಗೈ ದೇವಾಲಯ. ಇಲ್ಲಿನ ಪ್ರಮುಖ ದೇವರು ಗರ್ಭರಕ್ಷಾಂಬಿಗೈ ಅಮ್ಮನ್‌. ಇಲ್ಲಿ ಪಾರ್ವತಿಯೇ ಗರ್ಭರಕ್ಷಾಂಬಿಗೈ ಅಮ್ಮ. ಈ ಪುರಾತನ ದೇವಾಲಯವು ಭಕ್ತರ ನೆಚ್ಚಿನ ದೇಗುಲವಾಗಿದ್ದು, ವಿಶೇಷವಾಗಿ ಬಂಜೆತನದ ನಿವಾರಣೆಗೆ, ಗರ್ಭಧಾರಣೆ ಮತ್ತು ಫಲವತ್ತತೆಗಾಗಿ ಹಂಬಲಿಸುವ ದಂಪತಿಗಳು ಇಲ್ಲಿದೆ ತಪ್ಪದೇ ಭೇಟಿ ನೀಡುತ್ತಾರೆ. 7 ನೇ ಶತಮಾನದಲ್ಲಿ ಚೋಳರ ಕಾಲದಲ್ಲಿ ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಅನುಸರಿಸಿ ಈ ದೇವಾಲಯವನ್ನು ನಿರ್ಮಿಸಲಾಗಿದೆ.

ಈ ಸುಂದರವಾದ ದೇವಾಲಯವು ಶಿವನಿಗೆ ಸಮರ್ಪಿತವಾಗಿದ್ದು, ಇಲ್ಲಿ ಶಿವನನ್ನು ಮುಲ್ಲೈವನನಾಥರ್ ಎಂದು ಮತ್ತು ಪತ್ನಿ ಪಾರ್ವತಿಯನ್ನು ಗರ್ಭರಕ್ಷಾಂಬಿಗೈ ಎಂದು ಪೂಜಿಸಲಾಗುತ್ತದೆ. ಇಲ್ಲಿ ಬರುವ ಅನೇಕ ಮಹಿಳೆಯರು ಬಂಜೆತನ ಸಂಬಂಧಿತ ಸಮಸ್ಯೆಗಳನ್ನು ಗುಣಪಡಿಸಲು, ಗರ್ಭಧಾರಣೆಗೆ ಮಾತ್ರವಲ್ಲದೆ ಸುಸೂತ್ರವಾಗಿ ಹೆರಿಗೆಯಾಗುವ ಸಲುವಾಗಿಯೂ ತಾಯಿ ಗರ್ಭರಕ್ಷಾಂಬಿಗೈ ಮೊರೆ ಹೋದರೆ, ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಶ್ರೀ ಮುಲ್ಲೈವನನಾಥರ್ ಸ್ವಾಮಿಯನ್ನು ಪೂಜಿಸುತ್ತಾರೆ.

ಗರ್ಭರಾಕ್ಷಾಂಬಿಗೈ ಅಮ್ಮನ ಕುರಿತಾದ ಕಥೆ:

ಗೌತಮ ಮುನಿ ಮತ್ತು ಗಾರ್ಗೆಯ ಮುನಿ ಎಂಬ ಇಬ್ಬರು ಋಷಿಗಳು ಮುಲ್ಲೈ ವನಂ ಎಂಬಲ್ಲಿ ಆಶ್ರಮದಲ್ಲಿ ವಾಸಿಸುತ್ತಿದ್ದರು. ಋಷಿಗಳ ಸೇವೆಯಲ್ಲೇ ಜೀವನ ಕಂಡುಕೊಂಡಿದ್ದ ನಿಧ್ರುವ ಮತ್ತು ವೇದಿಕಾಯ್​ ದಂಪತಿ ತಮ್ಮ ವಂಶದ ಕುಡಿಗಾಗಿ ಹಾತೊರೆಯುತ್ತಿದ್ದರು. ಋಷಿಮುನಿಗಳ ಮಾರ್ಗದರ್ಶನ ಪಡೆದು ತಂದೆ ತಾಯಿಯಾಗುವ ತಮ್ಮ ಮನದಾಳದ ಆಸೆಯನ್ನು ಹಂಚಿಕೊಂಡರು. ಅವರ ಪ್ರಾರ್ಥನೆಗೆ ಸ್ಪಂದಿಸಿದ ಋಷಿಗಳು ಗರ್ಭರಾಕ್ಷಾಂಬಿಗೈ ಅಮ್ಮನ ರೂಪದಲ್ಲಿ ಪಾರ್ವತಿ ದೇವಿಯನ್ನು ಪೂಜಿಸಲು ನಿರ್ದೇಶನ ನೀಡಿದರು. ಪ್ರಾರ್ಥನೆಗಳಿಗೆ ಸಿಕ್ಕಿದ ಫಲವೆಂಬಂತೆ ವೇದಿಕಾಯ್​ ಗರ್ಭಿಣಿಯಾದಳು.

ಆದರೆ ವೇದಿಕಾಯ್​​ ತನ್ನ ಗರ್ಭಾವಸ್ಥೆಯಲ್ಲಿದ್ದಾಗ, ನಿಧ್ರುವನು ವರುಣನ ಭೇಟಿಗೆ ಹೋಗಿದ್ದ ವೇಳೆ ಆಶ್ರಮಕ್ಕೆ ಊರ್ಧ್ವಪಾದ ಖುಷಿಗಳು ಬರುತ್ತಾರೆ. ಆದರೆ ಅವರಿಗೆ ಆತಿಥ್ಯ ನೀಡಲು ವೇದಿಕಾಯ್​ ನಿರಾಕರಿಸಿದಳು. ಇದರಿಂದ ಕೋಪಗೊಂಡ ಋಷಿವರ್ಯರು, ವೇದಿಕಾಯ್​​ಳನ್ನು ʻರಾಯಚುʼ ಎಂಬ ಕಾಯಿಲೆಯಿಂದ ಬಳಲುವಂತೆ ಶಪಿಸಿದರು. ಇದು ಅವಳ ಮತ್ತು ಹುಟ್ಟಲಿರುವ ಮಗುವಿನ ಜೀವಕ್ಕೆ ಅಪಾಯವನ್ನುಂಟುಮಾಡಿತು. ಹತಾಶಳಾದ ವೇದಿಕಾಯ್ ಗರ್ಭರಕ್ಷಾಂಬಿಗೈ ಅಮ್ಮನ್‌ ಮೊರೆ ಹೋದಳು. ದೇವಿ ಗರ್ಭರಕ್ಷಾಂಬಿಗೈ ಅಮ್ಮನ್‌, ಹುಟ್ಟಲಿರುವ ಮಗುವನ್ನು ಗರ್ಭದಿಂದ ಹೊರತೆಗೆದು ಅದನ್ನು ಮಡಕೆಯಲ್ಲಿ ಇರಿಸಿದರು. ಆ ಭ್ರೂಣವು ಆರೋಗ್ಯವಂತ ಮಗುವಾಗಿ ಬೆಳೆದು, ದಂಪತಿಗಳ ಆಸೆಯನ್ನು ಪೂರೈಸಿತು. ನಂತರ ಆ ಮಗುವಿಗೆ ನೈಧುರವನ್ ಎಂದು ಹೆಸರಿಟ್ಟರು ಎಂಬುದು ಪ್ರತೀತಿ.

ದೇವಾಲಯದಲ್ಲಿದೆ ಹರಕೆ, ಅರ್ಚನೆ ಸಲ್ಲಿಸಲು ಆನ್‌ ಲೈನ್‌ ವ್ಯವಸ್ಥೆ:

ಸಾಂಪ್ರದಾಯಿಕ ಆಚರಣೆಗಳ ಜೊತೆಗೆ, ದೇವಾಲಯವು ಸಮಕಾಲೀನ ಭಕ್ತರ ಅಗತ್ಯತೆಗಳನ್ನು ಸರಿದೂಗಿಸುವ ಸಲುವಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ದೇಶಗಳ ಗಡಿ ದಾಟಿದರೂ ದೇವಾಲಯಕ್ಕೆ ನೇರ ಭೇಟಿ ಕೊಟ್ಟು ಪೂಜೆ, ಸಲ್ಲಿಸಲು, ದೇಣಿಗೆ ನೀಡಲು ಸಾಧ್ಯವಾಗದ ಭಕ್ತರು, ಆನ್‌ಲೈನ್ ಪೋರ್ಟಲ್‌ಗಳ ಮೂಲಕವೂ ದೇಣಿಗೆ ನೀಡಲು ಅವಕಾಶ ಕಲ್ಪಿಸಿದೆ.

ಶ್ರೀ ಗರ್ಭರಕ್ಷಾಂಬಿಗೈ ದೇವಸ್ಥಾನ ಭೇಟಿಯ ಸಮಯ ಹಾಗೂ ತಲುಪುವ ವಿಧಾನ :

ಶ್ರೀ ಗರ್ಭರಕ್ಷಾಂಬಿಗೈ ದೇವಾಲಯವು ವಾರದ ಎಲ್ಲಾ ಏಳು ದಿನಗಳಲ್ಲಿ ಬೆಳಿಗ್ಗೆ 5:30 ರಿಂದ ಮಧ್ಯಾಹ್ನ 12:30 ಮತ್ತು ಸಂಜೆ 4:00 ರಿಂದ ರಾತ್ರಿ 8:00 ರವರೆಗೆ ತೆರೆದಿರುತ್ತದೆ. ವಿಮಾನದ ಮೂಲಕ ತಿರುಚಿರಾಪಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದರೆ ಅಲ್ಲಿಂದ ನೀವು ಸುಲಭವಾಗಿ ಕ್ಯಾಬ್ ಅಥವಾ ಟ್ಯಾಕ್ಸಿ ಮೂಲಕ ದೇವಾಲಯವನ್ನು ತಲುಪಬಹುದು. ಬಸ್ ಮೂಲಕ ಬರುವ ಭಕ್ತರಿಗೂ ಕಷ್ಟವೆನ್ನಿಸದು. ರೈಲಿನಲ್ಲಿ ಬರುವವರು ಸಮೀಪದ ಪಾಪನಾಸಂನವರಗೆ ಬಂದರೆ ಅಲ್ಲಿಂದ ಬಸ್‌, ಇಲ್ಲವೇ ಕ್ಯಾಬ್‌ ಸಹಾಯದಿಂದ ದೇವಸ್ಥಾನವನ್ನು ಸುಲಭದಲ್ಲಿ ತಲುಪಲು ಸಾಧ್ಯ.

ಒಟ್ಟಿನಲ್ಲಿ ಬಂಜೆತನ, ಗರ್ಭಧಾರಣೆಯಲ್ಲಿ ಸಮಸ್ಯೆ, ಹೆರಿಗೆಯ ವೇಳೆ ಯಾವುದೇ ತೊಂದರೆಗಳಾಗದಿರಲು ಹಗಲಿರುಳೂ ಬೇಡಿಕೊಳ್ಳುವ ಮಂದಿ, ಒಮ್ಮೆಯಾದರೂ ಶ್ರೀ ಗರ್ಭರಕ್ಷಾಂಬಿಗೈ ದೇವಸ್ಥಾನಕ್ಕೆ ಭೇಟಿ ನೀಡಬೇಕು. ಇಷ್ಟಾರ್ಥಗಳನ್ನು ಪೂರೈಸುವ ಆ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು.

(ಗಮನಿಸಿ: ಇದು ಪುರಾಣ ಮತ್ತು ನಂಬಿಕೆಯನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ