logo
ಕನ್ನಡ ಸುದ್ದಿ  /  ಕ್ರಿಕೆಟ್  /  ಚಾಂಪಿಯನ್ಸ್ ಟ್ರೋಫಿ 2025; ಪಾಕಿಸ್ತಾನಕ್ಕೆ ಭಾರತ ಹೋಗುವುದು ಫಿಕ್ಸ್, ಈ ಮೈದಾನದಲ್ಲಿ ಆಡಲಿದೆ ರೋಹಿತ್ ಪಡೆ

ಚಾಂಪಿಯನ್ಸ್ ಟ್ರೋಫಿ 2025; ಪಾಕಿಸ್ತಾನಕ್ಕೆ ಭಾರತ ಹೋಗುವುದು ಫಿಕ್ಸ್, ಈ ಮೈದಾನದಲ್ಲಿ ಆಡಲಿದೆ ರೋಹಿತ್ ಪಡೆ

Prasanna Kumar P N HT Kannada

May 02, 2024 12:13 PM IST

google News

ಚಾಂಪಿಯನ್ಸ್ ಟ್ರೋಫಿ 2025; ಪಾಕಿಸ್ತಾನಕ್ಕೆ ಭಾರತ ಹೋಗುವುದು ಫಿಕ್ಸ್, ಈ ಮೈದಾನದಲ್ಲಿ ಆಡಲಿದೆ ರೋಹಿತ್ ಪಡೆ

    • ICC Champions Trophy 2025: ಮುಂದಿನ ವರ್ಷ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಕರಡು ವೇಳಾಪಟ್ಟಿ ಸಿದ್ಧಪಡಿಸಿದೆ. ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್​​​ನಲ್ಲಿ ಆಡಲು ವ್ಯವಸ್ಥೆ ಮಾಡಿದೆ.
ಚಾಂಪಿಯನ್ಸ್ ಟ್ರೋಫಿ 2025; ಪಾಕಿಸ್ತಾನಕ್ಕೆ ಭಾರತ ಹೋಗುವುದು ಫಿಕ್ಸ್, ಈ ಮೈದಾನದಲ್ಲಿ ಆಡಲಿದೆ ರೋಹಿತ್ ಪಡೆ
ಚಾಂಪಿಯನ್ಸ್ ಟ್ರೋಫಿ 2025; ಪಾಕಿಸ್ತಾನಕ್ಕೆ ಭಾರತ ಹೋಗುವುದು ಫಿಕ್ಸ್, ಈ ಮೈದಾನದಲ್ಲಿ ಆಡಲಿದೆ ರೋಹಿತ್ ಪಡೆ

ಐಸಿಸಿ ಟಿ20 ವಿಶ್ವಕಪ್ 2024 ಮುಕ್ತಾಯದ (T20 World Cup 2024) ನಂತರ ಒಂದು ವರ್ಷದ ತನಕ ಯಾವುದೇ ಐಸಿಸಿ ಪುರುಷರ ಈವೆಂಟ್ ಜರುಗುವುದಿಲ್ಲ. 2025 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy) ಪಾಕಿಸ್ತಾನದಲ್ಲಿ ನಡೆಯಲಿದ್ದು, 1996ರ ಏಕದಿನ ವಿಶ್ವಕಪ್ (ODI World Cup 2025) ನಂತರ ಇಲ್ಲಿ ನಡೆಯುತ್ತಿರುವ ಮೊದಲ ಐಸಿಸಿ ಟೂರ್ನಿ ಇದಾಗಿದೆ. ಆದಾಗ್ಯೂ, ಭಾರತ-ಪಾಕಿಸ್ತಾನದ (India vs Pakistan) ನಡುವಿನ ಹದಗೆಟ್ಟ ಸಂಬಂಧಗಳನ್ನು ಪರಿಗಣಿಸಿ, ಟೂರ್ನಿಯಾಲು ರೋಹಿತ್ ನೇತೃತ್ವದ ತಂಡ ನಿಜವಾಗಿಯೂ ಪಾಕ್​​ ದೇಶಕ್ಕೆ ಪ್ರಯಾಣಿಸುತ್ತದೆಯೇ ಎಂಬ ಬಗ್ಗೆ ಗಂಭೀರ ಅನುಮಾನಗಳಿವೆ. ಆದರೀಗ 17 ವರ್ಷಗಳ ಬಳಿಕ ಭಾರತ ಮೊದಲ ಬಾರಿಗೆ ಬದ್ಧವೈರಿ ದೇಶಕ್ಕೆ ಪ್ರಯಾಣಿಸುವ ಸಾಧ್ಯತೆ ದಟ್ಟವಾಗಿದೆ.

ಪಾಕಿಸ್ತಾನಿ ಸುದ್ದಿವಾಹಿನಿ ಎಆರ್​​ವೈ ನ್ಯೂಸ್‌ನ ವರದಿಯ ಪ್ರಕಾರ, ಭಾರತ ತಂಡವು 2025ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಿದ್ಧವಾಗಿದೆ. ಈಗಾಗಲೇ ವೇಳಾಪಟ್ಟಿಯನ್ನು ಬಹುತೇಕ ಸಿದ್ಧಪಡಿಸಿರುವ ಪಿಸಿಬಿ, ಭಾರತದ ಎಲ್ಲಾ ಪಂದ್ಯಗಳನ್ನು ಲಾಹೋರ್‌ನ ಐಕಾನಿಕ್ ಗಡಾಫಿ ಸ್ಟೇಡಿಯಂನ ಒಂದು ಸ್ಥಳಕ್ಕೆ ಸೀಮಿತಗೊಳಿಸಿದೆ ಎಂದು ವರದಿ ಹೇಳುತ್ತಿದೆ. 2025ರ ಫೆಬ್ರವರಿಯಲ್ಲಿ ಟೂರ್ನಿಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ವರದಿ ಹೇಳುತ್ತದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಈಗಾಗಲೇ ತಮ್ಮ ತಾತ್ಕಾಲಿಕ ವೇಳಾಪಟ್ಟಿ ಮೊದಲ ಕರಡನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಕಳುಹಿಸಿದೆ.

ವಾಘಾ ಗಡಿಗೆ (ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿ) ಹತ್ತಿರವಿರುವ ಕಾರಣ, ಲಾಹೋರ್ ಅನ್ನು ಭಾರತೀಯ ತಂಡಕ್ಕೆ ಆತಿಥ್ಯ ವಹಿಸಲು ಪಿಸಿಬಿ ಆಯ್ಕೆ ಮಾಡಿದೆ. ನಗರವು ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಕ್ಕೂ ಆತಿಥ್ಯ ವಹಿಸಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಭಾರತ ತಂಡ ಕೇವಲ ಒಂದು ಸ್ಥಳದಲ್ಲಿ ಆಡುವುದರ ಹಿಂದಿನ ಪಿಸಿಬಿಯ ತರ್ಕವು ಸರಳವಾಗಿದೆ. ಇದು ಲಾಜಿಸ್ಟಿಕ್ಸ್ ಮತ್ತು ಭದ್ರತಾ ಸಿದ್ಧತೆಗಳನ್ನು ಸರಾಗಗೊಳಿಸುತ್ತದೆ. ಪ್ರಯಾಣದ ವಿಷಯದಲ್ಲಿ ಭಾರತೀಯ ಅಭಿಮಾನಿಗಳಿಗೆ ತಲೆನೋವನ್ನು ಕಡಿಮೆ ಮಾಡುತ್ತದೆ.

ಖಚಿತಪಡಿಸಿದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ

ಜುಲೈನಲ್ಲಿ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಮಂಡಳಿಯ ಸಭೆಯಲ್ಲಿ ವೇಳಾಪಟ್ಟಿ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮೂರು ಸ್ಥಳಗಳಾಗಿ ಲಾಹೋರ್, ಕರಾಚಿ ಮತ್ತು ರಾವಲ್ಪಿಂಡಿ ಕ್ರಿಕೆಟ್ ಮೈದಾನಗಳನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಲಾಹೋರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ತಾತ್ಕಾಲಿಕ ವೇಳಾಪಟ್ಟಿಯನ್ನು ಕಳುಹಿಸಿದ್ದೇವೆ ಎಂದು ಖಚಿತಪಡಿಸಿದ್ದಾರೆ. ಐಸಿಸಿ ಭದ್ರತಾ ತಂಡ ಪಾಕಿಸ್ತಾನಕ್ಕೆ ಬಂದು ವ್ಯವಸ್ಥೆಗಳನ್ನು ನೋಡಿದೆ ಎಂದೂ ಅವರು ಹೇಳಿದ್ದಾರೆ.

ನಾವು ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಂದ್ಯಗಳ ವೇಳಾಪಟ್ಟಿಯನ್ನು ಕಳುಹಿಸಿದ್ದೇವೆ. ಐಸಿಸಿಯ ಭದ್ರತಾ ತಂಡ ಪರಿಶೀಲನೆ ನಡೆಸಿದೆ. ನಾವು ಅವರೊಂದಿಗೆ ಸ್ಟೇಡಿಯಂ ಅಪ್‌ಗ್ರೇಡ್ ಯೋಜನೆಗಳ ಕುರಿತು ಹಂಚಿಕೊಳ್ಳುತ್ತೇವೆ. ಐಸಿಸಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಉತ್ತಮ ಪಂದ್ಯಾವಳಿ ಆಯೋಜಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಪಿಸಿಬಿ ಅಧ್ಯಕ್ಷರು ಹೇಳಿದ್ದಾರೆ. ಆದರೆ ಪಾಕ್​ಗೆ ಪ್ರಯಾಣಿಸುವ ಕುರಿತು ಭಾರತ ಸರ್ಕಾರ ಮತ್ತು ಬಿಸಿಸಿಐನಿಂದ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

2008ರಲ್ಲಿ ಕೊನೆಯದಾಗಿ ಭಾರತ, ಪಾಕಿಸ್ತಾನಕ್ಕೆ ಪ್ರಯಾಣ

2008ರಲ್ಲಿ ಏಷ್ಯಾಕಪ್‌ ಟೂರ್ನಿಗಾಗಿ ಭಾರತ ಕೊನೆಯದಾಗಿ ಪಾಕಿಸ್ತಾನಕ್ಕೆ ತೆರಳಿತ್ತು. ಮೆನ್ ಇನ್ ಬ್ಲೂ 2009ರಲ್ಲಿ ದ್ವಿಪಕ್ಷೀಯ ಸರಣಿಗಾಗಿ ಪಾಕ್​ಗೆ ಪ್ರಯಾಣಿಸಬೇಕಿತ್ತು. ಆದರೆ ಆ ವರ್ಷ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಬಸ್‌ನ ಮೇಲೆ ಆಘಾತಕಾರಿ ಭಯೋತ್ಪಾದಕ ದಾಳಿಯು ಸರಣಿಯಿಂದ ಹಿಂದೆ ಸರಿಯುವಂತೆ ಮಾಡಿತು. ಭಾರತ ಮತ್ತು ಪಾಕಿಸ್ತಾನ ಪ್ರಸ್ತುತ ಐಸಿಸಿ ಈವೆಂಟ್‌ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳು ಕೊನೆಯ ಬಾರಿಗೆ ಅಹಮದಾಬಾದ್‌ನಲ್ಲಿ 2023ರ ಏಕದಿನ ವಿಶ್ವಕಪ್‌ನಲ್ಲಿ ಪರಸ್ಪರ ಮುಖಾಮುಖಿಯಾಗಿದ್ದವು. ಟಿ20 ವಿಶ್ವಕಪ್‌ಗೆ ಗ್ರೂಪ್ ಸ್ಟೇಜ್ ಪಂದ್ಯದಲ್ಲಿ ನ್ಯೂಯಾರ್ಕ್‌ನಲ್ಲಿ ಮುಖಾಮುಖಿಯಾಗಲಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ